Russia Ukraine War: ರಷ್ಯಾ-ಉಕ್ರೇನ್ ಯುದ್ಧದ ಬಗ್ಗೆ ಭಾರತದಂತೆ ಪಾಕಿಸ್ತಾನವೂ ತಟಸ್ಥವಾಗಿರಬೇಕಿತ್ತು: ಇಮ್ರಾನ್ ಖಾನ್

ರಷ್ಯಾ-ಉಕ್ರೇನ್ ಯುದ್ಧದ ಬಗ್ಗೆ ಭಾರತದಂತೆ ಪಾಕಿಸ್ತಾನವೂ ಕೂಡ ತಟಸ್ಥವಾಗಿರಬೇಕಿತ್ತು ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ. ಸೇನಾ ಮಾಜಿ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಾಜ್ವಾ ಅವರು ಉಕ್ರೇನ್ ಮೇಲೆ ಆಕ್ರಮಣ ಮಾಡಿದ್ದಕ್ಕಾಗಿ ರಷ್ಯಾವನ್ನು ಖಂಡಿಸಿದ್ದರು.

Russia Ukraine War: ರಷ್ಯಾ-ಉಕ್ರೇನ್ ಯುದ್ಧದ ಬಗ್ಗೆ ಭಾರತದಂತೆ ಪಾಕಿಸ್ತಾನವೂ ತಟಸ್ಥವಾಗಿರಬೇಕಿತ್ತು: ಇಮ್ರಾನ್ ಖಾನ್
ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್
Follow us
|

Updated on: Feb 15, 2023 | 11:02 AM

ರಷ್ಯಾ-ಉಕ್ರೇನ್ ಯುದ್ಧದ ಬಗ್ಗೆ ಭಾರತದಂತೆ ಪಾಕಿಸ್ತಾನವೂ ಕೂಡ ತಟಸ್ಥವಾಗಿರಬೇಕಿತ್ತು ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ. ಸೇನಾ ಮಾಜಿ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಾಜ್ವಾ ಅವರು ಉಕ್ರೇನ್ ಮೇಲೆ ಆಕ್ರಮಣ ಮಾಡಿದ್ದಕ್ಕಾಗಿ ರಷ್ಯಾವನ್ನು ಖಂಡಿಸಿದ್ದರು. ನಾನು ರಷ್ಯಾ ಭೇಟಿಯಿಂದ ಹಿಂದಿರುಗಿದ ನಂತರ, ಉಕ್ರೇನ್ ಮೇಲೆ ರಷ್ಯಾದ ಆಕ್ರಮಣವನ್ನು ಖಂಡಿಸಲು ಜನರಲ್ ಬಜ್ವಾ ನನ್ನನ್ನು ಕೇಳಿದ್ದರು. ಭಾರತವು ಈ ವಿಚಾರದಲ್ಲಿ ತಟಸ್ಥವಾಗಿದೆ, ಹಾಗೆಯೇ ಪಾಕಿಸ್ತಾನವು ಕೂಡ ತಟಸ್ಥವಾಗಿ ಉಳಿಯುವುದೇ ಉತ್ತಮ.

ಯುಎಸ್ ಸಮಾಧಾನಪಡಿಸಲು ಬಜ್ವಾ ಭದ್ರತಾ ಸೆಮಿನಾರ್ ಒಂದರಲ್ಲಿ ರಷ್ಯಾವನ್ನು ಖಂಡಿಸಿದ್ದರು. ಕಳೆದ ವರ್ಷ ಏಪ್ರಿಲ್‌ನಲ್ಲಿ ಅವಿಶ್ವಾಸ ನಿರ್ಣಯದ ಮೂಲಕ ಅಧಿಕಾರದಿಂದ ಕೆಳಗಿಳಿದ 70 ವರ್ಷದ ಖಾನ್ ತಮ್ಮ ರಷ್ಯಾ ಭೇಟಿಯನ್ನು ಸಮರ್ಥಿಸಿಕೊಂಡರು.

ಮತ್ತಷ್ಟು ಓದಿ: Ukraine And Russia War: ಉಕ್ರೇನ್ ಮೇಲೆ ಸಾರಿರುವ ಯುದ್ಧ ನಿಲ್ಲಿಸಲು ರಷ್ಯಾ ಚಿಂತನೆ

ನಾನು ರಷ್ಯಾಕ್ಕೆ ಹೋಗಿ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಪಾಕಿಸ್ತಾನಕ್ಕೆ ಕಡಿಮೆ ದರದಲ್ಲಿ ಗೋಧಿ ಮತ್ತು ಇಂಧನವನ್ನು ನೀಡುವಂತೆ ಮನವೊಲಿಸಿದೆ.

ಅಧ್ಯಕ್ಷ ಪುಟಿನ್ ಅವರು ಉಕ್ರೇನ್ ವಿರುದ್ಧ ವಿಶೇಷ ಸೇನಾ ಕಾರ್ಯಾಚರಣೆಗೆ ಆದೇಶಿಸಿದ ದಿನದಲ್ಲಿ ಮಾಸ್ಕೋಗೆ ಖಾನ್ ಅವರ ಮೊದಲ ಅಧಿಕೃತ ಭೇಟಿಯು ವಿವಾದವನ್ನು ಹುಟ್ಟುಹಾಕಿತು.

ಜನರಲ್ ಬಾಜ್ವಾ ಅವರು ಆರ್ಥಿಕತೆ, ರಾಜಕೀಯ ಮತ್ತು ವಿದೇಶಾಂಗ ನೀತಿ ಸೇರಿದಂತೆ ಎಲ್ಲದರಲ್ಲೂ ಪರಿಣತರಾಗಿದ್ದರು. ಬಾಜ್ವಾ ಉತ್ತಮ ನಿರ್ಧಾರಗಳ ಶ್ರೇಯವನ್ನು ಪಡೆಯುತ್ತಿದ್ದರು ಎಂದು ಖಾನ್ ಹೇಳಿದರು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ