‘ಲಾಟರಿ ಹೊಡೀತು, ಮಿಲಿಯನೇರ್ ಆದೆ, ಆದರೀಗ ಹೆಂಡತಿ ಬೇಕಲ್ಲ’ ಯಾರು ಹುಡುಕಿ ಕೊಡ್ತೀರಿ?

Marriage : ಮದುವೆಯಾಗಬಯಸುವ ಹುಡುಗಿ ನೋಡಲು ಸಾಧಾರಣವಾಗಿದ್ದರೆ ಸಾಕು. ಆದರೆ ಆಕೆ ನಿಷ್ಠೆಯಿಂದ ಇರಬೇಕು. ಎಂಥ ಸಂದರ್ಭ ಬಂದರೂ ಆಕೆ ತನ್ನ ಮೇಲೆ ವಿಶ್ವಾಸ ಕಳೆದುಕೊಳ್ಳಬಾರದು ಎನ್ನುತ್ತಿದ್ದಾನೆ 41 ವರ್ಷದ ಲಾಟರಿವೀರ.

‘ಲಾಟರಿ ಹೊಡೀತು, ಮಿಲಿಯನೇರ್ ಆದೆ, ಆದರೀಗ ಹೆಂಡತಿ ಬೇಕಲ್ಲ’ ಯಾರು ಹುಡುಕಿ ಕೊಡ್ತೀರಿ?
Millionaire Bachelor From Germany Looking For Wife To Travel, Spend Money After Winning Lottery
Follow us
TV9 Web
| Updated By: ಶ್ರೀದೇವಿ ಕಳಸದ

Updated on:Nov 12, 2022 | 5:45 PM

Viral : ಜರ್ಮನಿಯ ಈ ಪ್ರಜೆಗೆ ಲಾಟರಿ ಹೊಡೆಯಿತು. ಅಷ್ಟಿಷ್ಟಲ್ಲ ಮಿಲಿಯನ್​ಗಟ್ಟಲೆ! ಕಾರುಗಳನ್ನು ಖರೀದಿಸಿದ, ವಾಚುಗಳನ್ನು ಖರೀದಿಸಿದ. ತನಗೆ ಬೇಕಾದ ಎಲ್ಲವನ್ನೂ ಖರೀದಿಸಿದ. ನಂತರ ಏನು? ತನ್ನೊಂದಿಗೆ ಸುಂದರವಾಗಿ ಜೀವನ ಮಾಡಲು, ಪ್ರವಾಸ ಮಾಡಲು ಯಾರಾದರೂ ಒಬ್ಬರು ಬೇಕು ಎನ್ನಿಸಿತು. ಹಾಗಾಗಿ ತನಗೊಬ್ಬಳು ಹೆಂಡತಿ ಬೇಕಲ್ಲ ಎಂದು ಈಗ ತೀವ್ರವಾಗಿ ಹುಡುಕತೊಡಗಿದ್ದಾನೆ. ಆದರೆ ಲಾಟರಿ ಹೊಡೆದಂತೆ ಒಂದೇ ಏಟಿಗೆ ಹೆಂಡತಿ ಸಿಗುವಳೇ?

ಲಾಟರಿ ಎಂದರೇ ಅದೃಷ್ಟ! ಒಮ್ಮೆ ಅದು ಹೊಡೆಯಿತು ಕನಸುಗಳು ಹೆಬ್ಬಾವಿನಂತೆ ಹೆಡೆ ಎತ್ತಿ ನಿಂತುಬಿಡುತ್ತವೆ. ಏನು ಮಾಡಲಿ ಏನು ಬಿಡಲಿ ಎಂಬ ಗೊಂದಲದಲ್ಲಿ, ಸಂತೋಷದಲ್ಲಿ, ಆವೇಗದಲ್ಲಿ ಮನುಷ್ಯ ಬಿದ್ದುಬಿಡುತ್ತಾನೆ. ಎಲ್ಲ ವಸ್ತುಗಳ ಖರೀದಿಯ ವ್ಯಾಮೋಹ ಮುಗಿದ ಮೇಲೆ ಕೊನೆಗೆ ನೆನಪಾಗುವುದು ಮನುಷ್ಯರ ಸಂಗ.

ಜರ್ಮನಿಯ ಡಾರ್ಟ್ಮಂಡ್​ನ ಕುರ್ಸಾತ್​ ಯಿಲ್ದೀರಿಮ್ ಅವಿವಾಹಿತ. ಅವ ಸೆಪ್ಟೆಂಬರ್​ನಲ್ಲಿ ಲಾಟರಿ ಮೂಲಕ ಗೆದ್ದ ಹಣ ಒಟ್ಟು ರೂ. 82 ಕೋಟಿ! ಈ ಹಣದಲ್ಲಿ ತಾನೇನು ಖರೀದಿಸಬೇಕು ಎಂದುಕೊಂಡಿದ್ದನೋ ಅದೆಲ್ಲ ಖರೀದಿಸಿಯಾಗಿದೆ. ಆದರೆ ನನಗೆ ಪ್ರೀತಿಸುವುದು ಮತ್ತು ಪ್ರಯಾಣಿಸುವುದು ಇಷ್ಟ. ನನ್ನೊಂದಿಗೆ ಮದುವೆಯಾಗಿ ಸಂಸಾರವನ್ನು ಹೂಡಲು ತಯಾರಿರುವ ಸಂಗಾತಿಯ ಹುಡುಕಾಟದಲ್ಲಿ ನಾನಿದ್ದೇನೆ ಎಂದು ಸ್ಥಳೀಯ ಪತ್ರಿಕೆಗಳಿಗೆ ತಿಳಿಸಿದ್ದಾನೆ.

ಇದನ್ನೂ ಓದಿ
Image
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Image
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Image
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Image
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!

ಇಷ್ಟೇ ಅಲ್ಲ ತಾನು ಮದುವೆಯಾಗಬಯಸುವ ಹುಡುಗಿ ನೋಡಲು ಸಾಧಾರಣವಾಗಿದ್ದರೆ ಸಾಕು. ಆದರೆ ಆಕೆ ನಿಷ್ಠೆಯಿಂದ ಇರಬೇಕು. ಎಂಥ ಸಂದರ್ಭ ಬಂದರೂ ಆಕೆ ತನ್ನ ಮೇಲೆ ವಿಶ್ವಾಸ ಕಳೆದಕೊಳ್ಳಬಾರದು ಎಂದಿದ್ದಾನೆ. ಇವನಿಗೆ ಈಗ ವಯಸ್ಸು 41.

ಲಾಟರಿ ಗೆದ್ದ ನಂತರ ಉಕ್ಕಿನ ಕಂಪೆನಿಯಲ್ಲಿ ಮಾಡುತ್ತಿದ್ದ ಕೆಲಸವನ್ನು ಕೈಬಿಟ್ಟಿದ್ದಾನೆ. ಅಲ್ಲದೆ, ಸಾಮಾಜಿಕ ಜಾಲತಾಣದಲ್ಲಿ ಆ ಹಣದಿಂದ ತಾನು ಆಗಾಗ್ಗೆ ಏನೇನು ಖರಿದಿಸುತ್ತಿದ್ದೇನೆ ಎನ್ನುವುದನ್ನು ಅಪ್​ಡೇಟ್ ಮಾಡುತ್ತಿರುತ್ತಾನೆ.

ನೀವೇನಾದರೂ ಇವನಿಗೆ ಹುಡುಗಿ ಹುಡುಕಿ ಕೊಡಲು ಸಹಾಯ ಮಾಡುವ ಮನಸ್ಸು ಮಾಡುತ್ತೀರೋ ಹೇಗೆ? ನಾವಂತೂ ಸಾಮಾಜಿಕ ಜಾಲತಾಣದಲ್ಲಿ ಹೆಂಡತಿ ಸಿಕ್ಕಳು! ಎಂದು ಈತ ಪೋಸ್ಟ್​ ಹಾಕುವುದನ್ನು ನೋಡಲು ಕಾಯುತ್ತಿದ್ದೇವೆ.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 5:43 pm, Sat, 12 November 22

ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್