ರಾಜಸ್ಥಾನ ಚುನಾವಣೆಯಲ್ಲಿ 71,368 ಮತಗಳಿಂದ ಗೆದ್ದ ಜೈಪುರ ರಾಜಕುಮಾರಿ ದಿಯಾ ಕುಮಾರಿ ಯಾರು?

ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮತ್ತು ರಾಜ್‌ಸಮಂದ್ ಸಂಸದೆ ದಿಯಾ ಕುಮಾರಿ ಅವರು ವಿದ್ಯಾಧರ್ ನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೀತಾರಾಂ ಅವರನ್ನು 71368 ಮತಗಳಿಂದ ಸೋಲಿಸಿದ್ದಾರೆ.ಜೈಪುರದ ಮಹಾರಾಜ ಮಾನ್ ಸಿಂಗ್ II ರ ಮೊಮ್ಮಗಳು ಮತ್ತು ಭವಾನಿ ಸಿಂಗ್ ಮತ್ತು ಪದ್ಮಿನಿ ದೇವಿಯ ಮಗಳು ಈ ದಿಯಾ ಕುಮಾರಿ. ಅವರ ಕಿರುಪರಿಚಯ ಇಲ್ಲಿದೆ.

ರಾಜಸ್ಥಾನ ಚುನಾವಣೆಯಲ್ಲಿ 71,368 ಮತಗಳಿಂದ ಗೆದ್ದ ಜೈಪುರ ರಾಜಕುಮಾರಿ ದಿಯಾ ಕುಮಾರಿ ಯಾರು?
ದಿಯಾ ಕುಮಾರಿ
Follow us
|

Updated on: Dec 04, 2023 | 1:37 PM

ಜೈಪುರ ಡಿಸೆಂಬರ್ 04: ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ (BJP) ಅಭ್ಯರ್ಥಿ ಮತ್ತು ರಾಜ್‌ಸಮಂದ್ ಸಂಸದೆ ದಿಯಾ ಕುಮಾರಿ (Diya Kumari) ಅವರು ವಿದ್ಯಾಧರ್ ನಗರ ವಿಧಾನಸಭಾ ಕ್ಷೇತ್ರದಲ್ಲಿ (Vidhyadhar Nagar assembly seat ) ಕಾಂಗ್ರೆಸ್‌ನ ಸೀತಾರಾಮ್ ಅಗರ್ವಾಲ್ ವಿರುದ್ಧ 71,368 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ರಾಜಸ್ಥಾನ, ಛತ್ತೀಸ್‌ಗಢ ಮತ್ತು ಮಧ್ಯಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸಾಧನೆ ಬಗ್ಗೆ ಮಾತನಾಡಿದ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿಯ ಮ್ಯಾಜಿಕ್ ಎಲ್ಲೆಡೆ ಕೆಲಸ ಮಾಡಿದೆ ಎಂದು ಹೇಳಿದರು. “ಈ ಗೆಲುವಿನ ಶ್ರೇಯಸ್ಸು ಪ್ರಧಾನಿ ಮೋದಿ, ಅಮಿತ್ ಶಾ ಜಿ, ಜೆಪಿ ನಡ್ಡಾ ಜಿ, ರಾಜ್ಯ ನಾಯಕರು ಮತ್ತು ಪಕ್ಷದ ಕಾರ್ಯಕರ್ತರಿಗೆ ಸಲ್ಲುತ್ತದೆ. ಮೋದಿ ಜಿ ಅವರ ಮ್ಯಾಜಿಕ್ ರಾಜಸ್ಥಾನ ಮತ್ತು ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದಲ್ಲಿ ಕೆಲಸ ಮಾಡಿದೆ ಎಂದು ದಿಯಾ ಕುಮಾರಿ ಹೇಳಿದ್ದಾರೆ.

ದಿಯಾ ಕುಮಾರಿ ಅವರು ಹಿರಿಯ ಕಾಂಗ್ರೆಸ್ ನಾಯಕ ಸೀತಾರಾಮ್ ಅಗರ್ವಾಲ್ ಅವರನ್ನು ಪರಾಭವಗೊಳಿಸಿದ್ದಾರೆ. ದಿಯಾ ಕುಮಾರಿ 158516 ಹಾಗೂ ಕಾಂಗ್ರೆಸ್ ನ ಸೀತಾರಾಂ 87148 ಮತಗಳನ್ನು ಪಡೆದಿದ್ದು ಸೀತಾರಾಂ ಅವರನ್ನು 71368 ಮತಗಳಿಂದ ಸೋಲಿಸಿದ್ದಾರೆ. ತಾನು ಭಗವಾನ್ ಶ್ರೀರಾಮಪ್ರಭುವಿನ ವಂಶಸ್ಥೆ ಎಂದು ದಿಯಾ ಕುಮಾರಿ ಹೇಳಿಕೊಂಡಿದ್ದಾರೆ. ಅವರು ಜೈಪುರದ ಮಹಾರಾಜ ಮಾನ್ ಸಿಂಗ್ II ರ ಮೊಮ್ಮಗಳು ಮತ್ತು ಭವಾನಿ ಸಿಂಗ್ ಮತ್ತು ಪದ್ಮಿನಿ ದೇವಿಯ ಮಗಳು. ದಿಯಾ ಕುಮಾರಿ ಪ್ರಕಾರ, ಅವರ ಕುಟುಂಬವು ಭಗವಾನ್ ರಾಮನ ಮಗ ಕುಶನ ವಂಶ. ಅವರು ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಹೊಂದಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

ಜೈಪುರದ ರಾಜಮನೆತನವು ಕಚ್ವಾಹಾ/ಕುಶ್ವಾಹ ರಾಜವಂಶದ ವಂಶಸ್ಥರು ಎಂದು ಹೇಳಿಕೊಳ್ಳುತ್ತಾರೆ, ಇದನ್ನು ಭಗವಾನ್ ರಾಮನ ಹಿರಿಯ ಮಗ ಕುಶನ ಹೆಸರನ್ನು ಇಡಲಾಗಿದೆ. ಇದು ಅವರ 310 ನೇ ಪೀಳಿಗೆಯಾಗಿದೆ. ಜೈಪುರದ ಮಹಾರಾಜ ಸವಾಯಿ ಜೈ ಸಿಂಗ್ ಅವರು ಶ್ರೀರಾಮನ ಹಿರಿಯ ಪುತ್ರ ಕುಶನ 289 ನೇ ವಂಶಸ್ಥರು ಎಂದಿದ್ದಾರೆ ರಾಜಕುಮಾರಿ.

ಆಸ್ತಿ ಎಷ್ಟಿದೆ?

ದಿಯಾ ಕುಮಾರಿ ಅವರು ಸಲ್ಲಿಸಿರುವ ಅಫಿಡವಿಟ್ ಪ್ರಕಾರ, ಅವರು ಆಭರಣ ಮತ್ತು ಠೇವಣಿ ಸೇರಿದಂತೆ ಹಲವು ಆಸ್ತಿಗಳನ್ನು ಹೊಂದಿದ್ದಾರೆ. ದಿಯಾ ಕುಮಾರಿ ಮೂರನೇ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. 2013ರಲ್ಲಿ ಬಿಜೆಪಿ ಶಾಸಕರಾಗಿದ್ದ ಅವರು 2019ರಲ್ಲಿ ಲೋಕಸಭೆ ಸಂಸದರಾಗಿದ್ದರು. ದಿಯಾ ಕುಮಾರಿ ಬಳಿ 75,600 ರೂಪಾಯಿ ನಗದು ಇದೆ. ವಿವಿಧ ಬ್ಯಾಂಕ್ ಗಳಲ್ಲಿ ಠೇವಣಿ ಇಟ್ಟಿರುವ ಒಟ್ಟು ಮೊತ್ತ 1.48 ಕೋಟಿ ರೂ. ಅವರ ಚಾಲ್ತಿ ಖಾತೆಯಲ್ಲಿ ಒಟ್ಟು 92.51 ಲಕ್ಷ ರೂ. ಒಟ್ಟು ಮೊತ್ತದ ಬಗ್ಗೆ ಮಾತನಾಡಿದರೆ 2.90 ಕೋಟಿ ರೂ. ಅವರು ಹೂಡಿದ ಆಸ್ತಿಯ ಒಟ್ಟು ಮೌಲ್ಯ 15.52 ಕೋಟಿ ರೂ. ದಿಯಾ ಕುಮಾರಿ ಅವರು ಹಲವಾರು ಅಮೂಲ್ಯ ಆಭರಣಗಳನ್ನು ಹೊಂದಿದ್ದು, ಇದರ ಒಟ್ಟು ಮೌಲ್ಯ 75.40 ಲಕ್ಷ ರೂ. ಅಂದಹಾಗೆ ಅವರ ಒಟ್ಟು ಸಂಪತ್ತು 19.19 ಕೋಟಿ ರೂಪಾಯಿ.

12 ಕೋಟಿ ರೂಪಾಯಿಗೂ ಹೆಚ್ಚು ಹೂಡಿಕೆ ಮಾಡಿದ್ದಾರೆ. ಹಣವನ್ನು ಜೈಪುರ ಪ್ಯಾಲೇಸ್ ಹೋಟೆಲ್ ಪ್ರೈವೇಟ್ ಲಿಮಿಟೆಡ್, ಸಿಂಪಲ್ ರಿಯಲ್ ಎಸ್ಟೇಟ್ ಮತ್ತು ಪ್ರಾಪರ್ಟೀಸ್ ಪ್ರೈವೇಟ್ ಲಿಮಿಟೆಡ್, ಶ್ರೀರಾಧಾ ಗೋವಿಂದ್ಜಿ ಕನ್ಸ್ಟ್ರಕ್ಷನ್ ಮತ್ತು ರಿಲೇಟರ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಲಾಗಿದೆ.

ದಿಯಾ ಕುಮಾರಿ ಸಂಸಾರ

ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ದಿಯಾ ಕುಮಾರಿ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಿದ್ದರಿಂದ ಬಿಜೆಪಿ ಅವರನ್ನು ವಸುಂಧರಾ ರಾಜೇಗೆ ಪರ್ಯಾಯವಾಗಿ ನೋಡುತ್ತಿದೆ. ವಸುಂಧರಾ ರಾಜೇಯಂತೆ ದಿಯಾ ಕುಮಾರಿ ಕೂಡ ರಾಜಮನೆತನಕ್ಕೆ ಸೇರಿದವರು. ಅವರು ಜೈಪುರದ ಕೊನೆಯ ಆಡಳಿತಗಾರ ಮಹಾರಾಜ ಮಾನ್ ಸಿಂಗ್ II ರ ಮೊಮ್ಮಗಳು ಮತ್ತು ಭವಾನಿ ಸಿಂಗ್ ಮತ್ತು ಪದ್ಮಿನಿ ದೇವಿಯ ಮಗಳು.

ದಿಯಾ ಕುಮಾರಿ ಅವರು ಚಾರ್ಟರ್ಡ್ ಅಕೌಂಟೆಂಟ್ ನರೇಂದ್ರ ಸಿಂಗ್ ರಾಜಾವತ್ ಅವರನ್ನು ವಿವಾಹವಾಗಿದ್ದರು. ನರೇಂದ್ರ ಸಿಂಗ್ ರಾಜಾವತ್ ಅವರು ತಮ್ಮ ಅರಮನೆಯಲ್ಲಿ ಖಾತೆಯ ಕೆಲಸವನ್ನು ನಿರ್ವಹಿಸುತ್ತಿದ್ದರು. ಈ ಮದುವೆಯೂ ಸಾಕಷ್ಟು ಚರ್ಚೆಯಾಗಿತ್ತು. ಯಾಕೆಂದರೆ ಅವರು ಮನೆಯವರಿಗೆ ತಿಳಿಸದೆ ಮದುವೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಮತ್ತೆ ಬಿಜೆಪಿ ಪಾಲಾದ ವಿದ್ಯಾಧರ್ ನಗರ ಕ್ಷೇತ್ರ: ಗೆದ್ದು ಬೀಗಿದ ದಿಯಾ ಕುಮಾರಿ

ಸುಮಾರು ಎರಡು ವರ್ಷಗಳ ನಂತರ ಈ ಮದುವೆಯ ಬಗ್ಗೆ ಆತ ತನ್ನ ತಾಯಿಗೆ ತಿಳಿಸಿದ್ದರು.1997 ರಲ್ಲಿ, ದಿಯಾ ಕುಮಾರಿ ಅವರ ಕುಟುಂಬವು ಈ ಸಂಬಂಧವನ್ನು ಒಪ್ಪಿಕೊಂಡಿತು. ಅವರಿಬ್ಬರೂ ಒಂದೇ ಗೋತ್ರಕ್ಕೆ ಸೇರಿದವರು ಎಂಬುದು ಮದುವೆಯ ಗಲಾಟೆಗೆ ಕಾರಣವಾಗಿತ್ತು. ದಿಯಾ ಕುಮಾರಿ ಮತ್ತು ನರೇಂದ್ರ ಸಿಂಗ್ ನಡುವಿನ ಈ ಸಂಬಂಧ ಹೆಚ್ಚು ಕಾಲ ಉಳಿಯಲಿಲ್ಲ. 2019 ರಲ್ಲಿ ಇಬ್ಬರೂ ವಿಚ್ಛೇದನ ಪಡೆದು ಬೇರ್ಪಟ್ಟರು. ದಿಯಾ ಕುಮಾರಿ ಅವರಿಗೆ ಈ ದಾಂಪತ್ಯದಲ್ಲಿ ಮೂವರು ಮಕ್ಕಳಿದ್ದಾರೆ. ಪದ್ಮನಾಥ್ ಸಿಂಗ್ ಮತ್ತು ಲಕ್ಷ್ಯರಾಜ್ ಸಿಂಗ್ ಎಂಬ ಇಬ್ಬರು ಗಂಡು ಮಕ್ಕಳು ಮತ್ತು ಗೌರವಿ ಎಂಬ ಒಬ್ಬ ಮಗಳು ಇದ್ದಾರೆ.

ಮತ್ತಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಉಪ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಹೈಕಮಾಂಡ್ ಸುಪರ್ದಿಗೆ ಬಿಟ್ಟಿದ್ದು: ಸಚಿವ
ಉಪ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಹೈಕಮಾಂಡ್ ಸುಪರ್ದಿಗೆ ಬಿಟ್ಟಿದ್ದು: ಸಚಿವ
ವಿರಾಟ್ ಕೊಹ್ಲಿ ಎರಡನೇ ಇನ್ನಿಂಗ್ಸ್​ನಲ್ಲಿ ತಮ್ಮ ಸ್ಪರ್ಶ ಕಂಡುಕೊಳ್ಳುವರೇ?
ವಿರಾಟ್ ಕೊಹ್ಲಿ ಎರಡನೇ ಇನ್ನಿಂಗ್ಸ್​ನಲ್ಲಿ ತಮ್ಮ ಸ್ಪರ್ಶ ಕಂಡುಕೊಳ್ಳುವರೇ?
ಮೆಜೆಸ್ಟಿಕ್​​ನಲ್ಲಿ ರಸ್ತೆ ಗುಂಡಿಗಳ ದರ್ಬಾರ್, ಸ್ವಲ್ಪ ಯಾಮಾರಿದರೆ ಡೇಂಜರ್
ಮೆಜೆಸ್ಟಿಕ್​​ನಲ್ಲಿ ರಸ್ತೆ ಗುಂಡಿಗಳ ದರ್ಬಾರ್, ಸ್ವಲ್ಪ ಯಾಮಾರಿದರೆ ಡೇಂಜರ್
ಶಿವಮೊಗ್ಗ: 20 ಕೆಜಿ ಕೇಕ್​ ಕತ್ತರಿಸಿ ಗೂಳಿಯ ಜನ್ಮದಿನ ಆಚರಣೆ
ಶಿವಮೊಗ್ಗ: 20 ಕೆಜಿ ಕೇಕ್​ ಕತ್ತರಿಸಿ ಗೂಳಿಯ ಜನ್ಮದಿನ ಆಚರಣೆ
ದಾವಣಗೆರೆಯಲ್ಲಿ ರೈತರ ಬೆಳೆ ಹಾಳು, ಮಳೆಯಾದರೂ ರೈತನಿಗೆ ಸಂಕಷ್ಟ ತಪ್ಪಿದ್ದಲ್ಲ
ದಾವಣಗೆರೆಯಲ್ಲಿ ರೈತರ ಬೆಳೆ ಹಾಳು, ಮಳೆಯಾದರೂ ರೈತನಿಗೆ ಸಂಕಷ್ಟ ತಪ್ಪಿದ್ದಲ್ಲ
‘ಇನ್ನೊಂದು ಅವಕಾಶ ಕೊಡಿ ಬಿಗ್ ಬಾಸ್’; ರಂಜಿತ್ ಹೊರಹೋಗುತ್ತಿದ್ದಂತೆ ಕಣ್ಣೀರು
‘ಇನ್ನೊಂದು ಅವಕಾಶ ಕೊಡಿ ಬಿಗ್ ಬಾಸ್’; ರಂಜಿತ್ ಹೊರಹೋಗುತ್ತಿದ್ದಂತೆ ಕಣ್ಣೀರು
ಪೂಜೆ ಸಮಯದಲ್ಲಿ ರೇಷ್ಮೆ ವಸ್ತ್ರ ಧರಿಸುವುದರ ಮಹತ್ವ ತಿಳಿಯಿರಿ
ಪೂಜೆ ಸಮಯದಲ್ಲಿ ರೇಷ್ಮೆ ವಸ್ತ್ರ ಧರಿಸುವುದರ ಮಹತ್ವ ತಿಳಿಯಿರಿ
ಈ ರಾಶಿಯವರು ಇಂದು ಕೆಲಸ ಕಾರ್ಯಗಳಲ್ಲಿ ಜಯಶಾಲಿಯಾಗುತ್ತಾರೆ
ಈ ರಾಶಿಯವರು ಇಂದು ಕೆಲಸ ಕಾರ್ಯಗಳಲ್ಲಿ ಜಯಶಾಲಿಯಾಗುತ್ತಾರೆ
ಪಂತ್ ಇಂಜುರಿ ಬಗ್ಗೆ ಬಿಗ್ ಅಪ್​ಡೇಟ್ ನೀಡಿದ ರೋಹಿತ್ ಶರ್ಮಾ
ಪಂತ್ ಇಂಜುರಿ ಬಗ್ಗೆ ಬಿಗ್ ಅಪ್​ಡೇಟ್ ನೀಡಿದ ರೋಹಿತ್ ಶರ್ಮಾ
ಟ್ರಾಫಿಕ್ ಪೊಲೀಸ್​ಗೆ ಕಾರಿನಲ್ಲಿ ಡಿಕ್ಕಿ ಹೊಡೆದು ಎಳೆದೊಯ್ದ ಚಾಲಕ
ಟ್ರಾಫಿಕ್ ಪೊಲೀಸ್​ಗೆ ಕಾರಿನಲ್ಲಿ ಡಿಕ್ಕಿ ಹೊಡೆದು ಎಳೆದೊಯ್ದ ಚಾಲಕ