AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈತನ ಪ್ರತಿಭೆಗೆ ಸಲಾಂ ಗುರು, ಪೆನ್ಸಿಲ್‌ನ ತುದಿಯಲ್ಲಿ 2024 ಕೆತ್ತಿದ ಯುವಕ!

new year 2024: ಯುವಕ ವೆಂಕಟೇಶ್ ಪೆನ್ಸಿಲ್‌ ದಿಯಲ್ಲಿ ಸಂಖ್ಯೆ 2024 ಕೆತ್ತಿದ್ದು, ಎಲ್ಲರ ಗಮನ ಸೆಳೆಯುತ್ತಿದೆ. ಮಿನಿಯೇಚರ್ ಕಲಾವಿದ ವೆಂಕಟೇಶ್ ಹೀಗೆ ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳನ್ನು ಕೋರಿರುವುದು ಅಪರೂಪದ್ದಾಗಿದೆ. ಈ ಕಿರು ಮೇರುಕೃತಿಯನ್ನು ನೋಡಿದವರೆಲ್ಲರೂ ಅವರ ಪ್ರತಿಭೆಗೆ ತಲೆದೂಗಿದ್ದಾರೆ.

ಈತನ ಪ್ರತಿಭೆಗೆ ಸಲಾಂ ಗುರು, ಪೆನ್ಸಿಲ್‌ನ ತುದಿಯಲ್ಲಿ 2024 ಕೆತ್ತಿದ ಯುವಕ!
ಪೆನ್ಸಿಲ್‌ನ ತುದಿಯಲ್ಲಿ 2024 ಕೆತ್ತಿದ ಯುವಕ!
ಸಾಧು ಶ್ರೀನಾಥ್​
|

Updated on: Jan 02, 2024 | 2:13 PM

Share

ಹೊಸ ವರ್ಷಕ್ಕೆ ಭವ್ಯ ಸ್ವಾಗತ ಕೋರುತ್ತಾ… ಎಲ್ಲರೂ ವಿಭಿನ್ನ ಶೈಲಿಯಲ್ಲಿ ಆಚರಿಸಿ ಶುಭ ಹಾರೈಸಿದರು. ಆದರೆ ಅಪರೂಪದ ಕಲಾವಿದ ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ಹೊಸ ವರ್ಷವನ್ನು ಆಹ್ವಾನಿಸುವ ಮೂಲಕ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. ಹೊಸ ವರ್ಷದ ಮುನ್ನಾ ದಿನದಂದು ಅದ್ಭುತವಾದ ಕಲಾಕೃತಿಯನ್ನು (Miniature) ಕೆತ್ತಲಾಗಿದೆ. ಪೆನ್ಸಿಲ್‌ನ (Pencil) ತುದಿಯಲ್ಲಿ ಅವರು 2024 ಸಂಖ್ಯೆಯ (new year 2024) ಶಿಲ್ಪವನ್ನು ಪೆನ್ಸಿಲ್‌ನ ತುದಿಯಲ್ಲಿ ಕೆತ್ತಿ, ವಾವ್ ಅನ್ನುವಂತೆ ಮಾಡಿದ್ದಾರೆ.

ಅನಕಾಪಲ್ಲಿ ಜಿಲ್ಲೆಯ ನಕ್ಕಪಲ್ಲಿ ಮಂಡಲದ ದೊಡ್ಡಿಗೊಲ್ಲು ಗ್ರಾಮದ ವೆಂಕಟೇಶ್ ಎಂಬ ಕಲಾವಿದನಿಗೆ ಸೂಕ್ಷ್ಮ ಕೆತ್ತನೆ ಕಲಾಕೃತಿಗಳನ್ನು ರಚಿಸುವ ಹವ್ಯಾಸವಿದೆ. ಪ್ರತಿ ಬಾರಿಯೂ.. ಸಂದರ್ಭಕ್ಕೆ ತಕ್ಕಂತೆ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವಂತೆ ಕೆತ್ತುತ್ತಾರೆ. ಚಿಕ್ಕ ವಸ್ತುಗಳ ಮೇಲೆ ಅನೇಕ ದೇವರ ವಿಗ್ರಹಗಳನ್ನು, ಮಹಾನ್ ವ್ಯಕ್ತಿಗಳ ಮೂರ್ತಿಗಳನ್ನು ತಮ್ಮದೇ ಶೈಲಿಯಲ್ಲಿ ಕೆತ್ತನೆ ಮಾಡಿ, ಜೀವ ತುಂಬುತ್ತಾರೆ. ಸೂಕ್ಷ್ಮ ಕೆತ್ತನೆಯ ಕಲಾವಿದರಾಗಿಯೂ ಖ್ಯಾತಿ ಗಳಿಸಿದ್ದಾರೆ. ವೆಂಕಟೇಶ್ ಅವರು ಈಗಾಗಲೇ ನೂರಾರು ಸಣ್ಣ ಸಣ್ಣ ಕಲಾಕೃತಿಗಳನ್ನು ರಚಿಸಿ ಪ್ರಶಸ್ತಿ, ಪುರಸ್ಕಾರ, ದಾಖಲೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಇದನ್ನೂ ಓದಿ:New Year Celebration: ಕೊಪ್ಪಳದ ರೆಸಾರ್ಟ್​ಗಳಲ್ಲಿ ವಿದೇಶಿಗರ ಎದರು ದೇಶಿ ಹಾಡು ಹಾಡಲು ತಯಾರಾದ ಕಲಾವಿದರು

ಮೊನ್ನೆ ಹೊಸ ವರ್ಷದ ಹೊಸ್ತಿಲಲ್ಲಿ.. ಹೊಸ ವರ್ಷಕ್ಕೆ ಆಹ್ವಾನ ನೀಡುತ್ತಾ ಪೆನ್ಸಿಲ್ ತುದಿಯಲ್ಲಿ ಅದ್ಭುತ ಕಲಾಕೃತಿಯನ್ನು ಕೆತ್ತಿದ್ದಾರೆ. ಕಲಾಕೃತಿಯ ಉದ್ದ ಮತ್ತು ಅಗಲದ ಆಧಾರದಲ್ಲಿ ಅದನ್ನು ಸೂಕ್ಷ್ಮ ಕಲಾಕೃತಿ, ಕಿರುಕಲಾಕೃತಿ ಎಂದು ಕರೆಯಲಾಗುತ್ತದೆ. ಈಗಿಜನ ಸಂದರ್ಭದಲ್ಲಿ ಅಗಲ ಆರು ಮಿಲಿ ಮೀಟರ್, ಎತ್ತರ 12 ಮಿಲಿ ಮೀಟರ್ ಇದೆ. 4B ಫ್ಲಾಟ್ ಪೆನ್ಸಿಲ್‌ನ ತುದಿಯಲ್ಲಿ ಈ ಸೂಕ್ಷ್ಮ ಕಲಾಕೃತಿಯನ್ನು ಕೆತ್ತಲು ಎರಡು ಗಂಟೆ ಬೇಕಾಯಿತು ಎನ್ನುತ್ತಾರೆ ಯುವಕ ವೆಂಕಟೇಶ್. ವಿಶೇಷವಾಗಿ ಪೆನ್ಸಿಲ್‌ನ ತುದಿಯಲ್ಲಿ ಕೆತ್ತಲಾದ ಸಂಖ್ಯೆ 2024 ಎಲ್ಲರ ಗಮನ ಸೆಳೆಯುತ್ತದೆ. ಮಿನಿಯೇಚರ್ ಕಲಾವಿದ ವೆಂಕಟೇಶ್ ಹೀಗೆ ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳನ್ನು ಕೋರಿರುವುದು ಅಪರೂಪದ್ದಾಗಿದೆ. ಈ ಕಿರು ಮೇರುಕೃತಿಯನ್ನು ನೋಡಿದವರೆಲ್ಲರೂ ವೆಂಕಟೇಶ್ ಅವರ ಪ್ರತಿಭೆಗೆ ತಲೆದೂಗಿದ್ದಾರೆ.

ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ