AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪತ್ನಿ ಮಾಡುವ ಖರ್ಚಿನಿಂದ ಬೇಸತ್ತು ಸ್ನೇಹಿತನಿಗೆ ಹಣಕೊಟ್ಟು ಕೊಲ್ಲಿಸಿದ ಗಂಡ

ವ್ಯಕ್ತಿಯೊಬ್ಬ ಸ್ನೇಹಿತನಿಗೆ ಹಣ ಕೊಟ್ಟು ಪತ್ನಿಯನ್ನು ಕೊಲ್ಲಿಸಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಹೇಮಂತ್ ಶರ್ಮಾ ಎಂಬಾತ ತನ್ನ ಸ್ನೇಹಿತನ ಸಹಾಯ ಪಡೆದು ಹತ್ಯೆ ಮಾಡಲು ಆತನಿಗೆ 2.5 ಲಕ್ಷ ರೂ. ನೀಡಿದ್ದ, ಆರಂಭದಲ್ಲಿ ರಸ್ತೆ ಅಪಘಾತದಂತೆ ಕಂಡುಬಂದ ಈ ಘಟನೆಯು ಆಗಸ್ಟ್​ 13ರಂದು ನಡೆದಿತ್ತು. ಹತ್ತು ದಿನಗಳ ಬಳಿಕ ಪೊಲೀಸ್​ ತನಿಖೆಯಲ್ಲಿ ವಿಚಾರ ಬೆಳಕಿಗೆ ಬಂದಿದೆ.

ಪತ್ನಿ ಮಾಡುವ ಖರ್ಚಿನಿಂದ ಬೇಸತ್ತು ಸ್ನೇಹಿತನಿಗೆ ಹಣಕೊಟ್ಟು ಕೊಲ್ಲಿಸಿದ ಗಂಡ
ಕೊಲೆ
ನಯನಾ ರಾಜೀವ್
|

Updated on: Aug 25, 2024 | 9:04 AM

Share

ಪತ್ನಿ ಮಾಡುವ ಖರ್ಚಿನಿಂದ ಬೇಸತ್ತು ವ್ಯಕ್ತಿಯೊಬ್ಬ ಸ್ನೇಹಿತನಿಗೆ ಹಣಕೊಟ್ಟು ಆಕೆಯನ್ನು ಕೊಲ್ಲಿಸಿರುವ ಘಟನೆ ಮಧ್ಯಪ್ರದೇಶದ ಗ್ವಾಲಿಯರ್​ನಲ್ಲಿ ನಡೆದಿದೆ. ಹೇಮಂತ್ ಶರ್ಮಾ ಎಂಬಾತ ತನ್ನ ಸ್ನೇಹಿತನ ಸಹಾಯ ಪಡೆದು ಹತ್ಯೆ ಮಾಡಲು ಆತನಿಗೆ 2.5 ಲಕ್ಷ ರೂ. ನೀಡಿದ್ದ, ಆರಂಭದಲ್ಲಿ ರಸ್ತೆ ಅಪಘಾತದಂತೆ ಕಂಡುಬಂದ ಈ ಘಟನೆಯು ಆಗಸ್ಟ್​ 13ರಂದು ನಡೆದಿತ್ತು. ಹತ್ತು ದಿನಗಳ ಬಳಿಕ ಪೊಲೀಸ್​ ತನಿಖೆಯಲ್ಲಿ ಸತ್ಯ ಬೆಳಕಿಗೆ ಬಂದಿದೆ.

ಪೊಲೀಸರ ಪ್ರಕಾರ ಶರ್ಮಾ, ಪತ್ನಿ ಕೊಲೆಯನ್ನು ರಸ್ತೆ ಅಪಘಾತದಂತೆ ಕಾಣುವಂತೆ ರೂಪಿಸಿದ್ದ. ಘಟನೆ ದಿನದಂದು ಪತ್ನಿಯನ್ನು ಆಕೆಯ ಸಹೋದರ ಸಂದೇಶ್​ ದೇವಸ್ಥಾನಕ್ಕೆ ಕರೆದೊಯ್ದಿದ್ದರು. ಹಿಂದಿರುಗುವಾಗ ಶರ್ಮಾ ಸ್ನೇಹಿತನಿದ್ದ ಇಕೋಸ್ಪೋರ್ಟ್ಸ್​ ಕಾರು ಈ ಇಬ್ಬರು ಪ್ರಯಾಣಿಸುತ್ತಿದ್ದ ಬೈಕ್​ಗೆ ಡಿಕ್ಕಿ ಹೊಡೆದಿದೆ.

ಮಹಿಳೆ ಮಾರಣಾಂತಿಕವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರೆ, ಸಂದೇಶ್‌ಗೆ ಗಾಯಗಳಾಗಿವೆ. ಶರ್ಮಾ ಇದನ್ನು ಹಿಟ್​ ಆ್ಯಂಡ್ ರನ್ ಎಂದು ಹೇಳಿದ್ದ, ಬಳಿಕ ಆ ಪ್ರದೇಶದ ಸಿಸಿಟಿವಿ ದೃಶ್ಯಗಳಲ್ಲಿ ಶರ್ಮಾ ಹೇಳಿರುವ ರೀತಿಯ ವಾಹನ ಕಾಣಿಸದೇ ಇರುವುದು ಅನುಮಾನಗಳನ್ನು ಹುಟ್ಟುಹಾಕಿತ್ತು.

ಮತ್ತಷ್ಟು ಓದಿ: Crime News: ಅಕ್ಕನ ಮಗಳ ಜೊತೆ ಅಕ್ರಮ ಸಂಬಂಧ; ಬೇರೊಬ್ಬನ ಜೊತೆ ಮದುವೆಯಾಗುತ್ತಿದ್ದಾಕೆಯನ್ನು ಕೊಂದ ಮಾವ

ಘರ್ಷಣೆಗೆ ಸ್ವಲ್ಪ ಮೊದಲು ಮೋಟಾರ್‌ಸೈಕಲ್‌ನ ಹಿಂದೆ ಇಕೋಸ್ಪೋರ್ಟ್ ಕಾರು ಇರುವುದು ಕಂಡುಬಂದಿತ್ತು. ಹೇಮಂತ್ ಶರ್ಮಾರ ಎರಡನೇ ಪತ್ನಿ ಈ ದುರ್ಗಾವತಿ, ಅವರು 2022ರಲ್ಲಿ ವಿವಾಹವಾಗಿದ್ದರು.

ಶರ್ಮಾಳ ಮದುವೆಯಾದ ಕೆಲವೇ ದಿನಗಳಲ್ಲಿ ದುರ್ಗಾವತಿ ತನ್ನ ಮೊದಲ ಪತಿಗೆ ವಿಚ್ಛೇದನ ನೀಡಿ ಮನೆಗೆ ಮರಳಿದ್ದಳು. ನಂತರ, ದುರ್ಗಾವತಿ ಶರ್ಮಾಳೊಂದಿಗೆ ಮತ್ತೆ ಒಂದಾದರು ಮತ್ತು ಇಬ್ಬರೂ 2023 ರಲ್ಲಿ ನ್ಯಾಯಾಲಯದಲ್ಲಿ ವಿವಾಹವಾದರು. ಆಕೆ ವಿಪರೀತ ಖರ್ಚು ಮಾಡುತ್ತಿದ್ದ ಕಾರಣ ಶರ್ಮಾಗೆ ಕೋಪ ತರಿಸುತ್ತಿತ್ತು. ಬಳಿಕ ಆಕೆಯನ್ನು ಕೊಲೆ ಮಾಡಲು ಯೋಜನೆ ರೂಪಿಸಿದ್ದ. ಸಂಚಿನಲ್ಲಿ ಭಾಗಿಯಾಗಿರುವ ಇನ್ನಿಬ್ಬರು ಇನ್ನೂ ತಲೆಮರೆಸಿಕೊಂಡಿದ್ದಾರೆ.

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್