AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pakistan Fuel Price Hike: ಆರ್ಥಿಕ ದಿವಾಳಿಯತ್ತ ಪಾಕಿಸ್ತಾನ: ಪೆಟ್ರೋಲ್, ಡೀಸೆಲ್ ಬೆಲೆ ಮತ್ತೆ ಏರಿಕೆ, ತೀರಾ ಸಂಕಷ್ಟದಲ್ಲಿ ಜನತೆ

ಪಾಕಿಸ್ತಾನವು ಆರ್ಥಿಕ  ದಿವಾಳಿಯತ್ತ ಸಾಗುತ್ತಿದೆ, ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಮತ್ತೆ ಏರಿಕೆಯಾಗಲಿದೆ. ಕೇವಲ ಪೆಟ್ರೋಲ್, ಡೀಸೆಲ್ ಬೆಲೆ ಮಾತ್ರವಲ್ಲದೆ ಬ್ರೆಡ್​, ಹಾಲಿನಿಂದ ಹಿಡಿದು ಚಹಾದವರೆಗೂ ಎಲ್ಲದರ ಬೆಲೆಯಲ್ಲಿ ಹೆಚ್ಚಳವಾಗುತ್ತಿದೆ.

Pakistan Fuel Price Hike: ಆರ್ಥಿಕ ದಿವಾಳಿಯತ್ತ ಪಾಕಿಸ್ತಾನ: ಪೆಟ್ರೋಲ್, ಡೀಸೆಲ್ ಬೆಲೆ ಮತ್ತೆ ಏರಿಕೆ, ತೀರಾ ಸಂಕಷ್ಟದಲ್ಲಿ ಜನತೆ
ಪೆಟ್ರೋಲ್, ಡೀಸೆಲ್
ನಯನಾ ರಾಜೀವ್
|

Updated on: Feb 16, 2023 | 10:39 AM

Share

ಪಾಕಿಸ್ತಾನವು ಆರ್ಥಿಕ  ದಿವಾಳಿಯತ್ತ ಸಾಗುತ್ತಿದೆ, ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಮತ್ತೆ ಏರಿಕೆಯಾಗಲಿದೆ. ಕೇವಲ ಪೆಟ್ರೋಲ್, ಡೀಸೆಲ್ ಬೆಲೆ ಮಾತ್ರವಲ್ಲದೆ ಬ್ರೆಡ್​, ಹಾಲಿನಿಂದ ಹಿಡಿದು ಚಹಾದವರೆಗೂ ಎಲ್ಲದರ ಬೆಲೆಯಲ್ಲಿ ಹೆಚ್ಚಳವಾಗುತ್ತಿದೆ. ಪೆಟ್ರೋಲ್ ಪಂಪ್ ಬಳಿ ಜನಜಂಗುಳಿ, ಜಗಳ ಸಾಮಾನ್ಯವಾಗಿಬಿಟ್ಟಿದೆ. ವಾಸ್ತವವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ. ಅದು ಫೆಬ್ರವರಿ 17 ರಿಂದ ಜಾರಿಗೆ ಬರಲಿದೆ. ಪೆಟ್ರೋಲ್ ಬೆಲೆಯನ್ನು 22 ರೂ. ಏರಿಕೆ ಮಾಡಲು ನಿರ್ಧರಿಸಲಾಗಿದೆ.

ಪಾಕಿಸ್ತಾನದ ವಿದೇಶಿ ವಿನಿಮಯ ಮೀಸಲು (Pakistan Forex Reserve ) ಶ್ರೀಲಂಕಾದಂತೆ ಬಹುತೇಕ ಖಾಲಿಯಾಗಿದೆ. ಕಳೆದ ವಾರದಲ್ಲಿ, ಇದು 3 ಬಿಲಿಯನ್‌ಗಿಂತ ಕಡಿಮೆಯಾಗಿದೆ, ಅಂದರೆ ಸರಳವಾಗಿ ಹೇಳುವುದಾದರೆ ದೇಶವನ್ನು ಒಂದು ತಿಂಗಳುಗಳ ಕಾಲ ನಡೆಸಲು ಸಾಕಾಗುವುದಿಲ್ಲ. ಆಹಾರ ಪದಾರ್ಥಗಳಿಂದ ಹಿಡಿದು ಪೆಟ್ರೋಲಿಯಂ ಉತ್ಪನ್ನಗಳವರೆಗೆ ಎಲ್ಲವನ್ನೂ ಆಮದು ಮಾಡಿಕೊಳ್ಳಲು ಪಾಕಿಸ್ತಾನಕ್ಕೆ ಸಾಧ್ಯವಾಗುತ್ತಿಲ್ಲ.

ಇದರಿಂದಾಗಿ ದೇಶದಲ್ಲಿ ಹಣದುಬ್ಬರ ತಲ್ಲಣ ಸೃಷ್ಟಿಸಿದೆ. ಜನವರಿ 29ರಂದು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಹೆಚ್ಚಿಸಲಾಯಿತು. ಪೆಟ್ರೋಲ್ ಬೆಲೆ ಲೀಟರ್​ಗೆ 249.80 ರೂ.ಗೆ ತಲುಪಿದ್ದರೆ, ಡೀಸೆಲ್ ಲೀಟರ್​ಗೆ 262.80 ರೂ.ಗೆ ತಲುಪಿದೆ. ಈಗ ಮತ್ತೆ 22 ರೂ. ಹೆಚ್ಚಾಗುವ ನಿರೀಕ್ಷೆ ಇದೆ. ರಾಯಿಟರ್ಸ್​ ವರದಿ ಪ್ರಕಾರ , ಪಾಕಿಸ್ತಾನದಲ್ಲಿ ಪೆಟ್ರೋಲ್ ಬೆಲೆಯನ್ನು 22.20 ರೂ. ಹೆಚ್ಚಿಸಲು ನಿರ್ಧರಿಸಲಾಗಿದೆ. ಇದಾದ ಬಳಿಕ ದೇಶದಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ ಲೀಟರ್​​ಗೆ 272 ರೂ.ಗೆ ಏರಿಕೆಯಾಗುತ್ತದೆ.

ಮತ್ತಷ್ಟು ಓದಿ: Pakistan Economic Crisis: ಪಾಕಿಸ್ತಾನಕ್ಕೆ ಆರ್ಥಿಕ ಸಂಕಷ್ಟ, ಹಣಕಾಸು ನೆರವಿನ ಕುರಿತು ನಿರ್ಧಾರಕ್ಕೆ ಬರಲು ಸಮಯ ಬೇಕು ಎಂದ ಐಎಂಎಫ್​

ಇದರೊಂದಿಗೆ ಹೈಸ್ಪೀಡ್ ಡೀಸೆಲ್ ಬೆಲೆಯನ್ನು ಲೀಟರ್​ಗೆ 17.20 ರೂ.ಗೆ ಹೆಚ್ಚಿಸಲಾಗುತ್ತಿದ್ದು, ನಂತರ ಪ್ರತಿ ಲೀಟರ್​ಗೆ 280 ರೂ. ಈ ಬೆಲೆಗಳು ಫೆಬ್ರವರಿ 16 ರ ಮಧ್ಯರಾತ್ರಿ 12 ಗಂಟೆಯಿಂದ ಅನ್ವಯವಾಗಲಿದೆ. ಮೂಡೀಸ್ ಅನಾಲಿಟಿಕ್ಸ್‌ನ ಹಿರಿಯ ಅರ್ಥಶಾಸ್ತ್ರಜ್ಞರೊಬ್ಬರು ಈ ವರ್ಷದ ಮೊದಲಾರ್ಧದಲ್ಲಿ ದೇಶದ ಹಣದುಬ್ಬರವು ಸರಾಸರಿ 33 ಪ್ರತಿಶತದಷ್ಟು ಇರಬಹುದು ಎಂದು ಹೇಳಿದರು ಮತ್ತು ಐಎಂಎಫ್‌ನ ಬೇಲ್‌ಔಟ್ ಆರ್ಥಿಕತೆಯನ್ನು ಮರಳಿ ಟ್ರ್ಯಾಕ್‌ಗೆ ತರುವುದು ಅಸಂಭವವಾದ್ದು ಎಂದು ಹೇಳಿದರು.

ಆರ್ಥಿಕತೆಯನ್ನು ಮರಳಿ ಟ್ರ್ಯಾಕ್‌ಗೆ ತರಲು IMF ಬೇಲ್‌ಔಟ್ ಮಾತ್ರ ಸಾಕಾಗುವುದಿಲ್ಲ ಎಂಬುದು ನಮ್ಮ ಅಭಿಪ್ರಾಯ. ಆರ್ಥಿಕತೆಗೆ ನಿಜವಾಗಿಯೂ ಬೇಕಾಗಿರುವುದು ನಿರಂತರ ಮತ್ತು ಉತ್ತಮ ಆರ್ಥಿಕ ನಿರ್ವಹಣೆಯಾಗಿದೆ ಎಂದು ಹಿರಿಯ ಅರ್ಥಶಾಸ್ತ್ರಜ್ಞ ಕತ್ರಿನಾ ಎಲ್ ರಾಯಿಟರ್ಸ್‌ಗೆ ತಿಳಿಸಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
ಪ್ರಶಾಂತನ ಮೇಲೆ ಬಂದ ಚಾಮುಂಡೇಶ್ವರಿಗೆ ಡಿಕೆಶಿ ಪುಷ್ಪಾರ್ಚನೆ
ಪ್ರಶಾಂತನ ಮೇಲೆ ಬಂದ ಚಾಮುಂಡೇಶ್ವರಿಗೆ ಡಿಕೆಶಿ ಪುಷ್ಪಾರ್ಚನೆ
ಪ್ರಶಾಂತ ಆನೆ ಬೆನ್ನಿಗೆ 750 ಕೆಜಿ ಚಿನ್ನದ ಅಂಬಾರಿ ಕಟ್ಟುವ ಪ್ರಕ್ರಿಯೆ ನೋಡಿ
ಪ್ರಶಾಂತ ಆನೆ ಬೆನ್ನಿಗೆ 750 ಕೆಜಿ ಚಿನ್ನದ ಅಂಬಾರಿ ಕಟ್ಟುವ ಪ್ರಕ್ರಿಯೆ ನೋಡಿ
ಮೈಸೂರು ದಸರಾ ಜಂಬೂ ಸವಾರಿ ಮೆರವಣಿಗೆಗೆ ಮೆರುಗು ನೀಡಿದ ಸ್ತಬ್ಧ ಚಿತ್ರಗಳು
ಮೈಸೂರು ದಸರಾ ಜಂಬೂ ಸವಾರಿ ಮೆರವಣಿಗೆಗೆ ಮೆರುಗು ನೀಡಿದ ಸ್ತಬ್ಧ ಚಿತ್ರಗಳು
ದಸರಾ ಹಾಗೂ ಮೈಸೂರಿನ ಬಗ್ಗೆ ರಮೇಶ್ ಮಾತು: ವಿಡಿಯೋ ನೋಡಿ
ದಸರಾ ಹಾಗೂ ಮೈಸೂರಿನ ಬಗ್ಗೆ ರಮೇಶ್ ಮಾತು: ವಿಡಿಯೋ ನೋಡಿ
ನನ್ನ ಬದುಕಿನಲ್ಲಿ ಇವತ್ತು ಮರೆಯಲಾಗದ ದಿನ: ಜನತೆಗೆ ಡಿಕೆಶಿ ಧನ್ಯವಾದ
ನನ್ನ ಬದುಕಿನಲ್ಲಿ ಇವತ್ತು ಮರೆಯಲಾಗದ ದಿನ: ಜನತೆಗೆ ಡಿಕೆಶಿ ಧನ್ಯವಾದ
ಅಗ್ನಿ ಅವಘಡ: 8ನೇ ಮಹಡಿಯಲ್ಲಿ ಹೊತ್ತಿಕೊಂಡ ದಸರಾ ಪೂಜೆ ವೇಳೆ ಹಚ್ಚಿದ್ದ ದೀಪ
ಅಗ್ನಿ ಅವಘಡ: 8ನೇ ಮಹಡಿಯಲ್ಲಿ ಹೊತ್ತಿಕೊಂಡ ದಸರಾ ಪೂಜೆ ವೇಳೆ ಹಚ್ಚಿದ್ದ ದೀಪ
ದಸರಾ ಸಂಭ್ರಮದಲ್ಲಿ ಭಾಗಿಯಾದ ರುಕ್ಮಿಣಿ ವಸಂತ್, ತಪಸ್ವಿನಿ ಪೂಣಚ್ಚ, ಸಪ್ತಮಿ
ದಸರಾ ಸಂಭ್ರಮದಲ್ಲಿ ಭಾಗಿಯಾದ ರುಕ್ಮಿಣಿ ವಸಂತ್, ತಪಸ್ವಿನಿ ಪೂಣಚ್ಚ, ಸಪ್ತಮಿ
ನಂದಿ ಧ್ವಜಕ್ಕೆ ಡಿಕೆಶಿ ಪೂಜೆ ಸಲ್ಲಿಕೆ:ಮೈಸೂರಿನಲ್ಲಿ ಮರುಕಳಿಸಿದ ಗತ ವೈಭವ
ನಂದಿ ಧ್ವಜಕ್ಕೆ ಡಿಕೆಶಿ ಪೂಜೆ ಸಲ್ಲಿಕೆ:ಮೈಸೂರಿನಲ್ಲಿ ಮರುಕಳಿಸಿದ ಗತ ವೈಭವ
ಮೊದಲ ಬಾರಿ ವಜ್ರಮುಷ್ಠಿ ಕಾಳಗ ರದ್ದು, ಮೈಸೂರಿನ ಜಟ್ಟಿ ಮಹೇಶ್ ರಿಯಾಕ್ಷನ್
ಮೊದಲ ಬಾರಿ ವಜ್ರಮುಷ್ಠಿ ಕಾಳಗ ರದ್ದು, ಮೈಸೂರಿನ ಜಟ್ಟಿ ಮಹೇಶ್ ರಿಯಾಕ್ಷನ್
ಸೌಜನ್ಯ ಪ್ರಕರಣ: ಇನ್ನೆರಡು ದಿನದಲ್ಲಿ ಅಪರಾಧ ಸ್ಥಳಕ್ಕೆ ಎಸ್​ಐಟಿ ಭೇಟಿ
ಸೌಜನ್ಯ ಪ್ರಕರಣ: ಇನ್ನೆರಡು ದಿನದಲ್ಲಿ ಅಪರಾಧ ಸ್ಥಳಕ್ಕೆ ಎಸ್​ಐಟಿ ಭೇಟಿ