ಸ್ವಯಂಕೃತಾಪರಾಧ.. ಸಾಲ ವಸೂಲಿ ಮಾಡದೆ SBIಗೆ ಭಾರಿ ಮುಖಭಂಗ
ದೆಹಲಿ: ದೇಶದ ಅತಿ ದೊಡ್ಡ, ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಎಂದರೆ ಭಾರತೀಯ ಸ್ಟೇಟ್ ಬ್ಯಾಂಕ್. ಅದು ತನ್ನ ಹಣಕಾಸಿನ ಚಟುವಟಿಕೆ ಮತ್ತು ಲಾಭದಾಯಕ ವಹಿವಾಟಿನಿಂದ ಭಾರತದಲ್ಲೇ ಅತ್ಯುತ್ತಮ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆದರೆ, ಇದೀಗ ಸ್ಟೇಟ್ ಬ್ಯಾಂಕ್ ತನ್ನ ಸ್ವಯಂಕೃತಾಪರಾಧದಿಂದ ಭಾರಿ ಮುಖಭಂಗ ಎದುರಿಸುವಂತಾಗಿದೆ. ವಿಶ್ವದ ಪ್ರತಿಷ್ಠಿತ ಹಣಕಾಸು ಸಂಸ್ಥೆಯಾದ ಮೂಡೀಸ್ ಇನ್ವೆಸ್ಟರ್ಸ್ ಸರ್ವಿಸ್ ಸಂಸ್ಥೆಯು ನಿನ್ನೆ ಭಾರತೀಯ ಸ್ಟೇಟ್ ಬ್ಯಾಂಕ್ನ ಮೂಲಾಧಾರ ಸಾಲ ಮೌಲ್ಯಮಾಪನವನ್ನು (ಬೇಸ್ಲೈನ್ ಕ್ರೆಡಿಟ್ ಅಸೆಸ್ಮೆಂಟ್) ba1 ನಿಂದ ba2ಗೆ ಹಿಂಬಡ್ತಿ […]
ದೆಹಲಿ: ದೇಶದ ಅತಿ ದೊಡ್ಡ, ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಎಂದರೆ ಭಾರತೀಯ ಸ್ಟೇಟ್ ಬ್ಯಾಂಕ್. ಅದು ತನ್ನ ಹಣಕಾಸಿನ ಚಟುವಟಿಕೆ ಮತ್ತು ಲಾಭದಾಯಕ ವಹಿವಾಟಿನಿಂದ ಭಾರತದಲ್ಲೇ ಅತ್ಯುತ್ತಮ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆದರೆ, ಇದೀಗ ಸ್ಟೇಟ್ ಬ್ಯಾಂಕ್ ತನ್ನ ಸ್ವಯಂಕೃತಾಪರಾಧದಿಂದ ಭಾರಿ ಮುಖಭಂಗ ಎದುರಿಸುವಂತಾಗಿದೆ.
ವಿಶ್ವದ ಪ್ರತಿಷ್ಠಿತ ಹಣಕಾಸು ಸಂಸ್ಥೆಯಾದ ಮೂಡೀಸ್ ಇನ್ವೆಸ್ಟರ್ಸ್ ಸರ್ವಿಸ್ ಸಂಸ್ಥೆಯು ನಿನ್ನೆ ಭಾರತೀಯ ಸ್ಟೇಟ್ ಬ್ಯಾಂಕ್ನ ಮೂಲಾಧಾರ ಸಾಲ ಮೌಲ್ಯಮಾಪನವನ್ನು (ಬೇಸ್ಲೈನ್ ಕ್ರೆಡಿಟ್ ಅಸೆಸ್ಮೆಂಟ್) ba1 ನಿಂದ ba2ಗೆ ಹಿಂಬಡ್ತಿ ನೀಡಿದೆ.
ಸಾಲ ವಸೂಲಾತಿ ಕಳಪೆ, ಭವಿಷ್ಯ ನಿರಾಶಾದಾಯಕ ದೇಶದ ಪ್ರಸಕ್ತ ಆರ್ಥಿಕ ಸ್ಥಿತಿಗತಿ ಕುಂಠಿತವಾಗಿರೋ ಹಿನ್ನೆಲೆಯಲ್ಲಿ ಸಾಲಗಾರರಿಂದ ಸಾಲದ ಮೊತ್ತವನ್ನು ಸಮಪರ್ಕವಾಗಿ ವಸೂಲಾತಿ ಮಾಡಲು ಸ್ಟೇಟ್ ಬ್ಯಾಂಕ್ಗೆ ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಮೂಡೀಸ್ ಸಂಸ್ಥೆಯು SBI ರೇಟಿಂಗ್ ಅನ್ನು ba2ಗೆ ಇಳಿಸಿದೆ ಎಂದು ವರದಿಯಾಗಿದೆ. ಕಳೆದ ಜೂನ್ ತಿಂಗಳಿಂದ ಸ್ಟೇಟ್ ಬ್ಯಾಂಕ್ ನೀಡಿರುವ ಶೇಕಡಾ 9.5ರಷ್ಟು ಸಾಲಗಳ ಮರುಪಾವತಿಗೆ ಆಗಸ್ಟ್ 31ರ ವರೆಗೆ ತಾತ್ಕಾಲಿಕ ತಡೆ (ರೀಪೇಮೆಂಟ್ ಮೊರಟೋರಿಯಂ) ನೀಡಲಾಗಿದೆ.
ಜೊತೆಗೆ, ಮುಂಬರುವ ಒಂದು ಅಥವಾ ಒಂದೂವರೆ ವರ್ಷದವರೆಗೆ SBIನ ಈ ರೇಟಿಂಗ್ ಬದಲಾಗುವ ಸಾಧ್ಯತೆ ತೀರಾ ವಿರಳವಾಗಿದೆ ಎಂದು ಮೂಡೀಸ್ ತಿಳಿಸಿದೆ. ಈ ಹಿಂಬಡ್ತಿಯಿಂದ ಬ್ಯಾಂಕ್ನ ಸ್ವತ್ತಿನ ಗುಣಮಟ್ಟ (ಅಸೆಟ್ ಕ್ವಾಲಿಟಿ) ಮತ್ತು ಲಾಭದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧಯತೆಯೂ ಇದೆ. ಇದರಿಂದ ಕಳೆದ ಎರಡು ವರ್ಷಗಳಿಂದ ಬ್ಯಾಂಕ್ ಗಳಸಿರುವ ಆರ್ಥಿಕ ಏಳಿಗೆಗೆ ಹಿನ್ನಡೆಯಾಗಲಿದೆ ಎಂದು ಮೂಡೀಸ್ ಮಾಹಿತಿ ನೀಡಿದೆ.