ಪತ್ನಿಯ ಹಣದಿಂದಲೇ ಲಾಟರಿ ಖರೀದಿಸಿ, ಬರೋಬ್ಬರಿ 12 ಕೋಟಿ ರೂ. ಗೆದ್ದ, ಆ ಹಣದಲ್ಲಿ ಮಾಜಿ ಪತ್ನಿಗೆ ಫ್ಲಾಟ್​ ಖರೀದಿಸಿ ಸಿಕ್ಕಿಬಿದ್ದ

ಹಣವೆಂದರೆ ಹೆಣವೂ ಬಾಯಿಬಿಡುತ್ತೆ ಎಂಬಂತೆ, ಹಣ ಬಂದ ಕೂಡಲೇ ಕಟ್ಟಿಕೊಂಡ ಹೆಂಡತಿಯನ್ನೇ ಮರೆತುಬಿಡುವುದೇ.. ಜನರು ಸಾಮಾನ್ಯವಾಗಿ ಲಾಟರಿ ಹೊಡೆದರೆ ಏನೇನೆಲ್ಲಾ ತಗೋಬಹುದು ಎಂದು ಆಲೋಚಿಸಿರುತ್ತಾರೆ.

ಪತ್ನಿಯ ಹಣದಿಂದಲೇ ಲಾಟರಿ ಖರೀದಿಸಿ, ಬರೋಬ್ಬರಿ 12 ಕೋಟಿ ರೂ. ಗೆದ್ದ, ಆ ಹಣದಲ್ಲಿ ಮಾಜಿ ಪತ್ನಿಗೆ ಫ್ಲಾಟ್​ ಖರೀದಿಸಿ ಸಿಕ್ಕಿಬಿದ್ದ
ಲಾಟರಿImage Credit source: TimesNow
Follow us
ನಯನಾ ರಾಜೀವ್
|

Updated on: Feb 15, 2023 | 9:24 AM

ಹಣವೆಂದರೆ ಹೆಣವೂ ಬಾಯಿಬಿಡುತ್ತೆ ಎಂಬಂತೆ, ಹಣ ಬಂದ ಕೂಡಲೇ ಕಟ್ಟಿಕೊಂಡ ಹೆಂಡತಿಯನ್ನೇ ಮರೆತುಬಿಡುವುದೇ.. ಜನರು ಸಾಮಾನ್ಯವಾಗಿ ಲಾಟರಿ ಹೊಡೆದರೆ ಏನೇನೆಲ್ಲಾ ತಗೋಬಹುದು ಎಂದು ಆಲೋಚಿಸಿರುತ್ತಾರೆ. ಕೆಲವರು ಮನೆ, ಗಾಡಿ ಹೀಗೆ ಹತ್ತು ಹಲವು ಕನಸುಗಳು. ಲಾಟರಿ ಹೊಡೆದ ತಕ್ಷಣ ಏನು ಮಾಡಬೇಕೆಂದು ಕೆಲವರಿಗೆ ತೋಚುವುದೇ ಇಲ್ಲ. ಹಾಗೆಯೇ ಇಲ್ಲೊಂದು ಘಟನೆ ನಡೆದಿದೆ. ಚೀನಾದ ವ್ಯಕ್ತಿಯೊಬ್ಬನಿಗೆ 12 ಕೋಟಿ ರೂ. ಲಾಟರಿ ಹೊಡೆದಿದೆ, ಆತ ತನ್ನ ಪತ್ನಿಯನ್ನು ಮರೆತು, ಮಾಜಿ ಪತ್ನಿಗೆ ಫ್ಲಾಟ್​ ಖರೀದಿಸಿದ್ದಾನೆ.

ಆತನ ಅದೃಷ್ಟವೂ ಬೆಂಬಲಿಸಿತ್ತು, ಆತ ನೋಡ ನೋಡುತ್ತಿದ್ದಂತೆ ಬಿಲಿಯನೇರ್ ಆಗಿಬಿಟ್ಟ. ಹಣ ಸಿಕ್ಕಿದ ಮೇಲೆ ಎಲ್ಲವೂ ಎಂದುಕೊಂಡ ಹೆಂಡತಿಯನ್ನೇ ಮರೆಯುವ ರೀತಿಯಲ್ಲಿ ಬದಲಾದ.

ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿಯ ಪ್ರಕಾರ, ಎರಡು ವರ್ಷಗಳ ಹಿಂದೆ ಝೌ ಎಂಬ ವ್ಯಕ್ತಿಯೊಬ್ಬರು ಬಂಪರ್ ಲಾಟರಿ ಗೆದ್ದಿದ್ದರು. ಅವರು 10 ಮಿಲಿಯನ್ ಯುವಾನ್ ಅಂದರೆ 12 ಕೋಟಿ ರೂಪಾಯಿಗೂ ಹೆಚ್ಚು ಮೊತ್ತವನ್ನು ಗೆದ್ದಿದ್ದರು.

ತೆರಿಗೆ ಕಡಿತಗೊಳಿಸಿದ ಬಳಿಕ ಅವರ ಖಾತೆಗೆ ಸುಮಾರು 8 ಕೋಟಿ ರೂಪಾಯಿ ಬಂದಿದ್ದು, ಈ ಬಗ್ಗೆ ಪತ್ನಿಗೆ ಏನೂ ಹೇಳಿರಲಿಲ್ಲ. ಅವರು ಲಾಟರಿ ಬಗ್ಗೆ ಅಥವಾ ಖಾತೆಯಲ್ಲಿನ ಹಣದ ಬಗ್ಗೆ ಏನನ್ನೂ ಹೇಳಲಿಲ್ಲ.

ಏತನ್ಮಧ್ಯೆ, ಝೌ ತನ್ನ ಗೆಲುವಿನ 2 ಮಿಲಿಯನ್ ಯುವಾನ್ ಅನ್ನು ತನ್ನ ಸಹೋದರಿಗೆ ರಹಸ್ಯವಾಗಿ ನೀಡಿದ್ದ, ಆದರೆ 70,000 ಯುವಾನ್ ಅನ್ನು ಅವರ ಮಾಜಿ ಪತ್ನಿಗೆ ಫ್ಲಾಟ್ ಖರೀದಿಸಲು ನೀಡಿದ್ದ. ಈಗ ಈ ವಿಷಯ ಎಲ್ಲಿಂದಲೋ ಅವರ ಪತ್ನಿ ಲಿನ್‌ಗೆ ತಿಳಿದು ಕೋಪಗೊಂಡು ಪತಿಗೆ ಪಾಠ ಕಲಿಸಲು ನಿರ್ಧರಿಸಿದ್ದಳು. ಕೂಡಲೇ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ, ವಿಚ್ಛೇದನಕ್ಕೆ ಅರ್ಜಿಯನ್ನೂ ಸಲ್ಲಿಸಿದ್ದರು.

ಕಳೆದ ವಾರವಷ್ಟೇ ಈ ಪ್ರಕರಣದ ತೀರ್ಪು ಬಂದಿದೆ. ಲಾಟರಿ ಗೆಲುವುಗಳ ಮೂರನೇ ಎರಡರಷ್ಟು ಹಣವನ್ನು ಅವರ ಪತ್ನಿ ಲಿನ್‌ಗೆ ಪರಿಹಾರವಾಗಿ ನೀಡುವಂತೆ ನ್ಯಾಯಾಲಯವು ಝೌಗೆ ಆದೇಶಿಸಿತು.

ಝೌ ತನ್ನ ಸಹೋದರಿ ಮತ್ತು ಮಾಜಿ ಪತ್ನಿಗೆ ನೀಡಿದ ಹಣದಲ್ಲಿ ಲಿನ್ ಪಾಲು ಹೊಂದಿದ್ದಾನೆ ಎಂದು ನ್ಯಾಯಾಲಯ ನಂಬಿತ್ತು. ನ್ಯಾಯಾಲಯದ ಮೊರೆ ಹೋದ ನಂತರ, ಝೌ ಖರೀದಿಸಿದ ಲಾಟರಿಯನ್ನು ಲಿನ್ ಅವರ ಹಣದಿಂದ ಖರೀದಿಸಲಾಗಿದೆ ಎಂದು ತಿಳಿದುಬಂದಿದೆ. ಆದರೆ ಅವನು ಬಂಪರ್ ಬಹುಮಾನವನ್ನು ಗೆದ್ದಾಗ, ಮಾತ್ರ ಅವನು ಎಲ್ಲಾ ಹಣವನ್ನು ದೋಚಲು ಮುಂದಾಗಿದ್ದ, ಆದರೆ ಅವನ ಹೆಂಡತಿ ಅವನ ಇಡೀ ಆಟವನ್ನು ಬಿಡಮೇಲು ಮಾಡಿದಳು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?