ಹಿಂದಿ ಹಾರ್ಟ್ಲ್ಯಾಂಡ್ನ ಮೂರು ರಾಜ್ಯಗಳಲ್ಲಿ ಬಿಜೆಪಿ ದಿಗ್ವಿಜಯ, ಮೋದಿಗೆ ಬಹುಪರಾಕ್ ಹೇಳಿದ ವಿದೇಶಿ ಮಾಧ್ಯಮಗಳು
ಭಾರತದ ಐದು ರಾಜ್ಯಗಳಲ್ಲಿ ನಡೆದ ಚುನಾವಣೆಗಳ ಪೈಕಿ ನಾಲ್ಕು ವಿಧಾನಸಭಾ ಚುನಾವಣೆಗಳ ಫಲಿತಾಂಶ ಹೊರಬಿದ್ದಿದೆ. ಫಲಿತಾಂಶದ ನಂತರ ದೇಶ ವಿದೇಶಗಳಲ್ಲಿ ಸಂಚಲನ ಸೃಷ್ಟಿಸಿದೆ. ಉತ್ತರಭಾರತದ ಮೂರು ರಾಜ್ಯಗಳಲ್ಲಿ ಬಿಜೆಪಿ ಗೆಲುವನ್ನು ವಿದೇಶಿ ಮಾಧ್ಯಮಗಳ ವಿಭಿನ್ನವಾಗಿ ವಿಶ್ಲೇಷಣೆ ಮಾಡಿವೆ. ವಿದೇಶಿ ಮಾಧ್ಯಮಗಳು ಬಿಜೆಪಿಯನ್ನು ವಿಶೇಷವಾಗಿ ಪ್ರಧಾನಿ ನರೇಂದ್ರ ಮೋದಿಯನ್ನು ಹಾಡಿಕೊಂಡಾಡಿವೆ. ಕೆಲವು ಮಾಧ್ಯಮಗಳು ಫಲಿತಾಂಶಗಳನ್ನು 2024 ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟ ಗೆಲುವು ಎಂದು ಭವಿಷ್ಯ ನುಡಿದರೆ, ಕೆಲವು ಮಾಧ್ಯಮಗಳು ಫಲಿತಾಂಶವನ್ನು ವಿರೋಧ ಪಕ್ಷಗಳ ಒಕ್ಕೂಟ ಮೈತ್ರಿಗೆ ದೊಡ್ಡ ಹೊಡೆತ ಎಂದೆ ಕರೆದಿವೆ. ಹಾಗಾದ್ರೆ ಚುನಾವಣಾ ಫಲಿತಾಂಶದ ಬಗ್ಗೆ ವಿದೇಶಿ ಮಾಧ್ಯಮಗಳು ಏನು ಹೇಳಿವೆ ಎಂದು ನೋಡುವುದಾದರೆ

ಹಿಂದಿ ಹಾರ್ಟ್ ಲ್ಯಾಂಡ್ನಲ್ಲಿ ಬಿಜೆಪಿ ಅಜೇಯ- ಬಿಬಿಸಿ
ಭಾನುವಾರ ಹೊರಬಿದ್ದಿರುವ ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶದ ಬಗ್ಗೆ ಬಿಬಿಸಿ ವರದಿ ಮಾಡಿದೆ. ಈ ಗೆಲುವು ಲೋಕಸಭೆ ಚುನಾವಣೆಯಲ್ಲಿ ಭಾರತದ ಪ್ರಧಾನಿ ಮೋದಿಯವರ ಗೆಲುವಿನ ಹಾದಿಯನ್ನು ಸುಗಮಗೊಳಿಸಿದೆ. ಉತ್ತರ ಮತ್ತು ಮಧ್ಯ ಭಾರತದ ಹಿಂದಿ ಹೃದಯಭಾಗದಲ್ಲಿ ಬಿಜೆಪಿ ಬಹುತೇಕ ಅಜೇಯವಾಗಿ ಉಳಿದಿದೆ ಎಂದು ಶ್ಲಾಘಿಸಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ದಾಖಲೆಯ ಮೂರನೇ ಬಾರಿಗೆ ಗೆಲ್ಲಲು ದೃಷ್ಟಿ ನೆಟ್ಟಿರುವ ಪ್ರಧಾನಿ ಮೋದಿಯವರಿಗೆ ವಿಧಾನಸಭಾ ಚುನಾವಣಾ ಫಲಿತಾಂಶ ಮಹತ್ವದ ಉತ್ತೇಜನ ನೀಡಿದೆ ಎಂದು ಬಿಬಿಸಿ ಹೇಳಿದೆ.
ಮತ್ತಷ್ಟು ಓದಿ: ಇಂದಿನ 3 ರಾಜ್ಯಗಳ ಗೆಲುವು 2024ರ ಹ್ಯಾಟ್ರಿಕ್ ಗೆಲುವಿನ ದಿಕ್ಸೂಚಿ: ಪ್ರಧಾನಿ ಮೋದಿ
ಸತತ ಮೂರನೇ ಬಾರಿಗೆ ಗೆಲ್ಲಲು ಮೋದಿ ಹಾದಿ ಸುಗಮ- ಅಲ್ ಜಜೀರಾ
ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶಗಳು ಮುಂದಿನ ವರ್ಷ ನಡೆಯುವ ಲೋಕಸಭಾ ಚುನಾವಣೆಗೂ ಮುಂಚಿತವಾಗಿ ಮತದಾರರ ಮನಸ್ಥಿತಿಯನ್ನು ಬಹಿರಂಗಪಡಿಸಿವೆ. ಪ್ರಧಾನಿ ನರೇಂದ್ರ ಮೋದಿ ಸತತ ಮೂರನೇ ಅವಧಿಗೆ ಗೆಲ್ಲಲು ಫಲಿತಾಂಶ ನೆರವಾಗಲಿದೆ. ಕಾಂಗ್ರೆಸ್ ತೆಲಂಗಾಣದಲ್ಲಿ ಮಾತ್ರ ಗೆದ್ದು ತೃಪ್ತರಾಗಬೇಕಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ರಾಜಸ್ಥಾನದಲ್ಲಿ ತನ್ನ ಸರ್ಕಾರವನ್ನು ಉಳಿಸಿಕೊಳ್ಳಲು ಆಗಿಲ್ಲ. ಇಂಡಿಯಾ ಒಕ್ಕೂಟದ 28 ವಿರೋಧ ಪಕ್ಷಗಳ ಹೊಸ ಮೈತ್ರಿ ರಾಷ್ಟ್ರ ಮಟ್ಟದಲ್ಲಿ ಬಿಜೆಪಿಗೆ ಸವಾಲೊಡ್ಡಲು ಸಿದ್ಧವಾಗಿದೆಯೇ? ಎಂದು ಅಲ್ ಜರಿರಾ ವರದಿ ಮಾಡಿದೆ.
ಪ್ರತಿಪಕ್ಷಗಳನ್ನು ಸೋಲಿಸಲು ಬಿಜೆಪಿ ಮತ್ತೆ ಸಿದ್ಧವಾಗಿದೆ – ಬ್ಲೂಮ್‌ಬರ್ಗ್
ಭಾರತದಲ್ಲಿ ಆಡಳಿತದಲ್ಲಿರುವ ಬಿಜೆಪಿ ಪಕ್ಷ ಮೂರು ಪ್ರಮುಖ ರಾಜ್ಯಗಳಲ್ಲಿ ಗೆದ್ದಿದೆ. ಈ ಗೆಲುವು ಲೋಕಸಭೆ ಚುನಾವಣೆಯಲ್ಲಿ ಮತ್ತೊಮ್ಮೆ ವಿರೋಧಪಕ್ಷಗಳನ್ನು ಸೋಲಿಸಲು ಸಿದ್ಧವಾಗಿದೆ. ಫಲಿತಾಂಶ ಮೂಲಕ ಮತದಾರರಿಂದ ಪ್ರಧಾನಿ ನರೇಂದ್ರ ಮೋದಿಗೆ ಬಲವಾದ ಬೆಂಬಲದ ವ್ಯಕ್ತವಾಗಿದೆ ತೆಲಂಗಾಣದಿಂದ ಮಾತ್ರ ಕಾಂಗ್ರೆಸ್‌ಗೆ ಒಂದೇ ಒಂದು ಶುಭ ಸುದ್ದಿ ಸಿಕ್ಕಿದೆ. ಕಾಂಗ್ರೆಸ್‌ಗೆ ದೊಡ್ಡ ಆಘಾತಕಾರಿ ಫಲಿತಾಂಶವೆಂದರೆ ರಾಜಸ್ಥಾನವಾಗಿದೆ.
ಭಾರತ್ ಜೋಡೋ ಯಾತ್ರೆಯ ಮ್ಯಾಜಿಕ್ ಕೆಲಸ ಮಾಡಲಿಲ್ಲ – ನೇಪಾಳದ ದಿನಪತ್ರಿಕೆ ಕಾಂತಿಪುರ್
ನಾಲ್ಕು ರಾಜ್ಯಗಳ ಫಲಿತಾಂಶಗಳು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯ ಮ್ಯಾಜಿಕ್ ಕೆಲಸ ಮಾಡಿಲ್ಲ. ಜೋಡೊ ಯಾತ್ರೆ ಮ್ಯಾಜಿಕ್ ಹಿಂದಿ ಮಾತನಾಡುವ ರಾಜ್ಯಗಳಲ್ಲಿ ಕಂಡುಬಂದಿಲ್ಲ ಎಂದು ತೋರಿಸಿದೆ. ಬಿಜೆಪಿಯ ಗೆಲುವು ಪಕ್ಷ ಬಲಿಷ್ಠವಾಗಿರುವುದನ್ನು ತೋರಿಸುತ್ತದೆ. ಪ್ರಧಾನಿ ಮೋದಿಯವರ ಕಲ್ಯಾಣ ಯೋಜನೆಗಳನ್ನು ಜನ ಮೆಚ್ಚುತ್ತಿದ್ದಾರೆ ಎಂದು ನೇಪಾಳದ ದಿನಪತ್ರಿಕೆ ಕಾಂತಿಪುರ್ ವರದಿ ಮಾಡಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ