ಪ್ರತ್ಯೇಕ ಘಟನೆ: ಜಾಲಿ ರೈಡ್ ಹೋಗುತ್ತಿದ್ದ ಯುವಕರ ಕಾರು ಅಪಘಾತ 2 ಮೃತ, KSRTC ಬಸ್-ಬೈಕ್ ನಡುವೆ ಅಪಘಾತ; 2 ಸಾವು
ಪ್ರತ್ಯೆಕ ಘಟನೆ: ಹುಟ್ಟು ಹಬ್ಬ ಸಂಭ್ರಮಾಚರಣೆ ಬಳಿಕ ಹಾಸನ ತಾಲೂಕಿನ ಮಡೆನೂರು ಫ್ಲೈಓವರ್ ಬಳಿ ಕಾರಿನಲ್ಲಿ ಜಾಲಿ ರೈಡ್ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಕಲಬುರಗಿಯಲ್ಲಿ ಕೆಎಸ್ಆರ್ಟಿಸಿ ಬಸ್ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದ್ದು, ಇಬ್ಬರು ಸಾವಿಗೀಡಾಗಿದ್ದಾರೆ.
ಹಾಸನ, ಜನವರಿ 12: ಕಲಬುರಗಿ (Kalaburagi) ಮತ್ತು ಹಾಸನ (Hassan) ಜಿಲ್ಲೆಯಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ಅಪಘಾತದಲ್ಲಿ (Accident) ನಾಲ್ವರು ಮೃತಪಟ್ಟಿದ್ದಾರೆ. ಹುಟ್ಟು ಹಬ್ಬ ಸಂಭ್ರಮಾಚರಣೆ ಬಳಿಕ ಹಾಸನ ತಾಲೂಕಿನ ಮಡೆನೂರು ಫ್ಲೈಓವರ್ ಬಳಿ ಕಾರಿನಲ್ಲಿ ಜಾಲಿ ರೈಡ್ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಕಲಬುರಗಿಯಲ್ಲಿ ಕೆಎಸ್ಆರ್ಟಿಸಿ ಬಸ್ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದ್ದು, ಇಬ್ಬರು ಸಾವಿಗೀಡಾಗಿದ್ದಾರೆ.
ಗುರುವಾರ ರಾತ್ರಿ ಹುಟ್ಟು ಹಬ್ಬ ಸಂಭ್ರಮಾಚರಣೆ ಬಳಿಕ ಜಾಲಿ ರೈಡ್ ಹೋಗುತ್ತಿದ್ದಾಗ ಕಾರು ಎಲೆಕ್ಟ್ರಿಕ್ ಪೋಲ್‌ಗೆ ಡಿಕ್ಕಿ ಹೊಡೆದು ಜಮೀನಿನಲ್ಲಿ ಉರುಳಿಬಿದ್ದ ಘಟನೆ ಹಾಸನ ತಾಲೂಕಿನ ಮಡೆನೂರು ಫ್ಲೈಓವರ್ ಬಳಿ ನಡೆದಿದೆ. ಕಾರಿನಲ್ಲಿದ್ದ ರಕ್ಷಿತ್(22), ಕುಶಾಲ್(24) ಮೃತ ದುರ್ದೈವಿಗಳು.
ರಕ್ಷಿತ್ ಸ್ಥಳದಲ್ಲೇ ಮೃತಪಟ್ಟಿದ್ದು, ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಕುಶಾಲ್ ಸಾವಿಗೀಡಾಗಿದ್ದಾನೆ. ಇನ್ನು ಕಾರಿನಲ್ಲಿದ್ದ ಅಭಿಷೇಕ್, ನಿಶಾಂತ್, ಮಂಜುನಾಥ್ ಎಂಬುವರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ: ಹುಬ್ಬಳ್ಳಿ: ಮುಂಬೈ-ಬೆಂಗಳೂರು ಹೆದ್ದಾರಿಯಲ್ಲಿ ಭೀಕರ ಅಪಘಾತ, ನಾಲ್ವರ ಸಾವು
ಚನ್ನರಾಯಪಟ್ಟಣದ ಯುವಕರು ಹುಟ್ಟುಹಬ್ಬದ ಆಚರಣೆಗೆ ಗಿರೀಶ್ ಎಂಬುವರಿಂದ ಕಾರು ಪಡೆದುಕೊಂಡು ಹಾಸನಕ್ಕೆ ಬಂದಿದ್ದರು ಎಂಬುವುದು ತಿಳಿದುಬಂದಿದೆ. ಶಾಂತಿಗ್ರಾಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕೆಎಸ್ಆರ್ಟಿಸಿ ಬಸ್-ಬೈಕ್ ನಡುವೆ ಅಪಘಾತ; 2 ಸಾವು
ಕಲಬುರಗಿ: ಕೆಎಸ್ಆರ್ಟಿಸಿ ಬಸ್-ಬೈಕ್ ನಡುವೆ ಡಿಕ್ಕಿಯಾಗಿ ಇಬ್ಬರು ಮೃತಪಟ್ಟಿರುವ ಘಟನೆ ಆಳಂದ ಪಟ್ಟಣದ ಮಿನಿ ವಿಧಾನಸೌಧ ಬಳಿ ನಡೆದಿದೆ. ಬೈಕ್ನಲ್ಲಿದ್ದ ಸಿದ್ದಲಿಂಗಯ್ಯ, ಪುತ್ರ (ಸಹೋದನ ಮಗ) ಸಂಕೇತ್ (8) ಮೃತ ದುರ್ದೈವಿಗಳು. ಇನ್ನು ಬೈಕ್ನಲ್ಲಿದ್ದ ನಾಗಮ್ಮ (34), ಅಂಕಿತಾ(14) ಎಂಬುವರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೈಕ್ನಲ್ಲಿ ನಾಲ್ವರು ಆಳಂದದಿಂದ ಹಿರೊಳ್ಳಿಗೆ ತೆರಳುತ್ತಿದ್ದಾಗ ದುರಂತ ಸಂಭವಿಸಿದೆ. ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ