ನವದೆಹಲಿ: ಭಾರತೀಯ ಚುನಾವಣೆಗಳ ಕುರಿತು ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ನೀಡಿದ ಹೇಳಿಕೆಗಳ ಕುರಿತು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರ ಟೀಕೆಗೆ ಇನ್‌ಸ್ಟಾಗ್ರಾಮ್‌ನ ಮಾತೃ ಕಂಪನಿಯಾದ ಮೆಟಾ ಇಂದು ಪ್ರತಿಕ್ರಿಯಿಸಿದೆ. ಇದೊಂದು ಅಜಾಗರೂಕತೆಯಿಂದ ನಡೆದ ತಪ್ಪು ಎಂದಿರುವ ಮೆಟಾ ತನ್ನ ಮುಂದಿನ ಪ್ರಯತ್ನಗಳಿಗೆ ಭಾರತದ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದೆ.
ಭಾರತ ಸೇರಿದಂತೆ ಅನೇಕ ದೇಶಗಳ ಆಡಳಿತ ಸರ್ಕಾರಗಳು ಕೊವಿಡ್ ಬಳಿಕ ಮತ್ತೆ ಅಧಿಕಾರಕ್ಕೆ ಬರಲು ಸಾಧ್ಯವಾಗಲಿಲ್ಲ. ಕೊವಿಡ್ ಸಂದರ್ಭವನ್ನು ಸರಿಯಾಗಿ ನಿರ್ವಹಿಸದೇ ಇದ್ದುದು ಜನ ವಿಶ್ವಾಸ ಕಡಿಮೆಯಾಗಲು ಕಾರಣವಾಗಿರಬಹುದು ಎಂದು ಹೇಳಿದ್ದರು. ಆದರೆ, ಭಾರತದಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ 3ನೇ ಅವಧಿಗೆ 2024ರ ಚುನಾವಣೆಯಲ್ಲಿ ಗೆದ್ದು ಮೋದಿ ಮತ್ತೊಮ್ಮೆ ಪ್ರಧಾನಿಯಾಗಿದ್ದರು. ಹೀಗಾಗಿ, ಮಾರ್ಕ್ ಜುಕರ್‌ಬರ್ಗ್ ಭಾರತದ ಚುನಾವಣೆಯ ಬಗ್ಗೆ ತಪ್ಪು ಹೇಳಿಕೆ ನೀಡಿದ್ದನ್ನು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಖಂಡಿಸಿದ್ದರು. ಅಲ್ಲದೆ, ಮಾರ್ಕ್ ಜುಕರ್‌ಬರ್ಗ್ ಭಾರತದ ಬಗ್ಗೆ ನೀಡಿದ ತಪ್ಪು ಹೇಳಿಕೆಗೆ ಭಾರತದ ಐಟಿ ಮತ್ತು ಸಂವಹನ ವ್ಯವಹಾರಗಳ ಸಂಸದೀಯ ಸಮಿತಿ ಮೆಟಾಗೆ ಸಮನ್ಸ್ ನೀಡುವುದಾಗಿ ಘೋಷಿಸಿತ್ತು. ಆದರೆ, ಸಮನ್ಸ್ ನೀಡುವ ಮೊದಲೇ ಮೆಟಾ ಭಾರತ ಸರ್ಕಾರದ ಕ್ಷಮೆ ಯಾಚನೆ ಮಾಡಿದೆ.
Dear Honourable Minister @AshwiniVaishnaw , Mark’s observation that many incumbent parties were not re-elected in 2024 elections holds true for several countries, BUT not India. We would like to apologise for this inadvertent error. India remains an incredibly important country…
— Shivnath Thukral (@shivithukral) January 14, 2025
ಇದನ್ನೂ ಓದಿ: ಕಾಂಗ್ರೆಸ್ನ ಕೊಳಕು ಸತ್ಯ ಬಯಲು; ರಾಹುಲ್ ಗಾಂಧಿ ವಿವಾದಾತ್ಮಕ ಹೇಳಿಕೆಗೆ ಬಿಜೆಪಿ ತಿರುಗೇಟು
ದಿ ಜೋ ರೋಗನ್ ಎಕ್ಸ್‌ಪೀರಿಯೆನ್ಸ್‌ನಲ್ಲಿ ಕಾಣಿಸಿಕೊಂಡ ಜುಕರ್‌ಬರ್ಗ್, ಕೊವಿಡ್-19 ಸಾಂಕ್ರಾಮಿಕ ರೋಗದ ನಂತರ ಭಾರತ ಸೇರಿದಂತೆ ಪ್ರಪಂಚದಾದ್ಯಂತದ ಸರ್ಕಾರಗಳು ಮತದಾರರ ನಂಬಿಕೆಯನ್ನು ಹೇಗೆ ಕಳೆದುಕೊಂಡವು ಎಂದು ಹೇಳಿದ್ದರು. 2024 ಪ್ರಪಂಚದಾದ್ಯಂತ ದೊಡ್ಡ ಚುನಾವಣಾ ವರ್ಷವಾಗಿತ್ತು. ಈ ಚುನಾವಣೆಗಳ ಮೇಲೆ ಕೊವಿಡ್ನ ಪರಿಣಾಮವೇನೆಂಬುದನ್ನು ನಾವೆಲ್ಲರೂ ಗಮನಿಸಿದ್ದೇವೆ. ಭಾರತ ಸೇರಿದಂತೆ 2024ರಲ್ಲಿ ಚುನಾವಣೆಗಳನ್ನು ನಡೆಸಿದ ಹಲವಾರು ದೇಶಗಳಲ್ಲಿ ಅಧಿಕಾರದಲ್ಲಿರುವವರು ಅಧಿಕಾರ ಕಳೆದುಕೊಂಡರು ಎಂದು ಜುಕರ್‌ಬರ್ಗ್ ಹೇಳಿದ್ದರು.
As the world’s largest democracy, India conducted the 2024 elections with over 640 million voters. People of India reaffirmed their trust in NDA led by PM @narendramodi Ji’s leadership.
Mr. Zuckerberg’s claim that most incumbent governments, including India in 2024 elections,…
— Ashwini Vaishnaw (@AshwiniVaishnaw) January 13, 2025
ಇದಕ್ಕೆ ಪ್ರತಿಕ್ರಿಯಿಸಿದ್ದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್, ಜುಕರ್‌ಬರ್ಗ್ ಅವರ ಹೇಳಿಕೆಗಳನ್ನು ವಾಸ್ತವಿಕವಾಗಿ ತಪ್ಪು ಎಂದು ಕರೆದಿದ್ದರು. ಭಾರತದ 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಎನ್ಡಿಎ ಗೆದ್ದಿದೆ. ನರೇಂದ್ರ ಮೋದಿ 3ನೇ ಬಾರಿ ಪ್ರಧಾನಿಯಾಗಿದ್ದಾರೆ. ಇದು ಮೋದಿಯವರ ನಾಯಕತ್ವದ ಮೇಲಿನ ಜನರ ನಂಬಿಕೆಯನ್ನು ಸೂಚಿಸುತ್ತದೆ ಎಂದು ಹೇಳಿದ್ದರು.
ಇದನ್ನೂ ಓದಿ: 2024ರ ಚುನಾವಣೆಯಲ್ಲಿ ಮೋದಿ ಸೋಲು; ಸುಳ್ಳು ಮಾಹಿತಿ ನೀಡಿದ ಮಾರ್ಕ್ ಜುಕರ್‌ಬರ್ಗ್ ಬಗ್ಗೆ ಅಶ್ವಿನಿ ವೈಷ್ಣವ್ ಟೀಕೆ
ಸಚಿವ ಅಶ್ವಿನಿ ವೈಷ್ಣವ್ ಟೀಕೆಗೆ ಪ್ರತಿಕ್ರಿಯೆಯಾಗಿ, ಮೆಟಾದ ಸಾರ್ವಜನಿಕ ನೀತಿಯ ಉಪಾಧ್ಯಕ್ಷ ಶಿವಂತ್ ತುಕ್ರಾಲ್ ಎಕ್ಸ್ನಲ್ಲಿ ಪೋಸ್ಟ್ ಮಾಡಿ ಕ್ಷಮೆಯಾಚಿಸಿದ್ದಾರೆ. ಆತ್ಮೀಯ ಸಚಿವ ಅಶ್ವಿನಿ ವೈಷ್ಣವ್ ಅವರ ಪೋಸ್ಟ್ ಅನ್ನು ನಾವು ಗಮನಿಸಿದ್ದೇವೆ. 2024ರ ಚುನಾವಣೆಯಲ್ಲಿ ಅನೇಕ ಅಧಿಕಾರದಲ್ಲಿರುವ ಪಕ್ಷಗಳು ಮರು ಆಯ್ಕೆಯಾಗಿಲ್ಲ ಎಂಬ ಮಾರ್ಕ್ ಜುಕರ್‌ಬರ್ಗ್ ಅವರ ಅಭಿಪ್ರಾಯವು ಹಲವಾರು ದೇಶಗಳ ವಿಷಯದಲ್ಲಿ ನಿಜವಾಗಿದೆ. ಆದರೆ ಭಾರತಕ್ಕೆ ಇದು ಅನ್ವಯಿಸುವುದಿಲ್ಲ. ಈ ಅಜಾಗರೂಕ ತಪ್ಪಿಗೆ ನಾವು ಕ್ಷಮೆಯಾಚಿಸುತ್ತೇವೆ. ಭಾರತವು ಮೆಟಾಗೆ ಬಹಳ ಪ್ರಮುಖ ದೇಶವಾಗಿ ಉಳಿದಿದೆ. ಭಾರತದ ಭವಿಷ್ಯದ ಹೃದಯಭಾಗದಲ್ಲಿರಲು ನಾವು ಎದುರು ನೋಡುತ್ತಿದ್ದೇವೆ ಎಂದು ಪೋಸ್ಟ್ ಮಾಡಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ