ಅನ್ಲಾಕ್ 5.0: ಶಾಲೆಗಳನ್ನು ತೆರೆಯುವುದು ರಾಜ್ಯ ಸರ್ಕಾರಗಳ ವಿವೇಚನೆ
ಕೇಂದ್ರ ಗೃಹ ಸಚಿವಾಲಯ ಅನ್ಲಾಕ್ 5.0ಗೆ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು ಅಕ್ಟೋಬರ್ 15ರಿಂದ ಸಿನಿಮಾ ಹಾಲ್ಗಳನ್ನು ತೆರೆಯಲು ಅನುಮತಿ ನೀಡಿದೆ. ಆದರೆ, ಥಿಯೇಟರ್ಗಳ ಸೀಟಿಂಗ್ ಸಾಮರ್ಥ್ಯದ ಶೇಕಡ 50 ರಷ್ಟು ಮಾತ್ರ ತುಂಬಿಸುವ ಷರತ್ತು ವಿಧಿಸಲಾಗಿದೆ. ಹಾಗೆಯೇ ಶಾಲಾ–ಕಾಲೇಜುಗಳನ್ನು ತೆರೆಯಲು ಅವಕಾಶ ನೀಡಲಾಗಿದೆಯಾದರೂ, ಆಯಾ ರಾಜ್ಯ ಸರ್ಕಾರಗಳು, ಅಲ್ಲಿ ಶಿಕ್ಷಣ ಸಂಸ್ಥೆಗಳು ಪರಿಸ್ಥಿತಿಯನ್ನು ಅವಲೋಕಿಸಿ ನಿರ್ಧಾರ ತೆಗೆದುಕೊಳ್ಳಬೇಕೆಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ. ಅಂದರೆ ಶೈಕ್ಷಣಿಕ ಸಂಸ್ಥೆಗಳನ್ನು ಪುನರಾರಂಭಿಸುವ ನಿರ್ಧಾರ ಆಯಾ ರಾಜ್ಯ ಸರ್ಕಾರ ಮತ್ತು ಕೇಂದ್ರಾಡಳಿತ ಪ್ರದೇಶ […]
ಕೇಂದ್ರ ಗೃಹ ಸಚಿವಾಲಯ ಅನ್ಲಾಕ್ 5.0ಗೆ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು ಅಕ್ಟೋಬರ್ 15ರಿಂದ ಸಿನಿಮಾ ಹಾಲ್ಗಳನ್ನು ತೆರೆಯಲು ಅನುಮತಿ ನೀಡಿದೆ.
ಆದರೆ, ಥಿಯೇಟರ್ಗಳ ಸೀಟಿಂಗ್ ಸಾಮರ್ಥ್ಯದ ಶೇಕಡ 50 ರಷ್ಟು ಮಾತ್ರ ತುಂಬಿಸುವ ಷರತ್ತು ವಿಧಿಸಲಾಗಿದೆ. ಹಾಗೆಯೇ ಶಾಲಾ–ಕಾಲೇಜುಗಳನ್ನು ತೆರೆಯಲು ಅವಕಾಶ ನೀಡಲಾಗಿದೆಯಾದರೂ, ಆಯಾ ರಾಜ್ಯ ಸರ್ಕಾರಗಳು, ಅಲ್ಲಿ ಶಿಕ್ಷಣ ಸಂಸ್ಥೆಗಳು ಪರಿಸ್ಥಿತಿಯನ್ನು ಅವಲೋಕಿಸಿ ನಿರ್ಧಾರ ತೆಗೆದುಕೊಳ್ಳಬೇಕೆಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ. ಅಂದರೆ ಶೈಕ್ಷಣಿಕ ಸಂಸ್ಥೆಗಳನ್ನು ಪುನರಾರಂಭಿಸುವ ನಿರ್ಧಾರ ಆಯಾ ರಾಜ್ಯ ಸರ್ಕಾರ ಮತ್ತು ಕೇಂದ್ರಾಡಳಿತ ಪ್ರದೇಶ ಆಡಳಿತಗಳ ವಿವೇಚನೆಗೆ ಬಿಟ್ಟಿರುವ ವಿಚಾರವೆಂದು ತಿಳಿಸಲಾಗಿದೆ.
ಮನರಂಜನಾ ಪಾರ್ಕ್ ಮತ್ತು ಸ್ವಿಮ್ಮಿಂಗ್ ಪೂಲ್ಗಳನ್ನು ಅಕ್ಟೋಬರ್ 15ರ ನಂತರ ಓಪನ್ ಮಾಡಬಹುದು, ವಾಣಿಜ್ಯ ವಸ್ತು ಪ್ರದರ್ಶನ ಆಯೋಜಿಸುವ ಅವಕಾಶ ಕೂಡ ನೀಡಲಾಗಿದೆ.
ಸಾಮಾಜಿಕ, ಶೈಕ್ಷಣಿಕ, ಕ್ರೀಡಾ, ಧಾರ್ಮಿಕ, ರಾಜಕೀಯ ಸಭೆಗೆ ಸೇರಲು ಈವರೆಗೆ ಇದ್ದ 100 ಜನರ ಮಿತಿಯನ್ನು ಅಕ್ಟೋಬರ್ 15ರ ನಂತರ ಹೆಚ್ಚಿಸುವ ನಿರೀಕ್ಷೆ ಇದೆಯೆಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ.
ಧಾರ್ಮಿಕ, ರಾಜಕೀಯ ಸಭೆ-ಸಮಾರಂಭಗಳು ಒಳಾಂಗಣದಲ್ಲಿ ಆಯೋಜಿದಲ್ಲಿ 200 ಜನ ಸೇರಲು ಅವಕಾಶ ನೀಡುವ ಸಾಧ್ಯತೆಯಿದೆ. ಹೊರಾಂಗಣದಲ್ಲಿ ಸಮಾರಂಭ ನಡೆಸಿದರೆ ಮೈದಾನದ ವಿಸ್ತೀರ್ಣಕ್ಕೆ ತಕ್ಕಂತೆ ಜನ ಸೇರಲು ಅವಕಾಶ ನೀಡಬಹುದಾದರೂ ದೈಹಿಕ ಅಂತರ ಕಡ್ಡಾಯವಾಗಿ ಕಾಯ್ದುಕೊಳ್ಳಲೇಬೇಕಾಗುತ್ತದೆ.