West Bengal Elections 2021: ಬಾಲಿವುಡ್ ತಾರೆ ಮಿಥುನ್ ಚಕ್ರವರ್ತಿಗೆ ಟಿಕೆಟ್ ಕೊಡದ ಬಿಜೆಪಿ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Mar 23, 2021 | 10:30 PM

70 ವರ್ಷದ ಬಾಲಿವುಡ್ ತಾರೆ ಭರ್ಜರಿ ಸಮಾರಂಭಲ್ಲಿ ಬಿಜೆಪಿ ಪಕ್ಷ ಸೇರಿದ್ದರು. ಅವರಿಗೆ ರಾಶ್​ಬೇಹರಿ ಕ್ಷೇತ್ರದಿಂದ ಟಿಕೆಟ್ ದೊರೆಯಬಹುದು ಎಂಬ ಊಹೆಗಳು ದಟ್ಟವಾಗಿದ್ದವು.

West Bengal Elections 2021: ಬಾಲಿವುಡ್ ತಾರೆ ಮಿಥುನ್ ಚಕ್ರವರ್ತಿಗೆ ಟಿಕೆಟ್ ಕೊಡದ ಬಿಜೆಪಿ
ಬಿಜೆಪಿ ಸೇರ್ಪಡೆಗೊಂಡ ನಟ ಮಿಥುನ್ ಚಕ್ರವರ್ತಿಗೆ ಟಿಕೆಟ್ ಸಿಕ್ಕಿಲ್ಲ!
Follow us on

ಕೊಲ್ಕತ್ತಾ: ಪಶ್ಚಿಮ ಬಂಗಾಳದ ಕೊನೆಯ ಹಂತದ 13 ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಬಿಡುಗಡೆಗೊಳಿಸಿದ್ದು, ಬಹು ನಿರೀಕ್ಷಿತ ಮಿಥುನ್ ಚಕ್ರವರ್ತಿಗೆ ಟಿಕೆಟ್ ನೀಡಿಲ್ಲ. 70 ವರ್ಷದ ಬಾಲಿವುಡ್ ತಾರೆ ಭರ್ಜರಿ ಸಮಾರಂಭಲ್ಲಿ ಬಿಜೆಪಿ ಪಕ್ಷ ಸೇರಿದ್ದರು. ದಕ್ಷಿಣ ಕೊಲ್ಕತ್ತಾದ ರಾಶ್​ಬೆಹರಿ ಕ್ಷೇತ್ರದಿಂದ ಟಿಕೆಟ್ ದೊರೆಯಬಹುದು ಎಂಬ ಊಹೆಗಳು ದಟ್ಟವಾಗಿದ್ದವು. ಆದರೆ ರಾಶ್​ಬೇಹರಿ ಕ್ಷೇತ್ರಕ್ಕೆ ನಿವೃತ್ತ ಲೆಫ್ಟಿನೆಂಟ್ ಜನರಲ್ ಸುಬ್ರತಾ ಸಹಾ ಅವರಿಗೆ ಟಿಕೆಟ್ ನೀಡಿದೆ. ಎಲ್ಲಾ 294 ಕ್ಷೇತ್ರಗಳಿಗೂ ಟಿಕೆಟ್ ಘೋಷಣೆಯಾಗಿದ್ದು, ಮಿಥುನ್ ಚಕ್ರವರ್ತಿಗೆ ಟಿಕೆಟ್ ದೊರೆಯದಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಬಾಲಿವುಡ್ ಖ್ಯಾತ ನಟ ಮಿಥುನ್ ಚಕ್ರವರ್ತಿ ಮಾರ್ಚ್ 7ರಂದು ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ರಾಜ್ಯದ ಬ್ರಿಗೇಡ್ ಪರೇಡ್ ಮೈದಾನದಲ್ಲಿ ಮಿಥುನ್ ಬಿಜೆಪಿ ಬಾವುಟ ಹಾರಿಸಿ ಪಕ್ಷಕ್ಕೆ ಪದಾರ್ಪಣೆ ಮಾಡಿದ್ದರು. ಇದಕ್ಕೂ ಮುನ್ನ ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಶ್ ಮಿಥುನ್ ಚಕ್ರವರ್ತಿಯನ್ನು ಕಾರ್ಯಕ್ರಮಕ್ಕೆ ಸ್ವಾಗತಿಸಿದ್ದರು. ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯ್​ವರ್ಗಿಯಾ ಉಪಸ್ಥಿತರಿದ್ದರು.

ಭಾರತದ ಸಿನಿಮಾ ಉದ್ಯಮದಲ್ಲಿ ಮಿಥುನ್ ಚಕ್ರವರ್ತಿಯವರ ಹೆಸರು ಅಪರಿಚಿತವೇನಲ್ಲ. 1976ರಲ್ಲಿ ಖ್ಯಾತ ಸಿನಿಮಾ ನಿರ್ದೇಶಕ ಮೃಣಾಲ್ ಸೇನ್ ಅವರ ಮೃಗಯಾ ಚಿತ್ರದ ಮೂಲಕ ಹಿರಿತೆರೆಯ ಮೇಲೆ ಕಾಣಿಸಿಕೊಂಡ ಮಿಥುನ್ ಚಕ್ರವರ್ತಿ ಅದಕ್ಕೂ ಮುನ್ನ ನಕ್ಸಲ್ ಚಳವಳಿ ಸೇರಿದ್ದರು ಎಂಬುದು ಬಹುತೇಕರು ಮರೆತ ವಿಷಯ. ಪುಣೆಯ ಫಿಲ್ಮ್ ಆ್ಯಂಡ್ ಟೆಲಿವಿಷನ್ ಇನ್ಸ್​ಟಿಟ್ಯೂಟ್​ನಲ್ಲಿ ಪದವಿ ಪಡೆದ ಅವರು, ಸಿನಿಮಾ ರಂಗ ಸೇರುವುದಕ್ಕೂ ಮುಂಚೆ ನಕ್ಸಲ್ ಚಳವಳಿ ಸೇರಿದ್ದರು. ಆದರೆ, ಅವರ ಸಹೋದರ ಅಪಘಾತವೊಂದರಲ್ಲಿ ಮೃತಪಟ್ಟ ನಂತರ ನಕ್ಸಲ್ ಚಳವಳಿ ತ್ಯಜಿಸಿ, ಮರಳಿ ಮನೆ ಸೇರಿದರು ಎನ್ನುತ್ತದೆ ಇತಿಹಾಸ. ಕುಖ್ಯಾತ ನಕ್ಸಲ್​ ಹೋರಾಟಗಾರ ರವಿ ರಂಜನ್ ಅವರ ಪ್ರೀತಿಯ ಆಪ್ತರಕ್ಷಕನೂ ಆಗಿ ಮಿಥುನ್ ಚಕ್ರವರ್ತಿ ಕೆಲ ಕಾಲ ಕೆಲಸ ನಿರ್ವಹಿಸಿದ್ದರು.

ಡಿಸ್ಕೊ ಡಾನ್ಸರ್ ಎಂದರೆ ಈಗಲೂ ಥಟ್ ಎಂದು 1980ರ ದಶಕದ ಜಿಮ್ಮಿಯ ಕುಣಿತವೇ ಕಣ್ಣಿಗೆ ಕಟ್ಟುತ್ತದೆ. ಡಿಸ್ಕೋ ಡಾನ್ಸರ್ ಮಿಥುನ್​ ಚಕ್ರವರ್ತಿ ಅವರಿಗೆ ಅಷ್ಟು ಪ್ರಸಿದ್ಧಿ ಗಳಿಸಿಕೊಟ್ಟಿತ್ತು. ಕೇವಲ ಹಿಂದಿ ಒಂದೇ ಅಲ್ಲದೇ, ಬೆಂಗಾಳಿ ಭಾಷೆಯಲ್ಲೂ ಅವರು ಹಲವು ಹಿಟ್ ಸಿನಿಮಾ ನೀಡಿದ್ದರು. 2014ರಲ್ಲಿ ಇದೇ ಮಮತಾ ಬ್ಯಾನರ್ಜಿ ಮಿಥುನ್ ಚಕ್ರವರ್ತಿ ಅವರನ್ನು ಟಿಎಂಸಿಯಿಂದ ರಾಜ್ಯಸಭಾ ಸಂಸದರನ್ನಾಗಿ ನೇಮಿಸಿತ್ತು. ಆದರೆ ಶಾರದಾ ಚಿಟ್ ಫಂಡ್ ಹಗರಣ ಹೊರಬಿದ್ದಂತೆ ಅನಾರೋಗ್ಯದ ಹಿನ್ನೆಲೆಯಲ್ಲಿ ಅವರು ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು.

ಪ್ರಧಾನಿ ನರೇಂದ್ರ ಮೋದಿ ಇಂದು (ಮಾರ್ಚ್ 7) ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಲಿದ್ದಾರೆ. ಬ್ರಿಗೇಡ್ ಗ್ರೌಂಡ್​ನ ಪಕ್ಷದ ಸಮಾರಂಭದಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪಕ್ಷಗಳ ಪ್ರಚಾರ ಭರ್ರಜರಿಯಾಗಿ ಸಾಗುತ್ತಿದೆ. ಬಿಜೆಪಿ ಹಾಗೂ ಟಿಎಂಸಿ ನಡುವೆ ನೇರ ಹಣಾಹಣಿ ನಡೆಯಲಿರುವುದು ಖಚಿತವಾಗಿದೆ. ಶತಾಯಗತಾಯ ಬಂಗಾಳ ವಶಪಡಿಸಿಕೊಳ್ಳುವ ತವಕದಲ್ಲಿ ಬಿಜೆಪಿ ಇದೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ರಾಜ್ಯವನ್ನು ಸೋನಾರ್ ಬಾಂಗ್ಲಾ (ಚಿನ್ನದ ಬಾಂಗ್ಲಾ) ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ.

ಇದನ್ನೂ ಓದಿ: ವಿಶ್ಲೇಷಣೆ | ಪಶ್ಚಿಮ ಬಂಗಾಳ ಕದನ ಕಣ; ಮೊದಲ ಹಂತದಲ್ಲಿ ಬಿಜೆಪಿಗೆ ಅನುಕೂಲಕರ ಪರಿಸ್ಥಿತಿ

West Bengal Election 2021 Opinion Poll: ಪಶ್ಚಿಮ ಬಂಗಾಳದಲ್ಲಿ Tv9 ಚುನಾವಣಾ ಪೂರ್ವ ಸಮೀಕ್ಷೆ, ಮಮತಾ ಮುಂದೆ