ಕೇರಳ: ಕೈಗಳಿಲ್ಲದಿದ್ದರೂ ಛಲಬಿಡದೆ, ಅಡೆತಡೆಗಳ ಮೀರಿ ಚಾಲನಾ ಪರವಾನಗಿ ಪಡೆದ ದಿಟ್ಟ ಮಹಿಳೆ
ಎಲ್ಲಾ ಅನುಕೂಲವಿದ್ದರೂ ನಮ್ಮ ಕನಸನ್ನು ಈಡೇರಿಸಿಕೊಳ್ಳಲು ಕೆಲವರು ಮನಸ್ಸು ಮಾಡುವುದಿಲ್ಲ ಆದರೆ ಕೈಗಳಿಲ್ಲದಿದ್ದರೂ ಕಾರು ಓಡಿಸುವ ಈ ಮಹಿಳೆಯ ಕನಸು ಅಂತೂ ನನಸಾಗಿದೆ. ಈ ಮಹಿಳೆ ಹೆಸರು ಜಿಲುಮೋಳ್ ಮೇರಿಯೆಟ್ ಥಾಮಸ್, ಕೇರಳದ ಇಡುಕ್ಕಿಯವರು ಚಿಕ್ಕವರಿದ್ದಾಗಲೇ ತಂದೆ ತಾಯಿಯನ್ನು ಕಳೆದುಕೊಂಡರು, ಅಲ್ಲಿಂದಲೇ ಅಗ್ನಿ ಪರೀಕ್ಷೆ ಎದುರಿಸಲು ಆರಂಭಿಸಿದರು.
ಎಲ್ಲಾ ಅನುಕೂಲವಿದ್ದರೂ ನಮ್ಮ ಕನಸನ್ನು ಈಡೇರಿಸಿಕೊಳ್ಳಲು ಕೆಲವರು ಮನಸ್ಸು ಮಾಡುವುದಿಲ್ಲ ಆದರೆ ಕೈಗಳಿಲ್ಲದಿದ್ದರೂ ಕಾರು ಓಡಿಸುವ ಈ ಮಹಿಳೆಯ ಕನಸು ಅಂತೂ ನನಸಾಗಿದೆ. ಈ ಮಹಿಳೆ ಹೆಸರು ಜಿಲುಮೋಳ್ ಮೇರಿಯೆಟ್ ಥಾಮಸ್, ಕೇರಳದ ಇಡುಕ್ಕಿಯವರು ಚಿಕ್ಕವರಿದ್ದಾಗಲೇ ತಂದೆ ತಾಯಿಯನ್ನು ಕಳೆದುಕೊಂಡರು, ಅಲ್ಲಿಂದಲೇ ಅಗ್ನಿ ಪರೀಕ್ಷೆ ಎದುರಿಸಲು ಆರಂಭಿಸಿದರು.
ಅವರಿಗೆ ವಾಹನವನ್ನು ಓಡಿಸಬೇಕೆಂಬ ಕನಸು ಆದರೆ ಅದು ಸುಲಭವಾಗಿರಲಿಲ್ಲ, ಯಾಕೆಂದರೆ ಕೈಗಳಿಲ್ಲದೆ ಅದು ಹೇಗೆ ಸಾಧ್ಯ ಎಂಬುದು ಎಲ್ಲರ ಪ್ರಶ್ನೆಯಾಗಿತ್ತು. ಆದರೆ ಅದನ್ನು ಸಾಧ್ಯವಾಗಿಸಿ ಜಿಲುಮೋಳ್ ತೋರಿಸಿದ್ದಾರೆ. ಇದಕ್ಕೆ ಆನಂದ್ ಮಹಿಂದ್ರಾ ಕೂಡ ಟ್ವೀಟ್ ಮಾಡಿದ್ದಾರೆ. ಕೈಗಳಿಲ್ಲದಿದ್ದರೂ ಚಾಲನಾ ಪರವಾನಗಿ ಪಡೆದ ಏಷ್ಯಾದ ಎರಡನೇ ವ್ಯಕ್ತಿ ಎನಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ ಅವರು ಗ್ರಾಫಿಕ್ ಡಿಸೈನರ್, ಕಲಾವಿದೆ ಮತ್ತು 27ಸಾವಿರಕ್ಕೂ ಹೆಚ್ಚು ಬಳಕೆದಾರರನ್ನು ಹೊಂದಿರುವ ಯೂಟ್ಯೂಬರ್ ಕೂಡ ಆಗಿದ್ದಾರೆ.
ಜೀವನವು ಅಂದುಕೊಂಡಷ್ಟು ಸುಲಭವಲ್ಲ ಆಕೆ ಥಾಲಿಮೈಡ್ ಸಿಂಡ್ರೋಮ್ನಿಂದ ಬಳಲುತ್ತಿದ್ದು, ಜನಿಸುವಾಗಲೇ ಕೈಗಳಿರಲಿಲ್ಲ. ಆದರೆ ತಮ್ಮ ಅಂಗವೈಕಲ್ಯವನ್ನು ಮರೆಸುವಷ್ಟರ ಎತ್ತರಕ್ಕೆ ಬೆಳೆದಿದ್ದಾರೆ. ಜಿಲುಮೋಳ್ ತನ್ನ ಕೂದಲನ್ನು ಬಾಚಿಕೊಳ್ಳುವುದು, ಬಟ್ಟೆ ಮಡಚುವುದು, ಚಿತ್ರಕಲೆ, ಪೇಂಟಿಂಗ್ ಮಾಡುತ್ತಾರೆ.
ಕಾರು ಓಡಿಸುವುದು ಆಕೆಯ ಬಾಲ್ಯದ ಕನಸಾಗಿತ್ತು, ಅದನ್ನು ನನಸು ಮಾಡಿಕೊಳ್ಳಲು ಸಾಕಷ್ಟು ಕಷ್ಟಪಟ್ಟಿದ್ದಾರೆ. 2014ರಲ್ಲಿ ಜಿಲುಮೋಳ್ ಆರ್ಟಿಒ ಕಚೇರಿಗೆ ತೆರಳಿ ಡ್ರೈವಿಂಗ್ ಲೈಸೆನ್ಸ್ ಪರೀಕ್ಷೆಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದರು. ವಿಶೇಷ ಸಂದರ್ಭದಲ್ಲಿ ಡ್ರೈವಿಂಗ್ ಲೈಸೆನ್ಸ್ ಪಡೆದವರ ಪರವಾನಗಿ ಪ್ರತಿಯನ್ನು ತಂದುಕೊಂಡಿ ಎಂದರು. ಆಗ ಆಕೆ ಹುಡುಕುತ್ತಿರುವಾಗ ಭಾರತದಲ್ಲಿ ಡ್ರೈವಿಂಗ್ ಲೈಸೆನ್ಸ್ ಪಡೆದ ಮೊದಲ ಕೈಗಳಿಲ್ಲದ ವ್ಯಕ್ತಿ ವಿಕ್ರಮ್ ಅಗ್ನಿಹೋತ್ರಿಯನ್ನು ಪತ್ತೆಮಾಡಿದಳು.
ನಾಲ್ಕು ವರ್ಷಗಳ ಬಳಿಕ ಜಿಲುಮೋಳ್ ಸ್ವಂತ ಕಾರನ್ನು ಖರೀದಿಸಿದಳು, ಅದೇ ವರ್ಷ ಅಂದರೆ 2018ರಲ್ಲಿ ಜಿಲುಮೋಳ್ ವಾಹನ ಚಲಾಯಿಸಲು ಅನುಮತಿ ಕೋರಿ ಹೈಕೋರ್ಟ್ಗೆ ಸರ್ಜಿ ಸಲ್ಲಿಸಿದರು. ಕೇಂದ್ರ ಸಮ್ಮತಿ ನೀಡಿದೆ.
ಜಿಲುಮೋಳ್ ಪ್ರಸ್ತುತ ವಿಯಾನಿ ಪೇಂಟಿಂಗ್ಸ್ನಲ್ಲಿಗ್ ಗ್ರಾಫಿಕ್ ಡಿಸೈನಲ್ ಆಗಿ ಕೆಲಸ ಮಾಡುತ್ತಿದ್ದಾರೆ. ಇದೀಗ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಂದಲೇ ಪರವಾನಗಿ ಸ್ವೀಕರಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ