US Shootout: ಅಮೆರಿಕದ ಲಾಸ್ ಏಂಜಲಿಸ್​ನಲ್ಲಿ ಶೂಟೌಟ್: ಮೂವರ ದುರ್ಮರಣ

Shootout at Los Angeles: ಬೆವರ್ಲಿ ಹಿಲ್ಸ್ ಪ್ರದೇಶದ ಬೆನೆಡಿಕ್ಟ್ ಕ್ಯಾನ್ಯೋನ್ ಎಂಬಲ್ಲಿನ ಪಾರ್ಕಿಂಗ್ ಜಾಗದಲ್ಲಿ ಶೂಟೌಟ್ ನಡೆದಿದೆ. ಇದೇ ಪಾರ್ಕಿಂಗ್ ಸ್ಥಳದಲ್ಲಿ ಮೂವರ ಶವ ಸಿಕ್ಕಿದೆ. ಆದರೆ ಈ ಘಟನೆಗೆ ಕಾರಣ ಏನು, ಘಟನೆ ಹೇಗೆ ಸಂಭವಿಸಿತು ಎಂಬ ಮಾಹಿತಿ ಸದ್ಯ ಲಭ್ಯ ಇಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

US Shootout: ಅಮೆರಿಕದ ಲಾಸ್ ಏಂಜಲಿಸ್​ನಲ್ಲಿ ಶೂಟೌಟ್: ಮೂವರ ದುರ್ಮರಣ
ಅಮೆರಿಕ ಪೊಲೀಸ್
Follow us
TV9 Web
| Updated By: ಸುಗ್ಗನಹಳ್ಳಿ ವಿಜಯಸಾರಥಿ

Updated on: Jan 29, 2023 | 9:24 AM

ಲಾಸ್ ಏಂಜಲೀಸ್: ಅಮೆರಿಕದಲ್ಲಿ ಮತ್ತೊಂದು ಶೂಟೌಟ್ ಪ್ರಕರಣ (Shootout Incident) ಬೆಳಕಿಗೆ ಬಂದಿದೆ. ಕ್ಯಾಲಿಫೋರ್ನಿಯಾ ರಾಜ್ಯದ ಲಾಸ್ ಏಂಜಲಿಸ್ ನಗರದ (Los Angeles City of California) ಪ್ರತಿಷ್ಠಿತ ಬೆವರ್ಲಿ ಹಿಲ್ಸ್ ಪ್ರದೇಶದಲ್ಲಿ ನಿನ್ನೆ ಶನಿವಾರ ರಾತ್ರಿ ಗುಂಡಿನ ಚಕಮಕಿ ನಡೆದಿದ್ದು, ಮೂವರು ಹತ್ಯೆಯಾಗಿದ್ದಾರೆ. ಆ ದುರ್ಘಟನೆಯಲ್ಲಿ ಇತರ ನಾಲ್ವರಿಗೆ ಗಾಯಗಳಾಗಿರುವುದು ತಿಳಿದುಬಂದಿದೆ. ಇಬ್ಬರು ಗಾಯಾಳುಗಳ ಸ್ಥಿತಿ ಗಂಭೀರವಾಗಿದ್ದು, ಎಲ್ಲಾ ನಾಲ್ವರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆವರ್ಲಿ ಹಿಲ್ಸ್ ಪ್ರದೇಶದ ಬೆನೆಡಿಕ್ಟ್ ಕ್ಯಾನ್ಯೋನ್ ಎಂಬಲ್ಲಿನ ಪಾರ್ಕಿಂಗ್ ಜಾಗದಲ್ಲಿ ಶೂಟೌಟ್ ನಡೆದಿದೆ. ಇದೇ ಪಾರ್ಕಿಂಗ್ ಸ್ಥಳದಲ್ಲಿ ಮೂವರ ಶವ ಸಿಕ್ಕಿದೆ. ಆದರೆ ಈ ಘಟನೆಗೆ ಕಾರಣ ಏನು, ಘಟನೆ ಹೇಗೆ ಸಂಭವಿಸಿತು ಎಂಬ ಮಾಹಿತಿ ಸದ್ಯ ಲಭ್ಯ ಇಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರತ್ಯಕ್ಷದರ್ಶಿಗಳ ಮಾಹಿತಿ ಪ್ರಕಾರ ಬಹಳ ಜನರು ಈ ಮನೆಯಲ್ಲಿ ಸೇರಿದ್ದರೆನ್ನಲಾಗಿದೆ. ಈ ಮನೆಯ ಸುತ್ತಮುತ್ತಲ ಕೆಲ ಮನೆಗಳು ಅಲ್ಪಾವಧಿಗೆ ಬಾಡಿಗೆ ಲಭ್ಯ ಇರುವಂಥವೆಂದು ಹೇಳಲಾಗುತ್ತಿದೆ.

ಈ ತಿಂಗಳಲ್ಲಿ 4ನೇ ಶೂಟೌಟ್

ಕ್ಯಾಲಿಫೋರ್ನಿಯಾ ರಾಜ್ಯದಲ್ಲಿ ಈ ಫೆಬ್ರುವರಿ ತಿಂಗಳಲ್ಲಿ ಇದು ಸಂಭವಿಸುತ್ತಿರುವುದು ನಾಲ್ಕನೇ ಶೂಟೌಟ್ ಆಗಿದೆ. ಕಳೆದ ವಾರ ಇದೇ ಲಾಸ್ ಏಂಜಲಿಸ್ ನಗರದ ಡ್ಯಾನ್ಸ್ ಬಾರ್​ವೊಂದರಲ್ಲಿ ಗುಂಡಿನ ಕಾಳಗ ನಡೆದು 11 ಮಂದಿ ಬಲಿಯಾಗಿದ್ದರು. ಸೌರಮಾನ ಹೊಸ ವರ್ಷದ ಆಚರಣೆ ಪ್ರಯುಕ್ತ ಸಾವಿರಾರು ಮಂದಿ ಈ ಬಾಲ್​ರೂಮ್ ಡ್ಯಾನ್ಸ್ ಹಾಲ್​ನಲ್ಲಿ ಸೇರಿದ್ದರು. 72 ವರ್ಷದ ಹೂ ಕಾನ್ ಟ್ರಾನ್ ಎಂಬ ವ್ಯಕ್ತಿ ಗನ್ ದಾಳಿ ಮಾಡಿ ಈ ಹತ್ಯಾಕಾಂಡ ನಡೆಸಿದ್ದ. ಆ ಘಟನೆ ಬಳಿಕ ಅದೇ ದುಷ್ಕರ್ಮಿ ಮತ್ತೊಂದು ಡ್ಯಾನ್ಸ್ ಹಾಲ್​ವೊಂದಕ್ಕೆ ಹೋಗಿ ಗುಂಡಿನ ದಾಳಿ ನಡೆಸಲು ವಿಫಲ ಯತ್ನ ನಡೆಸಿದ್ದ. ಪೊಲೀಸರು ಸುತ್ತುವರಿಯುತ್ತಿದ್ದಂತೆಯೇ ಆತ ತಾನೇ ಗುಂಡಿಟ್ಟುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ.

ಹಾಗೆಯೇ ಈ ತಿಂಗಳು ಎರಡು ಹಾಫ್ ಮೂನ್ ಬೇ ಫಾರ್ಮ್​ಗಳಲ್ಲೂ ಇದೇ ರೀತಿ ಶೂಟಿಂಗ್ ಸಂಭವಿಸಿ ಏಳು ಮಂದಿ ಸಾವನ್ನಪ್ಪಿ ಒಬ್ಬ ಗಾಯಗೊಂಡಿದ್ದು ವರದಿಯಾಗಿತ್ತು. ಇಲ್ಲಿಯೂ ಕೂಡ ಒಬ್ಬನೇ ವ್ಯಕ್ತಿಯಿಂದ ಈ ಎರಡು ಹತ್ಯಾಕಾಂಡಗಳು ಜರುಗಿದ್ದವು. ತಾನು ಕೆಲಸ ಮಾಡುತ್ತಿದ್ದ ಹಣಬೆ ತೋಟಕ್ಕೆ ನುಗ್ಗಿ ಈತ ನಾಲ್ವರನ್ನು ಸಾಯಿಸಿದ್ದ. ಬಳಿಕ ತಾನು ಹಿಂದೆ ಕೆಲಸ ಮಾಡುತ್ತಿದ್ದ ಮತ್ತೊಂದು ತೋಡಕ್ಕೆ ಹೋಗಿ ಅಲ್ಲಿ ಮೂವರನ್ನು ಹತ್ಯೆಗೈದಿದ್ದ. ಇಲ್ಲಿ 66 ವರ್ಷದ ಚುನ್ಲಿ ಝಾವೋ ಆರೋಪಿಯಾಗಿದ್ದಾನೆ. ಪೊಲೀಸರು ಈತನನ್ನು ಹಿಡಿದು ಜೈಲಿಗೆ ಹಾಕುವಲ್ಲಿ ಸಫಲರಾಗಿದ್ದಾರೆ.

ಕುತೂಹಲವೆಂದರೆ ಅಮೆರಿಕದಲ್ಲೇ ಅತ್ಯಂತ ಕಠಿಣ ಗನ್ ನಿರ್ಬಂಧಗಳ ಕಾನೂನು ಇರುವ ಕ್ಯಾಲಿಫೋರ್ನಿಯಾ ರಾಜ್ಯದಲ್ಲಿ ಕೆಲವೇ ದಿನಗಳ ಅಂತರದಲ್ಲಿ ನಾಲ್ಕು ಶೂಟೌಟ್ ಸಂಭವಿಸಿದೆ. ಬಹಳ ಶಾಂತಿಯುತ ರಾಜ್ಯವೆಂದೇ ಭಾವಿಸಲಾದ ಕ್ಯಾಲಿಫೋರ್ನಿಯಾದಲ್ಲಿ ಈತ ಸಾಲು ಸಾಲಾಗಿ ನೆತ್ತರ ಹೊಳೆ ಹರಿದಿದೆ.

ಅಮೆರಿಕದಲ್ಲಿ ಇತ್ತೀಚೆಗೆ ಶೂಟೌಟ್ ಸಂಭವಿಸುವುದು ತೀರಾ ಸಾಮಾನ್ಯವಾಗಿ ಹೋಗಿದೆ. ಕಳೆದ ವರ್ಷ 2022ರಲ್ಲಿ 600ಕ್ಕೂ ಹೆಚ್ಚು ಶೂಟೌಟ್ ಘಟನೆಗಳು ಬೆಳಕಿಗೆ ಬಂದಿವೆ. 2020ರಿಂದಲೂ ಅಲ್ಲಿ ಪ್ರತೀ ವರ್ಷ 600ಕ್ಕೂ ಹೆಚ್ಚು ಶೂಟೌಟ್ ಘಟನೆಗಳು ವರದಿಯಾಗುತ್ತಲೇ ಬಂದಿವೆ.

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ