ಗಡಿ ಸಂಘರ್ಷವನ್ನು ಅಸ್ಸಾಂ ಸಿಎಂ ಪ್ರತಿಷ್ಠೆಯ ವಿಷಯವನ್ನಾಗಿ ಪರಿಗಣಿಸಿದ್ದಾರೆ: ಪ್ರಧಾನಿಗೆ ಪತ್ರ ಬರೆದ ಕಾಂಗ್ರೆಸ್​ ಸಂಸದ

ಮಿಜೋರಾಂನ ಕೊಲಾಸಿಬ್​ ಜಿಲ್ಲೆಯ ವೈರಂಗ್ಟೆ ಪಟ್ಟಣದಲ್ಲಿ ಜುಲೈ 26ರಂದು ಹಿಂಸಾಚಾರ ನಡೆದ ಬೆನ್ನಲ್ಲೇ ಗಡಿಭಾಗದಲ್ಲಿ ಉದ್ವಿಗ್ನತೆ ಮುಂದುವರಿದಿದೆ. ಇದುವರೆಗೆ ಏನಿಲ್ಲವೆಂದರೂ ಅಸ್ಸಾಂನ ಆರು ಪೊಲೀಸರು ಸೇರಿ ಏಳು ಮಂದಿ ಮೃತಪಟ್ಟಿದ್ದಾರೆ.

ಗಡಿ ಸಂಘರ್ಷವನ್ನು ಅಸ್ಸಾಂ ಸಿಎಂ ಪ್ರತಿಷ್ಠೆಯ ವಿಷಯವನ್ನಾಗಿ ಪರಿಗಣಿಸಿದ್ದಾರೆ: ಪ್ರಧಾನಿಗೆ ಪತ್ರ ಬರೆದ ಕಾಂಗ್ರೆಸ್​ ಸಂಸದ
ವಿನ್ಸೆಂಟ್ ಪಾಲಾ ಮತ್ತು ಹಿಮಂತ ಬಿಸ್ವಾ ಶರ್ಮಾ
Updated By: Lakshmi Hegde

Updated on: Aug 02, 2021 | 12:52 PM

ಅಸ್ಸಾಂ ಮತ್ತು ಮಿಜೋರಾಂ ಗಡಿ ಸಂಘರ್ಷದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮೇಘಾಲಯ ಕಾಂಗ್ರೆಸ್ ಸಂಸದ ವಿನ್ಸೆಂಟ್​ ಪಾಲಾ, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಂಘರ್ಷವನ್ನು ಅಸ್ಸಾಂ ಮುಖ್ಯಮಂತ್ರಿ ಪ್ರತಿಷ್ಠೆಯ ವಿಷಯವನ್ನಾಗಿ ಪರಿಗಣಿಸಿದ್ದಾರೆ ಎಂದು ಹೇಳಿದ್ದಾರೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಪಾಲಾ ಪತ್ರವನ್ನೂ ಬರೆದು, ಕೂಡಲೇ ಸಮಸ್ಯೆ ಬಗೆಹರಿಸಿ ಎಂದಿದ್ದಾರೆ.

ಪಿಎಂ ನರೇಂದ್ರ ಮೋದಿಗೆ ಪತ್ರ ಬರೆದಿರುವ ಪಾಲಾ, ಕೆಲವು ಕಾರಣಗಳಿಂದಾಗಿ ಇಂಥ ಸಂಘರ್ಷಗಳು ಹೆಚ್ಚಾಗುವುದರ ಜತೆಗೆ, ಅತ್ಯಂತ ಆಕ್ರಮಣಕಾರಿ ತಿರುವು ಪಡೆದುಕೊಂಡು, ಹಿಂಸಾತ್ಮಕ ರೂಪ ತಳೆಯುತ್ತಿವೆ. ಆ ಕಾರಣಗಳು ಯಾವವು ಎಂದು ಬಿಜೆಪಿ ಸರ್ಕಾರಕ್ಕೂ ಗೊತ್ತಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಈ ಬಗ್ಗೆ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಕಾಂಗ್ರೆಸ್​ ಸಂಸದ ವಿನ್ಸೆಂಟ್​ ಪಾಲಾ, ಸಂಘರ್ಷವನ್ನು ಅಸ್ಸಾಂ ಮುಖ್ಯಮಂತ್ರಿ ಪ್ರತಿಷ್ಠೆಯ ವಿಷಯವನ್ನಾಗಿ ಪರಿಗಣಿಸಿದ್ದಾರೆ. ಶರ್ಮಾ ಅವರು ತುಂಬ ಎತ್ತರಕ್ಕೆ ಇದ್ದಾರೆ. ಹಾಗಂತ ಅವರ ತಲೆ ಭುಜದ ಮೇಲೆಯೇ ಇರಬೇಕು. ತುಂಬ ಆಕ್ರಮಣಕಾರಿ ಮನೋಭಾವ ತೋರಿಸಬಾರದು ಎಂದೂ ಹೇಳಿದ್ದಾರೆ.

ಮಿಜೋರಾಂನ ಕೊಲಾಸಿಬ್​ ಜಿಲ್ಲೆಯ ವೈರಂಗ್ಟೆ ಪಟ್ಟಣದಲ್ಲಿ ಜುಲೈ 26ರಂದು ಹಿಂಸಾಚಾರ ನಡೆದ ಬೆನ್ನಲ್ಲೇ ಗಡಿಭಾಗದಲ್ಲಿ ಉದ್ವಿಗ್ನತೆ ಮುಂದುವರಿದಿದೆ. ಇದುವರೆಗೆ ಏನಿಲ್ಲವೆಂದರೂ ಅಸ್ಸಾಂನ ಆರು ಪೊಲೀಸರು ಸೇರಿ ಏಳು ಮಂದಿ ಮೃತಪಟ್ಟಿದ್ದಾರೆ. ಇಲ್ಲಿ ಕೇಂದ್ರ ಸರ್ಕಾರ ಸಿಆರ್​ಪಿಎಫ್​ ಯೋಧರನ್ನು ನಿಯೋಜಿಸಿದೆ. ಈ ಸಂಘರ್ಷದ ಬಗ್ಗೆ ಕಾಂಗ್ರೆಸ್​ ತೀವ್ರ ಅಸಮಾಧಾನಗೊಂಡಿದೆ. ಮೊದಲೇ ಈಶಾನ್ಯ ರಾಜ್ಯಗಳಿಗೆ ಕಷ್ಟದ ಪರಿಸ್ಥಿತಿ ಇದೆ. ಇಲ್ಲಿ ಶಾಂತಿ, ಸಾಮರಸ್ಯ ಕಾಪಾಡಿಕೊಳ್ಳುವುದು ನಮ್ಮೆಲ್ಲರ ಮೊದಲ ಆದ್ಯತೆ ಆಗಿರಬೇಕು. ಕೂಡಲೇ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ, ಕ್ರಮ ಕೈಗೊಳ್ಳಬೇಕು ಎಂದೂ ಸಂಸದ ಪಾಲಾ ಪ್ರಧಾನಿ ಮೋದಿಯವರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: CBSE 10th Results 2021: ಸಿಬಿಎಸ್​ಇ 10ನೇ ತರಗತಿ ಫಲಿತಾಂಶ ಇಂದು ಪ್ರಕಟವಾಗುವುದಿಲ್ಲ; ಹೊಸ ದಿನಾಂಕ, ಸಮಯದ ಮಾಹಿತಿ ಇಲ್ಲಿದೆ

ಹಾಸನ: ಅನುಮಾನಾಸ್ಪದ ರೀತಿಯಲ್ಲಿ 3 ನವಿಲುಗಳು ಸಾವು; ವಿಷ ಹಾಕಿ ಕೊಂದಿರುವ ಶಂಕೆ