ಗಾಜಿಯಾಬಾದ್: ಕೊರೊನಾವೈರಸ್ ತಗುಲಿದ 70ರ ಹರೆಯದ ವಿದ್ಯಾದೇವಿ ನವದೆಹಲಿಯ ಆಸ್ಪತ್ರೆಯಲ್ಲಿ ತುರ್ತು ಆರೈಕೆಯಲ್ಲಿರಬೇಕಿತ್ತು. ಆದರೆ ಅವರು ಸಿ ಖ್ ದೇವಾಲಯದ ಹೊರಗೆ ಕಾರಿನ ಹಿಂಬದಿಯ ಸೀಟಿನಲ್ಲಿ ಮಲಗಿದ್ದಾರೆ. ಬೀದಿಯಲ್ಲಿರುವ ಆಮ್ಲಜನಕ ಟ್ಯಾಂಕ್ನಿಂದ ಆಕೆಗೆ ಆಮ್ಲಜನಕ ಪೂರೈಸಲಾಗುತ್ತಿತ್ತು. ದೇಶದಲ್ಲಿ ಕೊವಿಡ್ ಪ್ರಕರಣಗಳು ಹೆಚ್ಚುತ್ತಿದ್ದಂತೆ ಜನರು ಆಕ್ಸಿಜನ್ಗಾಗಿ,ಆಸ್ಪತ್ರೆಗಳಲ್ಲಿ ಹಾಸಿಗೆಗಾಗಿ ಪರದಾಡುತ್ತಿದ್ದಾರೆ. ಆರೋಗ್ಯ ಸಚಿವಾಲಯದ ಪ್ರಕಾರ ದೇಶದಲ್ಲಿ ಕೊವಿಡ್ ರೋಗಿಗಳ ಸಂಖ್ಯೆ 1,69,60,172 ಆಗಿದ್ದು 192,311 ಮಂದಿ ಮೃತಪಟ್ಟಿದ್ದಾರೆ.
ದೆಹಲಿಯ ಹೊರವಲಯದಲ್ಲಿರುವ ಗಾಜಿಯಾಬಾದ್ ನಗರದಲ್ಲಿ ಸಿಖ್ಖರ ದೇವಾಲಯ ಗುರುದ್ವಾರದ ಹೊರಗೆ ಸಿಖ್ ಸಮುದಾಯ ಕೊವಿಡ್ ರೋಗಿಗಳಿಗೆ ಸಹಾಯಮಾಡುತ್ತಿರುವ ದೃಶ್ಯವನ್ನು ಕಾಣಬಹುದು. ಸಿಖ್ ಸಮುದಾಯದ ಖಾಲ್ಸಾ ಹೆಲ್ಪ್ ಇಂಟರ್ ನ್ಯಾಷನಲ್ ಸಣ್ಣ ಪ್ರಮಾಣದಲ್ಲಿ ಆಕ್ಸಿಜನ್ ಖರೀದಿ ಮಾಡಿ, ತುರ್ತು ಅಗತ್ಯವಿರುವವರಿಗೆ ಆಕ್ಸಿಜನ್ ಪೂರೈಸುತ್ತಿದೆ. ಕಾರು, ವ್ಯಾನ್,ರಿಕ್ಷಾಗಳಲ್ಲಿ ಕೊವಿಡ್ ರೋಗಿಗಳನ್ನು ಕರೆತರುತ್ತಿದ್ದು ದೇವಾಲಯದ ಹೊರಗೆ ರೋಗಿಗಳಿಗೆ ಆಕ್ಸಿಜನ್ ಪೂರೈಸಲಾಗುತ್ತಿದೆ.
ನನಗೆ ಬೇರೆ ಎಲ್ಲಿಯೂ ಸಹಾಯ ಸಿಗಲಿಲ್ಲ, ಹಾಗಾಗಿ ನಾನು ಇಲ್ಲಿಗೆ ಬಂದೆ ಅಂತಾರೆ ವಿದ್ಯಾದೇವಿ ಅವರ ಮಗ ಮನೋಜ್ ಕುಮಾರ್. ಕಾರಿನ ಹಿಂಬದಿ ಸೀಟಿನಲ್ಲಿರುವ ವಿದ್ಯಾದೇವಿಗೆ ಆಕ್ಸಿಜನ್ ನೀಡುವಾಗ ಅಲ್ಲಿನ ಸ್ವಯಂ ಸೇವಕರು ಆಕ್ಸಿಜನ್ ಪ್ರಮಾಣದ ಬಗ್ಗೆ ನಿಗಾ ವಹಿಸುತ್ತಾರೆ. ನಾನು ಗುರುದ್ವಾರಕ್ಕೆ ಫೋನ್ ಮಾಡಿದಾಗ ಆದಷ್ಟು ಬೇಗ ಇಲ್ಲಿಗೆ ಕರೆತರುವಂತೆ ಅವರು ಹೇಳಿದರು ಅಂತಾರೆ ಕುಮಾರ್.
ವ್ಯಾನ್ನಲ್ಲಿ ಆಕ್ಸಿಜನ್ ಪಡೆಯುತ್ತಿದ್ದ ಮಧ್ಯ ವಯಸ್ಸಿನ ಮಹಿಳೆ, ಆಕೆಯ ಮಗ ಮಮ್ಮಿ, ಮಮ್ಮಿ ಎಂದು ಕರೆಯುತ್ತಾ ಆಕೆಯನ್ನು ಎಚ್ಚರವಾಗಿರಿಸಲು ಶ್ರಮಿಸುತ್ತಿರುವ ದೃಶ್ಯ ಮತ್ತೊಂಡೆದೆ ಕಾಣುತ್ತಿತ್ತು ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
A gurdwara in Ghaziabad has started ‘Oxygen Langar’ to help COVID patients
Till now we’ve been able to save around 200 lives. We request the DM & VK Singh ji to provide us with 25 oxygen cyclinders for 12 hours which will to help us save 1000 lives,” says Gurdwara manager pic.twitter.com/2iaV3Bt6fV
— ANI UP (@ANINewsUP) April 24, 2021
ಇನ್ನೊಂದು ವ್ಯಾನ್ನಲ್ಲಿ ವ್ಯಕ್ತಿಯೊಬ್ಬರು ಪ್ರಜ್ಞಾಹೀನರಾಗಿ ಮಲಗಿದ್ದು, ಸ್ವಯಂ ಸೇವಕರು ಅವರ ಪಾದವನ್ನು ತಿಕ್ಕುತ್ತಿದ್ದರು. ಮತ್ತೊಬ್ಬ ಸ್ವಯಂ ಸೇವಕ ಅವರ ಎದೆಯನ್ನೊತ್ತಿ, ಉಸಿರಾಡಲು ಸಹಾಯ ಮಾಡುತ್ತಿದ್ದರು.
ಆಕ್ಸಿಜನ್ ಲಂಗರ್ ಬಗ್ಗೆ ಮಾತನಾಡಿದ ಗುರುದ್ವಾರದ ಅಧ್ಯಕ್ಷ ಹಾಗೂ ಖಾಲ್ಸಾ ಹೆಲ್ಪ್ ಇಂಟರ್ ನ್ಯಾಷನಲ್ ನ ಸಂಸ್ಥಾಪಕ ರಮ್ಮಿ, ದೆಹಲಿಯಲ್ಲಿ ಕೊವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ನಾವು ಮೂರು ದಿನಗಳ ಹಿಂದೆ ಈ ಸೇವೆ ಆರಂಭಿಸಿದ್ದೆವು ಎಂದಿದ್ದಾರೆ.
#Ghaziabad Gurudwara offers ‘Oxygen Langar’ as Covid cases spike across country.#TV9News #COVID19 #OxygenCrisis pic.twitter.com/Joed55fRkF
— tv9gujarati (@tv9gujarati) April 24, 2021
ಜನರು ರಸ್ತೆಯಲ್ಲಿ ಬಿದ್ದು ಸಾಯುತ್ತಿದ್ದಾರೆ. ಹಾಗಾಗಿಯೇ ನಾನು ಈ ಲಂಗರ್ ಆರಂಭಿಸಿದ್ದು ಅಂತಾರೆ ರಮ್ಮಿ.
ಶನಿವಾರ ಸಂಜೆಯ ಹೊತ್ತಿಗೆ ನಾವು ಆಕ್ಸಿಜನ್ ಪೂರೈಕೆ ಸೇವೆ ಆರಂಭಿಸಿ 36 ಗಂಟೆಗಳಾಗಿವೆ. ಇಷ್ಟು ಹೊತ್ತಲ್ಲಿ ಖಾಲ್ಸಾ ಹೆಲ್ಪ್ ಇಂಟರ್ ನ್ಯಾಷನಲ್ ಗ್ರೂಪ್ 700 ರೋಗಿಗಳನ್ನು ರಕ್ಷಿಸಿದೆ. ಕೆಲವರನ್ನು ರಕ್ಷಿಸಲು ಸಾಧ್ಯವಾಗಿಲ್ಲ ಎಂದು ಹೇಳಿದ್ದಾರೆ.
ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ದೇವಾಲಯದ ಬಳಿ ಬಂದ ಕೂಡಲೇ ಕಾರಿನ ಸೀಟಿನಲ್ಲಿ ಅವರನ್ನು ಮಲಗಿಸಿ ಅವರಿಗೆ ಆಕ್ಸಿಜನ್ ಒದಗಿಸಲಾಗಿದೆ.
ಇದನ್ನೂ ಓದಿ: Coronavirus in India Update: ಸತತ ನಾಲ್ಕನೇ ದಿನ ದೇಶದಲ್ಲಿ 3 ಲಕ್ಷ ದಾಟಿದ ಹೊಸ ಕೊವಿಡ್ ಪ್ರಕರಣ, 2,767 ಮಂದಿ ಸಾವು
(Massive surge in COVID 19 cases in Delhi Gurudwara Runs Oxygen Langar)
Published On - 5:20 pm, Sun, 25 April 21