ನಿಧಾನವೇ ಪ್ರಧಾನ; ಲೆಮನ್ ಸ್ಪೂನ್ ಆಟದಲ್ಲಿ ಈ ಬಾಲಕ 10 ಮಿಲಿಯನ್ ಜನರನ್ನು ಸೆಳೆದಿದ್ದಾನೆ
Lemon Spoon Game : ‘ಶಭಾಷ್ ಪುಟ್ಟಾ, ನಿನಗೆ ಗುರಿಗಿಂತ ಸಾಗುವ ದಾರಿಯ ಕಡೆ ಗಮನವಿತ್ತು. ಅದಕ್ಕೇ ಗೆದ್ದಿದ್ದೀಯಾ. ಉಳಿದವರು ಅವಸರ ಮಾಡಿ ಅರ್ಧಕ್ಕೆ ಆಟದಿಂದ ಹೊರಹೋಗಿದ್ದಾರೆ’ ಎಂದಿದ್ದಾರೆ ನೆಟ್ಟಿಗರು. ವಿಡಿಯೋ ನೋಡಿ.
Viral Video : ಅಂಥದ್ದೇನಿದೆ ಈ ಲೆಮನ್ ಸ್ಪೂನ್ ಆಟದಲ್ಲಿ ವಿಶೇಷ, ಎನ್ನುತ್ತಿದ್ದೀರಾ? ಆನ್ಲೈನ್ನಲ್ಲಿ ಈ ವಿಡಿಯೋ ತನ್ನದೇ ಆದ ವೈಶಿಷ್ಟ್ಯದಿಂದ ಸಾಕಷ್ಟು ಗಮನ ಸೆಳೆಯುತ್ತಿದೆ. ಈಗಾಗಲೇ 10 ಮಿಲಿಯನ್ ಜನರು ಈ ಪುಟ್ಟನ ನಿಧಾನಗತಿಗೆ ಫಿದಾ ಆಗಿದ್ದಾರೆ. ಇವನಿಗಿಂತ ದೊಡ್ಡ ಹುಡುಗರು ಅರ್ಧಕ್ಕೇ ಆಟದಿಂದ ಹೊರಬಿದ್ದಿದ್ದಾರೆ. ಆದರೆ, ಈ ಹುಡುಗ ನಿಧಾನವಾಗಿ ತನ್ನ ದಾರಿಯಲ್ಲಿ ತಾನು ಸಾಗಿ ಗುರಿ ತಲುಪಿದ್ದಾನೆ. ನಿನ್ನೊಂದಿಗೆ ನೀನು ಸ್ಪರ್ಧಿಸು ಎನ್ನುವ ಮಾತು ಇಲ್ಲಿ ಅನ್ವರ್ಥ.
Slow and steady wins the race. —Aesop pic.twitter.com/6yaixiJvER
— Vala Afshar (@ValaAfshar) November 9, 2022
ನಿಧಾನವೇ ಪ್ರಧಾನ. ನಿಧಾನದ ದಾರಿಯಲ್ಲಿಯೇ ಸ್ಥಿರತೆ ಇರುತ್ತದೆ ಎಂಬ ಸಂದೇಶವನ್ನು ಈ ವಿಡಿಯೋ ಸಾರಿದೆ. ಬಿಳಿ ಶರ್ಟ್ ಹಾಕಿಕೊಂಡಿರುವ ಈ ಪುಟ್ಟನಿಗಿಂತ ದೊಡ್ಡವರಿರುವ ಕೆಲ ಹುಡುಗರು ಬೇಗ ಗುರಿ ತಲುಪಬೇಕು ಎನ್ನುವ ಧಾವಂತದಲ್ಲಿ ನಿಂಬೆಹಣ್ಣುಗಳನ್ನು ಬೀಳಿಸಿಕೊಂಡಿದ್ದನ್ನು ಗಮನಿಸಬಹುದು. ಆದರೆ ಈತ ಇತರರ ನಡೆಯನ್ನು ಗಮನಿಸಿಲ್ಲ, ತನ್ನ ದಾರಿಯೆಡೆ ಮಾತ್ರ ಇವನಿಗೆ ಗಮನವಿದೆ.
ಇದು ಅದ್ಭುತವಾಗಿದೆ. ನೀನು ಹೀಗೆಯೇ ಬದುಕಿನಲ್ಲಿಯೂ ನಿಧಾನವಾಗಿಯೇ ನಿನ್ನ ಗುರಿಯನ್ನು ತಲುಪು ಎಂದು ಕೆಲವರು ಹಾರೈಸಿದ್ಧಾರೆ. ಸಾವಿರಾರು ಜನರು ಈ ವಿಡಿಯೋ ಇಷ್ಟಪಟ್ಟಿದ್ದಾರೆ. 182 ಜನ ರೀಟ್ವೀಟ್ ಮಾಡಿದ್ದಾರೆ.
ಈ ವಿಡಿಯೋ ನೋಡಿದ ನಿಮಗೆ ಏನು ಅನ್ನಿಸುತ್ತಿದೆ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ