ಭಾರತ ಮತ್ತು ಅಮೆರಿಕ ಮಾತ್ರ ವಿಶ್ವಕ್ಕೆ ಶಾಂತಿ, ಸಮೃದ್ಧಿ, ಸ್ಥಿರತೆ ತರಲು ಸಾಧ್ಯ: ರಾಜನಾಥ್ ಸಿಂಗ್
'ವಸುಧೈವ ಕುಟುಂಬಕಂ' ಎಂಬ ಸಂದೇಶವನ್ನು ಇಡೀ ಜಗತ್ತಿಗೆ ಸಾರಿದ ದೇಶ ನಮ್ಮದು, ನಮ್ಮ ದೇಶದಲ್ಲಿ ವಾಸಿಸುವವರು ನಮ್ಮ ಕುಟುಂಬದ ಸದಸ್ಯರಷ್ಟೇ ಅಲ್ಲ, ಜಾತಿ, ಧರ್ಮ, ಸಮುದಾಯಗಳ ಭೇದವಿಲ್ಲದೆ ಜಗತ್ತಿನ ಎಲ್ಲರೂ ಒಂದೇ ಸದಸ್ಯರಾಗಿದ್ದಾರೆ. ಇಡೀ ಪ್ರಪಂಚವೇ ಒಂದು ಕುಟುಂಬ, ಈ ಸಂದೇಶವನ್ನು ನೀಡಿದ ದೇಶವೊಂದಿದ್ದರೆ ಅದು ನಮ್ಮದು ಎಂದು ಭಾರತೀಯ ವಲಸಿಗರನ್ನುದ್ದೇಶಿಸಿ ಮಾತನಾಡಿದ ರಾಜನಾಥ್ ಸಿಂಗ್ ಹೇಳಿದ್ದಾರೆ.
ವಾಷಿಂಗ್ಟನ್ ಆಗಸ್ಟ್ 23: ಭಾರತೀಯರು ಇತರರನ್ನು ವಂಚಿಸಲು ಸಾಧ್ಯವಿಲ್ಲ, ಏಕೆಂದರೆ “ನಮ್ಮ ಸ್ವಭಾವದಲ್ಲಿ ಮೋಸ ಎಂಬುದು ಇಲ್ಲ” ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಗುರುವಾರ ಹೇಳಿದ್ದಾರೆ. ಅಮೆರಿಕದಲ್ಲಿರುವ (US) ಭಾರತೀಯ ವಲಸಿಗರನ್ನುದ್ದೇಶಿಸಿ ಮಾತನಾಡಿದ ಸಚಿವರು, ಅನಿವಾಸಿಗಳಾಗಿ ಅಮೆರಿಕಕ್ಕೆ ಅವರ ಸಮರ್ಪಣೆಯನ್ನು ಪ್ರಶ್ನಿಸಬಾರದು ಎಂದು ಹೇಳಿದರು. ಇಲ್ಲಿ ಕೆಲಸ ಮಾಡುವ ಭಾರತೀಯ ಸದಸ್ಯರಿಗೆ ನಾನು ಪೂರ್ಣ ಪ್ರಾಮಾಣಿಕತೆಯಿಂದ ಕೆಲಸ ಮಾಡಲು ಹೇಳಲು ಬಯಸುತ್ತೇನೆ. ನಿಮಗೆ ಭಾರತ ಬಗ್ಗೆ ಸಮರ್ಪಣೆ ಇರಬೇಕು. ಆದರೆ ನೀವು ಇಲ್ಲಿ ಕೆಲಸ ಮಾಡುತ್ತಿರುವುದರಿಂದ, ಅಮೆರಿಕದತ್ತ ನಿಮಗಿರುವ ಸಮರ್ಪಣೆಯನ್ನೂ ಪ್ರಶ್ನಿಸಬಾರದು. ಆಗ ಮಾತ್ರ ಭಾರತೀಯರ ಗ್ರಹಿಕೆಗಳು ಚೆನ್ನಾಗಿರುತ್ತದೆ.
ಭಾರತೀಯರನ್ನು ಮೋಸ ಮಾಡಬಹುದು.ಆದರೆ ಭಾರತೀಯರು ಯಾರನ್ನೂ ಮೋಸ ಮಾಡಲಾರರು . “ವಂಚನೆ ನಮ್ಮ ಸ್ವಭಾವದಲ್ಲಿಲ್ಲ, ನಾವು ಮೋಸ ಹೋಗಬಹುದು, ಆದರೆ ನಾವು ಎಂದಿಗೂ ಇತರರಿಗೆ ಮೋಸ ಮಾಡಬಾರದು, ಇದು ಜಗತ್ತಿಗೆ ನೀಡಬೇಕಾದ ಸಂದೇಶ” ಎಂದು ರಾಜನಾಥ ಸಿಂಗ್ ಹೇಳಿದ್ದಾರೆ.
ರಾಜನಾಥ್ ಸಿಂಗ್ ಟ್ವೀಟ್
Had a lively interaction with the Indian community at Washington DC. It’s heartwarming to see how the Indian community continues to cherish and uphold their cultural values and maintain their connection to their roots. pic.twitter.com/4qPFfzNwmX
— Rajnath Singh (@rajnathsingh) August 23, 2024
ಭಾರತವು ‘ವಸುಧೈವ ಕುಟುಂಬಕಂ’ ಎಂಬ ಸಂದೇಶವನ್ನು ಜಗತ್ತಿಗೆ ನೀಡಿದೆ. ಈ ಜಗತ್ತಿನಲ್ಲಿ ಎಲ್ಲ ಜಾತಿ ಮತ್ತು ಧರ್ಮದ ಎಲ್ಲರನ್ನು ಒಂದೇ ಕುಟುಂಬವೆಂದು ಪರಿಗಣಿಸುತ್ತದೆ.
‘ವಸುಧೈವ ಕುಟುಂಬಕಂ’ ಎಂಬ ಸಂದೇಶವನ್ನು ಇಡೀ ಜಗತ್ತಿಗೆ ಸಾರಿದ ದೇಶ ನಮ್ಮದು, ನಮ್ಮ ದೇಶದಲ್ಲಿ ವಾಸಿಸುವವರು ನಮ್ಮ ಕುಟುಂಬದ ಸದಸ್ಯರಷ್ಟೇ ಅಲ್ಲ, ಜಾತಿ, ಧರ್ಮ, ಸಮುದಾಯಗಳ ಭೇದವಿಲ್ಲದೆ ಜಗತ್ತಿನ ಎಲ್ಲರೂ ಒಂದೇ ಸದಸ್ಯರಾಗಿದ್ದಾರೆ. ಇಡೀ ಪ್ರಪಂಚವೇ ಒಂದು ಕುಟುಂಬ, ಈ ಸಂದೇಶವನ್ನು ನೀಡಿದ ದೇಶವೊಂದಿದ್ದರೆ ಅದು ನಮ್ಮದು. ಪ್ರತಿಯೊಬ್ಬರೂ ಇದನ್ನು ಮಾಡಲು ಸಾಧ್ಯವಿಲ್ಲ, ಆಧ್ಯಾತ್ಮಿಕ ದೇಶ ಮಾತ್ರ ಇದನ್ನು ಮಾಡಲು ಸಾಧ್ಯವಾಗುತ್ತದೆ ಎಂದು ಸಿಂಗ್ ಹೇಳಿದ್ದಾರೆ.
ಭಾರತ ಮತ್ತು ಅಮೆರಿಕ ಪ್ರಬಲ ಪಾಲುದಾರರಾಗಲು ಉದ್ದೇಶಿಸಿದ್ದು ಉಭಯ ದೇಶಗಳು ಸಹಜ ಮಿತ್ರ ರಾಷ್ಟ್ರಗಳಾಗಿವೆ. ನಮ್ಮ ಸಂಬಂಧ ಹಳೇದು .ಭಾರತ-ಯುಎಸ್ ಸಂಬಂಧಗಳು ಗಟ್ಟಿಯಾಗಬೇಕೆಂದು ವಿಧಿ ಬಯಸುತ್ತದೆ. ಭಾರತ ಮತ್ತು ಅಮೆರಿಕ ಮಾತ್ರ ವಿಶ್ವಕ್ಕೆ ಶಾಂತಿ, ಸಮೃದ್ಧಿ ಮತ್ತು ಸ್ಥಿರತೆಯನ್ನು ತರಲು ಸಾಧ್ಯ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.
ಅಮೆರಿಕವನ್ನು ಅನ್ವೇಷಿಸಲು ಕೊಲಂಬಸ್ ಹೋದಾಗ, ಅವರು ಸ್ಥಳೀಯ ಅಮೆರಿಕನ್ನರನ್ನು ಭೇಟಿಯಾದರು ಮೊದಲಿನಿಂದಲೂ, ಈ ವಿಧಿ ಭಾರತ-ಯುಎಸ್ ಸಂಬಂಧಗಳು ಗಟ್ಟಿಯಾಗಬೇಕೆಂದು ಬಯಸಿತು ಎಂದು ನಾನು ನಂಬುತ್ತೇನೆ. ನಮ್ಮ ಸಂಬಂಧಗಳು ನಿರಂತರವಾಗಿ ಬಲಗೊಳ್ಳುತ್ತಿವೆ.
ಇದನ್ನೂ ಓದಿ:PM Modi: ಉಕ್ರೇನ್‌ನಲ್ಲಿ ಶಾಂತಿ ಮರುಸ್ಥಾಪಿಸಲು ಇತರೆ ರಾಷ್ಟ್ರಗಳೊಂದಿಗೆ ಕೆಲಸ ಮಾಡಲು ಭಾರತ ಸಿದ್ಧ; ಪ್ರಧಾನಿ ಮೋದಿ
ಕಳೆದ 10 ವರ್ಷಗಳಲ್ಲಿ ಭಾರತದ ಪರಿವರ್ತನೆಗೆ ಮತ್ತಷ್ಟು ಒತ್ತು ನೀಡಿದ ರಾಜನಾಥ್ ಸಿಂಗ್ ಮತ್ತು ಜಾಗತಿಕವಾಗಿ ದೇಶದ ಗ್ರಹಿಕೆಯಲ್ಲಿ ತ್ವರಿತ ಬದಲಾವಣೆಯಾಗಿದೆ ಎಂದು ಹೇಳಿದರು. ಅಮೆರಿಕ ಪ್ರವಾಸದ ವೇಳೆ ರಾಜನಾಥ್ ಸಿಂಗ್ ಅವರು ಅಮೆರಿಕದ ಕಾರ್ಯದರ್ಶಿ ಆಸ್ಟಿನ್ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ. ಅದೇ ವೇಳೆ ರಾಷ್ಟ್ರೀಯ ಭದ್ರತಾ ವ್ಯವಹಾರಗಳ ಅಧ್ಯಕ್ಷರ ಯುಎಸ್ ಸಹಾಯಕ ಜೇಕ್ ಸುಲ್ಲಿವಾನ್ ಅವರನ್ನು ಭೇಟಿಯಾಗಲಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ