ಮೇಕೆದಾಟು ಡ್ಯಾಂ ಯೋಜನೆ ವಿರೋಧಿಸಿ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದ ತಮಿಳುನಾಡು

| Updated By: guruganesh bhat

Updated on: Aug 27, 2021 | 2:33 PM

Mekedatu Project: ವಿಪರ್ಯಾಸವೆಂದರೆ ತಮಿಳುನಾಡು ಬಿಜೆಪಿ ಘಟಕದ ಅದ್ಯಕ್ಷ ಕೆ.ಅಣ್ಣಾಮಲೈ ಕರ್ನಾಟಕದ ಮಹತ್ವಾಕಾಂಕ್ಷಿ ಯೋಜನೆ ಮೇಕೆದಾಟು ಆಣೆಕಟ್ಟನ್ನು ವಿರೋಧಿಸಿದ್ದಾರೆ.

ಮೇಕೆದಾಟು ಡ್ಯಾಂ ಯೋಜನೆ ವಿರೋಧಿಸಿ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದ ತಮಿಳುನಾಡು
ಸುಪ್ರೀಂ ಕೋರ್ಟ್​
Follow us on

ದೆಹಲಿ: ಮೇಕೆದಾಟು ಡ್ಯಾಂ ನಿರ್ಮಿಸುವುದನ್ನು ವಿರೋಧಿಸಿ ತಮಿಳುನಾಡು ಸರ್ಕಾರ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದೆ. ಈಗಾಗಲೇ ಕರ್ನಾಟಕ ಜಲ ಸಂಪನ್ಮೂಲ ಆಯೋಗಕ್ಕೆ ಸಲ್ಲಿಸಿರುವ ವರದಿಯನ್ನು ರದ್ದುಪಡಿಸಲು ತಮಿಳುನಾಡು ತನ್ನ ಅರ್ಜಿಯಲ್ಲಿ ಕೋರಿದೆ.

ಮೇಕೆದಾಟು ಆಣೆಕಟ್ಟು ನಿರ್ಮಾಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ನಡುವೆ ಕಳೆದ ಕೆಲವು ತಿಂಗಳಿನಿಂದ ‘ಹೇಳಿಕೆ’ಗಳ ಸಮರ ನಡೆಯುತ್ತಿದೆ. ಮೇಕೆದಾಟು ಕುಡಿಯುವ ನೀರಿನ ಯೋಜನೆ ಜಾರಿ ವಿಚಾರವಾಗಿ ಸುಪ್ರೀಂಕೋರ್ಟ್ ಆದೇಶ ಮುಂದಿಟ್ಟು ಮನವರಿಕೆ ಮಾಡಿಕೊಟ್ಟಿದ್ದೇವೆ. ಕೇಂದ್ರ ಜಲಶಕ್ತಿ ಸಚಿವರಿಗೆ ಈ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಶೀಘ್ರದಲ್ಲೇ ಡಿಪಿಆರ್​ಗೆ ಮಾನ್ಯತೆ ಸಿಗಲಿದೆ ಎಂದು ನವದೆಹಲಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದರು. ಜತೆಗೆ ರಾಜ್ಯ ಸರ್ಕಾರ ಮೇಕೆದಾಟು ಯೋಜನೆಯನ್ನು ಅನುಷ್ಠಾನಗೊಳಿಸಿಯೇ ಸಿದ್ಧ ಎಂದು ಅವರು ಭರವಸೆಯನ್ನು ಸಹ ನೀಡಿದ್ದರು.

ಮೇಕೆದಾಟು ಯೋಜನೆ ಜಾರಿಗೆ ನಮ್ಮ ಸರ್ಕಾರ ಸಿದ್ಧವಿದೆ. ಆದರೆ, ತಮಿಳುನಾಡು ಸರ್ಕಾರ ವಿನಾಕಾರಣ ಕ್ಯಾತೆ ತೆಗೆಯುತ್ತಿದೆ. ನಮ್ಮ ಪಾಲಿನ ಯೋಜನೆ ವಿಚಾರದಲ್ಲಿ ಮೂಗು ತೂರಿಸುತ್ತಿದೆ ಎಂದು ಶಿವಮೊಗ್ಗದಲ್ಲಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಆಗಸ್ಟ್ 14ರಂದು ಹೇಳಿಕೆ ನೀಡಿದ್ದರು. ನಮ್ಮ ರಾಜ್ಯದ ಪಾಲಿನ ನೀರು ಬಳಸಿಕೊಳ್ಳಲು ಅಪ್ಪಣೆ ಬೇಕಿಲ್ಲ. ಜಲವಿದ್ಯುತ್ ಉತ್ಪಾದನೆಗೆ ಬಳಸಿದ ಬಳಿಕ ಮತ್ತೆ ನದಿಗೆ ಸೇರುತ್ತೆ ಎಂದು ತಿಳಿಸಿದ್ದಾರೆ. ಯೋಜನೆಗೆ ತಮಿಳುನಾಡು ಬಿಜೆಪಿಯಿಂದ ವಿರೋಧ ವಿಚಾರವಾಗಿ ಮಾತನಾಡಿದ ಅವರು, ರಾಜಕಾರಣ ಆಯಾ ರಾಜ್ಯಗಳಲ್ಲಿ ಭಿನ್ನಾವಾಗಿರುತ್ತೆ. ಅಲ್ಲಿನ ಪರಿಸ್ಥಿತಿಗೆ ತಕ್ಕಂತೆ ಪ್ರತಿಭಟನೆ, ವಿರೋಧ ಮಾಡುತ್ತಾರೆ ಎಂದು ಪ್ರತಿಕ್ರಿಯೆ ನೀಡಿದ್ದರು.  ವಿಪರ್ಯಾಸವೆಂದರೆ ತಮಿಳುನಾಡು ಬಿಜೆಪಿ ಘಟಕದ ಅದ್ಯಕ್ಷ ಕೆ.ಅಣ್ಣಾಮಲೈ ಕರ್ನಾಟಕದ ಮಹತ್ವಾಕಾಂಕ್ಷಿ ಯೋಜನೆ ಮೇಕೆದಾಟು ಆಣೆಕಟ್ಟನ್ನು ವಿರೋಧಿಸಿದ್ದಾರೆ.

ಇದನ್ನೂ ಓದಿ: 

ಮೇಕೆದಾಟು ಯೋಜನೆ ಮಾಡುತ್ತೀರೋ, ಇಲ್ಲವೋ? ಕೋಡಿಹಳ್ಳಿ ಚಂದ್ರಶೇಖರ್ ವಾರ್ನಿಂಗ್

ಮೇಕೆದಾಟು ಯೋಜನೆ ವಿರೋಧಿಸಿ ಆ.5ರಂದು ಉಪವಾಸ ಸತ್ಯಾಗ್ರಹಕ್ಕೆ ಮುಂದಾದ ಕೆ.ಅಣ್ಣಾಮಲೈ

(Mekedatu Project Tamil Nadu filed a petition to the Supreme Court challenge the Karnataka)