ಪ್ರಧಾನಿ ಮೋದಿಯೊಂದಿಗಿನ ಮೊದಲ ಭೇಟಿ ನೆನಪಿಸಿಕೊಂಡ ಮಿಲಿಂದ್ ದಿಯೋರಾ

|

Updated on: May 13, 2024 | 7:01 PM

ನರೇಂದ್ರ ಮೋದಿ ಜಿ ಅವರು ನನ್ನ ಮುಂದೆ ಕುಳಿತಿದ್ದರು. ನಾನು ಅವರನ್ನು ಸ್ವಾಗತಿಸಿದೆ. ಅವರು ಹಿಂದೆ ತಿರುಗಿ, 'ಮಿಲಿಂದ್ ಭಾಯ್, ಹೇಗಿದ್ದೀರಿ?' ಎಂದು ಕೇಳಿದರು. ನಾನು ರಾಜಕೀಯಕ್ಕೆ ತುಂಬಾ ಹೊಸಬ. ಆಗ ಕೇವಲ 27 ವರ್ಷ ವಯಸ್ಸಿನವನಾಗಿದ್ದರಿಂದ ನನಗೆ ಅವರ ನಡೆ ಕಂಡು ಆಶ್ಚರ್ಯವಾಯಿತು ಎಂದು ಮಿಲಿಂದ್ ದಿಯೋರಾ ಮೋದಿ ಜತೆಗಿನ ಮೊದಲ ಭೇಟಿಯನ್ನು ನೆನಪಿಸಿಕೊಂಡಿದ್ದಾರೆ.

ಪ್ರಧಾನಿ ಮೋದಿಯೊಂದಿಗಿನ ಮೊದಲ ಭೇಟಿ ನೆನಪಿಸಿಕೊಂಡ ಮಿಲಿಂದ್ ದಿಯೋರಾ
ಮಿಲಿಂದ್ ದಿಯೋರಾ- ಮೋದಿ
Follow us on

ಮುಂಬೈ ಮೇ 13: ಗುಜರಾತ್ ಸಿಎಂ ಆಗಿದ್ದ ಅವಧಿಯಲ್ಲಿ ನರೇಂದ್ರ ಮೋದಿ (Narendra Modi) ಅವರೊಂದಿಗಿನ ಮೊದಲ ಭೇಟಿಯನ್ನು ಏಕನಾಥ್ ಶಿಂಧೆ ನೇತೃತ್ವದ ಶಿವಸೇನಾ (Shiv Sena) ನಾಯಕ ಮಿಲಿಂದ್ ದಿಯೋರಾ (Milind Deora) ಅವರು ಸೋಮವಾರ ನೆನಪಿಸಿಕೊಂಡಿದ್ದಾರೆ. ಮೋದಿಯವರ ವೈಯಕ್ತಿಕ ಸಂಪರ್ಕ ಮತ್ತು ಜ್ಞಾನದಿಂದ ನನಗೆ ಅಚ್ಚರಿಯಾಯಿತು ಎಂದು ದಿಯೋರಾ ಹೇಳಿದ್ದಾರೆ. ದಿವಂಗತ ಪ್ರಮೋದ್ ಮಹಾಜನ್ ಅವರ ಅಂತ್ಯಕ್ರಿಯೆ ವೇಳೆ ಮೊದಲ ಭೇಟಿ ನಡೆದಿತ್ತು ಎಂದ ದಿಯೋರಾ, ಅಲ್ಲಿ ವೇದಿಕೆಯಲ್ಲಿ ಕುಳಿತಿದ್ದ ಪ್ರಧಾನಿ ಮೋದಿ ಅವರನ್ನು ನಾನು ಬರ ಮಾಡಿಕೊಂಡಿದ್ದೆ. ಆಗ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಮೋದಿಯವರೊಂದಿಗಿನ ಮೊದಲ ಭೇಟಿಯಾಗಿತ್ತು ಅದು.

ನರೇಂದ್ರ ಮೋದಿ ಜಿ ಅವರು ನನ್ನ ಮುಂದೆ ಕುಳಿತಿದ್ದರು. ನಾನು ಅವರನ್ನು ಸ್ವಾಗತಿಸಿದೆ. ಅವರು ಹಿಂದೆ ತಿರುಗಿ, ‘ಮಿಲಿಂದ್ ಭಾಯ್, ಹೇಗಿದ್ದೀರಿ?’ ಎಂದು ಕೇಳಿದರು. ನಾನು ರಾಜಕೀಯಕ್ಕೆ ತುಂಬಾ ಹೊಸಬ. ಆಗ ಕೇವಲ 27 ವರ್ಷ ವಯಸ್ಸಿನವನಾಗಿದ್ದರಿಂದ ನನಗೆ ಅವರ ನಡೆ ಕಂಡು ಆಶ್ಚರ್ಯವಾಯಿತು. ಕೆಲವೇ ಕೆಲವರು ನನ್ನನ್ನು ಗುರುತಿಸಿದರು. ಅವರು (ಮೋದಿ) ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಾರೆ. ಅವರಿಗೆ ಎಲ್ಲರೂ ಗೊತ್ತು ಎಂದು ಎಂದು ಪಿಟಿಐ ಹಂಚಿಕೊಂಡ ವಿಡಿಯೊದಲ್ಲಿ ದಿಯೋರಾ ಹೇಳಿದ್ದಾರೆ.

ಮೋದಿಯವರ ಭೇಟಿ ನೆನಪಿಸಿಕೊಂಡ ದಿಯೋರಾ

ಪಿಎಂ ಮೋದಿ ನಿರಂತರವಾಗಿ ಪಕ್ಷ ರಾಜಕೀಯದಿಂದ ಹೊರಗೆ ಯೋಚಿಸುತ್ತಿದ್ದು, ಪಕ್ಷಗಳ ಸಂಬಂಧವನ್ನು ಲೆಕ್ಕಿಸದೆ ಜನರಿಗೆ ಗೌರವವನ್ನು ತೋರಿಸುತ್ತಾರೆ ಎಂದು ದಿಯೋರಾ ಹೇಳಿದ್ದಾರೆ.

ಹ್ಯೂಸ್ಟನ್‌ನಲ್ಲಿ ನಡೆದ ‘ಹೌಡಿ ಮೋದಿ’ ಕಾರ್ಯಕ್ರಮದಲ್ಲಿ ಪಿಎಂ ಮೋದಿಯವರ ಪಕ್ಷಾತೀತ ವಿಧಾನದ ಬಗ್ಗೆ ದಿಯೋರಾ ಪ್ರಸ್ತಾಪಿಸಿದ್ದಾರೆ. ಭಾರತ ಮತ್ತು ಅಮೆರಿಕ ನಡುವಿನ ಸಂಬಂಧವನ್ನು ಬಲಪಡಿಸುವಲ್ಲಿ ದಿವಂಗತ ಮುರಳಿ ದಿಯೋರಾ (ಮಿಲಿಂದ್ ದಿಯೋರಾ ಅವರ ತಂದೆ) ಕೊಡುಗೆಗಳನ್ನು ಮೋದಿ ಅವರು ಸ್ಮರಿಸಿದ್ದಾರೆ.

ಇದನ್ನೂ ಓದಿ: Rahul Gandhi: ಮದುವೆ ಯಾವಾಗ?; ರಾಯ್​ಬರೇಲಿ ಜನರಿಗೆ ನಗುತ್ತಲೇ ಉತ್ತರ ಕೊಟ್ಟ ರಾಹುಲ್ ಗಾಂಧಿ

‘ನನ್ನ ಸ್ನೇಹಿತ ಮುರಳಿ ದಿಯೋರಾ ಇಂದು ನಿಜವಾಗಿಯೂ ಸಂತೋಷವಾಗಿರುತ್ತಾರೆ’ ಎಂದು ಪ್ರಧಾನಿ ಮೋದಿಯವರ ಟ್ವೀಟ್ ದಿಯೋರಾ ಕುಟುಂಬ ಮತ್ತು ಪಕ್ಷದ ಕಾರ್ಯಕರ್ತರ ಹೃದಯದಲ್ಲಿ ವಿಶೇಷ ಸ್ಥಾನವನ್ನು ಮೂಡಿಸಿದೆ ಎಂದು ಅವರು ಹೇಳಿದರು.

ಮಾಜಿ ಸಂಸದ ಮಿಲಿಂದ್ ದಿಯೋರಾ ಅವರು ಮುಂಬೈ ದಕ್ಷಿಣ ಲೋಕಸಭಾ ಕ್ಷೇತ್ರವನ್ನು ಎರಡು ಬಾರಿ ಪ್ರತಿನಿಧಿಸಿದ್ದರು. 2004 ರಲ್ಲಿ ಮತ್ತು ನಂತರ 2009 ರಲ್ಲಿ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಅವರು ಇತ್ತೀಚೆಗೆ ಕಾಂಗ್ರೆಸ್ ಪಕ್ಷವನ್ನು ತೊರೆದ ನಂತರ ಏಕನಾಥ್ ಶಿಂಧೆ ನೇತೃತ್ವದ ಶಿವಸೇನಾ ಸೇರಿದರು. ದಿಯೋರಾ ಅವರನ್ನು ಮಹಾರಾಷ್ಟ್ರದಿಂದ ರಾಜ್ಯಸಭಾ ಸಂಸದರಾಗಿ ನೇಮಕ ಮಾಡಲಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ