Kolkata Murder Case: ಕತ್ತಿನಲ್ಲಿ ಬ್ಲೂಟೂತ್​, ಕೈಯಲ್ಲಿ ಹೆಲ್ಮೆಟ್​ ಸೆಮಿನಾರ್​ ರೂಂಗೆ ಹೋಗುತ್ತಿರುವ ಆರೋಪಿ ದೃಶ್ಯ ಸೆರೆ

ಕೋಲ್ಕತ್ತಾದ ಆರ್​ಜಿ ಕರ್ ವೈದ್ಯಕೀಯ ಕಾಲೇಜು, ಆಸ್ಪತ್ರೆಯಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ಪ್ರಮುಖ ಸಾಕ್ಷ್ಯಗಳು ದೊರೆತಿವೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿತ್ಯ ಹೊಸ ವಿಷಯಗಳು ಬೆಳಕಿಗೆ ಬರುತ್ತಿವೆ. ಇದೀಗ ಈ ಘಟನೆಗೆ ಸಂಬಂಧಿಸಿದ ಸಿಸಿಟಿವಿ ದೃಶ್ಯವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Kolkata Murder Case: ಕತ್ತಿನಲ್ಲಿ ಬ್ಲೂಟೂತ್​, ಕೈಯಲ್ಲಿ ಹೆಲ್ಮೆಟ್​ ಸೆಮಿನಾರ್​ ರೂಂಗೆ ಹೋಗುತ್ತಿರುವ ಆರೋಪಿ ದೃಶ್ಯ ಸೆರೆ
ಸಿಸಿಟಿವಿ
Follow us
|

Updated on: Aug 25, 2024 | 10:17 AM

ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮಹಿಳಾ ವೈದ್ಯೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಘಟನೆಗೆ ಸಂಬಂಧಿಸಿದಂತೆ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿತ್ಯ ಹೊಸ ವಿಷಯಗಳು ಬೆಳಕಿಗೆ ಬರುತ್ತಿವೆ. ಇದೀಗ ಈ ಘಟನೆಗೆ ಸಂಬಂಧಿಸಿದ ಸಿಸಿಟಿವಿ ದೃಶ್ಯವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದರಲ್ಲಿ ಆರೋಪಿ ಸಂಜಯ್ ರಾಯ್ ಆಗಸ್ಟ್ 9 ರಂದು ಮುಂಜಾನೆ 4.03 ಕ್ಕೆ ಮೂರನೇ ಮಹಡಿಗೆ ಹೋಗುತ್ತಿರುವುದು ಕಂಡುಬಂದಿದೆ. ಸಿಸಿಟಿವಿ ದೃಶ್ಯಾವಳಿಗಳ ಚಿತ್ರವನ್ನು ಸಿಬಿಐ ಮೂಲಗಳು ಹಂಚಿಕೊಂಡಿವೆ ಎಂದು ಹೇಳಲಾಗುತ್ತಿದೆ.

31 ವರ್ಷದ ವೈದ್ಯಕೀಯ ವಿದ್ಯಾರ್ಥಿನಿಯ ಕೊಲೆ ಪ್ರಕರಣ ಆರೋಪಿ ಸಂಜಯ್ ಸೆಮಿನಾರ್​ ಹಾಲ್​ ಕಡೆ ಹೋಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬ್ಲೂಟೂತ್ ಇಯರ್​ಫೋನ್​ಗಳು ಆತನ ಕುತ್ತಿಗೆ ಸುತ್ತಲೂ ಹಾಕಿದ್ದ, ಕೈಯಲ್ಲ ಹೆಲ್ಮೆಟ್​ ಹಿಡಿದಿದ್ದ. ಈ ಬ್ಲೂಟೂತ್ ಆಧಾರದ ಮೇಲೆ ಸಂಜಯ್ ರಾಯ್ ಅವರನ್ನು ಬಂಧಿಸಲಾಗಿತ್ತು.

ರಾಯ್ ಸೆಮಿನಾರ್ ರೂಮ್‌ನಿಂದ ಹೊರಬಂದಾಗ, ಅವರ ಬಳಿ ಇದ್ದ ಬ್ಲೂಟೂತ್ ಇಯರ್‌ಫೋನ್‌ಗಳು ಕಾಣೆಯಾಗಿದ್ದವು. ಅದೇ ಬ್ಲೂಟೂತ್ ಅಪರಾಧದ ಸ್ಥಳದಲ್ಲಿ ಕಂಡುಬಂದಿದೆ. ಈ ಸಿಸಿಟಿವಿ ದೃಶ್ಯಾವಳಿಗಳು ಮತ್ತು ಆಸ್ಪತ್ರೆಯ ಬ್ಲೂಟೂತ್ ಆಧಾರದ ಮೇಲೆ ಪೊಲೀಸರು ಸಂಜಯ್ ರಾಯ್ ಅವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ಆರಂಭಿಸಿದರು. ಇದಾದ ನಂತರ ಸಂಜಯ್ ರಾಯ್ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಈ ಫೋಟೋದಲ್ಲಿ ಸಂಜಯ್ ರಾಯ್ ಕೈಯಲ್ಲಿ ಹೆಲ್ಮೆಟ್ ಕೂಡ ಕಾಣಿಸುತ್ತಿದೆ.

ಮತ್ತಷ್ಟು ಓದಿ: ಕೋಲ್ಕತ್ತಾ ಅತ್ಯಾಚಾರ ಆರೋಪಿಯದ್ದು ಕ್ರೂರ ಪ್ರಾಣಿಯ ಸ್ವಭಾವ, ಪಶ್ಚಾತಾಪವೂ ಇಲ್ಲ: ವೈದ್ಯರು

ಮೃತರು ಮೆಡಿಕಲ್ ಕಾಲೇಜಿನ ಚೆಸ್ಟ್ ಮೆಡಿಸಿನ್ ವಿಭಾಗದ ದ್ವಿತೀಯ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿ ಮತ್ತು ತರಬೇತಿ ವೈದ್ಯರಾಗಿದ್ದರು. ಗುರುವಾರ ಡ್ಯೂಟಿ ಮುಗಿಸಿ ರಾತ್ರಿ 12 ಗಂಟೆ ವೇಳೆಗೆ ಸ್ನೇಹಿತರೊಂದಿಗೆ ಊಟ ಮಾಡಿದ್ದರು. ಅದಾದ ಬಳಿಕ ಮಹಿಳಾ ವೈದ್ಯರ ಸುಳಿವು ಸಿಕ್ಕಿರಲಿಲ್ಲ.

ಶುಕ್ರವಾರ ಬೆಳಗ್ಗೆ ವೈದ್ಯಕೀಯ ಕಾಲೇಜಿನ ಸೆಮಿನಾರ್ ಹಾಲ್‌ನಲ್ಲಿ ವೈದ್ಯರೊಬ್ಬರ ಅರೆನಗ್ನ ಶವ ಪತ್ತೆಯಾಗಿದ್ದು ಸಂಚಲನ ಮೂಡಿಸಿತ್ತು. ಸ್ಥಳದಿಂದ ಮೃತರ ಮೊಬೈಲ್ ಫೋನ್ ಮತ್ತು ಲ್ಯಾಪ್ ಟಾಪ್ ವಶಪಡಿಸಿಕೊಳ್ಳಲಾಗಿದೆ. ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿಯಲ್ಲಿ ಮಹಿಳಾ ವೈದ್ಯೆಯ ಮೇಲೆ ಅತ್ಯಾಚಾರ ನಡೆದಿರುವುದು ಬೆಳಕಿಗೆ ಬಂದಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ