ಚೀತಾಗಳಿಗೆ ಮಿಲ್ಖಾ,ಚೇತಕ್,ವೀರಾ ಸೇರಿದಂತೆ 750ಕ್ಕಿಂತಲೂ ಹೆಚ್ಚು ಹೆಸರು ಸೂಚನೆ

| Updated By: ರಶ್ಮಿ ಕಲ್ಲಕಟ್ಟ

Updated on: Sep 27, 2022 | 8:49 PM

MyGov ಪ್ಲಾಟ್‌ಫಾರ್ಮ್ ಇದುವರೆಗೆ ಚೀತಾಗಳಿಗೆ ವೀರ, ಪ್ನಾಕಿ, ಭೈರವ್, ಬ್ರಹ್ಮ, ರುದ್ರ, ದುರ್ಗಾ, ಗೌರಿ, ಭದ್ರ, ಶಕ್ತಿ, ಬ್ರಹಸ್ಪತಿ, ಚಿನ್ಮಯಿ, ಚತುರ, ವೀರ, ರಕ್ಷಾ, ಮೇಧಾ ಮತ್ತು ಮಯೂರ್ ಮುಂತಾದ ಹೆಸರುಗಳನ್ನು ಸೂಚಿಸುವ 750 ಕ್ಕೂ

ಚೀತಾಗಳಿಗೆ  ಮಿಲ್ಖಾ,ಚೇತಕ್,ವೀರಾ ಸೇರಿದಂತೆ 750ಕ್ಕಿಂತಲೂ ಹೆಚ್ಚು ಹೆಸರು ಸೂಚನೆ
ಚೀತಾವನ್ನು ವೀಕ್ಷಿಸುತ್ತಿರುವ ಮೋದಿ
Follow us on

ದೆಹಲಿ: ಸೆಪ್ಟೆಂಬರ್ 17 ರಂದು ತಮ್ಮ ಜನ್ಮದಿನದಂದು ಮಧ್ಯಪ್ರದೇಶದ (Madhya Pradesh) ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ (Kuno National Park) ಬಿಡುಗಡೆ ಮಾಡಲಾದ ಎಂಟು ಚೀತಾಗಳಿಗೆ ಮಿಲ್ಖಾ, ಚೇತಕ್, ವಾಯು, ಸ್ವಸ್ತಿ ಮತ್ತು ತ್ವರಾ ಹೀಗೆ ಹಲವಾರು ಹೆಸರುಗಳನ್ನು ಜನರು ಸೂಚಿಸಿದ್ದಾರೆ. ಚೀತಾವನ್ನು ತರುವ ಭಾರತದ ಮಹತ್ವಾಕಾಂಕ್ಷೆಯ ಕಾರ್ಯಕ್ರಮದ ಭಾಗವಾಗಿ ನಮೀಬಿಯಾದಿಂದ ಈ ಚೀತಾಗಳನ್ನು ತರಲಾಗಿದೆ ಭಾನುವಾರ ತಮ್ಮ ಮಾಸಿಕ ರೇಡಿಯೋ ಭಾಷಣ ‘ಮನ್ ಕಿ ಬಾತ್’ ನಲ್ಲಿ, ಪಿಎಂ ಮೋದಿ ಅವರು ಪ್ರಾಣಿಗಳಿಗೆ ಹೆಸರುಗಳನ್ನು ಸೂಚಿಸಲು MyGov ವೇದಿಕೆಯಲ್ಲಿ ಸ್ಪರ್ಧೆಗಳಲ್ಲಿ ಭಾಗವಹಿಸುವಂತೆ ದೇಶದ ಜನರಿಗೆ ಕರೆ ನೀಡಿದ್ದರು. ಚೀತಾಗಳು ಹೊಸ ಪರಿಸರಕ್ಕೆ ಹೊಂದಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಈ ಬಗ್ಗೆ ಕಾರ್ಯಪಡೆ ಪರಿಶೀಲಿಸಿದ ನಂತರ ಉದ್ಯಾನವನವನ್ನು ಸಾರ್ವಜನಿಕರಿಗೆ ತೆರೆಯಬಹುದೇ ಎಂಬ ಬಗ್ಗೆ ಸರ್ಕಾರ ನಿರ್ಧರಿಸುತ್ತದೆ ಎಂದು ಅವರು ಹೇಳಿದರು. ಚೀತಾಗಳನ್ನು ನೋಡಲು ಜನರಿಗೆ ಯಾವಾಗ ಅವಕಾಶ ಸಿಗುತ್ತದೆ ಎಂದು ದೇಶಾದ್ಯಂತ ಸಂದೇಶಗಳು ಬರುತ್ತಿವೆ ಎಂದು ಪ್ರಧಾನಿ ಮೋದಿ ಹೇಳಿದರು.

ಮಂಗಳವಾರ, ಅವರು ಮತ್ತೊಮ್ಮೆ ಚೀತಾಗೆ ಹೆಸರುಗಳನ್ನು ಸೂಚಿಸುವ ಸ್ಪರ್ಧೆಗಳಲ್ಲಿ ಮತ್ತು ಅವುಗಳ ಮರುಪರಿಚಯ ಯೋಜನೆಯಲ್ಲಿ ಭಾಗವಹಿಸುವಂತೆ ಜನರನ್ನು ಒತ್ತಾಯಿಸಿದರು. ಭಾಗವಹಿಸುವವರಿಗೆ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಚೀತಾಗಳನ್  ನೋಡಲು ಪ್ರವಾಸವನ್ನು ಗೆಲ್ಲುವ ಅವಕಾಶವಿದೆ. ಸಲ್ಲಿಕೆಗೆ ಕೊನೆಯ ದಿನಾಂಕ ಅಕ್ಟೋಬರ್ 26.

MyGov ಪ್ಲಾಟ್‌ಫಾರ್ಮ್ ಇದುವರೆಗೆ ಚೀತಾಗಳಿಗೆ ವೀರ, ಪ್ನಾಕಿ, ಭೈರವ್, ಬ್ರಹ್ಮ, ರುದ್ರ, ದುರ್ಗಾ, ಗೌರಿ, ಭದ್ರ, ಶಕ್ತಿ, ಬ್ರಹಸ್ಪತಿ, ಚಿನ್ಮಯಿ, ಚತುರ, ವೀರ, ರಕ್ಷಾ, ಮೇಧಾ ಮತ್ತು ಮಯೂರ್ ಮುಂತಾದ ಹೆಸರುಗಳನ್ನು ಸೂಚಿಸುವ 750 ಕ್ಕೂ ಹೆಚ್ಚು ಸಲ್ಲಿಕೆಗಳನ್ನು ಸ್ವೀಕರಿಸಿದೆ. ಮರುಪರಿಚಯ ಯೋಜನೆಗಾಗಿ, 800 ಕ್ಕೂ ಹೆಚ್ಚು ಜನರು ‘ಕುನೋ ಕಾ ಕುಂದನ್’, ‘ಮಿಷನ್ ಚಿತ್ರಕ್’, ‘ಚಿರಾಯು’ ಮತ್ತು ‘ಚಿತ್ವಾಲ್’ ಮುಂತಾದ ಶೀರ್ಷಿಕೆಗಳನ್ನು ಸೂಚಿಸಿದ್ದಾರೆ.


1952 ರಲ್ಲಿ ದೇಶದಲ್ಲಿ ಅಳಿವಿನಂಚಿನಲ್ಲಿದೆ ಎಂದು ಘೋಷಿಸಿದ 70 ವರ್ಷಗಳ ನಂತರ ಚೀತಾ ಭಾರತಕ್ಕೆ ಮರಳಿ ಬಂದಿದೆ. ನಮೀಬಿಯಾದಿಂದ ಕರೆತಂದ ಐದು ಹೆಣ್ಣು ಮತ್ತು ಮೂರು ಗಂಡು ಎಂಬ ಎಂಟು ಚೀತಾಗಳ ಮೊದಲ ಬ್ಯಾಚ್ ಅನ್ನು ಕುನೋ ರಾಷ್ಟ್ರೀಯ ಉದ್ಯಾನವನದ ಆವರಣಕ್ಕೆ ಪ್ರಧಾನಿ ಮೋದಿ ಬಿಡುಗಡೆ ಮಾಡಿದರು.

ಚೀತಾಗಳಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಹೆಣ್ಣು ಚೀತಾ ಕೆಲಸಗಾರರ ಆರೈಕೆಯಿಂದ ಆರೋಗ್ಯಕ್ಕೆ ಮರಳಿತು. ಪ್ರಾಣಿಗಳ ವಯಸ್ಸು ಎರಡು ಮತ್ತು ಐದು ವರ್ಷಗಳು. ಕ್ವಾರಂಟೈನ್ ಆವರಣದಲ್ಲಿ ತಮ್ಮ 30 ದಿನಗಳ ವಾಸ್ತವ್ಯದ ನಂತರ, ಚೀತಾಗಳನ್ನು ತಮ್ಮ ಹೊಸ ಪರಿಸರದೊಂದಿಗೆ ಪರಿಚಿತರಾಗಲು ಆರು ಚದರ ಕಿಲೋಮೀಟರ್‌ಗಿಂತ ಹೆಚ್ಚಿನ ದೊಡ್ಡ ಆವರಣಕ್ಕೆ ಬಿಡುಗಡೆ ಮಾಡಲಾಗುವುದು. ಅಲ್ಲಿ ರಾಷ್ಟ್ರೀಯ ಉದ್ಯಾನವನಕ್ಕೆ ಬಿಡುಗಡೆ ಮಾಡುವ ಮೊದಲು ಕನಿಷ್ಠ ಒಂದು ತಿಂಗಳ ಕಾಲ ಉಳಿಯುತ್ತದೆ.