ಇಂದೋರ್ ಕೊರೊನಾ ಬೇರೆ ವೈರಾಣುಗಿಂತ ಭಿನ್ನ, ಭೀಕರ !!!

ಇಂದೋರ್ ಕೊರೊನಾ ಬೇರೆ ವೈರಾಣುಗಿಂತ ಭಿನ್ನ, ಭೀಕರ !!!

ಮಧ್ಯಪ್ರದೇಶ: ಇಂದೋರ್ ನಲ್ಲಿ ಕೊರೊನಾ ತಳಿಯ ಮತ್ತೊಂದು ವೈರಾಣು ಕಂಡುಬಂದಿದ್ದು, ಅದು ದೇಶದಲ್ಲಿ ಇದುವರೆಗೂ ಕಂಡುಬಂದಿರುವ ಮಾಮೂಲಿ ಕೊರೊನಾ ವೈರಾಣುವಿಗಿಂತ ಭಿನ್ನವಾಗಿದೆ. ಅತಿ ಹೆಚ್ಚು ಡೆಡ್ಲಿ ವೈರಾಣುವಾಗಿದೆ.

ಮಧ್ಯಪ್ರದೇಶದ ಇಂದೋರ್​ನಲ್ಲಿ ಈ ವೈರಾಣುವಿನಿಂದ ಅತಿ ಹೆಚ್ಚು ಜನರು ಕೊರೊನಾ ಸೋಂಕಿತರಾಗಿದ್ದಾರೆ‌. 30 ಲಕ್ಷ ಜನಸಂಖ್ಯೆ ಇರುವ ಇಂದೋರ್ ನಲ್ಲಿ 1,176 ಮಂದಿಗೆ ಈ ಡೆಡ್ಲಿ ಕೊರೊನಾ ಸೋಂಕು ತಗುಲಿದೆ. ಇದರಿಂದ ಇಂದೋರ್ ನಲ್ಲಿ 57 ಸಾವು‌ಗಳು ಸಂಭವಿಸಿವೆ ಎಂದು ವೈದ್ಯರು ತಿಳಿಸಿದ್ದಾರೆ.

ದೇಶದ ಬೇರೆ ಭಾಗದ ಕೊರೊನಾ ವೈರಾಣುವಿಗಿಂತ ಇಂದೋರ್ ವೈರಾಣು ಹೆಚ್ಚು ಡೆಡ್ಲಿ ವೈರಾಣು ಆಗಿದೆ. ಇದರಿಂದ ಕೊರೊನಾ ಸೋಂಕು ಶೀಘ್ರವಾಗಿ ಹೆಚ್ಚುತ್ತಿದೆ. ಹೀಗಾಗಿ ಇಂದೋರ್ ನ‌ ಕೊರೊನಾ ವೈರಾಣುವನ್ನು ಪುಣೆಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಗೆ ಕಳಿಸಿದ್ದೇವೆ ಎಂದು ಮಹಾತ್ಮ ಗಾಂಧಿ ಸ್ಮಾರಕ ಮೆಡಿಕಲ್ ಕಾಲೇಜು ಡೀನ್ ಜ್ಯೋತಿ ಬಿಂದಾಲ್ ಹೇಳಿದ್ದಾರೆ. ಈ ಮಧ್ಯೆ, ಇಂದೋರ್ ವೈದ್ಯರು‌ ಸಹ ವೈರಾಣುವಿನ‌ ಬಗ್ಗೆ ಅಧ್ಯಯನ ನಡೆಸುತ್ತಿದ್ದಾರೆ.

Published On - 1:13 pm, Mon, 27 April 20

Click on your DTH Provider to Add TV9 Kannada