ಮನೆಯಲ್ಲಿ ಸಾಮೂಹಿಕ ನಮಾಜ್; ಉತ್ತರ ಪ್ರದೇಶದ ಗ್ರಾಮವೊಂದರ 26 ಮಂದಿ ವಿರುದ್ಧ ಪ್ರಕರಣ ದಾಖಲು

| Updated By: ರಶ್ಮಿ ಕಲ್ಲಕಟ್ಟ

Updated on: Aug 29, 2022 | 7:34 PM

ಗ್ರಾಮದಲ್ಲಿ ಮಸೀದಿ ಇಲ್ಲ, ನಮಾಜ್‌ಗಾಗಿ ಮನೆಗಳ ಒಳಗೆ ಸೇರುವುದನ್ನು ಕೆಲವು ನಿವಾಸಿಗಳು ವಿರೋಧಿಸಿದ್ದಾರೆ. ಪೋಲೀಸರು ನೆರೆಹೊರೆಯವರಿಂದ ಆಕ್ಷೇಪಣೆಗಳನ್ನು ಉಲ್ಲೇಖಿಸಿದ್ದು...

ಮನೆಯಲ್ಲಿ ಸಾಮೂಹಿಕ ನಮಾಜ್; ಉತ್ತರ ಪ್ರದೇಶದ ಗ್ರಾಮವೊಂದರ 26 ಮಂದಿ ವಿರುದ್ಧ ಪ್ರಕರಣ ದಾಖಲು
ಪ್ರಾತಿನಿಧಿಕ ಚಿತ್ರ
Image Credit source: AFP
Follow us on

ಲಖನೌ: ಪೂರ್ವಾನುಮತಿ ಇಲ್ಲದೆ ಮನೆಯೊಂದರಲ್ಲಿ ನಮಾಜ್ (Namaz) ಮಾಡಲು ಸಾಮೂಹಿಕವಾಗಿ ಸಭೆ ನಡೆಸಿದ್ದಕ್ಕಾಗಿ ಉತ್ತರ ಪ್ರದೇಶದ (Uttar Pradesh) ಮೊರಾದಾಬಾದ್ ಜಿಲ್ಲೆಯ ದುಲ್ಹೇಪುರ್ ಗ್ರಾಮದಲ್ಲಿ 26 ಮುಸ್ಲಿಮರ ವಿರುದ್ಧ ಪೊಲೀಸ್ ಕೇಸ್ ದಾಖಲಾಗಿದೆ. ಗ್ರಾಮದಲ್ಲಿ ಮಸೀದಿ ಇಲ್ಲ, ನಮಾಜ್‌ಗಾಗಿ ಮನೆಗಳ ಒಳಗೆ ಸೇರುವುದನ್ನು ಕೆಲವು ನಿವಾಸಿಗಳು ವಿರೋಧಿಸಿದ್ದಾರೆ. ಪೋಲೀಸರು “ನೆರೆಹೊರೆಯವರಿಂದ ಆಕ್ಷೇಪಣೆಗಳನ್ನು” ಉಲ್ಲೇಖಿಸಿದ್ದು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 505-2 ರ ಅಡಿಯಲ್ಲಿ ನಮಾಜ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಒಟ್ಟು ಸೇರಿಕೊಂಡು ನಮಾಜ್ ಮಾಡುವ ಮೂಲಕ  ಈ ಜನರು ಜನರ ನಡುವೆ ದ್ವೇಷ ಮತ್ತು ವೈರತ್ವ ಹರಡುತ್ತಿದ್ದಾರೆ,ಎಂದು ಸ್ಥಳೀಯ ನಿವಾಸಿ ಚಂದ್ರ ಪಾಲ್ ಸಿಂಗ್ ಅವರು ಆಗಸ್ಟ್ 24 ರಂದು ನೀಡಿದ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಿದ್ದಾರೆ. ಹದಿನಾರು ಜನರನ್ನು ಹೆಸರಿಸಲಾಗಿದೆ ಮತ್ತು 10 ಮಂದಿ ಅಜ್ಞಾತರಾಗಿದ್ದಾರೆ. ಎಲ್ಲರೂ ಸ್ಥಳೀಯರು ಎಂದು ವರದಿಯಾಗಿದೆ.

ಮನೆಯ ಕಾಂಪೌಂಡ್‌ನಲ್ಲಿ ಜನರು ಒಟ್ಟಾಗಿ ಸೇರಿ ಪ್ರಾರ್ಥಿಸುತ್ತಿರುವ ದೃಶ್ಯಗಳು ವೈರಲ್ ಆಗಿವೆ.
ಈ ವಿಡಿಯೊಗೆ ಹಲವರು ಆಕ್ರೋಶದ ಕಾಮೆಂಟ್ ಮಾಡಿದ್ದಾರೆ “ನೆರೆಹೊರೆಯವರಲ್ಲಿ ಒಬ್ಬರು 26 ಸ್ನೇಹಿತರು ಮತ್ತು ಸಂಬಂಧಿಕರೊಂದಿಗೆ ಹವನ ಮಾಡಿದರೆ ಅದು ಸಂಪೂರ್ಣವಾಗಿ ಸ್ವೀಕಾರಾರ್ಹವಾಗಿರುತ್ತದೆ ಎಂದು ನನಗೆ ಖಾತ್ರಿಯಿದೆ. ಇದು ‘ಸಾಮೂಹಿಕ ಸಭೆ’ ಅಲ್ಲ ಇದು ನಮಾಜ್ ಎಂಬುದೇ ಸಮಸ್ಯೆ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಟ್ವೀಟ್ ಮಾಡಿದ್ದಾರೆ.

ಆದರೆ ಪೊಲೀಸರು ಇದೀಗ ಆರೋಪಿಗಳನ್ನು ಬಂಧಿಸಲು ಮುಂದಾಗಿದ್ದಾರೆ. ಸಭೆಯಲ್ಲಿ ಭಾಗವಹಿಸಿದ್ದವರಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ಉಸ್ತುವಾರಿ ಸಂದೀಪ್ ಕುಮಾರ್ ಮೀನಾ ತಿಳಿಸಿದ್ದಾರೆ.
ನಮಾಜ್‌ಗೆ ಹಲವು ಸ್ಥಳಗಳಲ್ಲಿ ಆಕ್ಷೇಪ ವ್ಯಕ್ತವಾಗಿದೆ, ಕೆಲವು ತಿಂಗಳ ಹಿಂದೆ ಗುಡಗಾಂವ್‌ನಲ್ಲಿ ಕಾರ್ಖಾನೆಯ ಕಾರ್ಮಿಕರ ಗುಂಪುಗಳ ಗುಂಪುಗಳ ನಮಾಜ್‌ನ ವಿರುದ್ಧ ಬಲಪಂಥೀಯ ಸಂಘಟನೆಗಳ ನೇತೃತ್ವದಲ್ಲಿ ಸ್ಥಳೀಯರ ತೀವ್ರ ಪ್ರತಿಭಟನೆ ನಡೆಯಿತು. ಸ್ಥಳೀಯ ಆಡಳಿತವು ಗೊತ್ತುಪಡಿಸಿದ ತೆರೆದ ಜಾಗದಲ್ಲಿ ನಮಾಜ್ ನಡೆಸಲಾಯಿತು, ಆದರೆ ಸಂಚಾರ ಅಡೆತಡೆಗಳು ಮತ್ತು ಕಾನೂನು ಮತ್ತು ಸುವ್ಯವಸ್ಥೆಯನ್ನು ಉಲ್ಲೇಖಿಸಿ ಅದನ್ನು ನಿಲ್ಲಿಸಲಾಯಿತು. ನಂತರ ಕೆಲವು ಸ್ಥಳಗಳಲ್ಲಿ ಇದಕ್ಕೆ ಪ್ರತಿಕ್ರಿಯೆ ಎಂಬಂತೆ ಹಿಂದೂ ಪ್ರಾರ್ಥನೆಗಳನ್ನು ನಡೆಸಲಾಯಿತು.

ಇತ್ತೀಚೆಗೆ, ಭೋಪಾಲ್‌ನ ಮಾಲ್‌ನಲ್ಲಿ ಸಿಬ್ಬಂದಿ ನಮಾಜ್ ಮಾಡಿದ್ದರಿಂದ ಕೆಲವು ಬಜರಂಗದಳದ ಕಾರ್ಯಕರ್ತರು ಹನುಮಾನ್ ಚಾಲೀಸಾವನ್ನು ಓದುವ ಮೂಲಕ ಪ್ರತಿಭಟಿಸಿದರು. ಕೆಲವು ವಾರಗಳ ಹಿಂದೆ ಲಕ್ನೋದ ಮಾಲ್‌ನಲ್ಲಿ ಇದೇ ರೀತಿಯ ಘಟನೆ ನಡೆದಿತ್ತು. ನಂತರ ಎರಡೂ ಮಾಲ್‌ಗಳು ಎಲ್ಲಾ ಧಾರ್ಮಿಕ ಚಟುವಟಿಕೆಗಳನ್ನು ನಿಷೇಧಿಸಿದವು.

Published On - 7:32 pm, Mon, 29 August 22