ಸಾಕು ನಾಯಿ ಕೆರೆ ಕಡೆ ನೋಡಿ ಒಂದೇ ಸಮನೆ ಬೊಗಳುತ್ತಿತ್ತು! ಯಾಕೆ ಅಂದ್ರೆ ಅಲ್ಲಿ ನಡೆದಿತ್ತು ಹೃದಯ ವಿದ್ರಾವಕ ಘಟನೆ

| Updated By: ಸಾಧು ಶ್ರೀನಾಥ್​

Updated on: May 29, 2023 | 4:23 PM

ಸ್ವಗ್ರಾಮಕ್ಕೆ ಬಂದಿದ್ದ ಎಂಬಿಬಿಎಸ್ ವಿದ್ಯಾರ್ಥಿ ರಂಜಿತ್ ಮತ್ತು ಆತನ ತಂಗಿ ಕೀರ್ತಿ (16) ತಮ್ಮ ಸಾಕು ನಾಯಿಯನ್ನು ಸ್ಕೂಟರ್ ನಲ್ಲಿ ಕರೆದುಕೊಂಡು ಸಮೀಪದ ಗವೇವಿ ಹೊಂಡಕ್ಕೆ ತೆರಳಿದ್ದರು. ಅಲ್ಲಿ ನಾಯಿಗೆ ಸ್ನಾನ ಮಾಡಿಸುವುದು ಅವರ ಇರಾದೆಯಾಗಿತ್ತು. ಆದರೆ ವಿಧಿ ವಿಪರೀತವಾಗಿ ಅದರ ಆಟವೇ ಬೇರೆಯದ್ದಾಗಿತ್ತು!

ಸಾಕು ನಾಯಿ ಕೆರೆ ಕಡೆ ನೋಡಿ ಒಂದೇ ಸಮನೆ ಬೊಗಳುತ್ತಿತ್ತು! ಯಾಕೆ ಅಂದ್ರೆ ಅಲ್ಲಿ ನಡೆದಿತ್ತು ಹೃದಯ ವಿದ್ರಾವಕ ಘಟನೆ
ಸಾಕು ನಾಯಿ ಕೆರೆ ಕಡೆ ನೋಡಿ ಒಂದೇ ಸಮನೆ ಬೊಗಳುತ್ತಿತ್ತು! ಯಾಕೆ ಅಂದ್ರೆ
Follow us on

ಅಣ್ಣ-ತಂಗಿ ಇಬ್ಬರೂ ಸಾಕು ನಾಯಿಗೆ (bath) ಸ್ನಾನ (bath) ಮಾಡಿಸಬೇಕೆಂದು ಅದನ್ನು ಸಮೀಪದ ಹೊಂಡಕ್ಕೆ (pond) ಕರೆದುಕೊಂಡು ಹೋದರು. ಆದರೆ ಅಲ್ಲಿ ಆ ಮಕ್ಕಳಿಗೆ ಅನಿರೀಕ್ಷಿತವಾದ ಆಘಾತವೊಂದು ಎದುರಾಗಿದೆ. ಅವರಿಬ್ಬರೂ ಕೆರೆಯಲ್ಲಿ ಶವಗಳಾಗಿ ತೇಲುವಂತಾದರು. ಮಹಾರಾಷ್ಟ್ರದ (Maharashtra) ಡೊಂಬಿವಲಿ ದವಾಡಿ ಗ್ರಾಮದಲ್ಲಿ ಭಾನುವಾರ ಮಧ್ಯಾಹ್ನ ಈ ದಾರುಣ ಘಟನೆ ನಡೆದಿದೆ. ಏನಾಯ್ತು? ಮುಂದೆ ಓದಿ.

ಗ್ರಾಮದ ಎಂಬಿಬಿಎಸ್ ವಿದ್ಯಾರ್ಥಿ ರಂಜಿತ್ ರವೀಂದ್ರನ್ (22) ಮತ್ತು ಅವರ ತಂಗಿ ಕೀರ್ತಿ ರವೀಂದ್ರನ್ (16) ಕೆಲಸದ ನಿಮಿತ್ತ ತಮ್ಮ ಪೋಷಕರೊಂದಿಗೆ ಭಾನುವಾರ ಗ್ರಾಮಕ್ಕೆ ತೆರಳಿದ್ದರು. ಅಲ್ಲಿಗೆ ಹೋದ ಮೇಲೆ ಅಣ್ಣ-ತಂಗಿಯರಿಬ್ಬರು ತಮ್ಮ ಸಾಕು ನಾಯಿಯನ್ನು ಸ್ಕೂಟರ್ ನಲ್ಲಿ ಕರೆದುಕೊಂಡು ಸಮೀಪದ ಗವೇವಿ ಹೊಂಡಕ್ಕೆ ತೆರಳಿದ್ದರು. ನಾಯಿಗೆ ಸ್ನಾನ ಮಾಡಿಸುವಾಗ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿದ್ದಾರೆ. ಇಬ್ಬರೂ ಕಣ್ಣೆದುರೇ ನೀರಿನಲ್ಲಿ ಮುಳುಗುತ್ತಿದ್ದಾಗ ನಾಯಿ ಸಹಾಯಕ್ಕಾಗಿ ಜೋರಾಗಿ ಬೊಗಳ ತೊಡಗಿತು.

ಆದರೆ ಅದರ ಪ್ರಯತ್ನಗಳು ವ್ಯರ್ಥವಾಯಿತು. ನಾಯಿ ಕೆರೆಯತ್ತ ಕಣ್ಣು ಹಾಯಿಸಿ ಬೊಗಳುವುದನ್ನು ಆ ಮೂಲಕ ಹೋಗುತ್ತಿದ್ದ ಗ್ರಾಮಸ್ಥರು ಗಮನಿಸಿದ್ದಾರೆ. ಅನುಮಾನಗೊಂಡ ಗ್ರಾಮಸ್ಥರು ಕೆರೆಯೊಳಗೆ ನೋಡಿದಾಗ ಅಣ್ಣ-ತಂಗಿಯರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದು ಗಮನಕ್ಕೆ ಬಂದಿದೆ. ಕೂಡಲೇ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಯಿತು.

Also Read:  ಅನಾರೋಗ್ಯದಿಂದ ಸಾವನ್ನಪ್ಪಿದ ಪತಿ.. ಮನೆಯಲ್ಲಿಯೇ ಶವಸಂಸ್ಕಾರ ಮಾಡಿದ ಪತ್ನಿ! ಕಾರಣ ಕೇಳಿ

ಸ್ಥಳಕ್ಕಾಗಮಿಸಿದ ಪೊಲೀಸರು ಎರಡು ಗಂಟೆಗಳ ಕಾಲ ಶೋಧ ನಡೆಸಿ ಇಬ್ಬರ ಮೃತದೇಹಗಳನ್ನು ಹೊರತೆಗೆದಿದ್ದಾರೆ. ನಂತರ, ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಣ್ಣಾ-ತಂಗಿ ವ್ಯಾಸಂಗದಲ್ಲಿ ಅತ್ಯುತ್ತಮರು ಎಂದು ಸ್ಥಳೀಯರು ದುಃಖದಲ್ಲಿ ಮುಳುಗಿ, ಕೊಂಡಾಡಿದ್ದಾರೆ. ಕೀರ್ತಿ 10ನೇ ತರಗತಿಯಲ್ಲಿ ಶೇ. 98 ಅಂಕಗಳೊಂದಿಗೆ ತೇರ್ಗಡೆಯಾಗಿದ್ದು, ರಂಜಿತ್ ಕೂಡ ಎಂಬಿಬಿಎಸ್ ಅಂತಿಮ ವರ್ಷ ಓದುತ್ತಿದ್ದಾನೆ. ನಮ್ಮ ಸಾಕುನಾಯಿಯನ್ನು ತುಂಬಾ ಪ್ರೀತಿಸುತ್ತಿದ್ದರು, ಇಬ್ಬರೂ ಒಂದೇ ಸಮಯದಲ್ಲಿ ಸಾವನ್ನಪ್ಪಿದ್ದಾರೆ ಎಂದು ಕುಟುಂಬಸ್ಥರು ಕಣ್ಣೀರು ಹಾಕಿದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ