Maharashtra Bandh: ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣ: ಆಗಸ್ಟ್ 24ರಂದು ಮಹಾರಾಷ್ಟ್ರ ಬಂದ್​​ಗೆ ಮಹಾ ವಿಕಾಸ್ ಅಘಾಡಿ ಕರೆ

ಥಾಣೆ ಜಿಲ್ಲೆಯ ಬದ್ಲಾಪುರದ ಶಾಲೆಯೊಂದರಲ್ಲಿ ಇಬ್ಬರು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವುದನ್ನು ವಿರೋಧಿಸಿ ಬಂದ್‌ಗೆ ಕರೆ ನೀಡಲಾಗಿದೆ. ಗುರುವಾರ, ಸೇನಾ ಯುಬಿಟಿಯ ನಾಯಕ ಉದ್ಧವ್ ಠಾಕ್ರೆ, ಮಹಿಳೆಯರ ಸುರಕ್ಷತೆಯ ಮಹತ್ವವನ್ನು ಎತ್ತಿ ತೋರಿಸುವುದು ಮತ್ತು ಸರ್ಕಾರವನ್ನು ಕ್ರಮಕ್ಕೆ ಒತ್ತಾಯಿಸುವುದು ಬಂದ್‌ನ ಉದ್ದೇಶವಾಗಿದೆ.

Maharashtra Bandh: ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣ: ಆಗಸ್ಟ್ 24ರಂದು ಮಹಾರಾಷ್ಟ್ರ ಬಂದ್​​ಗೆ ಮಹಾ ವಿಕಾಸ್ ಅಘಾಡಿ ಕರೆ
ಬದ್ಲಾಪುರ ಪ್ರತಿಭಟನೆ
Follow us
|

Updated on: Aug 23, 2024 | 11:46 AM

ಮುಂಬೈ ಆಗಸ್ಟ್ 23: ಎಸ್‌ಸಿ/ಎಸ್‌ಟಿ ಕೋಟಾದಿಂದ ಕೆನೆಪದರವನ್ನು ಹೊರಗಿಡುವ ಸುಪ್ರೀಂಕೋರ್ಟ್ (Supreme Court) ತೀರ್ಪನ್ನು ವಿರೋಧಿಸಿ ಹಲವು ಸಂಘಟನೆಗಳು ಮತ್ತು ಗುಂಪುಗಳು ಆಗಸ್ಟ್ 21 ರಂದು ಭಾರತ್ ಬಂದ್‌ಗೆ ಕರೆ ನೀಡಿದ್ದವು. ಜಾರ್ಖಂಡ್, ಬಿಹಾರ, ಮಧ್ಯಪ್ರದೇಶ, ಕೇರಳ, ಒಡಿಶಾ ಸೇರಿದಂತೆ ಹಲವು ರಾಜ್ಯಗಳಲ್ಲಿ ಬಂದ್‌ ಪರಿಣಾಮ ಬೀರಿತ್ತು. ಮಹಾರಾಷ್ಟ್ರದಲ್ಲಿ (Maharashtra) ನಾಳೆ ಅಂದರೆ ಆಗಸ್ಟ್ 24 ರಂದು ರಾಜ್ಯಾದ್ಯಂತ ಬಂದ್‌ಗೆ ಕರೆ ನೀಡಲಾಗಿದೆ.

ಮಹಾರಾಷ್ಟ್ರ ಬಂದ್‌ಗೆ ಕರೆ ನೀಡಿದವರು ಯಾರು?

ವಿರೋಧ ಪಕ್ಷ ಮಹಾ ವಿಕಾಸ್ ಅಘಾಡಿ (MVA) ಆಗಸ್ಟ್ 24 ರಂದು “ಮಹಾರಾಷ್ಟ್ರ ಬಂದ್” ಗೆ ಕರೆ ನೀಡಿದೆ. ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿಜಯ್ ವಾಡೆಟ್ಟಿವಾರ್ ಅವರು ಆಗಸ್ಟ್ 24 ರಂದು ಎಲ್ಲಾ MVA ಮಿತ್ರಪಕ್ಷಗಳು ಬಂದ್‌ನಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದ್ದಾರೆ.

ನಾಳೆ ಮಹಾರಾಷ್ಟ್ರ ಬಂದ್ ಏಕೆ?

ಥಾಣೆ ಜಿಲ್ಲೆಯ ಬದ್ಲಾಪುರದ ಶಾಲೆಯೊಂದರಲ್ಲಿ ಇಬ್ಬರು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವುದನ್ನು ವಿರೋಧಿಸಿ ಬಂದ್‌ಗೆ ಕರೆ ನೀಡಲಾಗಿದೆ. ಗುರುವಾರ, ಸೇನಾ ಯುಬಿಟಿಯ ನಾಯಕ ಉದ್ಧವ್ ಠಾಕ್ರೆ, ಮಹಿಳೆಯರ ಸುರಕ್ಷತೆಯ ಮಹತ್ವವನ್ನು ಎತ್ತಿ ತೋರಿಸುವುದು ಮತ್ತು ಸರ್ಕಾರವನ್ನು ಕ್ರಮಕ್ಕೆ ಒತ್ತಾಯಿಸುವುದು ಬಂದ್‌ನ ಉದ್ದೇಶವಾಗಿದೆ ಎಂದು ಹೇಳಿದ್ದಾರೆ.

ಏನಿದು ಬದ್ಲಾಪುರ ಪ್ರಕರಣ

ಮಹಾರಾಷ್ಟ್ರದ ಬದ್ಲಾಪುರದ ಶಾಲೆಯೊಂದರಲ್ಲಿ ಕಳೆದ ವಾರ ಇಬ್ಬರು ಶಿಶುವಿಹಾರದ ವಿದ್ಯಾರ್ಥಿನಿಯರ ಮೇಲೆ ಅಲ್ಲಿನ ಸ್ವೀಪರ್ ಲೈಂಗಿಕ ದೌರ್ಜನ್ಯ ಎಸಗಿದ್ದ. ಆಗಸ್ಟ್ 17 ರಂದು ಬಾಲಕಿಯರ ಮೇಲೆ ದೌರ್ಜನ್ಯ ನಡೆಸಿದ ಆರೋಪದ ಮೇಲೆ ಶಾಲೆಯ ಅಟೆಂಡರ್ ಒಬ್ಬನನ್ನು ಪೊಲೀಸರು ಬಂಧಿಸಿದ್ದರು. ಈ ಘಟನೆಯು ಬದ್ಲಾಪುರದ ಜನರಲ್ಲಿ ಭಾರೀ ಆಕ್ರೋಶವನ್ನು ಉಂಟುಮಾಡಿತು.

ಆಗಸ್ಟ್ 22 ರಂದು, ಬಾಂಬೆ ಹೈಕೋರ್ಟ್ ಇಬ್ಬರು ಬಾಲಕಿಯರ ಲೈಂಗಿಕ ದೌರ್ಜನ್ಯವನ್ನು ಸ್ವಯಂ ಪ್ರೇರಿತವಾಗಿ ವಿಚಾರಣೆಗೆ ತೆಗೆದುಕೊಂಡಿತು. ಎಎನ್‌ಐ ವರದಿ ಮಾಡಿದಂತೆ, ಪ್ರತಿಯೊಂದು ಕೋನದಿಂದ ತನಿಖೆ ಪ್ರಾರಂಭವಾಗಿದೆ. “ಎಲ್ಲಿಯೂ ಯಾವುದೇ ತಪ್ಪು ಆಗುವುದಿಲ್ಲ” ಎಂದು ಹೈಕೋರ್ಟ್ ಹೇಳಿದೆ.

ಘಟನೆಯ ಕುರಿತು ಎಂವಿಎ ರಾಜ್ಯ ಸರ್ಕಾರ ವಿರುದ್ಧ ಟೀಕೆಗಳು ಹೆಚ್ಚುತ್ತಿದ್ದಂತೆ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಮಂಗಳವಾರ ಬದ್ಲಾಪುರದಲ್ಲಿ ನಡೆದ ಪ್ರತಿಭಟನೆಗಳು ರಾಜಕೀಯ ಪ್ರೇರಿತವಾಗಿದೆ ಎಂದು ಆರೋಪಿಸಿದ್ದಾರೆ., ಮುಖ್ಯಮಂತ್ರಿ ಮಜ್ಹಿ ಲಡ್ಕಿ ಬಹಿನ್ ಯೋಜನೆಯ (Mukhyamantri Majhi Ladki Bahin Yojana )ಯಶಸ್ಸನ್ನು ಪ್ರತಿಪಕ್ಷಗಳಿಗೆ ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇತ್ತೀಚೆಗೆ ಪರಿಚಯಿಸಲಾದ ಜನಪರ ಯೋಜನೆಯು ರಾಜ್ಯಾದ್ಯಂತ ಹಿಂದುಳಿದ ಮಹಿಳೆಯರಿಗೆ ಮಾಸಿಕ ₹ 1,500 ಸಹಾಯವನ್ನು ನೀಡುತ್ತದೆ ಎಂದು ಸಿಎಂ ಹೇಳಿದ್ದಾರೆ.

ಮಂಗಳವಾರ ಬದ್ಲಾಪುರ ಪ್ರಕರಣ ಖಂಡಿಸಿ ರೈಲು ನಿಲ್ದಾಣದಲ್ಲಿ ಪ್ರತಿಭಟನೆ ನಡೆದಾಗ ಕೆಲವು ಪ್ರತಿಭಟನಾಕಾರರು ಮಹಿಳೆಯರಿಗೆ ತಿಂಗಳಿಗೆ ₹ 1,500 ನೀಡುವ ಬದಲು, ಅವರು ಸುರಕ್ಷಿತವಾಗಿರುವುದನ್ನು ಸರ್ಕಾರ ಖಚಿತಪಡಿಸಿಕೊಳ್ಳಬೇಕು ಎಂದು ಹೇಳುವ ಫಲಕಗಳನ್ನು ಹಿಡಿದಿದ್ದರು. ಬುಧವಾರ ಮುಂಬೈ, ಥಾಣೆ, ಪುಣೆ, ಛತ್ರಪತಿ ಸಂಭಾಜಿ ನಗರ ಸೇರಿದಂತೆ ರಾಜ್ಯಾದ್ಯಂತ ಹಲವು ನಗರಗಳಲ್ಲಿ ವಿರೋಧ ಪಕ್ಷಗಳು ಪ್ರತಿಭಟನೆ ನಡೆಸಿವೆ. ಎನ್‌ಸಿಪಿ-ಎಸ್‌ಪಿ ಸಂಸದೆ ಸುಪ್ರಿಯಾ ಸುಳೆ ಪುಣೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಅಲ್ಲಿ ಅವರು ರಾಜ್ಯದಲ್ಲಿ ಮಹಿಳೆಯರು ಮತ್ತು ಹುಡುಗಿಯರ ಸುರಕ್ಷತೆಯ ಬಗ್ಗೆ ಮಹಾಯುತಿ ಸರ್ಕಾರವನ್ನು ಟೀಕಿಸಿದ್ದು, ತನ್ನ ಪೊಲೀಸ್ ಭದ್ರತೆಯನ್ನು ಹಿಂಪಡೆದು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಅದನ್ನು ಬಳಸಿಕೊಳ್ಳುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಭಾರತ ಮತ್ತು ಅಮೆರಿಕ ಮಾತ್ರ ವಿಶ್ವಕ್ಕೆ ಶಾಂತಿ, ಸಮೃದ್ಧಿ, ಸ್ಥಿರತೆ ತರಲು ಸಾಧ್ಯ: ರಾಜನಾಥ್ ಸಿಂಗ್

“ಸಾಕಷ್ಟು ಪೊಲೀಸ್ ಅಧಿಕಾರಿಗಳು ರಾಜಕೀಯ ನಾಯಕರಿಗೆ ಭದ್ರತೆ ಒದಗಿಸುವಲ್ಲಿ ನಿರತರಾಗಿದ್ದಾರೆ ಮತ್ತು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ನಿಯೋಜಿಸಲು ಸಾಕಷ್ಟು ಸಿಬ್ಬಂದಿ ಇಲ್ಲ ಎಂದು ನಾವು ಕೇಳಿದ್ದೇವೆ. ನನ್ನ ಭದ್ರತೆಯನ್ನು ಹಿಂತೆಗೆದುಕೊಳ್ಳಲು ಮತ್ತು ಕಾನೂನು ಮತ್ತು ಸುವ್ಯವಸ್ಥೆಗಾಗಿ ಆ ಪೊಲೀಸ್ ಪಡೆಯನ್ನು ಬಳಸಿಕೊಳ್ಳುವಂತೆ ನಾನು ಸರ್ಕಾರವನ್ನು ವಿನಂತಿಸುತ್ತೇನೆ ಎಂದಿದ್ದಾರೆ ಸುಳೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ