ಸ್ಥಳೀಯ ಆಡಳಿತಗಳು ಆದ್ಯವಾಗಿ ಇಂತಹವರ ನೆರವಿಗೆ ಬರಬೇಕು…
ಮಹಾರಾಷ್ಟ್ರ: ವಲಸೆ ಕಾರ್ಮಿಕರು ಸೈಕಲ್ ಉರುಳಿಸುತ್ತಾ ಬದುಕಿನ ಜಂಜಾಟವನ್ನು ಹೊತ್ತು ಸಾಗಿದ್ದಾರೆ. ನಾಗ್ಪುರದಿಂದ ಸತ್ನಾ ಜಿಲ್ಲೆಯಲ್ಲಿರುವ ತಮ್ಮ ಹಳ್ಳಿಗಳತ್ತ ನಡೆದು ಹೋಗುತ್ತಿದ್ದಾರೆ. ಒಬ್ಬ ಮಹಾತಾಯಿಯಂತೂ ತನ್ನ 1 ವರ್ಷದ ಮಗುವನ್ನು ಜೋಪಾನವಾಗಿ ಎದೆಗವಚಿಕೊಳ್ಳುತ್ತಾ, ಐದು ದಿನಗಳಿಂದ ನಡೆದು ನಡೆದೇ ಸಾಗುತ್ತಿದ್ದಾಳೆ. ಇನ್ನೂ 6 ದಿನ ಹೀಗೇ ನಡೆದರೆ ಮಧ್ಯಪ್ರದೇಶದಲ್ಲಿರುವ ನನ್ನ ಊರು ಸಿಕ್ಕುತ್ತದೆ ಎಂದು ದಯನೀಯವಾಗಿ ಹೇಳುವಾಗ ಎಂಥವನಿಗೇ ಆದರೂ ಕರುಳು ಚುರಕ್ ಅನ್ನದೇ ಇರದು. ಪತ್ನಿ-ಪುತ್ರನ ಬವಣೆಯನ್ನು ಕಣ್ಣಂಚಿನಲ್ಲೇ ನೋಡುತ್ತಾ, ಮನೆ ಸಾಮಾನುಗಳನ್ನು ಸೈಕಲ್ಗೆ ನೇತುಹಾಕಿ […]
ಮಹಾರಾಷ್ಟ್ರ: ವಲಸೆ ಕಾರ್ಮಿಕರು ಸೈಕಲ್ ಉರುಳಿಸುತ್ತಾ ಬದುಕಿನ ಜಂಜಾಟವನ್ನು ಹೊತ್ತು ಸಾಗಿದ್ದಾರೆ. ನಾಗ್ಪುರದಿಂದ ಸತ್ನಾ ಜಿಲ್ಲೆಯಲ್ಲಿರುವ ತಮ್ಮ ಹಳ್ಳಿಗಳತ್ತ ನಡೆದು ಹೋಗುತ್ತಿದ್ದಾರೆ.
ಒಬ್ಬ ಮಹಾತಾಯಿಯಂತೂ ತನ್ನ 1 ವರ್ಷದ ಮಗುವನ್ನು ಜೋಪಾನವಾಗಿ ಎದೆಗವಚಿಕೊಳ್ಳುತ್ತಾ, ಐದು ದಿನಗಳಿಂದ ನಡೆದು ನಡೆದೇ ಸಾಗುತ್ತಿದ್ದಾಳೆ. ಇನ್ನೂ 6 ದಿನ ಹೀಗೇ ನಡೆದರೆ ಮಧ್ಯಪ್ರದೇಶದಲ್ಲಿರುವ ನನ್ನ ಊರು ಸಿಕ್ಕುತ್ತದೆ ಎಂದು ದಯನೀಯವಾಗಿ ಹೇಳುವಾಗ ಎಂಥವನಿಗೇ ಆದರೂ ಕರುಳು ಚುರಕ್ ಅನ್ನದೇ ಇರದು.
ಪತ್ನಿ-ಪುತ್ರನ ಬವಣೆಯನ್ನು ಕಣ್ಣಂಚಿನಲ್ಲೇ ನೋಡುತ್ತಾ, ಮನೆ ಸಾಮಾನುಗಳನ್ನು ಸೈಕಲ್ಗೆ ನೇತುಹಾಕಿ ಸಾಥ್ ನೀಡುತ್ತಿದ್ದಾನೆ ಪತಿ. ಜನಜೀವನವನ್ನು ಎಲ್ಲಿಗೆ ತಂದಿದೆ ನೋಡಿ ಮನೆಮಾರಿ ಹಾಳು ಕೊರೊನಾ ವೈರಸ್!