Pakistan National Assembly Elections: ಎಲ್ಲಾ 33 ಕ್ಷೇತ್ರಗಳಲ್ಲಿ ಅಭ್ಯರ್ಥಿಯಾಗಿ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಸ್ಪರ್ಧೆ

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮತ್ತೊಮ್ಮೆ ಚುನಾವಣಾ ಅಖಾಡಕ್ಕೆ ಧುಮುಕಲು ತಯಾರಿ ನಡೆಸುತ್ತಿದ್ದಾರೆ. ಮುಂಬರಲಿರುವ ಪಾಕಿಸ್ತಾನದ ಸಂಸತ್ ಚುನಾವಣೆಯಲ್ಲಿ ಎಲ್ಲಾ 33 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ. 

Pakistan National Assembly Elections: ಎಲ್ಲಾ 33 ಕ್ಷೇತ್ರಗಳಲ್ಲಿ ಅಭ್ಯರ್ಥಿಯಾಗಿ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಸ್ಪರ್ಧೆ
ಇಮ್ರಾನ್ ಖಾನ್
Follow us
ನಯನಾ ರಾಜೀವ್
|

Updated on: Jan 30, 2023 | 11:48 AM

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮತ್ತೊಮ್ಮೆ ಚುನಾವಣಾ ಅಖಾಡಕ್ಕೆ ಧುಮುಕಲು ತಯಾರಿ ನಡೆಸುತ್ತಿದ್ದಾರೆ. ಮುಂಬರಲಿರುವ ಪಾಕಿಸ್ತಾನದ ಸಂಸತ್ ಚುನಾವಣೆಯಲ್ಲಿ ಎಲ್ಲಾ 33 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ.  ಹಿರಿಯ ಪಿಟಿಐ ನಾಯಕ ಶಾ ಮಹಮೂದ್ ಖುರೇಷಿ ಇಮ್ರಾನ್ ಅವರನ್ನು ಅಭ್ಯರ್ಥಿ ಎಂದು ಘೋಷಿಸಿದರು. ಉಪಚುನಾವಣೆಯಲ್ಲಿ ಭಾಗವಹಿಸಲು ಪಕ್ಷ ನಿರ್ಧರಿಸಿದೆ ಮತ್ತು ಇಮ್ರಾನ್ ಖಾನ್ ಎಲ್ಲಾ ಕ್ಷೇತ್ರಗಳಿಂದ ಸ್ಪರ್ಧಿಸಲಿದ್ದಾರೆ ಎಂದು ಶಾ ಹೇಳಿದ್ದಾರೆ.

ಇದಕ್ಕೂ ಮುನ್ನ, ಶುಕ್ರವಾರ, ಪಾಕಿಸ್ತಾನದ ಚುನಾವಣಾ ಆಯೋಗ (ಇಸಿಪಿ) ರಾಷ್ಟ್ರೀಯ ಅಸೆಂಬ್ಲಿಯ 33 ಕ್ಷೇತ್ರಗಳಿಗೆ ಮಾರ್ಚ್ 16 ರಂದು ಸಂಸತ್ ಚುನಾವಣೆಯನ್ನು ಎಂದು ಘೋಷಿಸಿತು. ಪಿಟಿಐ ಸಂಸದರ ರಾಜೀನಾಮೆಯನ್ನು ಎನ್‌ಎ ಅಧ್ಯಕ್ಷ ರಾಜಾ ಪರ್ವೇಜ್ ಅಶ್ರಫ್ ಅಂಗೀಕರಿಸಿದ ನಂತರ ಈ ಸ್ಥಾನಗಳು ಖಾಲಿಯಾದವು. ಪಿಟಿಐ ನಾಯಕ ಫವಾದ್ ಚೌಧರಿ ಈ ತಿಂಗಳ ಆರಂಭದಲ್ಲಿ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಖಾಲಿ ಇರುವ ಎಲ್ಲಾ ಸ್ಥಾನಗಳಿಗೆ ಸ್ಪರ್ಧಿಸುವ ಪಕ್ಷದ ಮುಖ್ಯಸ್ಥರ ನಿರ್ಧಾರವನ್ನು ಪ್ರಕಟಿಸಿದ್ದರು.

ಮತ್ತಷ್ಟು ಓದಿ: Big News: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಕೇಸ್ ದಾಖಲು; ಭಾಷಣದ ನೇರ ಪ್ರಸಾರಕ್ಕೂ ತಡೆ

ಫವಾದ್ ಜನವರಿ 17 ರಂದು ಟ್ವಿಟರ್‌ನಲ್ಲಿ ಹೇಳಿಕೆ ನೀಡಿದ್ದು, ತೆಹ್ರೀಕ್-ಇ-ಇನ್ಸಾಫ್ ಎಲ್ಲಾ ಸ್ಥಾನಗಳಲ್ಲಿ ಸ್ಪರ್ಧಿಸಲಿದೆ ಮತ್ತು ಇಮ್ರಾನ್ ಖಾನ್ ಈ ಮೂವತ್ಮೂರು ಸ್ಥಾನಗಳಲ್ಲಿ ತೆಹ್ರೀಕ್-ಇ-ಇನ್ಸಾಫ್‌ನ ಏಕೈಕ ಅಭ್ಯರ್ಥಿಯಾಗಿರುತ್ತಾರೆ. ಜುಲೈ 17 ರ ಉಪಚುನಾವಣೆಯಲ್ಲಿ ಜನರು ಪಿಟಿಐ ಅನ್ನು ಬೆಂಬಲಿಸಿದ್ದಾರೆ ಮತ್ತು ಮಾರ್ಚ್ 16 ರಂದು ಜನರು ತಮ್ಮ ಮತಗಳ ಮೂಲಕ ಮತ್ತೊಮ್ಮೆ ಇಮ್ರಾನ್ ಖಾನ್ ಅವರ ಮೇಲಿನ ನಂಬಿಕೆಯನ್ನು ತೋರಿಸುತ್ತಾರೆ ಎಂದು ಪಕ್ಷವು ಆಶಾದಾಯಕವಾಗಿದೆ ಎಂದು ಶಾ ಮೆಹಮೂದ್ ಖುರೇಷಿ ಹಿಂದಿನ ದಿನ ಹೇಳಿದರು.

ಇಸಿಪಿ ಸ್ಥಾನಗಳು ತೆರವಾದ 90 ದಿನಗಳಲ್ಲಿ ಚುನಾವಣೆ ನಡೆಸುವಂತೆ ಆದೇಶ ನೀಡಲಾಗಿದ್ದು, ಸಕಾಲದಲ್ಲಿ ನಡೆಯದಿದ್ದರೆ ಸಂವಿಧಾನದ ಉಲ್ಲಂಘನೆಯಾಗುತ್ತದೆ ಎಂದು ಹೇಳಿದರು.

ಪಾಕಿಸ್ತಾನದ ಚುನಾವಣಾ ಆಯೋಗವು ರಾಷ್ಟ್ರೀಯ ಸಂಸತ್ತಿನ 33 ಕ್ಷೇತ್ರಗಳ ಉಪಚುನಾವಣಾ ದಿನಾಂಕವನ್ನು ಘೋಷಿಸಿತ್ತು. ಕಳೆದ ವರ್ಷ ಏಪ್ರಿಲ್‌ನಲ್ಲಿ ನಡೆದ ವಿಶ್ವಾಸಮತ ಯಾಚನೆಯಲ್ಲಿ ಸೋತು ಇಮ್ರಾನ್ ಖಾನ್ ಅಧಿಕಾರ ಕಳೆದುಕೊಂಡಿದ್ದರು. ಬಳಿಕ ಅವರ ಪಕ್ಷದ ಎಲ್ಲ ಸಂಸದರು ರಾಜೀನಾಮೆ ನೀಡಿದ್ದರು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ