AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

2024ರ ಚುನಾವಣೆಯಲ್ಲಿ ಮೋದಿ ಸೋಲು; ಸುಳ್ಳು ಮಾಹಿತಿ ನೀಡಿದ ಮಾರ್ಕ್ ಜುಕರ್‌ಬರ್ಗ್ ಬಗ್ಗೆ ಅಶ್ವಿನಿ ವೈಷ್ಣವ್ ಟೀಕೆ

2024ರಲ್ಲಿ ಭಾರತದ ಅಧಿಕಾರದಲ್ಲಿರುವ ಪಕ್ಷವು ಎಲ್ಲಾ ಪ್ರಮುಖ ಚುನಾವಣೆಗಳಲ್ಲಿ ಸೋತಿದೆ ಎಂಬ ಮೆಟಾ ಮುಖ್ಯಸ್ಥ ಮಾರ್ಕ್ ಜುಕರ್‌ಬರ್ಗ್ ಅವರ ತಪ್ಪು ಹೇಳಿಕೆಯನ್ನು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಇಂದು ಟೀಕಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ಎನ್​ಡಿಎ ಸೋತಿದೆ ಎಂದು ಮಾರ್ಕ್ ಜುಕರ್​ಬರ್ಗ್ ತಪ್ಪು ಮಾಹಿತಿಯನ್ನು ಹರಡುತ್ತಿರುವುದನ್ನು ನೋಡುವುದು ನಿರಾಶಾದಾಯಕವಾಗಿದೆ ಎಂದು ಕೇಂದ್ರ ಸಚಿವ ಹೇಳಿದ್ದಾರೆ.

2024ರ ಚುನಾವಣೆಯಲ್ಲಿ ಮೋದಿ ಸೋಲು; ಸುಳ್ಳು ಮಾಹಿತಿ ನೀಡಿದ ಮಾರ್ಕ್ ಜುಕರ್‌ಬರ್ಗ್ ಬಗ್ಗೆ ಅಶ್ವಿನಿ ವೈಷ್ಣವ್ ಟೀಕೆ
Ashwini Vaishnaw
ಸುಷ್ಮಾ ಚಕ್ರೆ
|

Updated on: Jan 13, 2025 | 7:04 PM

Share

ನವದೆಹಲಿ: 2024ರಲ್ಲಿ ಅಧಿಕಾರದಲ್ಲಿರುವವರು ಎಲ್ಲ ಚುನಾವಣೆಯಲ್ಲೂ ಸೋತಿದ್ದಾರೆ ಎಂಬ ಮೆಟಾ ಮುಖ್ಯಸ್ಥ ಮಾರ್ಕ್ ಜುಕರ್‌ಬರ್ಗ್ ಅವರ ಹೇಳಿಕೆಯನ್ನು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಟೀಕೆ ಮಾಡಿದ್ದಾರೆ. ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರವು ಲೋಕಸಭಾ ಚುನಾವಣೆಯಲ್ಲಿ ನಿರ್ಣಾಯಕ ಗೆಲುವು ಸಾಧಿಸಿದೆ. ಆದರೆ, ಮೆಟಾ ಸಿಇಓ ಈ ಬಗ್ಗೆ ಇತ್ತೀಚೆಗೆ ಸುಳ್ಳು ಮಾಹಿತಿ ಹರಡಿದ್ದರು ಎಂದಿದ್ದಾರೆ.

ಕೊವಿಡ್ ನಂತರ ಭಾರತ ಸೇರಿದಂತೆ ಹಲವು ಆಡಳಿತ ಸರ್ಕಾರಗಳು 2024ರ ಚುನಾವಣೆಯಲ್ಲಿ ಸೋತಿವೆ ಎಂಬ ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ಅವರ ಹೇಳಿಕೆಯನ್ನು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಟೀಕಿಸಿದ್ದಾರೆ. ಭಾರತದಲ್ಲಿ 64 ಕೋಟಿ ಮತದಾರರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಮೇಲೆ ತಮ್ಮ ನಂಬಿಕೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ಅಶ್ವಿನಿ ವೈಷ್ಣವ್ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ಇಂದು ಪೋಸ್ಟ್ ಮಾಡಿದ್ದಾರೆ. ಮೆಟಾದಂತಹ ದೊಡ್ಡ ವೇದಿಕೆಯ ಮುಖ್ಯಸ್ಥರು ಇಂತಹ ತಪ್ಪು ಮಾಹಿತಿಯನ್ನು ಹರಡುತ್ತಿರುವುದು ನಿರಾಶಾದಾಯಕವಾಗಿದೆ ಎಂದು ಅವರು ಅಸಮಾಧಾನ ಹೊರಹಾಕಿದ್ದಾರೆ.

ಇದನ್ನೂ ಓದಿ: ಜಮ್ಮು ಕಾಶ್ಮೀರ ಭಾರತದ ಕಿರೀಟ, ಭೂಮಿಯ ಸ್ವರ್ಗ; ಝಡ್-ಮೋಡ್ ಸುರಂಗ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ

ಮೆಟಾದಂತಹ ದೊಡ್ಡ ವೇದಿಕೆಯ ಮುಖ್ಯಸ್ಥ ಜುಕರ್‌ಬರ್ಗ್ 2024ರ ಚುನಾವಣೆಯಲ್ಲಿ ಭಾರತ ಸೇರಿದಂತೆ ಹಲವು ದೇಶಗಳ ಸರ್ಕಾರಗಳು ಸೋತಿವೆ ಎಂದು ಹೇಳಿದ್ದರು. ಮೆಟಾದಂತಹ ದೊಡ್ಡ ವೇದಿಕೆಯ ಮುಖ್ಯಸ್ಥರು ಇಂತಹ ತಪ್ಪು ಮಾಹಿತಿಯನ್ನು ಹರಡುವುದು ನಿರಾಶಾದಾಯಕವಾಗಿದೆ ಎಂದು ರೈಲ್ವೆ ಸಚಿವರು ಹೇಳಿದರು. ಮೆಟಾ ತನ್ನ ವಿಶ್ವಾಸಾರ್ಹತೆಯನ್ನು ಉಳಿಸಿಕೊಳ್ಳಬೇಕು, ಸತ್ಯ ಪರಿಶೀಲನೆ ಮಾಡದೆ ಮಾಹಿತಿ ನೀಡಬಾರದು. ಮೆಟಾ ಸತ್ಯ ಸಂಗತಿಯನ್ನು ಎತ್ತಿ ಹಿಡಿಯಬೇಕು ಎಂದು ಅವರು ಹೇಳಿದ್ದಾರೆ.

ಇತ್ತೀಚೆಗೆ ಹೇಳಿಕೆಯೊಂದನ್ನು ನೀಡಿದ್ದ ಮೆಟಾ ಮುಖ್ಯಸ್ಥ ಮಾರ್ಕ್ ಜುಕರ್​ಬರ್ಗ್, 2024ರಲ್ಲಿ ಚುನಾವಣೆ ಎದುರಿಸಿದ ಭಾರತ ಸೇರಿದಂತೆ ಎಲ್ಲ ದೇಶಗಳ ಆಡಳಿತ ಪಕ್ಷಗಳು ಸೋಲನ್ನು ಅನುಭವಿಸಿದವು. ಇದಕ್ಕೆ ಹಣದುಬ್ಬರ ಅಥವಾ ಕೊವಿಡ್ ಸಾಂಕ್ರಾಮಿಕವನ್ನು ಎದುರಿಸಲು ಆರ್ಥಿಕ ನೀತಿಗಳ ಕೊರತೆಯ ಕಾರಣ ಇರಬಹುದು. ಸರ್ಕಾರಗಳು ಕೊವಿಡ್​ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಿದವು ಎಂಬುದರ ಕಾರಣದಿಂದಲೂ ಜನರು ಆಡಳಿತ ಸರ್ಕಾರಗಳನ್ನು ತಿರಸ್ಕರಿಸಿದರು ಎಂದು ಹೇಳಿದ್ದರು.

ಇದನ್ನೂ ಓದಿ: ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್

ಇದಕ್ಕೆ ಪ್ರತಿಕ್ರಿಯಿಸಿರುವ ಸಚಿವ ಅಶ್ವಿನಿ ವೈಷ್ಣವ್, ಕೊವಿಡ್ ಸಾಂಕ್ರಾಮಿಕ ಸಮಯದಲ್ಲಿ ಭಾರತ ಸರ್ಕಾರವು 800 ಮಿಲಿಯನ್ ಜನರಿಗೆ ಉಚಿತ ಪಡಿತರ, 2.2 ಬಿಲಿಯನ್ ಉಚಿತ ಲಸಿಕೆ ಡೋಸ್‌ಗಳು ಮತ್ತು ಅನೇಕ ದೇಶಗಳಿಗೆ ಸಹಾಯವನ್ನು ನೀಡಿದೆ. ಈ ಕ್ರಮಗಳು ಭಾರತವನ್ನು ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ ಸ್ಥಾಪಿಸುವಲ್ಲಿ ಸಹಾಯಕವಾಗಿವೆ. ಪ್ರಧಾನಿ ಮೋದಿಯವರ ನಿರ್ಣಾಯಕ ಮೂರನೇ ಅವಧಿಯ ಗೆಲುವು ಸಾರ್ವಜನಿಕ ನಂಬಿಕೆ ಮತ್ತು ದಕ್ಷ ಆಡಳಿತದ ಪುರಾವೆಯಾಗಿದೆ ಎಂದು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ