ನವದೆಹಲಿ: ಕುಖ್ಯಾತ ಬಿಲಿಯನೇರ್ ಬಿಸಿನೆಸ್‌ಮ್ಯಾನ್ ಮೆಹುಲ್ ಚೋಕ್ಸಿ ನೆಟ್‌ಫ್ಲಿಕ್ಸ್ ನಲ್ಲಿ ಪ್ರಸಾರವಾಗಲಿರುವ ‘ಬ್ಯಾಡ್‌ಬಾಯ್ ಬಿಲಿಯನೇರ್ಸ್’ ವೆಬ್ ಸಿರೀಸ್‌ನ್ನು ಪ್ರಸಾರವಾಗದಂತೆ ತಡೆಯಬೇಕೆಂದು ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದಾರೆ.
ಈ ಸಂಬಂಧ ಚೋಕ್ಸಿ ಪರ ವಕೀಲರು, ತಮ್ಮ ಕಕ್ಷಿದಾರರು ಈ ವೆಬ್ ಸಿರೀಸ್‌ನ್ನು ಪ್ರಸಾರಕ್ಕಿಂತ ಮೊದಲು ಅದರ ಪ್ರಿವೀವ್ ನೋಡಬಯಸುತ್ತಾರೆ. ಯಾಕಂದ್ರೆ ಈಗಾಗಲೇ ಅವರ ವಿರುದ್ಧದ ಪ್ರಕರಣದ ವಿಚಾರಣೆ ನಡೆಯುತ್ತಿದ್ದು, ಅದರ ಮೇಲೆ ಈ ವೆಬ್ ಸಿರೀಸ್ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಮನವಿ ಮಾಡಿದ್ದಾರೆ.
ಆದ್ರೆ ಈ ಆರೋಪ ನಿರಕಾರಿಸಿದ ನೆಟ್‌ಫ್ಲಿಕ್ಸ್ ಓಟಿಟಿ ಪರ ವಕೀಲರು, ಈ ‘ಬ್ಯಾಡ್ ಬಾಯ್ ಬಿಲಿಯನೇರ್ಸ್’ ಸೀರೀಸ್‌ನಲ್ಲಿ ಮೆಹುಲ್ ಚೋಕ್ಸಿ ಕುರಿತು ಕೇವಲ ಎರಡು ನಿಮಿಷ ಮಾತ್ರ ಪ್ರಸ್ತಾಪವಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಉಬಯ ವಕೀಲರ ವಾದ ಪ್ರತಿವಾದ ಆಲಿಸಿದ ನ್ಯಾಯಾಲಯ, ಪ್ರಕರಣದ ವಿಚಾರಣೆಯನ್ನು ಆಗಸ್ಟ್ 28ಕ್ಕೆ ಮುಂದೂಡಿದೆ.
Fugitive diamantaire Mehul Choksi (in file pic) approaches Delhi High Court against Netflix's upcoming web series 'Bad Boy Billionaires', through advocate Vijay Aggarwal. Hearing shortly. pic.twitter.com/RSi9k55W7l
— ANI (@ANI) August 26, 2020