AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಕಿಸ್ತಾನದ ಜೈಲಿನಲ್ಲಿರುವ ಭಾರತೀಯರ ಸ್ಥಿತಿ ಶೋಚನೀಯ, ಹಲವರಿಗೆ ಹುಚ್ಚು ಹಿಡಿದಿದೆ: ಜೈಲಿನಿಂದ ಬಿಡುಗಡೆಯಾದ ಕೈದಿಗಳ ಮಾತು

ನಾನು ಹುಡುಗಿಗೋಸ್ಕರ ಪಾಕಿಸ್ತಾನದ ಗಡಿಯನ್ನು ದಾಟಿದೆ, ನಾನು ಅಲ್ಲಿಗೆ ಬಂದಾಗ, ನನಗೆ ಆರು ತಿಂಗಳ ಕಾಲ ಸಾಕಷ್ಟು ಚಿತ್ರಹಿಂಸೆ ನೀಡಲಾಯಿತು. ಆರು ತಿಂಗಳ ನಂತರ, ನನ್ನನ್ನು ಮತ್ತೊಂದು ಜೈಲಿಗೆ ಕಳುಹಿಸಲಾಯಿತು ಎಂದು ರಾಮ್ ಅಲ್ಲಿನ ಅನುಭವ ಹೇಳಿದ್ದಾರೆ

ಪಾಕಿಸ್ತಾನದ ಜೈಲಿನಲ್ಲಿರುವ ಭಾರತೀಯರ ಸ್ಥಿತಿ ಶೋಚನೀಯ, ಹಲವರಿಗೆ ಹುಚ್ಚು ಹಿಡಿದಿದೆ: ಜೈಲಿನಿಂದ ಬಿಡುಗಡೆಯಾದ ಕೈದಿಗಳ ಮಾತು
ಗೆಂಬ್ರಾ ರಾಮ್ ಮತ್ತು ರಾಜುImage Credit source: hindustantimes.com
ರಶ್ಮಿ ಕಲ್ಲಕಟ್ಟ
|

Updated on: Feb 15, 2023 | 1:11 PM

Share

ಪಾಕಿಸ್ತಾನ (Pakistan) ಸರ್ಕಾರ ಮಂಗಳವಾರ ಇಬ್ಬರು ಭಾರತೀಯ ಕೈದಿಗಳನ್ನು ಬಿಡುಗಡೆ ಮಾಡಿ ಅಟ್ಟಾರಿ-ವಾಘಾ ಗಡಿಯ (Attari-Wagah border)ಮೂಲಕ ದೇಶಕ್ಕೆ ಕಳುಹಿಸಿದೆ.ಸುಮಾರು 700ಕ್ಕೂ ಹೆಚ್ಚು ಭಾರತೀಯರು ಪಾಕಿಸ್ತಾನದಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ ಎಂದು ಕೈದಿಯೊಬ್ಬರು ಬಹಿರಂಗಪಡಿಸಿದ್ದಾರೆ. ಪ್ರೊಟೊಕಾಲ್ ಅಧಿಕಾರಿ ಅರುಣ್ ಪಾಲ್ ಪ್ರಕಾರ, ಐದು ವರ್ಷಗಳ ಹಿಂದೆ ರಾಜು ತಪ್ಪಾಗಿ ಪಾಕಿಸ್ತಾನಕ್ಕೆ ಪ್ರವೇಶಿಸಿದ್ದ. ಎರಡನೇ ಕೈದಿ ಗೆಂಬ್ರಾ ರಾಮ್ ಪಾಕಿಸ್ತಾನದಲ್ಲಿ ಸುಮಾರು ಎರಡೂವರೆ ವರ್ಷಗಳ ಕಾಲ ಜೈಲಿನಲ್ಲಿದ್ದನು. ಹುಡುಗಿಗಾಗಿ ತಾನು ಪಾಕಿಸ್ತಾನದ ಗಡಿ ದಾಟಿದ್ದೇನೆ ಎಂದು ಗೆಂಬ್ರಾ ರಾಮ್ ಹೇಳಿದ್ದಾರೆ.

ನಾನು ಹುಡುಗಿಗೋಸ್ಕರ ಪಾಕಿಸ್ತಾನದ ಗಡಿಯನ್ನು ದಾಟಿದೆ, ನಾನು ಅಲ್ಲಿಗೆ ಬಂದಾಗ, ನನಗೆ ಆರು ತಿಂಗಳ ಕಾಲ ಸಾಕಷ್ಟು ಚಿತ್ರಹಿಂಸೆ ನೀಡಲಾಯಿತು. ಆರು ತಿಂಗಳ ನಂತರ, ನನ್ನನ್ನು ಮತ್ತೊಂದು ಜೈಲಿಗೆ ಕಳುಹಿಸಲಾಯಿತು.ಅಲ್ಲಿ ನಾನು 21 ತಿಂಗಳುಗಳನ್ನು ಕಳೆದಿದ್ದೇನೆ ಎಂದಿದ್ದಾರೆ ರಾಮ್.

“ನಾನು ಬಂದಿರುವ ಜೈಲಿನಲ್ಲಿ ಇನ್ನೂ 700 ಭಾರತೀಯರಿದ್ದಾರೆ. ಅವರಿಗೆ ಹುಚ್ಚು ಹಿಡಿದಿದ್ದು ಅಳುತ್ತಿದ್ದಾರೆ. ಅವರ ಸ್ಥಿತಿಯನ್ನು ನಾನು ವಿವರಿಸಲು ಸಾಧ್ಯವಿಲ್ಲ” ಎಂದು ಗೆಂಬ್ರಾ ರಾಮ್ ಹೇಳಿದರು. ಜೈಲುಗಳಲ್ಲಿ ಅನೇಕರಿಗೆ ಹುಚ್ಚು ಹಿಡಿದಿದ್ದು, ಶೋಚನೀಯ ಸ್ಥಿತಿಯಲ್ಲಿರುವ ಕಾರಣ ಎಲ್ಲ ಭಾರತೀಯರನ್ನು ಆದಷ್ಟು ಬೇಗ ಅಲ್ಲಿಂದ ಅವರನ್ನು ಬಿಡುಗಡೆ ಮಾಡಬೇಕು ಎಂದು ಇವರು ಮನವಿ ಮಾಡಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!