ಯೋಗಾಭ್ಯಾಸಿ ನಾಯಿ; ದೆಹಲಿಯ ಮೆಟ್ರೋ ಸ್ಟೇಷನ್​ನಲ್ಲಿ ತನ್ನ ತರಬೇತುದಾರನೊಂದಿಗೆ ಯೋಗ ಮಾಡಿದಾಗ

Yoga : ಈ ವಿಡಿಯೋದಲ್ಲಿ ಈ ನಾಯಿ ತನ್ನ ತರಬೇತುದಾರನು ಮಾಡುವ ಎರಡು ಆಸನಗಳನ್ನು ಮಾಡಿ ತೋರಿಸುತ್ತದೆ. ಈ ಅಚ್ಚರಿಯನ್ನು ಜನ ವಿಡಿಯೋ ಮಾಡುವಲ್ಲಿ ಮುಳುಗಿದ್ದಾರೆ.

ಯೋಗಾಭ್ಯಾಸಿ ನಾಯಿ; ದೆಹಲಿಯ ಮೆಟ್ರೋ ಸ್ಟೇಷನ್​ನಲ್ಲಿ ತನ್ನ ತರಬೇತುದಾರನೊಂದಿಗೆ ಯೋಗ ಮಾಡಿದಾಗ
CISF Personnel And Dog Do Yoga Together At Delhi Metro Station.
Follow us
| Updated By: ಶ್ರೀದೇವಿ ಕಳಸದ

Updated on:Nov 11, 2022 | 11:42 AM

Viral Video : ನೀವು ಏನು ಕಲಿಸುತ್ತೀರೋ ಅದನ್ನೇ ಮಾಡುತ್ತವೆ ಸಾಕುಪ್ರಾಣಿಗಳು. ತರಬೇತಿ ನೀಡಿದ ಪ್ರಾಣಿಗಳೆಂದರೆ ತುಸು ಹೆಚ್ಚೇ ಪಾಠವನ್ನು ಒಪ್ಪಿಸುತ್ತವೆ. ಅದರಲ್ಲಿಯೂ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ (CISF) ನಾಯಿ ಎಂದರೆ ಕೇಳಬೇಕೆ? ಅವುಗಳಿಗೆ ವಿಶೇಷವಾಗಿ ತರಬೇತಿ ನೀಡಿರಲಾಗುತ್ತದೆ. ಆದರೆ ಯೋಗವನ್ನೂ ಮಾಡಬಲ್ಲವು ಎಂಬ ವಿಷಯ ನಿಮಗೆ ಗೊತ್ತಿತ್ತೆ? ದೆಹಲಿಯ ಮೆಟ್ರೋ ಸ್ಟೇಷನ್​ನಲ್ಲಿ ತರಬೇತಿ ನೀಡಿದ ವ್ಯಕ್ತಿಯೊಂದಿಗೆ ತಾನೂ ಯೋಗ ಮಾಡಿದೆ ಕಪ್ಪು ಲ್ಯಾಬ್ರಡಾರ್ ನಾಯಿ.

ಇದನ್ನೂ ಓದಿ
Image
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Image
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Image
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Image
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!

ಯೋಗ ದಿನದಂದು ಪ್ರಾಣಿಪ್ರಿಯರು ತಮ್ಮ ಪ್ರಾಣಿಗಳ ಯಾವುದೋ ಒಂದು ಭಂಗಿಯ ಫೋಟೋ ತೆಗೆದು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಿಗೆ ಅಪ್​ಲೋಡ್ ಮಾಡಿ ಆ ದಿನವನ್ನು ಆಚರಿಸಿ ಸುಮ್ಮನಾಗುತ್ತಾರೆ.  ಆದರೆ ಈ ನಾಯಿ ಹಾಗಲ್ಲ. ನಿತ್ಯವೂ ಇದು ತನ್ನ ತರಬೇತುದಾರನೊಂದಿಗೆ ಯೋಗಾಭ್ಯಾಸ ಮಾಡುತ್ತದೆ. ಇದಕ್ಕೆ ಸಾಕ್ಷಿಯೇ ಈ ವಿಡಿಯೋ.

ಸಿಐಎಸ್​ಎಫ್​ ಸಿಬ್ಬಂದಿಯೊಂದಿಗೆ ಹೀಗೆ ಮೆಟ್ರೋ ಸ್ಟೇಷನ್​ನಲ್ಲಿ ಯೋಗ ಮಾಡಿದೆ ಈ ನಾಯಿಯನ್ನು ಸಾರ್ವಜನಿಕರು ಅಚ್ಚರಿಯಿಂದ ವಿಡಿಯೋ ಮಾಡಿಕೊಂಡಿದ್ದಾರೆ. ಅನೇಕರು ಈ ನಾಯಿಯ ಶಿಸ್ತು ಮತ್ತು ಶ್ರದ್ಧೆಯನ್ನು ಶ್ಲಾಘಿಸಿದ್ದಾರೆ.

ಬೇಕಾದ ಆಹಾರವನ್ನು ಕೊಡುವುದು, ವಾಕಿಂಗ್​ ಕರೆದುಕೊಂಡು ಹೋಗುವುದು, ಮುದ್ದು ಮಾಡುವುದು, ವಿಡಿಯೋ ಮಾಡುವುದು ಎಲ್ಲ ಸರಿ. ಅದರೆ ಒಂದು ಕೌಶಲವನ್ನು ಕಲಿಸಿಕೊಡುವುದಿದೆಯಲ್ಲ, ಮನುಷ್ಯನ ಕೌಶಲವನ್ನು ಪ್ರಾಣಿಗಳು ಅಳವಡಿಸಿಕೊಳ್ಳುವುದಿದೆಯಲ್ಲ ಅದು ಅಷ್ಟು ಸುಲಭವಲ್ಲ. ಕಲಿಯುವವರಿಗೂ ಕಲಿಸುವವರಿಗೂ ಅಷ್ಟೇ ತಾಳ್ಮೆ ಪ್ರೀತಿ ಬೇಕಾಗುತ್ತದೆ. ಅದೊಂದು ಶ್ರದ್ಧಾಬಂಧ.

ಈ ವಿಡಿಯೋ ನೋಡಿದ ನಿಮಗೆ ಏನು ಅನ್ನಿಸುತ್ತಿದೆ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 11:39 am, Fri, 11 November 22