ರಾಜ್ಯಗಳ GST ಪಾಲು ಕೊಡದೆ ಮೋದಿ ಸರ್ಕಾರದಿಂದ ಮಹಾ ದ್ರೋಹ: ಸೋನಿಯಾ ಗಾಂಧಿ
ನವದೆಹಲಿ: ಕಾಂಗ್ರೆಸ್ ಪಕ್ಷದ ಮಧ್ಯಂತರ ಅಧ್ಯಕ್ಷೆ ಶ್ರೀಮತಿ ಸೋನಿಯಾ ಗಾಂಧಿ ಕಾಂಗ್ರೆಸ್ ಹಾಗೂ ಬಿಜಿಪಿಯೇತರ ಪಕ್ಷಗಳು ಆಡಳಿತದಲ್ಲಿರುವ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸುತ್ತಿದ್ದು, ಕೇಂದ್ರ ಸರ್ಕಾರದ ವಿರುದ್ಧ ಒಕ್ಕೋರಲಿನ ಹೋರಾಟದ ಅಗತ್ಯವಿದೆ ಪ್ರತಿಪಾದಿಸಿದ್ದಾರೆ. ರಾಜ್ಯಗಳಿಗೆ ಕೇಂದ್ರದಿಂದ ಜಿಎಸ್.ಟಿ. ಪರಿಹಾರ ನೀಡಲು ಕೆಲ ಸಿಎಂಗಳು ಆಗ್ರಹಿಸುತ್ತಿದ್ದು, ಈ ಸಂಬಂಧ ಬಿಜೆಪಿಯೇತರ ಸಿಎಂಗಳು ಒಕ್ಕಟ್ಟಿನಿಂದ ಹೋರಾಡಬೇಕಿದೆ ಎಂದ ಸೋನಿಯಾ ಗಾಂಧಿ, ಆಗಸ್ಟ್ 11ರಂದು ನಡೆದ ಹಣಕಾಸು ಸ್ಥಾಯಿ ಸಮಿತಿ ಸಭೆಯಲ್ಲಿ ಹಣಕಾಸು ಸಚಿವಾಲಯದ ಕಾರ್ಯದರ್ಶಿ ಈ […]
ನವದೆಹಲಿ: ಕಾಂಗ್ರೆಸ್ ಪಕ್ಷದ ಮಧ್ಯಂತರ ಅಧ್ಯಕ್ಷೆ ಶ್ರೀಮತಿ ಸೋನಿಯಾ ಗಾಂಧಿ ಕಾಂಗ್ರೆಸ್ ಹಾಗೂ ಬಿಜಿಪಿಯೇತರ ಪಕ್ಷಗಳು ಆಡಳಿತದಲ್ಲಿರುವ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸುತ್ತಿದ್ದು, ಕೇಂದ್ರ ಸರ್ಕಾರದ ವಿರುದ್ಧ ಒಕ್ಕೋರಲಿನ ಹೋರಾಟದ ಅಗತ್ಯವಿದೆ ಪ್ರತಿಪಾದಿಸಿದ್ದಾರೆ.
ರಾಜ್ಯಗಳಿಗೆ ಕೇಂದ್ರದಿಂದ ಜಿಎಸ್.ಟಿ. ಪರಿಹಾರ ನೀಡಲು ಕೆಲ ಸಿಎಂಗಳು ಆಗ್ರಹಿಸುತ್ತಿದ್ದು, ಈ ಸಂಬಂಧ ಬಿಜೆಪಿಯೇತರ ಸಿಎಂಗಳು ಒಕ್ಕಟ್ಟಿನಿಂದ ಹೋರಾಡಬೇಕಿದೆ ಎಂದ ಸೋನಿಯಾ ಗಾಂಧಿ, ಆಗಸ್ಟ್ 11ರಂದು ನಡೆದ ಹಣಕಾಸು ಸ್ಥಾಯಿ ಸಮಿತಿ ಸಭೆಯಲ್ಲಿ ಹಣಕಾಸು ಸಚಿವಾಲಯದ ಕಾರ್ಯದರ್ಶಿ ಈ ವರ್ಷ ಜಿಎಸ್‌ಟಿಯಲ್ಲಿನ ಕಡ್ಡಾಯ ಶೇ.14ರಷ್ಟು ಪಾಲನ್ನು ರಾಜ್ಯಗಳಿಗೆ ಕೊಡಲು ಸಾಧ್ಯವಿಲ್ಲ ಎಂದಿದ್ದಾರೆ. ಇದು ದೇಶದ ಜನತೆಗೆ ಮೋದಿ ಸರ್ಕಾರ ಮಾಡಿದ ಮಹಾ ಮೋಸ ಎಂದು ಕಿಡಿಕಾರಿದ್ದಾರೆ. ಅಷ್ಟೇ ಅಲ್ಲ ಕೇಂದ್ರದ ನೂತನ ಶಿಕ್ಷಣ ನೀತಿ ವಿದ್ಯಾರ್ಥಿಗಳ ಪಾಲಿಗೆ ಮಾರಕವಾಗಿದ್ದು, ಕೊರೊನಾದಂಥ ಸಂಕಷ್ಟದ ಸಮಯದಲ್ಲಿ ವಿದ್ಯಾರ್ಥಿಗಳ ಹಿತ ಕಾಯುವ ಬದಲು ಅವರ ಹಿತಾಸಕ್ತಿಗೆ ಮಾರಕವಾಗುವಂಥ ನೀತಿಗಳನ್ನು ಕೇಂದ್ರ ಸರ್ಕಾರ ಜಾರಿಗೆ ತರುತ್ತಿದೆ ಎಂದು ಸೋನಿಯಾ ಮೋದಿ ಸರ್ಕಾರವನ್ನ ಖಂಡಿಸಿದ್ದಾರೆ.
ಸೋನಿಯಾ ಗಾಂಧಿ ಜತೆಗಿನ ಈ ಸಂವಾದದಲ್ಲಿ ಭಾಗಿಯಾಗಿದ್ದ ಜಾರ್ಖಂಡ್, ಮಹಾರಾಷ್ಟ್ರ, ಪಂಜಾಬ್, ರಾಜಸ್ಥಾನ, ಛತ್ತೀಸ್ ಘಡ್, ಪಶ್ಚಿಮ ಬಂಗಾಳ ಸಿಎಂಗಳು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ನೀಟ್, ಜೆಇಇ ಪರೀಕ್ಷೆ ಮುಂದೂಡಿಕೆಗೆ ಒಕ್ಕೋರಲಿನಿಂದ ಆಗ್ರಹಿಸಿದ್ದಾರೆ. ಅದ್ರಲ್ಲೂ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಎಲ್ಲ ಸಿಎಂಗಳು ಸೇರಿ ನೀಟ್ ಪರೀಕ್ಷೆ ವಿರುದ್ಧ ಸುಪ್ರೀಮ್ ಕೋರ್ಟ್ ಮೊರೆ ಹೋಗುವುದು ಸೂಕ್ತ ಎಂದು ಆಗ್ರಹಿಸಿದ್ದಾರೆ.
In the meeting of Standing Committee of Finance on 11 Aug, Fin Secy, GoI stated that Centre is not in a position to pay mandatory GST compensation of 14% for the current year. This refusal is nothing short of betrayal on part of Modi Govt: Congress interim president Sonia Gandhi pic.twitter.com/pDQKwoE47o
— ANI (@ANI) August 26, 2020
This will be my request to all state govts, let us do it together, let us go to Supreme Court & postpone the exam for the time being until and unless the situation allows students to sit for exam (JEE/NEET): West Bengal CM at Sonia Gandhi's virtual meet with CMs of 7 states. pic.twitter.com/uvBfsg1Eeu
— ANI (@ANI) August 26, 2020
Announcements such as those related to the National Education Policy should really worry us as it is actually a setback. Other problems of students & exams are also being dealt with uncaringly: Congress interim president Sonia Gandhi pic.twitter.com/bEIJIROJSE
— ANI (@ANI) August 26, 2020