AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾರು ಅಪಘಾತದಲ್ಲಿ ಮಿಸ್ ಕೇರಳ 2019 ವಿಜೇತೆ ಆನ್ಸಿ ಕಬೀರ್, ರನ್ನರ್ ಅಪ್ ಅಂಜನಾ ಶಾಜನ್ ದುರ್ಮರಣ

ಮಾಡೆಲಿಂಗ್ ಫೋಟೋ ಸೆಷನ್‌ಗಾಗಿ ಆನ್ಸಿ ತಿರುವನಂತಪುರಂನಿಂದ ಮತ್ತು ಅಂಜನಾ ತ್ರಿಶೂರ್‌ನ ತಮ್ಮ ಊರುಗಳಿಂದ ಕೊಚ್ಚಿಗೆ ಬಂದಿದ್ದರು. ತ್ರಿಶೂರ್‌ಗೆ ತೆರಳುತ್ತಿದ್ದಾಗ ಅಪಘಾತ ವಲಯವಾದ ಚಕ್ಕರಪರಂಬು ಜಂಕ್ಷನ್‌ನಲ್ಲಿ ಅಪಘಾತ ಸಂಭವಿಸಿದೆ.

ಕಾರು ಅಪಘಾತದಲ್ಲಿ ಮಿಸ್ ಕೇರಳ  2019 ವಿಜೇತೆ ಆನ್ಸಿ ಕಬೀರ್, ರನ್ನರ್ ಅಪ್ ಅಂಜನಾ ಶಾಜನ್ ದುರ್ಮರಣ
ಆನ್ಸಿ ಕಬೀರ್- ಅಂಜನಾ ಶಾಜನ್ (ಕೃಪೆ: ಇನ್​​ಸ್ಟಾಗ್ರಾಮ್)
TV9 Web
| Edited By: |

Updated on:Nov 01, 2021 | 1:00 PM

Share

ತಿರುವನಂತಪುರಂ: ಮಿಸ್ ಕೇರಳ 2019 (Miss Kerala 2019 ) ಪ್ರಶಸ್ತಿ ವಿಜೇತೆ ಆನ್ಸಿ ಕಬೀರ್ (Ancy Kabeer) ಮತ್ತು ರನ್ನರ್ ಅಪ್ ಅಂಜನಾ ಶಾಜನ್ (Anjana Shajan) ಅಕ್ಟೋಬರ್ 31 ರ ಮಧ್ಯರಾತ್ರಿ ವೈಟ್ಟಿಲಾ-ಪಾಲಾರಿವಟ್ಟಂ ರಾಷ್ಟ್ರೀಯ ಹೆದ್ದಾರಿ ಬೈಪಾಸ್‌ನಲ್ಲಿ ಕಾರು ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ. ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ನಂತರ ನಿಯಂತ್ರಣ ತಪ್ಪಿದ ಕಾರು ಚಕ್ಕರಪರಂಬುವಿನಲ್ಲಿ ಹಾಲಿಡೇ ಇನ್ ಬಳಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದು ಮಗುಚಿ ಬಿದ್ದಿದೆ. ಆನ್ಸಿ ಮತ್ತು ಅಂಜನಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಪಾಲಾರಿವಟ್ಟಂನ ಇಎಂಸಿ ಆಸ್ಪತ್ರೆಗೆ ದಾಖಲಾಗಿದ್ದ ಕಾರಿನಲ್ಲಿದ್ದ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ದ್ವಿಚಕ್ರ ವಾಹನ ಸವಾರ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ ಎಂದು ಪಾಲಾರಿವಟ್ಟಂ ಪೊಲೀಸರು ತಿಳಿಸಿದ್ದಾರೆ. ಇಬ್ಬರು ಮಹಿಳೆಯರ ಶವಗಳನ್ನು ಅದೇ ಆಸ್ಪತ್ರೆಯಲ್ಲಿ ಇರಿಸಲಾಗಿದೆ.  ಮಾಡೆಲಿಂಗ್ ಫೋಟೋ ಸೆಷನ್‌ಗಾಗಿ ಆನ್ಸಿ  ತಿರುವನಂತಪುರಂನಿಂದ ಮತ್ತು ಅಂಜನಾ ತ್ರಿಶೂರ್‌ನ ತಮ್ಮ ಊರುಗಳಿಂದ ಕೊಚ್ಚಿಗೆ ಬಂದಿದ್ದರು ಮತ್ತು ತ್ರಿಶೂರ್‌ಗೆ ತೆರಳುತ್ತಿದ್ದಾಗ ಅಪಘಾತ ವಲಯವಾದ ಚಕ್ಕರಪರಂಬು ಜಂಕ್ಷನ್‌ನಲ್ಲಿ ಅಪಘಾತ ಸಂಭವಿಸಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರು ಗುರುತು ಹಿಡಿಯಲಾಗದಷ್ಟು ನಜ್ಜುಗುಜ್ಜಾಗಿದೆ.

ಮಾಜಿ ಮಿಸ್ ಕೇರಳ ಅನ್ಸಿ ಕಬೀರ್ ವಾಹನ ಅಪಘಾತದಲ್ಲಿ ಮೃತಪಟ್ಟ ಮಾಹಿತಿ ತಿಳಿದ ಅವರ ಅಮ್ಮ  ರಸೀನ (48) ಕುಸಿದು  ಬಿದ್ದಿದ್ದಾರೆ. ಇವರನ್ನು ತಿರುವನಂತಪುರದಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ತಂದೆ ಕಬೀರ್ ವಿದೇಶದಲ್ಲಿದ್ದಾರೆ . ಆಟಿಂಗಲ್ ಆಲಂಕೋಟ್, ಪಾಲಕೋಣಂ ಅನ್ಸಿ ಕೊಟ್ಟೇಜಿನಲ್ಲಿ ಆನ್ಸಿಯ ಅಮ್ಮ ವಾಸಿಸುತ್ತಿದ್ದಾರೆ. ಆನ್ಸಿಯ ಪೋಸ್ಟ್‌ಮಾರ್ಟಮ್ ಕ್ರಮಕ್ಕಾಗಿ ಸಂಬಂಧಿಗಳು ಕೊಚ್ಚಿಗೆ ಮರಳಿದ್ದಾರೆ. ಕಬೀರ್-ರಸೀನ ದಂಪತಿಗಳ ಏಕೈಕ ಪುತ್ರಿ ಆಗಿದ್ದಾರೆ ಆನ್ಸಿ.

‘ಹೋಗುವ ಹೊತ್ತಾಯ್ತು’- ಆನ್ಸಿಯ ಕೊನೆಯ ಪೋಸ್ಟ್ ಮಾಜಿ ಮಿಸ್ ಕೇರಳ ಆನ್ಸಿ ಕಬೀರ್ ಮತ್ತು ಮಿಸ್ ಕೇರಳ ರನ್ನರ್ ಅಪ್ ಅಂಜನಾ ಶಾಜನ್ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂಬ ಸುದ್ದಿ ದೊಡ್ಡ ಆಘಾತವನ್ನುಂಟು ಮಾಡಿದೆ. ಸೋಮವಾರ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಇವರು ಪ್ರಯಾಣಿಸುತ್ತಿದ್ದ ಕಾರು ಬೈಕ್‌ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.

View this post on Instagram

A post shared by Ansi Kabeer (@ansi_kabeer)

ಸಾವಿಗೆ ಕೊನೆಯ ಪಯಣಕ್ಕೂ ಮುನ್ನ ಮಾಜಿ ಸುಂದರಿ ಕೇರಳದ ಆನ್ಸಿ ಕಬೀರ್ ಅವರ ಮಾತು ಕೇಳಿ ಅಭಿಮಾನಿಗಳು ಮತ್ತು ಸ್ನೇಹಿತರು ಶಾಕ್ ಆಗಿದ್ದಾರೆ. “ಇದು ಹೋಗಲು ಸಮಯ” ಎಂದು ಆನ್ಸಿ ಕಬೀರ್ ಇನ್​​ಸ್ಟಾಗ್ರಾಮ್​​ನಲ್ಲಿ ಬರೆದಿದ್ದಾರೆ.

ಅನ್ನಿಯ ಸಾವಿನ ದುಃಖವನ್ನು ಹಂಚಿಕೊಂಡ ಅನೇಕರು ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಇದು ನಂಬಲಸಾಧ್ಯ ಎಂದು ಬರೆದಿದ್ದಾರೆ. ಕೆಲವು ಜನರು  ಆನ್ಸಿ ಇದನ್ನು ಮೊದಲೇ ನಿರೀಕ್ಷಿಸಿದ್ದರು ಎಂದು ಕಾಮೆಂಟ್ ಮಾಡಿದ್ದಾರೆ. ಮಿಸ್ ಕೇರಳ 2019  ವಿಜೇತೆ ಆನ್ಸಿ ಕಬೀರ್ ಗೃಹಲಕ್ಷ್ಮಿ ಫೇಸ್ ಆಫ್ ಕೇರಳ 2018 ರ ಅಂತಿಮ ಸ್ಪರ್ಧಿಯೂ ಆಗಿದ್ದರು. ಅಂಜನಾ ಶಾಜನ್, ಆನ್ಸಿಯ ಸ್ನೇಹಿತೆ ಮತ್ತು 2019 ರ ಮಿಸ್ ಕೇರಳ ರನ್ನರ್-ಅಪ್ ತ್ರಿಶೂರ್ ಮೂಲದವರು. ಇದನ್ನೂ ಓದಿ: ಕೇರಳದಲ್ಲಿ ಒಂದೂವರೆ ವರ್ಷದ ನಂತರ ಇಂದು ಶಾಲೆ ಪುನಾರಂಭ

Published On - 12:51 pm, Mon, 1 November 21