Kerala Summer Bumper Lottery: ಅಸ್ಸಾಂನ ವಲಸೆ ಕಾರ್ಮಿಕನಿಗೆ ಹೊಡೀತು ಕೇರಳದ ಸಮ್ಮರ್ ಬಂಪರ್ ಲಾಟರಿ, ಮೊತ್ತವೆಷ್ಟು?

ಮಲಯಾಳಂ ನಟರೊಬ್ಬರ ಮನೆಯಲ್ಲಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದ ಅಸ್ಸಾಂ ಮೂಲದ ವಲಸೆ ಕಾರ್ಮಿಕರೊಬ್ಬರಿಗೆ ಕೇರಳದ ಸಮ್ಮರ್ ಬಂಪರ್ ಲಾಟರಿ ಹೊಡೆದಿದೆ.

Kerala Summer Bumper Lottery: ಅಸ್ಸಾಂನ ವಲಸೆ ಕಾರ್ಮಿಕನಿಗೆ ಹೊಡೀತು ಕೇರಳದ ಸಮ್ಮರ್ ಬಂಪರ್ ಲಾಟರಿ, ಮೊತ್ತವೆಷ್ಟು?
ಲಾಟರಿ
Image Credit source: Reader's digest

Updated on: Mar 21, 2023 | 2:34 PM

ಮಲಯಾಳಂ ನಟರೊಬ್ಬರ ಮನೆಯಲ್ಲಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದ ಅಸ್ಸಾಂ ಮೂಲದ ವಲಸೆ ಕಾರ್ಮಿಕರೊಬ್ಬರಿಗೆ ಕೇರಳದ ಸಮ್ಮರ್ ಬಂಪರ್ ಲಾಟರಿ ಹೊಡೆದಿದೆ. ಈ ಲಾಟರಿಯಿಂದ ಬರೋಬ್ಬರಿ 10 ಕೋಟಿ ರೂ ಹಣ ಬಹುಮಾನವಾಗಿ ಗೆದ್ದಿದ್ದಾರೆ. ಅಸ್ಸಾಂ ಮೂಲದ ಆಲ್ಬರ್ಟ್ ಗಿಟ್ಟಾ ಅವರು 10 ಕೋಟಿ ರೂಪಾಯಿ ಮೌಲ್ಯದ ಲಾಟರಿ ಗೆದ್ದಿದ್ದಾರೆ.

ಗಿಟ್ಟ ಅವರು ಒರು ಮುತ್ತಸ್ಸಿ ಗಧಾ ಖ್ಯಾತಿಯ ನಟ ರಾಜಿನಿ ಚಾಂಡಿ ಅವರ ಮನೆಗೆ ಸಹಾಯಕರಾಗಿ ದೀರ್ಘಕಾಲದಿಂದ ಕೆಲಸ ಮಾಡುತ್ತಿದ್ದಾರೆ.
ತೆರಿಗೆ ಕಡಿತದ ನಂತರ ಗಿಟ್ಟಾ ಅವರಿಗೆ 6.6 ಕೋಟಿ ರೂ. ದೊರೆತಿದ್ದು ಬ್ಯಾಂಕ್ ಖಾತೆಗೆ ಹಸ್ತಾಂತರಿಸಲಾಗಿದೆ.

ಇತ್ತೀಚೆಗೆ ಕೋಲ್ಕತ್ತಾ ಮೂಲದ ಮತ್ತೊಬ್ಬ ವಲಸೆ ಕಾರ್ಮಿಕ ಇಡುಕ್ಕಿ ಜಿಲ್ಲೆಯಲ್ಲಿ 75 ಲಕ್ಷ ರೂಪಾಯಿ ಮೌಲ್ಯದ ಲಾಟರಿ ಗೆದ್ದಿದ್ದರು. ಯಾರೋ ಟಿಕೆಟ್ ಕಿತ್ತುಕೊಳ್ಳುತ್ತಾರೆ ಎಂದು ಹೆದರಿ ಪೊಲೀಸರ ಮೊರೆ ಹೋಗಿದ್ದು ದೊಡ್ಡ ಸುದ್ದಿಯಾಗಿತ್ತು. ಕರ್ನಾಟಕದಲ್ಲಿ ಲಾಟರಿ ಮಾರಾಟವನ್ನು ನಿಷೇಧಿಸಲಾಗಿದೆ.

ಎರಡನೇ ಬಹುಮಾನ ಮತ್ತು ಮೂರನೇ ಬಹುಮಾನ ವಿಜೇತರು ಕ್ರಮವಾಗಿ 50 ಲಕ್ಷ ಮತ್ತು 5 ಲಕ್ಷ ರೂ. ನಾಲ್ಕನೇ ಬಹುಮಾನ ವಿಜೇತರಿಗೆ 1ಲಕ್ಷ ರೂ. ನೀಡಲಾಗಿತ್ತು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 2:30 pm, Tue, 21 March 23