AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋಲ್ಕತ್ತಾ ಅತ್ಯಾಚಾರ ಆರೋಪಿಯದ್ದು ಕ್ರೂರ ಪ್ರಾಣಿಯ ಸ್ವಭಾವ, ಪಶ್ಚಾತಾಪವೂ ಇಲ್ಲ: ವೈದ್ಯರು

ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿರುವ ಆರೋಪಿ ಸಂಜಯ್ ರಾಯ್​ನದ್ದು ಕ್ರೂರ ಪ್ರಾಣಿಯಂಥಾ ವ್ಯಕ್ತಿತ್ವ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಅತ್ಯಾಚಾರ ನಡೆದ ದಿನದ ಪ್ರತಿ ನಿಮಿಷಗಳ ಬಗ್ಗೆ ಮಾಹಿತಿ ನೀಡಿದ್ದಾನೆ ಆತನಿಗೆ ಯಾವುದೇ ಪಶ್ಚಾತಾಪವಿಲ್ಲ ಎಂದು ಹೇಳಿದ್ದಾರೆ.

ಕೋಲ್ಕತ್ತಾ ಅತ್ಯಾಚಾರ ಆರೋಪಿಯದ್ದು ಕ್ರೂರ ಪ್ರಾಣಿಯ ಸ್ವಭಾವ, ಪಶ್ಚಾತಾಪವೂ ಇಲ್ಲ: ವೈದ್ಯರು
ಸಂಜಯ್ ರಾಯ್
ನಯನಾ ರಾಜೀವ್
|

Updated on: Aug 23, 2024 | 10:10 AM

Share

ಕೋಲ್ಕತ್ತಾದ ಆರ್​ಜಿ ಕರ್ ವೈದ್ಯಕೀಯ ಕಾಲೇಜು, ಆಸ್ಪತ್ರೆಯಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿ ಹತ್ಯೆ ಮಾಡಿದ್ದ ಆರೋಪಿ ಸಂಜಯ್ ರಾಯ್​ನದ್ದು ಕ್ರೂರ ಪ್ರಾಣಿಯ ಮನಸ್ಥಿತಿ, ಆತನಿಗೆ ಪಶ್ಚಾತಾಪವೂ ಇಲ್ಲ ಎಂದು ವೈದ್ಯರು ಹೇಳಿದ್ದಾರೆ. ಆತ ನಿತ್ಯವೂ ತನ್ನ ಮೊಬೈಲ್​ನಲ್ಲಿ ಅಶ್ಲೀಲ ವಿಡಿಯೋಗಳನ್ನು ವೀಕ್ಷಣೆ ಮಾಡುತ್ತಿರುತ್ತಿದ್ದ, ಪ್ರಾಣಿಯ ಪ್ರವೃತ್ತಿಯನ್ನು ಹೊಂದಿದ್ದ, ಆತನಿಗೆ ತಾನು ಮಾಡಿರುವ ಕೃತ್ಯದ ಬಗ್ಗೆ ಪಶ್ಚಾತಾಪವೂ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ಸಿಬಿಐ ಆಗಸ್ಟ್ 18ರಂದು ಸಂಜಯ್​ ರಾಯ್ ಮನಸ್ಥಿತಿಯನ್ನು ತಿಳಿದುಕೊಳ್ಳಲು ಸಿಎಫ್​ಎಸ್​ಎಲ್ ತಜ್ಞರಿಗೆ ಹೇಳಿದ್ದರು. ಆಗಸ್ಟ್ 9 ರಂದು ಸರ್ಕಾರಿ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ 31 ವರ್ಷದ ಟ್ರೈನಿ ವೈದ್ಯರ ಶವ ಪತ್ತೆಯಾದ ಮರುದಿನ ಬಂಧಿಸಲಾಗಿತ್ತು.

ಆ ವ್ಯಕ್ತಿಗೆ ಯಾವುದೇ ಅಪರಾಧ ಪ್ರಜ್ಞೆ ಇಲ್ಲ, ಅಲ್ಲಿ ಏನಾಗಿದೆ ಎಂಬುದನ್ನು ತಡವರಿಸದೆ ಪ್ರತಿ ಪ್ರತಿ ನಿಮಿಷದ ಘಟನೆಯನ್ನು ವಿವರಿಸಿದ್ದಾನೆ. ಅವನಿಗೆ ಪಶ್ಚಾತಾಪವಾದಂತೆ ತೋರುತ್ತಿಲ್ಲ ಎಂದಿದ್ದಾರೆ. ಕೋಲ್ಕತ್ತಾ ಹೈಕೋರ್ಟ್‌ನಿಂದ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸುವ ಮೊದಲು, ಸ್ಥಳೀಯ ಪೊಲೀಸರು ರಾಯ್ ಅವರಿಂದ ವಶಪಡಿಸಿಕೊಂಡ ಮೊಬೈಲ್ ಫೋನ್‌ನಲ್ಲಿ ಅಶ್ಲೀಲ ವಿಡಿಯೋಗಳಿರುವ ಬಗ್ಗೆ ಮಾಹಿತಿ ನೀಡಿದ್ದರು.

ಮತ್ತಷ್ಟು ಓದಿ: ಕೋಲ್ಕತ್ತಾ ವೈದ್ಯೆಯ ಅತ್ಯಾಚಾರ-ಕೊಲೆ ಪ್ರಕರಣ: ಮರಣೋತ್ತರ ಪರೀಕ್ಷೆ ನಡೆಸಿದ ಸಮಯದ ಬಗ್ಗೆ ಬಂಗಾಳ ಪೊಲೀಸರನ್ನು ಪ್ರಶ್ನಿಸಿದ ಸುಪ್ರೀಂಕೋರ್ಟ್

ಆಸ್ಪತ್ರೆಯಲ್ಲಿ ಸಂಗ್ರಹಿಸಲಾದ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ, ಆಗಸ್ಟ್ 8 ರಂದು ಬೆಳಗ್ಗೆ 11 ಗಂಟೆಗೆ ಕಾಣಿಸಿಕೊಂಡಿದ್ದ. ಆಗಸ್ಟ್ 8ರ ಮಧ್ಯರಾತ್ರಿ ಆತ ಉತ್ತರ ಕೋಲ್ಕತ್ತಾದಲ್ಲಿರುವ ರೆಡ್ ಲೈಟ್ ಏರಿಯಾಗೆ ಕೂಡ ಹೋಗಿದ್ದ ಎಂದು ಮೂಲಗಳು ತಿಳಿಸಿವೆ. ಆತ ಅಮಲಿನಲ್ಲಿದ್ದ.

ಆಗಸ್ಟ್ 9ರಂದು ಬೆಳಗಿನ ಜಾವ 4ಗಂಟೆ ವೇಳೆಗೆ ಆತ ಮತ್ತೆ ಅದೇ ಕಟ್ಟಡವನ್ನು ಪ್ರವೇಶಿಸುತ್ತಿರುವುದನ್ನು ದೃಶ್ಯಾವಳಿಗಳು ತೋರಿಸಿವೆ. ಕೆಲವು ತಾಂತ್ರಿಕ ಮತ್ತು ವೈಜ್ಞಾನಿಕ ಪುರಾವೆಗಳು ಅದನ್ನು ದೃಢಪಡಿಸಿವೆ. ರಾಯ್ ಅವರ ಡಿಎನ್‌ಎ ಪರೀಕ್ಷೆಗಳ ಬಗ್ಗೆ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಲು ಅಥವಾ ಸಾಮೂಹಿಕ ಅತ್ಯಾಚಾರದ ವದಂತಿಗಳ ಬಗ್ಗೆ ಪ್ರತಿಕ್ರಿಯಿಸಲು ಅಧಿಕಾರಿ ನಿರಾಕರಿಸಿದರು.

ಭೋವಾನಿಪೋರ್‌ನಲ್ಲಿರುವ ರಾಯ್ ಅವರ ನಿವಾಸಕ್ಕೆ ಸಿಬಿಐ ಅಧಿಕಾರಿಗಳು ಭೇಟಿ ನೀಡಿದ್ದರು, ಅಲ್ಲಿ ಅವರು ಅವರ ಕುಟುಂಬ, ನೆರೆಹೊರೆಯವರು ಮತ್ತು ಕೋಲ್ಕತ್ತಾ ಪೊಲೀಸ್ ಪಡೆಯಲ್ಲಿರುವ ಅವರ ಸಹೋದ್ಯೋಗಿಗಳೊಂದಿಗೆ ಮಾತನಾಡಿದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ