ಜಾರ್ಖಂಡ್: ಇಬ್ಬರು ಮಹಿಳೆಯರನ್ನು ಕೊಂದಿದ್ದ ವ್ಯಕ್ತಿ, ಪೊಲೀಸ್ ಕಸ್ಟಡಿಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ
ಇಬ್ಬರು ಮಹಿಳೆಯರನ್ನು ಕೊಂದು ಜೈಲು ಪಾಲಾಗಿದ್ದ ವ್ಯಕ್ತಿಯೊಬ್ಬ ಪೊಲೀಸ್ ಕಸ್ಟಡಿಯಲ್ಲಿರುವಾಗಲೇ ಆತ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಾರ್ಖಂಡ್ನಲ್ಲಿ ನಡೆದಿದೆ. ಈ ವಾರದ ಆರಂಭದಲ್ಲಿ ಗಿರಿದಿಹ್ ಜಿಲ್ಲೆಯಲ್ಲಿ ಇಬ್ಬರು ಮಹಿಳೆಯರನ್ನು ಕ್ರೂರವಾಗಿ ಹತ್ಯೆ ಮಾಡಲಾಗಿತ್ತು. ಅಪರಾಧ ಬೆಳಕಿಗೆ ಬಂದ 24 ಗಂಟೆಗಳೊಳಗಾಗಿ ಆರೋಪಿಯನ್ನು ಬಂಧಿಸಲಾಗಿತ್ತು, ಇದಾಗ ಒಂದು ದಿನದೊಳಗೆ ಆತ ಪೊಲೀಸ್ ಕಸ್ಟಡಿಯಲ್ಲಿ ಶವವಾಗಿ ಪತ್ತೆಯಾಗಿದ್ದು, ಈ ಬೆಳವಣಿಗೆ ಅನುಮಾನ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ.

ಜಾರ್ಖಂಡ್, ಸೆಪ್ಟೆಂಬರ್ 11: ಇಬ್ಬರು ಮಹಿಳೆಯರನ್ನು ಕೊಂದು ಜೈಲು(Jail) ಪಾಲಾಗಿದ್ದ ವ್ಯಕ್ತಿಯೊಬ್ಬ ಪೊಲೀಸ್ ಕಸ್ಟಡಿಯಲ್ಲಿರುವಾಗಲೇ ಆತ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಾರ್ಖಂಡ್ನಲ್ಲಿ ನಡೆದಿದೆ. ಈ ವಾರದ ಆರಂಭದಲ್ಲಿ ಗಿರಿದಿಹ್ ಜಿಲ್ಲೆಯಲ್ಲಿ ಇಬ್ಬರು ಮಹಿಳೆಯರನ್ನು ಕ್ರೂರವಾಗಿ ಹತ್ಯೆ ಮಾಡಲಾಗಿತ್ತು. ಅಪರಾಧ ಬೆಳಕಿಗೆ ಬಂದ 24 ಗಂಟೆಗಳೊಳಗಾಗಿ ಆರೋಪಿಯನ್ನು ಬಂಧಿಸಲಾಗಿತ್ತು, ಇದಾಗ ಒಂದು ದಿನದೊಳಗೆ ಆತ ಪೊಲೀಸ್ ಕಸ್ಟಡಿಯಲ್ಲಿ ಶವವಾಗಿ ಪತ್ತೆಯಾಗಿದ್ದು, ಈ ಬೆಳವಣಿಗೆ ಅನುಮಾನ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ.
ಸಂತೋಷ್ ರವಿದಾಸ್ ಅವರ ಪತ್ನಿ ರಿಂಕು ದೇವಿ (32) ಮತ್ತು ಸೋನಿ ದೇವಿ (25) ನಾಲ್ಕು ದಿನಗಳ ಹಿಂದೆ ಸೊಪ್ಪು ತರಲು ಮನೆಯಿಂದ ಹೊರಗೆ ಹೋದಾಗ ನಾಪತ್ತೆಯಾಗಿದ್ದರು. ನಂತರ ಅವರ ಶವಗಳನ್ನು ಅವರ ಗ್ರಾಮದಿಂದ ಸುಮಾರು ನಾಲ್ಕು ಕಿಲೋಮೀಟರ್ ದೂರದಲ್ಲಿರುವ ಗೋಲ್ಗೊ ಬೆಟ್ಟಗಳ ಬಳಿಯ ಕಾಡಿನಿಂದ ವಶಪಡಿಸಿಕೊಳ್ಳಲಾಯಿತು.
ಪೊಲೀಸರು ಶ್ರೀಕಾಂತ್ ಚೌಧರಿಯನ್ನು ಬಂಧಿಸಿದ್ದರು, ಆತ ಇಬ್ಬರು ಮಹಿಳೆಯರನ್ನು ಕತ್ತು ಹಿಸುಕಿ ಕೊಂದಿದ್ದಾಗಿ ಒಪ್ಪಿಕೊಂಡಿದ್ದಾನೆ. ತನಿಖಾಧಿಕಾರಿಗಳ ಪ್ರಕಾರ, ಶ್ರೀಕಾಂತ್ ಹಲವಾರು ವರ್ಷಗಳಿಂದ ಸೋನಿ ದೇವಿಯೊಂದಿಗೆ ಸಂಬಂಧ ಹೊಂದಿದ್ದ ಮತ್ತು ಆಗಾಗ ಕಾಡಿನಲ್ಲಿ ಅವಳನ್ನು ರಹಸ್ಯವಾಗಿ ಭೇಟಿಯಾಗುತ್ತಿದ್ದ. ಸೋಮವಾರ, ಆಕೆ ಬೇರೆ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದಾಳೆಂದು ಶಂಕಿಸಿ, ಅವಳನ್ನು ಕತ್ತು ಹಿಸುಕಿ ಕೊಂದಿದ್ದಾನೆ ಎಂದು ಆರೋಪಿಸಲಾಗಿದೆ. ನಂತರ ಸಾಕ್ಷಿಯನ್ನು ನಾಶ ಮಾಡಲು ಅವಳೊಂದಿಗೆ ಬಂದಿದ್ದ ರಿಂಕು ದೇವಿಯನ್ನು ಕೊಂದು, ಎರಡೂ ಶವಗಳನ್ನು ಕಾಡಿನಲ್ಲಿ ಹೂತುಹಾಕಿದ್ದ.
ಮತ್ತಷ್ಟು ಓದಿ: ಬಾಗಲಕೋಟೆ: ಕುಡುಕ ಮಗನ ಕಾಟ ತಾಳಲಾರದೆ ಬೆಂಕಿ ಹಚ್ಚಿ ಕೊಲೆ; ತಂದೆ, ತಾಯಿ ಸೇರಿ ಮೂವರ ಬಂಧನ
ಮೊಬೈಲ್ ಟ್ರ್ಯಾಕಿಂಗ್ ಆಧಾರದ ಮೇಲೆ, ಪೊಲೀಸರು ಶ್ರೀಕಾಂತ್‌ನನ್ನು ಬಂಧಿಸಲಾಯಿತು. ಆತ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಲ್ಲದೆ, ಪೊಲೀಸರನ್ನು ಸಮಾಧಿ ಸ್ಥಳಕ್ಕೆ ಕರೆದೊಯ್ದಿದ್ದ, ಅಲ್ಲಿಂದ ಶವಗಳನ್ನು ಹೊರತೆಗೆಯಲಾಯಿತು. ಈ ಜೋಡಿ ಕೊಲೆ ಗ್ರಾಮಸ್ಥರಲ್ಲಿ ಆಕ್ರೋಶವನ್ನು ಉಂಟುಮಾಡಿತು, ಅವರು ಗುಂಪು ನ್ಯಾಯಕ್ಕಾಗಿ ಪೊಲೀಸ್ ಠಾಣೆಯಲ್ಲಿ ಜಮಾಯಿಸಿದರು.
ಆದರೆ ಕೋಪ ಕಡಿಮೆಯಾಗುವ ಮೊದಲೇ ಪ್ರಕರಣ ನಾಟಕೀಯ ತಿರುವು ಪಡೆದುಕೊಂಡಿತು, ಶ್ರೀಕಾಂತ್ ಮಂಗಳವಾರ ಗವಾನ್ ಪೊಲೀಸ್ ಠಾಣೆಯ ಕಾನ್ಫರೆನ್ಸ್ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಪೊಲೀಸರು ಇದು ಆತ್ಮಹತ್ಯೆ ಎಂದು ಹೇಳಿಕೊಂಡರೂ, ಸ್ಥಳೀಯರು ಅವರ ಗಂಟಲಿನಲ್ಲಿ ಗಾಯದ ಗುರುತುಗಳಿವೆ ಎಂದು ಆರೋಪಿಸಿದ್ದಾರೆ.
ಆತನನ್ನು ಗವಾನ್ ಸಮುದಾಯ ಆರೋಗ್ಯ ಕೇಂದ್ರಕ್ಕೆ ಮತ್ತು ನಂತರ ಗಿರಿದಿಹ್ ಸದರ್ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಚಿಕಿತ್ಸೆಯ ಸಮಯದಲ್ಲಿ ಮೃತಪಟ್ಟಿದ್ದಾನೆ. ಈ ಘಟನೆಯು ಪೊಲೀಸರ ನಡವಳಿಕೆಯ ಬಗ್ಗೆ, ವಿಶೇಷವಾಗಿ ಆರೋಪಿಯನ್ನು ಲಾಕಪ್ ಬದಲಿಗೆ ಕಾನ್ಫರೆನ್ಸ್ ಕೊಠಡಿಯಲ್ಲಿ ಏಕೆ ಇರಿಸಲಾಗಿತ್ತು ಎಂಬುದರ ಬಗ್ಗೆ ತೀಕ್ಷ್ಣವಾದ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




