ಆಸ್ಪತ್ರೆಯ ಹಾಸಿಗೆ ಮೇಲೆ ವೈದ್ಯಕೀಯ ಉಪಕರಣಗಳ ಹಿಡಿದು ಗದ್ದಲ ಸೃಷ್ಟಿಸಿದ ಮಾನಸಿಕ ಅಸ್ವಸ್ಥ

|

Updated on: Jul 29, 2024 | 3:21 PM

ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಮಾನಸಿಕ ಅಸ್ವಸ್ಥನೊಬ್ಬ ಗದ್ದಲ ಸೃಷ್ಟಿಸಿರುವ ಘಟನೆ ನಡೆದಿದೆ. ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ರೋಗಿಯೊಬ್ಬ ವೈದ್ಯಕೀಯ ಉಪಕರಣಗಳನ್ನು ಹಿಡಿದು ಹಾಸಿಗೆಯ ಮೇಲೆ ಹತ್ತಿ ಕಿರುಚಾಡುತ್ತಾ ಗದ್ದಲ ಸೃಷ್ಟಿಸಿದ್ದಾನೆ. ಆತನನ್ನು ಕೆಳಗಿಳಿಸಲು ಹೋದ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾನೆ.

ಆಸ್ಪತ್ರೆಯ ಹಾಸಿಗೆ ಮೇಲೆ ವೈದ್ಯಕೀಯ ಉಪಕರಣಗಳ ಹಿಡಿದು ಗದ್ದಲ ಸೃಷ್ಟಿಸಿದ ಮಾನಸಿಕ ಅಸ್ವಸ್ಥ
ಆಸ್ಪತ್ರೆ ಮಾನಸಿಕ ಅಸ್ವಸ್ಥ
Follow us on

ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಮಾನಸಿಕ ಅಸ್ವಸ್ಥನೊಬ್ಬ ಗದ್ದಲ ಸೃಷ್ಟಿಸಿರುವ ಘಟನೆ ನಡೆದಿದೆ. ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ರೋಗಿಯೊಬ್ಬ ವೈದ್ಯಕೀಯ ಉಪಕರಣಗಳನ್ನು ಹಿಡಿದು ಹಾಸಿಗೆಯ ಮೇಲೆ ಹತ್ತಿ ಕಿರುಚಾಡುತ್ತಾ ಗದ್ದಲ ಸೃಷ್ಟಿಸಿದ್ದಾನೆ. ಆತನನ್ನು ಕೆಳಗಿಳಿಸಲು ಹೋದ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾನೆ.

ಕರ್ನೂಲಿನ ಅರೇಕಲ್ ಗ್ರಾಮದ ಈಡಿಗ ರಾಘವೇಂದ್ರ ಎಂದು ಗುರುತಿಸಲಾದ ವ್ಯಕ್ತಿ ಆಸ್ಪತ್ರೆಯ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ್ದು, ಚಿಕಿತ್ಸೆ ವೇಳೆ ವೈದ್ಯಕೀಯ ಉಪಕರಣಗಳನ್ನು ಹಾನಿಗೊಳಿಸಿದ್ದಾನೆ.
ಘಟನೆಯ ವಿಡಿಯೋದಲ್ಲಿ ರಾಘವೇಂದ್ರ ಆಸ್ಪತ್ರೆಯ ಬೆಡ್ ಒಂದರ ಮೇಲೆ ವೈದ್ಯಕೀಯ ಉಪಕರಣದೊಂದಿಗೆ ನಿಂತು ಆಸ್ಪತ್ರೆಯ ಸಿಬ್ಬಂದಿಯ ಮೇಲೆ ಹಲ್ಲೆಗೆ ಯತ್ನಿಸುತ್ತಿರುವುದು ಕಂಡುಬಂದಿದೆ.

ನಂತರ ಆತನನ್ನು ಆಸ್ಪತ್ರೆಯ ಸಿಬ್ಬಂದಿ ಕುಟುಂಬ ಸದಸ್ಯರ ನೆರವಿನಿಂದ ಹಿಡಿದು ಕಟ್ಟಿ ಹಾಕಿದ್ದಾರೆ.
ರಾಘವೇಂದ್ರ ಕುಟುಂಬದ ಪ್ರಕಾರ, ಅವರು ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ.
ವ್ಯಕ್ತಿಯನ್ನು ಹೇಗೋ ಹಿಡಿದು ಚಿಕಿತ್ಸೆ ನೀಡಲಾಗಿದೆ, ನಂತರ ಚಿಕಿತ್ಸೆಗಾಗಿ ಉತ್ತಮ ವೈದ್ಯಕೀಯ ಸೌಲಭ್ಯ ಇರುವ ಆಸ್ಪತ್ರೆಗೆ ಶಿಫಾರಸು ಮಾಡಲಾಗಿದೆ.

ಮತ್ತಷ್ಟು ಓದಿ: Lyme Disease: ಲೈಮ್ ಕಾಯಿಲೆಯು ಮಾನಸಿಕ ಅಸ್ವಸ್ಥತೆ, ಆತ್ಮಹತ್ಯೆ ಅಪಾಯ ಹೆಚ್ಚಿಸುತ್ತದೆ: ಅಧ್ಯಯನ

ಘಟನೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಆಸ್ಪತ್ರೆಯ ಮುಖ್ಯ ವೈದ್ಯಕೀಯ ಅಧೀಕ್ಷಕ (ಸಿಎಂಎಸ್) ಶ್ರೀನಿವಾಸ್ ನಾಯ್ಕ್, ರಾಘವೇಂದ್ರ ಅವರ ಕ್ರಮದಿಂದ ಸುಮಾರು ಒಂದು ಲಕ್ಷ ರೂ.ಗೂ ಹೆಚ್ಚು ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.

ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದ್ದು, ಈ ಬಗ್ಗೆ ತನಿಖೆಯನ್ನೂ ಆರಂಭಿಸಲಾಗಿದೆ ಎಂದು ಸಿಎಂಎಸ್ ಶ್ರೀನಿವಾಸ್ ನಾಯ್ಕ್ ತಿಳಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:58 am, Sun, 28 July 24