ಮಧ್ಯಪ್ರದೇಶ: ಪೊಲೀಸರ ರೈಫಲ್​​ ಕದ್ದು ಆಸ್ಪತ್ರೆಯಿಂದ ಪರಾರಿಯಾದ ಕೈದಿ

ಕೈದಿಯೊಬ್ಬ ಪೊಲೀಸರ ರೈಫಲ್​ ಕದ್ದು ಆಸ್ಪತ್ರೆಯಿಂದ ಪರಾರಿಯಾಗಿರುವ ಘಟನೆ ಮಧ್ಯಪ್ರದೇಶದ ಛತ್ತರ್​ಪುರದಲ್ಲಿ ನಡೆದಿದೆ. ಡ್ಯೂಟಿಯಲ್ಲಿದ್ದ ಪೊಲೀಸ್ ಅಧಿಕಾರಿ ನಿದ್ದೆ ಮಾಡುತ್ತಿದ್ದ ಕಾರಣ ಕೈದಿ ಸುಲಭವಾಗಿ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಆತನನ್ನು ಹಿಡಿದುಕೊಟ್ಟವರಿಗೆ 10 ಸಾವಿರ ರೂ. ಬಹುಮಾನ ಘೋಷಿಸಲಾಗಿದೆ.ಪೊಲೀಸ್ ಅಧಿಕಾರಿಯ ಜೇಬಿನಿಂದ ಕೀ ತೆಗೆದುಕೊಂಡ ಕೈದಿ, ಗೇಟ್ ತೆರೆಯುವ ಮೊದಲು ತನ್ನ ಮೊಬೈಲ್ ಫೋನ್‌ನಲ್ಲಿ ಮಾತನಾಡಿ, ನಂತರ ವಾರ್ಡ್‌ಗೆ ಹೊರಗಿನಿಂದ ಲಾಕ್ ಮಾಡಿ, ಅಧಿಕಾರಿಯ ರೈಫಲ್ ಅನ್ನು ಸಹ ತೆಗೆದುಕೊಂಡು ಸ್ಥಳದಿಂದ ಪರಾರಿಯಾಗಿದ್ದಾನೆ.

ಮಧ್ಯಪ್ರದೇಶ: ಪೊಲೀಸರ ರೈಫಲ್​​ ಕದ್ದು ಆಸ್ಪತ್ರೆಯಿಂದ ಪರಾರಿಯಾದ ಕೈದಿ
ಕೈದಿ

Updated on: Sep 11, 2025 | 12:57 PM

ಛತ್ತರ್ಪುರ, ಸೆಪ್ಟೆಂಬರ್ 11: ಕೈದಿ(Prisoner) ಯೊಬ್ಬ ಪೊಲೀಸರ ರೈಫಲ್ಕದ್ದು ಆಸ್ಪತ್ರೆಯಿಂದ ಪರಾರಿಯಾಗಿರುವ ಘಟನೆ ಮಧ್ಯಪ್ರದೇಶದ ಛತ್ತರ್ಪುರದಲ್ಲಿ ನಡೆದಿದೆ.  ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿ ನಿದ್ದೆ ಮಾಡುತ್ತಿದ್ದ ಕಾರಣ ಕೈದಿ ಸುಲಭವಾಗಿ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಆತನನ್ನು ಹಿಡಿದುಕೊಟ್ಟವರಿಗೆ 10 ಸಾವಿರ ರೂ. ಬಹುಮಾನ ಘೋಷಿಸಲಾಗಿದೆ.

ಪೊಲೀಸ್ ಅಧಿಕಾರಿಯ ಜೇಬಿನಿಂದ ಕೀ ತೆಗೆದುಕೊಂಡ ಕೈದಿ, ಗೇಟ್ ತೆರೆಯುವ ಮೊದಲು ತನ್ನ ಮೊಬೈಲ್ ಫೋನ್‌ನಲ್ಲಿ ಮಾತನಾಡಿ, ನಂತರ ವಾರ್ಡ್‌ಗೆ ಹೊರಗಿನಿಂದ ಲಾಕ್ ಮಾಡಿ, ಅಧಿಕಾರಿಯ ರೈಫಲ್ ಅನ್ನು ಸಹ ತೆಗೆದುಕೊಂಡು ಸ್ಥಳದಿಂದ ಪರಾರಿಯಾಗಿದ್ದಾನೆ.

ಸುದ್ದಿ ತಿಳಿದ ತಕ್ಷಣ, ಎಸ್ಪಿ ಆಗಮ್ ಜೈನ್, ನಗರ ಕೊತ್ವಾಲಿ ಠಾಣೆಯ ಉಸ್ತುವಾರಿ ಅರವಿಂದ್ ಡಾಂಗಿ ಮತ್ತು ಇತರ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ತಲುಪಿ ಹುಡುಕಾಟ ಆರಂಭಿಸಿದರು.ಪೊಲೀಸರು ಆಸ್ಪತ್ರೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಸಹ ಪರಿಶೀಲಿಸುತ್ತಿದ್ದಾರೆ.

ಮತ್ತಷ್ಟು ಓದಿ:  ಜಾರ್ಖಂಡ್: ಇಬ್ಬರು ಮಹಿಳೆಯರನ್ನು ಕೊಂದಿದ್ದ ವ್ಯಕ್ತಿ, ಪೊಲೀಸ್​ ಕಸ್ಟಡಿಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ

ತಪ್ಪಿಸಿಕೊಂಡ ಕೈದಿಯನ್ನು ರವೀಂದ್ರ ಸಿಂಗ್ ಪರಿಹಾರ್ ಎಂದು ಗುರುತಿಸಲಾಗಿದ್ದು, ಈತ ಈಗಾಗಲೇ ಪೊಲೀಸರ ಮೇಲೆ ಗುಂಡು ಹಾರಿಸುವುದು ಸೇರಿದಂತೆ ಹಲವಾರು ಅಪರಾಧಗಳಲ್ಲಿ ಭಾಗಿಯಾಗಿದ್ದ. ನಿರ್ಲಕ್ಷ್ಯದಿಂದಾಗಿ, ಕರ್ತವ್ಯದಲ್ಲಿದ್ದ ನಾಲ್ವರು ಕಾನ್‌ಸ್ಟೆಬಲ್‌ಗಳನ್ನು ಅಮಾನತುಗೊಳಿಸಲಾಗಿದೆ.

ಮಾಹಿತಿಯ ಪ್ರಕಾರ, ರಾಕೇಶ್ ಅಹಿರ್ವಾರ್, ಹರಿಶ್ಚಂದ್ರ ಅಹಿರ್ವಾರ್, ಪಂಕಜ್ ತಿವಾರಿ ಮತ್ತು ಶಿವಂ ಶರ್ಮಾ ಅವರನ್ನು ಅಮಾನತುಗೊಳಿಸಲಾಗಿದೆ. ಪರಾರಿಯಾಗಿರುವ ಕೈದಿಯನ್ನು ಸೆರೆಹಿಡಿಯಲು ಎಸ್ಪಿ ಆಗಮ್ ಜೈನ್ 10,000 ರೂ. ಬಹುಮಾನವನ್ನು ಘೋಷಿಸಿದ್ದಾರೆ. ಕೆಲವು ದಿನಗಳ ಹಿಂದೆ, ಆತ ಡೇರಿ ರಸ್ತೆಯ ಬಳಿಯ ಐದು ಪೊಲೀಸ್ ಠಾಣೆಗಳ ಪೊಲೀಸ್ ಅಧಿಕಾರಿಗಳ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದ.

ಆ ಸಮಯದಲ್ಲಿ, ಅವನನ್ನು ಹಿಡಿದುಕೊಟ್ಟವರಿಗೆ 30,000 ರೂ. ಬಹುಮಾನ ಘೋಷಿಸಲಾಗಿತ್ತು. ಛತ್ತರ್‌ಪುರ ಪೊಲೀಸರು ಈ ವಾಂಟೆಡ್ ಕ್ರಿಮಿನಲ್‌ನನ್ನು ಒಂದು ಸಣ್ಣ ಎನ್‌ಕೌಂಟರ್ ನಂತರ ಬಂಧಿಸಿ ಜೈಲಿನಲ್ಲಿಟ್ಟಿದ್ದರು. ತಡರಾತ್ರಿ ಪೊಲೀಸರನ್ನು ದಾರಿ ತಪ್ಪಿಸಿ ಪರಾರಿಯಾಗುವಲ್ಲಿ ಯಶಸ್ವಿಯಾದಾಗ, ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಯ ಕೈದಿ ವಾರ್ಡ್‌ಗೆ ದಾಖಲಿಸಲಾಗಿತ್ತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:56 pm, Thu, 11 September 25