ಅಜಿತ್ ಪವಾರ್ ಪಕ್ಕ ಕುಳಿತರೆ ವಾಂತಿ ಬರುತ್ತೆ ಎಂದ ಸಚಿವ ತಾನಾಜಿ ಸಾವಂತ್

|

Updated on: Aug 30, 2024 | 11:16 AM

ಅಜಿತ್ ಪವಾರ್ ಪಕ್ಕ ಕುಳಿತರೆ ವಾಂತಿ ಬರುತ್ತೆ ಎಂದು ಸಚಿವ ತಾನಾಜಿ ಸಾವಂತ್ ಹೇಳಿದ್ದಾರೆ. ಮುಂಬರುವ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಎಲ್ಲಾ ರಾಜಕೀಯ ಪಕ್ಷಗಳು ಒಗ್ಗಟ್ಟಾಗಿದ್ದೇವೆ ಎಂದು ತೋರಿಸುತ್ತಿವೆ, ಆದರೆ ಮಹಾಮೈತ್ರಿಕೂಟದಲ್ಲಿನ ಬಿರುಕು ಮತ್ತೊಮ್ಮೆ ಗೋಚರಿಸುತ್ತದೆ. ಎನ್‌ಸಿಪಿ (ಅಜಿತ್ ಪವಾರ್) ಪಕ್ಷಕ್ಕೆ ಸಂಬಂಧಿಸಿದಂತೆ ಆರೋಗ್ಯ ಸಚಿವ ತಾನಾಜಿ ಸಾವಂತ್ ಹೇಳಿಕೆಯಿಂದಾಗಿ ರಾಜಕೀಯ ವಲಯದಲ್ಲಿ ಮತ್ತೊಂದು ಚರ್ಚೆ ಹುಟ್ಟಿಕೊಂಡಿದೆ.

ಅಜಿತ್ ಪವಾರ್ ಪಕ್ಕ ಕುಳಿತರೆ ವಾಂತಿ ಬರುತ್ತೆ ಎಂದ ಸಚಿವ ತಾನಾಜಿ ಸಾವಂತ್
ತಾನಾಜಿ
Image Credit source: India Today
Follow us on

ಅಜಿತ್ ಪವಾರ್ ಪಕ್ಕ ಕುಳಿತರೆ ವಾಂತಿ ಬರುತ್ತೆ ಎಂದು ಸಚಿವ ತಾನಾಜಿ ಸಾವಂತ್ ಹೇಳಿದ್ದಾರೆ.
ಮುಂಬರುವ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಎಲ್ಲಾ ರಾಜಕೀಯ ಪಕ್ಷಗಳು ಒಗ್ಗಟ್ಟಾಗಿದ್ದೇವೆ ಎಂದು ತೋರಿಸುತ್ತಿವೆ, ಆದರೆ ಮಹಾಮೈತ್ರಿಕೂಟದಲ್ಲಿನ ಬಿರುಕು ಮತ್ತೊಮ್ಮೆ ಗೋಚರಿಸುತ್ತದೆ. ಎನ್‌ಸಿಪಿ (ಅಜಿತ್ ಪವಾರ್) ಪಕ್ಷಕ್ಕೆ ಸಂಬಂಧಿಸಿದಂತೆ ಆರೋಗ್ಯ ಸಚಿವ ತಾನಾಜಿ ಸಾವಂತ್ ಹೇಳಿಕೆಯಿಂದಾಗಿ ರಾಜಕೀಯ ವಲಯದಲ್ಲಿ ಮತ್ತೊಂದು ಚರ್ಚೆ ಹುಟ್ಟಿಕೊಂಡಿದೆ.

ಮೊದಲಿನಿಂದಲೇ ತಾನಾಜಿಗೆ ಎನ್​ಸಿಪಿ ಕಂಡರೆ ಅಷ್ಟಕ್ಕಷ್ಟೆ, ಒಂದೊಮ್ಮೆ ಅಜಿತ್ ಪವಾರ್ ಪಕ್ಕ ಕುಳಿತರೆ ವಾಂತಿ ಬರುವುದು ಕಂಡಿತ ಎಂದು ಹೇಳಿ ವಿವಾದ ಸೃಷ್ಟಿಸಿದ್ದಾರೆ. ನಾನು ಶಿವಸೇನೆಯ ಸೈನಿಕ ನಾನು ಎಂದೂ ಕಾಂಗ್ರೆಸ್​ ಅಥವಾ ಎನ್​ಸಿಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿಲ್ಲ. ನಾವು ನಮ್ಮ ತತ್ವಗಳಿಗೆ ಬದ್ಧರಾಗಿದ್ದೇವೆ.

ಕ್ಯಾಬಿನೆಟ್‌ನಲ್ಲಿ ಒಟ್ಟಿಗೆ ಕುಳಿತರೂ, ಹೊರಗೆ ಕಾಲಿಟ್ಟ ತಕ್ಷಣ ವಾಕರಿಕೆ ಬರುವುದು ಸಹಿಸಲಾಗದ ಸಂಗತಿ. ತಾನಾಜಿ ಸಾವಂತ್ ಅವರ ಇತ್ತೀಚಿನ ಹೇಳಿಕೆಗಳು ಮಹಾ ವಿಕಾಸ್ ಅಘಾಡಿ ಒಕ್ಕೂಟದೊಳಗೆ ಮಹತ್ವದ ವಿವಾದದ ಕಳವಳವನ್ನು ಹುಟ್ಟುಹಾಕಿದೆ.

ಮತ್ತಷ್ಟು ಓದಿ: ಮುಂಗಾರು ಅಧಿವೇಶನ ಬಳಿಕ 19 ಮಂದಿ ಎನ್​ಸಿಪಿ ಶಾಸಕರು ನಿಲುವು ಬದಲಿಸಲಿದ್ದಾರೆ: ರೋಹಿತ್ ಪವಾರ್

ಕಳೆದ ವರ್ಷ, ಧಾರಾಶಿವ್ (ಒಸ್ಮಾನಾಬಾದ್) ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರಿಗೆ ಪೊಲೀಸ್ ಇನ್ಸ್‌ಪೆಕ್ಟರ್ ವರ್ಗಾವಣೆ ಮಾಡುವಂತೆ ಅವರು ಒತ್ತಡ ಹೇರಿದ್ದನ್ನು ತೋರಿಸುವ ವಿಡಿಯೋವೊಂದು ಕಾಣಿಸಿಕೊಂಡಿದ್ದು, ವ್ಯಾಪಕ ಚರ್ಚೆ ಮತ್ತು ಟೀಕೆಗೆ ಕಾರಣವಾಗಿತ್ತು.

ತಾವು ಓದುತ್ತಿದ್ದ ದಿನಗಳಿಂದಲೂ ಶಿವಸೇನೆಯ ಆಲೋಚನೆಗಳು ಸಂಪೂರ್ಣವಾಗಿ ವಿಭಿನ್ನವಾಗಿವೆ. ಆದ್ದರಿಂದಲೇ ನಮಗೆ ಕಾಂಗ್ರೆಸ್, ಎನ್‌ಸಿಪಿ ಎಂದರೆ ಅಲರ್ಜಿ ಎಂದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ