AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೈದ್ಯೆ ಮೇಲೆ ಅತ್ಯಾಚಾರ: ಅರ್ಧ ಗಂಟೆ, ಆ ಮೂರು ಕರೆಗಳು ಪೋಷಕರ ಹೃದಯವನ್ನು ಛಿದ್ರಗೊಳಿಸಿತ್ತು

ಕೋಲ್ಕತ್ತಾದ ಆರ್​ಜಿ ಕರ್ ವೈದ್ಯಕೀಯ ಕಾಲೇಜಿನಲ್ಲಿ ತರಬೇತಿ ನಿರತ ವೈದ್ಯೆ ಮೇಲಿನ ಅತ್ಯಾಚಾರ, ಕೊಲೆ ನಡೆದಿದೆ. ಆಕೆ ಸಾಯುವ ದಿನ ರಾತ್ರಿ 11.30ರ ಸುಮಾರಿಗೆ ಪೋಷಕರ ಬಳಿ ಮಾತನಾಡಿದ್ದಳು. ಆದರೆ ಬೆಳಗಾಗುವಷ್ಟರಲ್ಲಿ ಆಕೆಯ ಸಾವಿನ ಸುದ್ದಿ ಕೇಳಿ ಪೋಷಕರು ಕುಸಿದುಬಿದ್ದಿದ್ದರು.

ವೈದ್ಯೆ ಮೇಲೆ ಅತ್ಯಾಚಾರ: ಅರ್ಧ ಗಂಟೆ, ಆ ಮೂರು ಕರೆಗಳು ಪೋಷಕರ ಹೃದಯವನ್ನು ಛಿದ್ರಗೊಳಿಸಿತ್ತು
ವೈದ್ಯರು
ನಯನಾ ರಾಜೀವ್
|

Updated on: Aug 30, 2024 | 9:46 AM

Share

ಅವರದ್ದು ಮಧ್ಯಮ ವರ್ಗದ ಸುಂದರ ಕುಟುಂಬ, ವೈದ್ಯೆಯಾಗುವ ಮೂಲಕ ಇಡೀ ಕುಟುಂಬವೇ ಹೆಮ್ಮೆ ಪಡುವಂತೆ ಮಾಡಿದ್ದ ಮಗಳ ಕಂಡರೆ ಬೆಟ್ಟದಷ್ಟು ಪ್ರೀತಿ. ಕೋಲ್ಕತ್ತಾದಲ್ಲಿ ತಮ್ಮ ಜೀವನವನ್ನು ಸಂತೋಷದಿಂದ ಕಳೆಯುತ್ತಿದ್ದರು. ಆದರೆ ಆಗಸ್ಟ್​ 9ರ ಕರಾಳ ರಾತ್ರಿ ಅವರ ಕನಸ್ಸನ್ನು ಛಿತ್ರಗೊಳಿಸಿತ್ತು. ಆಗಸ್ಟ್ 9ರಂದು ರಾತ್ರಿ 11.30ರ ಸುಮಾರಿಗೆ ತರಬೇತಿ ನಿರತ ವೈದ್ಯೆ ಪ್ರತಿ ದಿನ ಮಾಡುವ ಹಾಗೆಯೇ ತಾಯಿಗೆ ಕರೆ ಮಾಡಿದ್ದಳು. ತುಂಬಾ ಹೊತ್ತು ಮಾತನಾಡಿದ್ದಳು.

ಆಗಸ್ಟ್​ 10ರ ಬೆಳಗ್ಗೆ ಅರ್ಧ ಗಂಟೆಯೊಳಗೆ ಬಂದ ಆ ಮೂರು ಕರೆಗಳು ಅವರ ಹೃದಯವನ್ನು ಛಿದ್ರಗೊಳಿಸಿದ್ದವು. ಕೋಲ್ಕತ್ತಾ ಆಸ್ಪತ್ರೆಯಲ್ಲಿ 31 ವರ್ಷದ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆಯ ನಂತರ ಬೆಳಗ್ಗೆ ಪೋಷಕರಿಗೆ ಮಾಡಿದ ಕರೆಗಳ ಆಡಿಯೊ ಎನ್​ಡಿ ಟಿವಿಗೆ ಲಭ್ಯವಾಗಿದೆ.

ತಮ್ಮ ಮಗಳ ಸಾವಿನ ಸುದ್ದಿ ಕೇಳಿ ಪೋಷಕರು ಅನುಭವಿಸಿದ ಆಘಾತ ಯಾರಿಗೂ ಬೇಡ. ಮಗಳು ಇನ್ನಿಲ್ಲ ಎನ್ನುವ ದುಃಖದ ಜತೆಗೆ ಆಕೆ ಸಂಕಟ, ಚಿತ್ರಹಿಂಸೆ ಅನುಭವಿಸಿ ಸತ್ತಳಲ್ಲ ಎನ್ನುವ ನೋವೇ ಹೆಚ್ಚಾಗಿ ಕಾಡುತ್ತಿದೆ. ದೇಶದೆಲ್ಲೆಡೆ ಪ್ರತಿಭಟನೆ ನಡೆಯುತ್ತಿದೆ. ಆರೋಪಿ ಸಂಜಯ್​ ರಾಯ್​ನನ್ನು ಪೊಲೀಸರು ಬಂಧಿಸಿದ್ದಾರೆ. ಪಾಲಿಗ್ರಾಫ್ ಪರೀಕ್ಷೆ ಕೂಡ ನಡೆದಿದೆ.

ಮೊದಲು ಅತ್ಯಾಚಾರ ಮಾಡಿದ್ದು ನಾನೇ ಎಂದು ಒಪ್ಪಿಕೊಂಡಿದ್ದಾತ ಇದ್ದಕ್ಕಿದ್ದಂತೆ ನಾನು ಅಲ್ಲಿಗೆ ಹೋಗುವಷ್ಟರಲ್ಲಿ ಆಕೆ ಮೃತಪಟ್ಟಿದ್ದಳು ಎನ್ನುವ ಗೊಂದಲದ ಹೇಳಿಕೆಯನ್ನು ನೀಡಿ ತಾನು ನಿರಪರಾಧಿ ಎಂದು ಹೇಳಿದ್ದಾನೆ.

ಮತ್ತಷ್ಟು ಓದಿ: Kolkata Murder Case: ಕತ್ತಿನಲ್ಲಿ ಬ್ಲೂಟೂತ್​, ಕೈಯಲ್ಲಿ ಹೆಲ್ಮೆಟ್​ ಸೆಮಿನಾರ್​ ರೂಂಗೆ ಹೋಗುತ್ತಿರುವ ಆರೋಪಿ ದೃಶ್ಯ ಸೆರೆ

ಆತ ಹೆಲ್ಮೆಟ್ ಹಿಡಿದು, ಇಯರ್​ಫೋನ್ ಹಾಕಿಕೊಂಡು ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆಕೆಯ ಮೃತದೇಹದ ಬಳಿ ಬ್ಲೂಟೂತ್ ಕೂಡ ಸಿಕ್ಕಿತ್ತು. ಆ ಪೋಷಕರು ತಮ್ಮ ಮಗಳು ವೈದ್ಯೆಯಾದ ಕನಸಿನ ಜತೆಗೆ ಆಕೆಗೆ ಮದುವೆ ಮಾಡಿ ಒಂದು ಸುಂದರ ಕುಟುಂಬವನ್ನು ಸಿಗುವಂತೆ ಮಾಡುವ ಕನಸ್ಸು ಕಂಡಿದ್ದರು ಎಲ್ಲವೂ ನುಚ್ಚುನೂರಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಹೊಸ ವರ್ಷದ ಕೊಡುಗೆ: ನೀವು ಬೆಳಗ್ಗೆ ಹಲ್ಲು ಉಜ್ಜೋ ಮುಂಚೆಯೇ ಬಾರ್ ಓಪನ್!
ಹೊಸ ವರ್ಷದ ಕೊಡುಗೆ: ನೀವು ಬೆಳಗ್ಗೆ ಹಲ್ಲು ಉಜ್ಜೋ ಮುಂಚೆಯೇ ಬಾರ್ ಓಪನ್!
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ