ಆ್ಯಂಟಿಬಾಡಿ ಱಪಿಡ್ ಟೆಸ್ಟ್ ಕಿಟ್​ಗಳ ಆಮದು, ಮಾರಾಟದಲ್ಲಿ ಭಾರಿ ಗೋಲ್ ಮಾಲ್

ಆ್ಯಂಟಿಬಾಡಿ ಱಪಿಡ್ ಟೆಸ್ಟ್ ಕಿಟ್​ಗಳ ಆಮದು, ಮಾರಾಟದಲ್ಲಿ ಭಾರಿ ಗೋಲ್ ಮಾಲ್

ನವದೆಹಲಿ: ಭಾರತಕ್ಕೆ ಚೀನಾದಿಂದ ಆಮದು ಆದ ಆ್ಯಂಟಿಬಾಡಿ ಱಪಿಡ್ ಟೆಸ್ಟ್ ಕಿಟ್​ಗಳಿಂದ ಭಾರಿ ಗೋಲ್‌ಮಾಲ್ ಆಗಿದೆ. ದೆಹಲಿ ಹೈಕೋರ್ಟ್ ಆದೇಶದಲ್ಲಿ ಗೋಲ್‌ಮಾಲ್ ಬಯಲಾಗಿದೆ. ಚೀನಾದಿಂದ 5 ಲಕ್ಷ ಱಪಿಡ್ ಕಿಟ್​ಗಳ ಆಮದಾಗಿದ್ದು, ಖಾಸಗಿ ಕಂಪನಿಗಳು ತಮಗೆ ಇಷ್ಟವಾದ ಬೆಲೆಗೆ ಮಾರಾಟ ಮಾಡಿ ಭಾರಿ ಗೋಲ್‌ಮಾಲ್ ಮಾಡಿವೆ.

ಕೆಲ ಖಾಸಗಿ ಕಂಪನಿ ಚೀನಾದಿಂದ ಆ್ಯಂಟಿಬಾಡಿ ಱಪಿಡ್ ಟೆಸ್ಟ್ ಕಿಟ್​ಗಳನ್ನು ಆಮದು ಮಾಡಿಕೊಂಡು ಬೇರೆ ಬೇರೆ ಕಂಪನಿಗಳಿಗೆ ಬೇರೆ ಬೇರೆ ಮೌಲ್ಯದಲ್ಲಿ ಕಿಟ್​ಗಳನ್ನು ಮಾರಾಟ ಮಾಡಿದೆ. ಹಣ ನೀಡದ ಹಿನ್ನೆಲೆಯಲ್ಲಿ ಖಾಸಗಿ ಕಂಪನಿ ಹೈಕೋರ್ಟ್ ಮೆಟ್ಟಿಲೇರಿದೆ. ಈ ವೇಳೆ ಱಪಿಡ್ ಟೆಸ್ಟ್ ಕಿಟ್‌ನ ಅಸಲಿ ಮೌಲ್ಯವೆಷ್ಟು, ಲಾಭವೆಷ್ಟು, ಕಮಿಷನ್ ಎಷ್ಟು ಎಂಬುದು ಬಹಿರಂಗವಾಗಿದೆ. ದೆಹಲಿ ಹೈಕೋರ್ಟ್ ಆದೇಶದಲ್ಲಿ ಎಲ್ಲವೂ ಉಲ್ಲೇಖ ಮಾಡಲಾಗಿದೆ.

ಮ್ಯಾಟ್ರಿಕ್ಸ್ ಲ್ಯಾಬ್ ಎನ್ನುವ ಕಂಪನಿ ₹12.25 ಕೋಟಿ ರೂಪಾಯಿಗೆ 5 ಲಕ್ಷ ಆ್ಯಂಟಿಬಾಡಿ ಱಪಿಡ್ ಟೆಸ್ಟ್ ಕಿಟ್​ಗಳನ್ನು ಚೀನಾದಿಂದ ಅಮದು ಮಾಡಿಕೊಂಡಿದೆ. ಆದರೆ ಅದೇ 5 ಲಕ್ಷ ಟೆಸ್ಟಿಂಗ್ ಕಿಟ್​ಗಳನ್ನು ₹21 ಕೋಟಿ ರೂಪಾಯಿಗೆ ರೇರ್ ಮೆಟಬಾಲಿಕ್ಸ್ ಕಂಪನಿಗೆ ಮಾರಾಟ ಮಾಡಿದೆ. ಬಳಿಕ ರೇರ್ ಮೆಟಬಾಲಿಕ್ಸ್ ಕಂಪನಿಯು ರಾಪಿಡ್ ಟೆಸ್ಟಿಂಗ್ ಕಿಟ್ ಗಳನ್ನು 30 ಕೋಟಿ ರೂಪಾಯಿಗೆ ICMR‌ಗೆ ಮಾರಾಟ ಮಾಡಿದೆ.

ಇನ್ನು ಈ ಖರೀದಿ, ಮಾರಾಟದಲ್ಲಿ 18.75 ಲಕ್ಷ ರೂಪಾಯಿಯನ್ನು ಮಧ್ಯವರ್ತಿಗೆ ನೀಡಲಾಗಿದೆ. ಈ ಬಗ್ಗೆಯೂ ಹೈಕೋರ್ಟ್‌ನ ಆದೇಶದಲ್ಲಿ ಉಲ್ಲೇಖಿಸಲಾಗಿದೆ. ರೇರ್ ಮೆಟಬಾಲಿಕ್ಸ್ ಕಂಪನಿಯಿಂದ ಮ್ಯಾಟ್ರಿಕ್ಸ್ ಲ್ಯಾಬ್ ಕಂಪನಿಗೆ ಬಾಕಿ ಇರುವ 8.25 ಕೋಟಿ ರೂಪಾಯಿ ಹಣ ಪಾವತಿ ಮಾಡಲು ಕೋರ್ಟ್ ಆದೇಶ ನೀಡಿದೆ. ಈಗಾಗಲೇ ಮ್ಯಾಟ್ರಿಕ್ಸ್ ಲ್ಯಾಬ್ ಕಂಪನಿ 12.75 ಕೋಟಿ ರೂಪಾಯಿ ಹಣ ಪಡೆದಿದೆ.

Published On - 8:13 am, Mon, 27 April 20

Click on your DTH Provider to Add TV9 Kannada