Haryana Violence: ಅಲ್ಲಿರಲೂ ಆಗದೆ ವಾಪಸ್ ತಮ್ಮ ಊರಿಗೆ ತೆರಳಲು ದುಡ್ಡಿಲ್ಲದೆ ತ್ರಿಶಂಕು ಸ್ಥಿತಿಯಲ್ಲಿವೆ 15 ವಲಸೆ ಮುಸ್ಲಿಂ ಕುಟುಂಬಗಳು

|

Updated on: Aug 03, 2023 | 8:51 AM

ಹರ್ಯಾಣದ ನುಹ್​ನಿಂದ ಹಿಂಸಾಚಾರ ರಾಜ್ಯದ ಇತರೆ ಭಾಗಗಳಿಗೂ ವ್ಯಾಪಿಸಿದೆ. ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ ಆರಕ್ಕೆ ಏರಿದೆ. ಗುರುಗ್ರಾಮದಂತಹ ಮಹಾನಗರದಲ್ಲೂ ಪರಿಸ್ಥಿತಿ ಹದಗೆಟ್ಟಿದೆ

Haryana Violence: ಅಲ್ಲಿರಲೂ ಆಗದೆ ವಾಪಸ್ ತಮ್ಮ ಊರಿಗೆ ತೆರಳಲು ದುಡ್ಡಿಲ್ಲದೆ ತ್ರಿಶಂಕು ಸ್ಥಿತಿಯಲ್ಲಿವೆ 15 ವಲಸೆ ಮುಸ್ಲಿಂ ಕುಟುಂಬಗಳು
ಹರ್ಯಾಣ ಹಿಂಸಾಚಾರ
Image Credit source: India Today
Follow us on

ಹರ್ಯಾಣದ ನುಹ್​ನಿಂದ ಹಿಂಸಾಚಾರ(Violence) ರಾಜ್ಯದ ಇತರೆ ಭಾಗಗಳಿಗೂ ವ್ಯಾಪಿಸಿದೆ. ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ ಆರಕ್ಕೆ ಏರಿದೆ. ಗುರುಗ್ರಾಮದಂತಹ ಮಹಾನಗರದಲ್ಲೂ ಪರಿಸ್ಥಿತಿ ಹದಗೆಟ್ಟಿದೆ. ಈ ಪ್ರದೇಶದಲ್ಲಿ ವಾಸಿಸುವ ಪಶ್ಚಿಮ ಬಂಗಾಳದ 100ಕ್ಕೂ ಅಧಿಕ ಮುಸ್ಲಿಂ ಕುಟುಂಬಗಳಲ್ಲಿ ಕೇವಲ 15 ಕುಟುಂಬಗಳ ಮಾತ್ರ ಉಳಿದಿವೆ. ಉಳಿದೆಲ್ಲರೂ ವಲಸೆ ಹೋಗಿದ್ದಾರೆ.

ಕಳೆದ ಸಂಜೆ ಕೆಲವರು ಮುಸ್ಲಿಮರು ಬಂದು ನಮ್ಮನ್ನು ಹಿಂದಿರುಗುವಂತೆ ಕೇಳಿದರು ಆದರೆ ಊರಿಗೆ ಹಿಂದಿರುಗಲು ನಮ್ಮ ಬಳಿ ಹಣವಿಲ್ಲ, ಹಾಗೂ ಸ್ಥಳೀಯ ಅಂಗಡಿಗಳಲ್ಲಿ ಸಾಲ ಮಾಡಿದ್ದೇವೆ ಅದನ್ನು ತೀರಿಸುವುದು ಬಾಕಿ ಇದೆ. ನನಗೆ ಏನಾದರೂ ತೊಂದರೆ ಇಲ್ಲ ಆದರೆ ಒಂದು ವರ್ಷದ ಮಗನಿದ್ದಾನೆ ಆತನನ್ನು ರಕ್ಷಿಸಬೇಕಿದೆ, ದಯವಿಟ್ಟು ಸಹಾಯ ಮಾಡಿ ಎಂದು ಶಮೀಮ್ ಹುಸೇನ್ ಕಣ್ಣೀರು ಹಾಕಿದ್ದಾರೆ.

ಗುರುಗ್ರಾಮ ಜಿಲ್ಲಾಧಿಕಾರಿಗಳು ವಲಸೆ ಕುಟುಂಬಗಳನ್ನು ರಕ್ಷಿಸಲಾಗುವುದು ಎಂದು ಭರವಸೆ ನೀಡಿದರು. ಎರಡೂ ಸಮುದಾಯಗಳ ಸೂಕ್ಷ್ಮ ಪ್ರದೇಶಗಳು ಹಾಗೂ ಧಾರ್ಮಿಕ ಸ್ಥಳಗಳಾದ ಮಸೀದಿ ಮತ್ತು ದೇವಾಲಯಗಳ ಸುತ್ತಲೂ ರಾತ್ರಿ ಇಡಿ ಭದ್ರತೆ ಕಲ್ಪಿಸಲಾಗುತ್ತಿದೆ ಎಂದು ಹೇಳಿದರು.

ಮಸೀದಿಯಿಂದ ನಡೆದ ಗುಂಡಿನ ದಾಳಿಯ ಬಗ್ಗೆ ಮಾಹಿತಿ ಪಡೆದ ನಂತರ, ಕ್ರೈಂ ಬ್ರಾಂಚ್ ತಂಡವು 7 ಯುವಕರನ್ನು ಬಂಧಿಸಿದ್ದು, ಅವರಿಂದ ಬಾಟಲಿಗಳಿಂದ ತಯಾರಿಸಿದ ಮೂರು ಪೆಟ್ರೋಲ್ ಬಾಂಬ್‌ಗಳನ್ನು ಸಹ ವಶಪಡಿಸಿಕೊಂಡಿದ್ದಾರೆ. ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಇದುವರೆಗೆ 80 ಜನರನ್ನು ಬಂಧಿಸಲಾಗಿದೆ. ಅದೇ ಸಮಯದಲ್ಲಿ, ಇದುವರೆಗೆ 44 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಎಂದು ಸರ್ಕಾರ ಹೇಳಿದೆ.

ಮತ್ತಷ್ಟು ಓದಿ: ನುಹ್ ಹಿಂಸಾಚಾರ ಖಂಡಿಸಿ ಪ್ರತಿಭಟನೆ: ಉತ್ತರ ಪ್ರದೇಶ, ಹರ್ಯಾಣ ಮತ್ತು ದೆಹಲಿಗೆ ಸುಪ್ರೀಂ ನೋಟಿಸ್; ಆಗಸ್ಟ್ 4ಕ್ಕೆ ಮುಂದಿನ ವಿಚಾರಣೆ

ಈ ಪ್ರತಿಭಟನೆಗಳಲ್ಲಿ ಯಾವುದೇ ಹಿಂಸಾಚಾರ ಮತ್ತು ದ್ವೇಷದ ಭಾಷಣಗಳು ನಡೆಯದಂತೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ನ್ಯಾಯಾಲಯ ಹೇಳಿದೆ. ಅರೆಸೇನಾ ಪಡೆಗಳ ಸಿಬ್ಬಂದಿ ಸೇರಿದಂತೆ ಸಾಕಷ್ಟು ಬಲವನ್ನು ನೆಲದ ಮೇಲೆ ಹಾಕುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.

ವಿಶ್ವ ಹಿಂದೂ ಪರಿಷತ್ತಿನ ಬ್ರಿಜ್ ಮಂಡಲ್ ಜಲಾಭಿಷೇಕ ಯಾತ್ರೆ ಸಂದರ್ಭದಲ್ಲಿ ನಡೆಯುತ್ತಿದ್ದ ಮೆರವಣಿಗೆಯನ್ನು ಯುವಕರ ಗುಂಪೊಂದು ಹರಿಯಾಣದ ನುಹ್ ಜಿಲ್ಲೆಯ ಖೇಡ್ಲಾ ಮೋಡ್ ಬಳಿ ಜುಲೈ 31ರಂದು ತಡೆದಿದೆ. ಬಲ್ಲಭಗಢದಲ್ಲಿ ಬಜರಂಗದಳದ ಕಾರ್ಯಕರ್ತರೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ಆಕ್ಷೇಪಾರ್ಹ ವಿಡಿಯೋಗಳು ಘರ್ಷಣೆಗೆ ಪ್ರಚೋದಕವಾಗಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 8:50 am, Thu, 3 August 23