Pakistan Petrol Price: ದಿವಾಳಿಯಾದ ಪಾಕಿಸ್ತಾನಕ್ಕೆ ಮತ್ತೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯ ಶಾಕ್
ಪಾಕಿಸ್ತಾನದಲ್ಲಿ ಉದ್ಭವವಾಗಿರುವ ಆರ್ಥಿಕ ಬಿಕ್ಕಟ್ಟಿನ ನಡುವೆ ಅಲ್ಲಿನ ಸರ್ಕಾರ ಜನರ ಮೇಲೆ ಮತ್ತೊಂದು ಬರೆ ಎಳೆದಿದೆ. ಈಗಾಗಲೇ ದಿವಾಳಿಯಾಗಿರುವ ಪಾಕಿಸ್ತಾನದಲ್ಲಿ ಪೆಟ್ರೋಲ್ ಮತ್ತೆ ಡೀಸೆಲ್ ಬೆಲೆ ಮತ್ತೆ ಏರಿಕೆಯಾಗಿದೆ.
ಪಾಕಿಸ್ತಾನದಲ್ಲಿ ಉದ್ಭವವಾಗಿರುವ ಆರ್ಥಿಕ ಬಿಕ್ಕಟ್ಟಿನ ನಡುವೆ ಅಲ್ಲಿನ ಸರ್ಕಾರ ಜನರ ಮೇಲೆ ಮತ್ತೊಂದು ಬರೆ ಎಳೆದಿದೆ. ಈಗಾಗಲೇ ದಿವಾಳಿಯಾಗಿರುವ ಪಾಕಿಸ್ತಾನದಲ್ಲಿ ಪೆಟ್ರೋಲ್ ಮತ್ತೆ ಡೀಸೆಲ್ ಬೆಲೆ ಮತ್ತೆ ಏರಿಕೆಯಾಗಿದೆ. ಪಾಕಿಸ್ತಾನದ ಹಣಕಾಸು ಸಚಿವ ಇಶಾಕ್ ದಾರ್ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು 35 ರೂ. ಏರಿಸಿರುವುದಾಗಿ ಹೇಳಿಕೆ ನೀಡಿದ್ದಾರೆ. ಪೆಟ್ರೋಲ್ ಡೀಸೆಲ್ ಬೆಲೆ 50 ರೂ ಏರಿರುವುದಾಗಿ ಊಹಾಪೋಹಗಳು ಎದ್ದಿವೆ, ಈ ವದಂತಿಯಿಂದಾಗಿ ಜನರು ರಾತ್ರಿ ದೇಶಾದ್ಯಂತ ಪೆಟ್ರೋಲ್ ಪಂಪ್ಗಳ ಮುಂದೆ ಸರತಿ ಸಾಲಿನಲ್ಲಿ ನಿಂತಿದ್ದರು ಎಂದಿದ್ದಾರೆ.
ಪಾಕಿಸ್ತಾನದ ಪತ್ರಿಕೆ ಡಾನ್ ವರದಿ ಪ್ರಕಾರ ಪಾಕಿಸ್ತಾನದಲ್ಲಿ ಪೆಟ್ರೋಲ್ ಬೆಲೆ ಈಗ ಲೀಟರ್ಗೆ 249.80 ರೂ.ಗೆ ಏರಿದೆ, ಹೈಸ್ಪೀಡ್ ಡೀಸೆಲ್ ಬೆಲೆ 262.80ಕ್ಕೆ ಹೆಚ್ಚಳವಾಗಿದೆ. ಸೀಮೆ ಎಣ್ಣೆ ಬೆಲೆ ಕೂಡ ಲೀಟರ್ಗೆ 189.83 ರೂ.ಗೆ ಏರಿಕೆಯಾಗಿದ್ದು, ಸಾದಾ ಡೀಸೆಲ್ ಬೆಲೆ 187 ರೂ.ಗೆ ಏರಿಕೆಯಾಗಿದೆ. ಸೀಮೆ ಎಣ್ಣೆ ಹಾಗೂ ಸಾದಾ ಡೀಸೆಲ್ ಬೆಲೆ 18 ರೂ.ಗೆ ಏರಿಕೆಯಾಗಿದೆ.
ಕಳೆದ ವಾರ ಡಾಲರ್ ಎದುರು ಪಾಕಿಸ್ತಾನದ ರೂಪಾಯಿ ಮೌಲ್ಯ ಕುಸಿತ ಉಂಟಾಗಿತ್ತು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯಲ್ಲಿ ಶೇಕಡಾ 11 ರಷ್ಟು ಏರಿಕೆಯಾಗುತ್ತಿದೆ ಎಂದು ಇಶಾಕ್ ದಾರ್ ಹೇಳಿದ್ದಾರೆ.
ಅಕ್ಟೋಬರ್‌ನಿಂದ ಪೆಟ್ರೋಲ್ ಬೆಲೆ ಏರಿಕೆ ಮಾಡಿಲ್ಲ ಎಂದು ಹೇಳಿದ್ದಾರೆ. ಕಳೆದ ವಾರ ಪಾಕಿಸ್ತಾನದ ರೂಪಾಯಿ ಅಪಮೌಲ್ಯವನ್ನು ಕಂಡಿತು ಮತ್ತು ಈಗ ನಾವು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಗಳಲ್ಲಿ ಶೇ. 11 ರಷ್ಟು ಹೆಚ್ಚಳವನ್ನು ನೋಡುತ್ತಿದ್ದೇವೆ ಎಂದು ಇಶಾಕ್ ದಾರ್ ಹೇಳಿದ್ದಾರೆಂದು ಡಾನ್ ಉಲ್ಲೇಖಿಸಿದೆ.
ಅಂತಾರಾಷ್ಟ್ರೀಯ ಬೆಲೆಗಳು ಮತ್ತು ರೂಪಾಯಿ ಮೌಲ್ಯ ಕುಸಿತದ ಹೊರತಾಗಿಯೂ, ಪ್ರಧಾನಿ ಶೆಹಬಾಜ್ ಷರೀಫ್ ಅವರ ನಿರ್ದೇಶನದ ಮೇರೆಗೆ, ನಾವು ಈ ನಾಲ್ಕು ಉತ್ಪನ್ನಗಳ ಕನಿಷ್ಠ ಬೆಲೆಯನ್ನು ಹೆಚ್ಚಿಸಲು ನಿರ್ಧರಿಸಿದ್ದೇವೆ ಎಂದು ಅವರು ಹೇಳಿದರು.
ಫೆಬ್ರವರಿ 1 ರಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ 45 ರಿಂದ 80 ರೂ.ಗಳವರೆಗೆ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲಾದ ವರದಿಗಳು ತಿಳಿಸಿವೆ. ಡಾಲರ್ ಮೌಲ್ಯದ ಏರಿಕೆಯಿಂದಾಗಿ ತೈಲ ಬೆಲೆಗಳು ಹೆಚ್ಚಾಗಲಿವೆ ಎಂದು ನಾವು ಸಾಮಾಜಿಕ ಮಾಧ್ಯಮದಲ್ಲಿ ವರದಿ ಮಾಡಿದ್ದೇವೆ. ಮತ್ತು ಅಂತರಾಷ್ಟ್ರೀಯ ಪೆಟ್ರೋಲಿಯಂ ದರಗಳು, ಪೆಟ್ರೋಲ್ ಪಂಪ್‌ನಲ್ಲಿ ಸರತಿ ಸಾಲಿನಲ್ಲಿ ನಿಂತಿದ್ದ ಹಾಸನವನ್ನು ಡಾನ್ ಉಲ್ಲೇಖಿಸಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ