ಯಮುನಾ ಎಕ್ಸ್​ಪ್ರೆಸ್​ ವೇನಲ್ಲಿ ಎರಡು ಬಸ್​ಗಳ ನಡುವೆ ಅಪಘಾತ: 40 ಪ್ರಯಾಣಿಕರಿಗೆ ಗಾಯ

|

Updated on: Jan 15, 2024 | 10:42 AM

ಯಮುನಾ ಎಕ್ಸ್​ಪ್ರೆಸ್​ ವೇನಲ್ಲಿ ಎರಡು ಬಸ್​ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ 40 ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಉತ್ತರ ಹಾಗೂ ಪೂರ್ವ ಭಾರತದ ಬಹುತೇಕ ಪ್ರದೇಶಗಳಲ್ಲಿ ಚಳಿ ಹೆಚ್ಚಾಗಿದೆ. ತಾಪಮಾನ ಕುಸಿತದ ಜತೆಗೆ ದಟ್ಟ ಮಂಜು ಆವರಿಸಿಕೊಳ್ಳುತ್ತಿದೆ. ಇದರಿಂದಾಗಿ ಕಡಿಮೆ ಗೋಚರತೆಯುಂಟಾಗುತ್ತಿದ್ದು, ಅಪಘಾತಗಳು ಸಂಭವಿಸುತ್ತಿವೆ.

ಯಮುನಾ ಎಕ್ಸ್​ಪ್ರೆಸ್​ ವೇನಲ್ಲಿ ಎರಡು ಬಸ್​ಗಳ ನಡುವೆ ಅಪಘಾತ: 40 ಪ್ರಯಾಣಿಕರಿಗೆ ಗಾಯ
ಯಮುನಾ ಎಕ್ಸ್​ಪ್ರೆಸ್​ ವೇ ಅಪಘಾತ
Image Credit source: Aaj Tak
Follow us on
ಯಮುನಾ ಎಕ್ಸ್​ಪ್ರೆಸ್​ ವೇನಲ್ಲಿ ಎರಡು ಬಸ್​ಗಳ ನಡುವೆ ಸಂಭವಿಸಿದ ಅಪಘಾತ(Accident)ದಲ್ಲಿ 40 ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಉತ್ತರ ಹಾಗೂ ಪೂರ್ವ ಭಾರತದ ಬಹುತೇಕ ಪ್ರದೇಶಗಳಲ್ಲಿ ಚಳಿ ಹೆಚ್ಚಾಗಿದೆ. ತಾಪಮಾನ ಕುಸಿತದ ಜತೆಗೆ ದಟ್ಟ ಮಂಜು ಆವರಿಸಿಕೊಳ್ಳುತ್ತಿದೆ. ಇದರಿಂದಾಗಿ ಕಡಿಮೆ ಗೋಚರತೆಯುಂಟಾಗುತ್ತಿದ್ದು, ಅಪಘಾತಗಳು ಸಂಭವಿಸುತ್ತಿವೆ.
ದಟ್ಟ ಮಂಜಿನಿಂದಾಗಿ ಮಥುರಾದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಎರಡು ಬಸ್‌ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ, ಈ ಅಪಘಾತದಲ್ಲಿ ಎರಡೂ ಬಸ್‌ಗಳಲ್ಲಿ ಪ್ರಯಾಣಿಸುತ್ತಿದ್ದ 40 ಮಂದಿ ಗಾಯಗೊಂಡಿದ್ದು, ಅವರನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಗಾಯಗೊಂಡ ಪ್ರಯಾಣಿಕರಲ್ಲಿ 31 ಮಂದಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಉಳಿದ 9 ಮಂದಿಯನ್ನು ಮಥುರಾದ ಇತರೆ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಮಾಹಿತಿಯ ಪ್ರಕಾರ, ಒಂದು ಬಸ್ ಧೋಲ್‌ಪುರ (ರಾಜಸ್ಥಾನ) ನಿಂದ ನೋಯ್ಡಾಗೆ ಹೋಗುತ್ತಿತ್ತು ಮತ್ತು ಇನ್ನೊಂದು ಬಸ್ ಇಟಾವಾದಿಂದ ನೋಯ್ಡಾಕ್ಕೆ ಹೋಗುತ್ತಿತ್ತು.
ಮತ್ತಷ್ಟು ಓದಿ: ಪ್ರತ್ಯೇಕ ಘಟನೆ: ಜಾಲಿ ರೈಡ್​ ಹೋಗುತ್ತಿದ್ದ ಯುವಕರ ಕಾರು ಅಪಘಾತ 2 ಮೃತ, KSRTC ಬಸ್​​​​-ಬೈಕ್​​​​ ನಡುವೆ ಅಪಘಾತ; 2 ಸಾವು
ಆಗ್ರಾದಿಂದ ನೊಯ್ಡಾ ಮಾರ್ಗವಾಗಿ ಬೆಳಗಿನ ಜಾವ 3 ಗಂಟೆಗೆ ಎರಡು ಬಸ್‌ಗಳ ನಡುವೆ ಭಾರಿ ಡಿಕ್ಕಿ ಸಂಭವಿಸಿದೆ. ರಸ್ತೆ ಅಪಘಾತದ ಬಳಿಕ ಸ್ಥಳದಲ್ಲಿ ಅಳಲು ತೋಡಿಕೊಂಡರು. ಮಥುರಾದ ಯಮುನಾ ಎಕ್ಸ್ ಪ್ರೆಸ್ ವೇನಲ್ಲಿ ಸಂಭವಿಸಿದ ಅಪಘಾತದ ಕುರಿತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪೋಸ್ಟ್​ ಮಾಡಿದ್ದು, ಮಥುರಾ ರಸ್ತೆ ಅಪಘಾತದಲ್ಲಿ ಗಾಯಗೊಂಡಿರುವ ಪ್ರಯಾಣಿಕರಿಗೆ ಕೂಡಲೇ ಸೂಕ್ತ ಚಿಕಿತ್ಸೆ ನೀಡುವಂತೆ ಸೂಚಿಸಿದ್ದಾರೆ.
ರಾಯ್ ಬರೇಲಿಯಲ್ಲಿ ತಡರಾತ್ರಿ ವೇಗವಾಗಿ ಬಂದ ಡಂಪರ್ ವೊಂದು ನಿಯಂತ್ರಣ ತಪ್ಪಿ ಮನೆಯೊಂದಕ್ಕೆ ನುಗ್ಗಿತ್ತು, ವಿದ್ಯುತ್ ಕಂಬವನ್ನೂ ಮುರಿದಿದೆ.  ಈ ಅಪಘಾತದಿಂದ ಕುಟುಂಬಸ್ಥರು ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಟ್ರಕ್ ಚಾಲಕನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಜಿಲ್ಲೆಯ ಖೀರೋನ್ ಪೊಲೀಸ್ ಠಾಣೆ ವ್ಯಾಪ್ತಿಯ ಶಿವಪುರ ಹುಸೇನಾಬಾದ್‌ನಲ್ಲಿ ಈ ಘಟನೆ ನಡೆದಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ