ಅತ್ಯಾಚಾರ ಪ್ರಕರಣ, ವ್ಯಕ್ತಿ 51 ದಿನ ಜೈಲು ಶಿಕ್ಷೆ ಅನುಭವಿಸಿದ ಮೇಲೆ ದೂರು ಕೊಟ್ಟಿದ್ದೇ ನೆನಪಿಲ್ಲ ಎಂದ ಮಹಿಳೆ
ಐದು ವರ್ಷಗಳ ಹಿಂದಿನ ಅತ್ಯಾಚಾರ ಪ್ರಕರಣವು ಅಂತೂ ಈ ವರ್ಷ ಇತ್ಯರ್ಥಗೊಂಡಿದೆ. ತನ್ನ ಮೇಲೆ ಅತ್ಯಾಚಾರವಾಗಿದೆ ಎಂದು ಅಂದು ಗೋಗರೆಯುತ್ತಾ ಪೊಲೀಸ್ ಠಾಣೆಗೆ ಬಂದಿದ್ದ ಮಹಿಳೆ ಇಂದು ನಾನು ದೂರು ಕೊಟ್ಟಿದ್ದೀನಾ ನೆನಪೇ ಇಲ್ಲ ಎಂದಿದ್ದಾಳೆ. ಈ ಹೇಳಿಕೆಯು ಪೊಲೀಸರನ್ನೇ ಬೆಚ್ಚಿಬೀಳಿಸಿದೆ. ಐದು ವರ್ಷಗಳ ಹಿಂದೆ 2020ರಲ್ಲಿ ಪಶ್ಚಿಮ ಬಂಗಾಳದಲ್ಲಿ ನಡೆದಿದ್ದ ಘಟನೆ. ಕೋಲ್ಕತ್ತಾದ ವ್ಯಕ್ತಿಯೊಬ್ಬರ ಮೇಲೆ ಮಹಿಳೆಯೊಬ್ಬರು ಅತ್ಯಾಚಾರ ಆರೋಪ ಹೊರಿಸಿದ್ದರು. ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು.

ಕೋಲ್ಕತ್ತಾ, ಸೆಪ್ಟೆಂಬರ್ 05: ಐದು ವರ್ಷಗಳ ಹಿಂದಿನ ಅತ್ಯಾಚಾರ(Rape) ಪ್ರಕರಣವು ಅಂತೂ ಈ ವರ್ಷ ಇತ್ಯರ್ಥಗೊಂಡಿದೆ. ತನ್ನ ಮೇಲೆ ಅತ್ಯಾಚಾರವಾಗಿದೆ ಎಂದು ಅಂದು ಗೋಗರೆಯುತ್ತಾ ಪೊಲೀಸ್ ಠಾಣೆಗೆ ಬಂದಿದ್ದ ಮಹಿಳೆ ಇಂದು ನಾನು ದೂರು ಕೊಟ್ಟಿದ್ದೀನಾ ನೆನಪೇ ಇಲ್ಲ ಎಂದಿದ್ದಾಳೆ. ಈ ಹೇಳಿಕೆಯು ಪೊಲೀಸರನ್ನೇ ಬೆಚ್ಚಿಬೀಳಿಸಿದೆ. ಐದು ವರ್ಷಗಳ ಹಿಂದೆ 2020ರಲ್ಲಿ ಪಶ್ಚಿಮ ಬಂಗಾಳದಲ್ಲಿ ನಡೆದಿದ್ದ ಘಟನೆ. ಕೋಲ್ಕತ್ತಾದ ವ್ಯಕ್ತಿಯೊಬ್ಬರ ಮೇಲೆ ಮಹಿಳೆಯೊಬ್ಬರು ಅತ್ಯಾಚಾರ ಆರೋಪ ಹೊರಿಸಿದ್ದರು. ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು.
ಆ ವ್ಯಕ್ತಿ 51 ದಿನಗಳ ಕಾಲ ಜೈಲು ಶಿಕ್ಷೆ ಕೂಡ ಅನುಭವಿಸಿದ್ದರು. ಆದರೆ ಈಗ ತಪ್ಪು ತಿಳುವಳಿಕೆಯಿಂದಾಗಿ ತಾನು ಎಫ್‌ಐಆರ್ ದಾಖಲಿಸಿರುವುದಾಗಿ ಮಹಿಳೆ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಇದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಆರೋಪಿ ಸುಮ್ಮನೆ 51 ದಿನಗಳನ್ನು ಜೈಲಿನಲ್ಲಿ ಕಳೆಯಬೇಕಾಯಿತು. ಪ್ರಾಸಿಕ್ಯೂಷನ್ ಆರೋಪಗಳನ್ನು ಸಾಬೀತುಪಡಿಸಲು ವಿಫಲವಾದ ಕಾರಣ ನ್ಯಾಯಾಲಯವು ಆರೋಪಿಯನ್ನು ಖುಲಾಸೆಗೊಳಿಸಿತ್ತು.
ಐದು ವರ್ಷಗಳ ಹಿಂದೆ ಪಶ್ಚಿಮ ಬಂಗಾಳದ ವ್ಯಕ್ತಿಯೊಬ್ಬನ ಮೇಲೆ ಅತ್ಯಾಚಾರ ಮತ್ತು ವಂಚನೆ ಆರೋಪ ಹೊರಿಸಲಾಗಿತ್ತು. ಪ್ರಕರಣ ಐದು ವರ್ಷಗಳ ಕಾಲ ನಡೆಯಿತು ಮತ್ತು ಕಳೆದ ವಾರ ಆರೋಪಿಯನ್ನು ಖುಲಾಸೆಗೊಳಿಸಲಾಯಿತು. ಪ್ರಕರಣ ದಾಖಲಾದಾಗ, ಆತ 51 ದಿನಗಳನ್ನು ಜೈಲಿನಲ್ಲಿ ಕಳೆಯಬೇಕಾಗಿತ್ತು. ತಪ್ಪು ತಿಳುವಳಿಕೆಯಿಂದಾಗಿ ತಾನು ಎಫ್‌ಐಆರ್ ದಾಖಲಿಸಿದ್ದೇನೆ ಎಂದು ಪ್ರಕರಣ ದಾಖಲಿಸಿದ ಮಹಿಳೆ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಮತ್ತಷ್ಟು ಓದಿ: ಆರೋಪಿ ಮನೆಗೆ ಅತ್ಯಾಚಾರ ಸಂತ್ರಸ್ತೆಯ ಕಳುಹಿಸಿದ ಅಧಿಕಾರಿಗಳು, ಮತ್ತೆ ಆಕೆಯ ಮೇಲೆ ಅತ್ಯಾಚಾರ
ಪ್ರಕರಣವು 2020 ರ ನವೆಂಬರ್ 24 ರಂದು ನಡೆದಿದೆ. ಬಾರ್ಟೋಲಾ ಪೊಲೀಸ್ ಠಾಣೆಯಲ್ಲಿ ಆ ವ್ಯಕ್ತಿಯ ವಿರುದ್ಧ ಮಹಿಳೆ ಎಫ್‌ಐಆರ್ ದಾಖಲಿಸಿದ್ದಾರೆ. ಅವರು ನ್ಯಾಯಾಲಯದ ಮುಂದೆಯೂ ಸಾಕ್ಷ್ಯ ಹೇಳಿದ್ದಾರೆ. ಮಹಿಳೆ ತನ್ನ ದೂರಿನಲ್ಲಿ, ಆರೋಪಿಯನ್ನು ಜನವರಿ 2017 ರಲ್ಲಿ ಭೇಟಿಯಾಗಿದ್ದಾಗಿ ಆರೋಪಿ ಹೇಳಿದ್ದಾಳೆ. ಆತ ತನಗೆ ಪ್ರಪೋಸ್ ಮಾಡಿ ಮದುವೆಯಾಗುವುದಾಗಿ ಭರವಸೆ ನೀಡಿದ್ದ.
ನಂತರ ಇಬ್ಬರೂ ಸಂಬಂಧವಿತ್ತು. ಆ ವ್ಯಕ್ತಿ ನವೆಂಬರ್ 23, 2020 ರಂದು ತನ್ನನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದ ಎಂದು ಮಹಿಳೆ ಆರೋಪಿಸಿದ್ದಾರೆ. ಆಕೆಯನ್ನು ಹೋಟೆಲ್‌ಗೆ ಕರೆದೊಯ್ದು ರಾತ್ರಿ ತನ್ನೊಂದಿಗೆ ಕಳೆಸಿದ್ದ. ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದ, ಆದರೆ ಮರುದಿನ ಬೆಳಿಗ್ಗೆ, ತಾನು ಅವಳನ್ನು ಮದುವೆಯಾಗಲು ಸಾಧ್ಯವಿಲ್ಲ ಎಂದು ಹೇಳಿ ಓಡಿಹೋಗಿದ್ದ ಎಂದ ಮರುದಿನವೇ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಳು.
ವ್ಯಕ್ತಿ 51 ದಿನಗಳ ಕಾಲ ಜೈಲಿನಲ್ಲಿದ್ದರು
ವ್ಯಕ್ತಿಯನ್ನು ಪೊಲೀಸರು ನವೆಂಬರ್ 25, 2020 ರಂದು ಬಂಧಿಸಿದ್ದರು. ಅವರು ಜೈಲಿನಲ್ಲಿಯೇ ಇದ್ದರು ಮತ್ತು 51 ದಿನಗಳ ನಂತರ ಜನವರಿ 14, 2021 ರಂದು ಜಾಮೀನು ಪಡೆದರು. ಮಾರ್ಚ್ 2021 ರಲ್ಲಿ, ಪೊಲೀಸರು ಆ ವ್ಯಕ್ತಿಯ ವಿರುದ್ಧ ಅತ್ಯಾಚಾರ ಮತ್ತು ವಂಚನೆಗಾಗಿ ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸಿದರು. ಪ್ರಕರಣದ ವಿಚಾರಣೆ ಮಾರ್ಚ್ 2025 ರಲ್ಲಿ ಪ್ರಾರಂಭವಾಯಿತು. ದೂರುದಾರ ಮಹಿಳೆ ನ್ಯಾಯಾಲಯದಲ್ಲಿ ಮೊದಲು ಸಾಕ್ಷ್ಯ ಹೇಳಿದ್ದರು.
ನ್ಯಾಯಾಲಯದಲ್ಲಿ ಮಹಿಳೆ ಹೇಳಿದ್ದೇನು?
ಆಕೆ ಸುಮಾರು 4 ರಿಂದ 5 ವರ್ಷಗಳ ಹಿಂದೆ ಆ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದಳು. ಅವರ ನಡುವೆ ತಪ್ಪು ತಿಳುವಳಿಕೆ ಇತ್ತು, ಇದರಿಂದಾಗಿ ಅವರು ಆತನ ವಿರುದ್ಧ ದೂರು ದಾಖಲಿಸಿದ್ದರು. ದೂರಿನ ಬಗ್ಗೆ ಆಕೆಗೆ ಏನೂ ನೆನಪಿಲ್ಲ. ದೂರನ್ನು ತನ್ನ ಸ್ನೇಹಿತೆ ಬರೆದಿದ್ದಾಳೆ ಎಂದು ಮಹಿಳೆ ಹೇಳಿದ್ದಾರೆ. ಅದರಲ್ಲಿ ಏನು ಬರೆಯಲಾಗಿದೆ ಎಂದು ತನಗೆ ತಿಳಿದಿಲ್ಲ ಎಂದು ಹೇಳಿದ್ದಾಳೆ.
ಮಹಿಳೆ ಪೊಲೀಸರಿಗೆ ಲಿಖಿತ ದೂರು ನೀಡಿದ್ದಾರೆ ಎಂದು ಪೊಲೀಸರು ಹೇಳಿಕೊಂಡಿದ್ದಾರೆ. ಸಿಆರ್‌ಪಿಸಿ ಸೆಕ್ಷನ್ 164 ರ ಅಡಿಯಲ್ಲಿ ಮ್ಯಾಜಿಸ್ಟ್ರೇಟ್ ಮುಂದೆ ಆಕೆಯ ಹೇಳಿಕೆಯನ್ನು ದಾಖಲಿಸಿದ್ದಾರೆ. ಆರೋಪಿಯನ್ನು ಸಹ ಗುರುತಿಸಲಾಗಿತ್ತು. ಆ ವ್ಯಕ್ತಿ ಮಹಿಳೆಯೊಂದಿಗೆ ರಾತ್ರಿ ಕಳೆದಿದ್ದ ಹೋಟೆಲ್‌ನ ವಿವರವೂ ಇತ್ತು.
ನ್ಯಾ. ಬ್ಯಾನರ್ಜಿ ತಮ್ಮ ಆರು ಪುಟಗಳ ಆದೇಶದಲ್ಲಿ ಆರೋಪಿಯ ವಿರುದ್ಧದ ಏಕೈಕ ಆರೋಪವೆಂದರೆ ಮಹಿಳೆಯ ಸಾಕ್ಷ್ಯ, ಅದರಲ್ಲಿ ಆತ ಆಕೆಯೊಂದಿಗೆ ದೈಹಿಕ ಸಂಬಂಧ ಹೊಂದಿದ್ದನೆಂದು ತೋರುತ್ತದೆ. ಇಬ್ಬರು ವಯಸ್ಕರು ಒಪ್ಪಿಗೆ ಮೂಲಕವೇ ಲೈಂಗಿಕ ಸಂಬಂಧ ಹೊಂದಿರುವಂತೆ ಮೇಲ್ನೋಟಕ್ಕೆ ಕಾಣುತ್ತದೆ, ಹಾಗಾಗಿ ಇದನ್ನು ಅತ್ಯಾಚಾರವೆನ್ನಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




