AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಂತರರಾಷ್ಟ್ರೀಯ ಪ್ರಯಾಣಿಕರ ವಿಮಾನ ಸೇವೆ ಅಮಾನತು ಏಪ್ರಿಲ್ 30, 2021ರ ತನಕ ವಿಸ್ತರಣೆ

ಕೊರೊನಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ನಿಗದಿತ ವೇಳಾಪಟ್ಟಿಯ ಅಂತರರಾಷ್ಟ್ರೀಯ ವಿಮಾನಗಳನ್ನು ಏಪ್ರಿಲ್ 30, 2021ರ ತನಕ ಅಮಾನತು ಮಾಡಿ, ಭಾರತವು ಮಂಗಳವಾರ ಆದೇಶ ನೀಡಿದೆ.

ಅಂತರರಾಷ್ಟ್ರೀಯ ಪ್ರಯಾಣಿಕರ ವಿಮಾನ ಸೇವೆ ಅಮಾನತು ಏಪ್ರಿಲ್ 30, 2021ರ ತನಕ ವಿಸ್ತರಣೆ
ಪ್ರಾತಿನಿಧಿಕ ಚಿತ್ರ
Srinivas Mata
|

Updated on: Mar 23, 2021 | 7:54 PM

Share

ನವದೆಹಲಿ: ಕೊರೊನಾ ವೈರಾಣು ಬಿಕ್ಕಟ್ಟನ್ನು ಗಮನದಲ್ಲಿ ಇಟ್ಟುಕೊಂಡು ಭಾರತ ಸರ್ಕಾರವು ನಿಗದಿತ ವೇಳಾಪಟ್ಟಿಯ ಅಂತರರಾಷ್ಟ್ರೀಯ ಪ್ರಯಾಣಿಕರ ವಿಮಾನ ಸೇವೆಯ ಅಮಾನತನ್ನು ಏಪ್ರಿಲ್ 30, 2021ರ ತನಕ ವಿಸ್ತರಣೆ ಮಾಡಿದೆ. “ಆದರೆ ಒಂದು ಪ್ರಕರಣದಿಂದ ಮತ್ತೊಂದು ಪ್ರಕರಣದ ಆಧಾರದ ಮೇಲೆ, ಸಕ್ಷಮ ಪ್ರಾಧಿಕಾರವು ಆಯ್ದ ಮಾರ್ಗಗಳಲ್ಲಿ ಅಂತರರಾಷ್ಟ್ರೀಯ ವೇಳಾಪಟ್ಟಿ ವಿಮಾನಗಳಿಗೆ ಅವಕಾಶ ಮಾಡಿಕೊಡುತ್ತದೆ,” ಎಂದು ನಾಗರಿಕ ವಿಮಾನಯಾನ ಪ್ರಧಾನ ನಿರ್ದೇಶನಾಲಯದ (ಡಿಜಿಸಿಎ) ಸುತ್ತೋಲೆಯಲ್ಲಿ ಮಂಗಳವಾರದಂದು ತಿಳಿಸಲಾಗಿದೆ. ಸುತ್ತೋಲೆಯಲ್ಲಿ ತಿಳಿಸಿರುವ ಪ್ರಕಾರ, ಅಂತರರಾಷ್ಟ್ರೀಯ ಸರಕು ಸಾಗಾಟ ಕಾರ್ಯಾಚರಣೆ ಮತ್ತು ಡಿಜಿಸಿಎಯಿಂದ ವಿಶೇಷವಾಗಿ ಅನುಮತಿ ಪಡೆದ ವಿಮಾನಗಳಿಗೆ ಅಮಾನತಿನಿಂದ ಯಾವುದೇ ಸಮಸ್ಯೆ ಆಗುವುದಿಲ್ಲ.

ಕೊರೊನಾ ಬಿಕ್ಕಟ್ಟಿನ ಕಾರಣಕ್ಕೆ ಕಳೆದ ವರ್ಷದ ಮಾರ್ಚ್ 23ನೇ ತಾರೀಕಿನಿಂದ ಭಾರತವು ನಿಗದಿತ ವೇಳಾಪಟ್ಟಿಯ ಅಂತರರಾಷ್ಟ್ರೀಯ ವಿಮಾನ ಸೇವೆಯನ್ನು ಅಮಾನತು ಮಾಡಲಾಗಿದೆ. ಈ ಮಧ್ಯೆ ಕಳೆದ ಮೇ ತಿಂಗಳಿಂದ ಈಚೆಗೆ ವಂದೇ ಭಾರತ್ ಅಭಿಯಾನ ಮತ್ತು ಇತರ ದೇಶಗಳ ಜತೆಗೆ ಕಳೆದ ವರ್ಷ ಜುಲೈನಿಂದ ಮಾಡಿಕೊಂಡ ದ್ವಿಪಕ್ಷೀಯ ಏರ್​ಬಬಲ್ ವ್ಯವಸ್ಥೆ ಅಡಿಯಲ್ಲಿ ಅಂತರರಾಷ್ಟ್ರೀಯ ವಿಶೇಷ ವಿಮಾನಗಳು ಕಾರ್ಯ ನಿರ್ವಹಿಸುತ್ತಿವೆ.

ಅಫ್ಗಾನಿಸ್ತಾನ, ಬಹರೇನ್, ಬಾಂಗ್ಲಾದೇಶ್, ಭೂತಾನ್, ಕೆನಡಾ, ಇಥಿಯೋಪಿಯಾ, ಫ್ರಾನ್ಸ್, ಜರ್ಮನಿ, ಇರಾಕ್, ಜಪಾನ್, ಕೀನ್ಯಾ, ಕುವೈತ್, ಮಾಲ್ಡೀವ್ಸ್, ನೇಪಾಳ, ನೆದರ್ಲೆಂಡ್ಸ್, ನೈಜೀರಿಯಾ, ಒಮನ್, ಕತಾರ, ರವಾಂಡ, ಸೆಶೆಲೆಸ್, ತಾಂಜೇನಿಯಾ, ಉಕ್ರೇನ್, ಯುಎಇ, ಯು.ಕೆ., ಉಜ್ಬೇಕಿಸ್ತಾನ್ ಮತ್ತು ಅಮೆರಿಕ ಜತೆಗೆ ಒಪ್ಪಂದ ಸದ್ಯಕ್ಕೆ ಈ 27 ದೇಶಗಳ ಜತೆಗೆ ಭಾರತವು ದ್ವಿಪಕ್ಷೀಯ ಏರ್ ಬಬಲ್ ಒಪ್ಪಂದ ಮಾಡಿಕೊಂಡಿದೆ. ಕಳೆದ ಭಾನುವಾರದಂದು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿರುವ ಪ್ರಕಾರ ಈ ತನಕ 67.5 ಲಕ್ಷ ಮಂದಿಯನ್ನು ವಂದೇ ಭಾರತ್ ಮಿಷನ್ ಅಡಿಯಲ್ಲಿ ವಾಪಸ್ ಕರೆತರಲಾಗಿದೆ.

ಇದನ್ನೂ ಓದಿ: Air fare: ದೇಶೀ ವಿಮಾನ ಪ್ರಯಾಣದ ಕನಿಷ್ಠ ದರದಲ್ಲಿ ಶೇಕಡಾ 5ರಷ್ಟು ಹೆಚ್ಚಳ

Follow Us
ಬರೋಬ್ಬರಿ 209 ಎಸೆತಗಳು ಬಾಕಿ... ಹೀನಾಯ ಸೋಲುಂಡ ಪಾಕಿಸ್ತಾನ್
ಬರೋಬ್ಬರಿ 209 ಎಸೆತಗಳು ಬಾಕಿ... ಹೀನಾಯ ಸೋಲುಂಡ ಪಾಕಿಸ್ತಾನ್
ಎಲ್‌ಪಿಜಿ ಸಿಲಿಂಡರ್​ ಬಿಕ್ಕಟ್ಟು: ಪೆಟ್ರೋಲಿಯಂ ಸಚಿವಾಲಯದಿಂದ ಮಹತ್ವದ ಹೇಳಿಕ
ಎಲ್‌ಪಿಜಿ ಸಿಲಿಂಡರ್​ ಬಿಕ್ಕಟ್ಟು: ಪೆಟ್ರೋಲಿಯಂ ಸಚಿವಾಲಯದಿಂದ ಮಹತ್ವದ ಹೇಳಿಕ
ಮನೆಯಲ್ಲಿ ಸೂರ್ಯರಶ್ಮಿ ನೇರವಾಗಿ ಬೀಳುವುದರಿಂದ ಎಷ್ಟು ಲಾಭ ಗೊತ್ತಾ?
ಮನೆಯಲ್ಲಿ ಸೂರ್ಯರಶ್ಮಿ ನೇರವಾಗಿ ಬೀಳುವುದರಿಂದ ಎಷ್ಟು ಲಾಭ ಗೊತ್ತಾ?
ಇಂದು ಈ ರಾಶಿಯವರ ಕೆಲಸ ಕಾರ್ಯದಲ್ಲಿ ಶುಭ!
ಇಂದು ಈ ರಾಶಿಯವರ ಕೆಲಸ ಕಾರ್ಯದಲ್ಲಿ ಶುಭ!
ವಿವಾದಿತ ‘ದಿ ಕೇರಳ ಸ್ಟೋರಿ 2’ ಸಿನಿಮಾ ವೀಕ್ಷಿಸಿದ ಬಿಜೆಪಿ ಶಾಸಕರು
ವಿವಾದಿತ ‘ದಿ ಕೇರಳ ಸ್ಟೋರಿ 2’ ಸಿನಿಮಾ ವೀಕ್ಷಿಸಿದ ಬಿಜೆಪಿ ಶಾಸಕರು
ನಿಜವಾದ ಕೇರಳ ಸ್ಟೋರಿ: ಮುಸ್ಲಿಂ ಯುವಕನ ಜತೆ ಮದುವೆ ಆದ ಕುಂಭಮೇಳದ ಹುಡುಗಿ
ನಿಜವಾದ ಕೇರಳ ಸ್ಟೋರಿ: ಮುಸ್ಲಿಂ ಯುವಕನ ಜತೆ ಮದುವೆ ಆದ ಕುಂಭಮೇಳದ ಹುಡುಗಿ
ಕೊಪ್ಪಳದ ಗ್ರಾಮವೊಂದರಲ್ಲಿ ಹಾಡಹಗಲೇ ಚಿರತೆ ಓಡಾಟ: ವಿಡಿಯೋ ನೋಡಿ
ಕೊಪ್ಪಳದ ಗ್ರಾಮವೊಂದರಲ್ಲಿ ಹಾಡಹಗಲೇ ಚಿರತೆ ಓಡಾಟ: ವಿಡಿಯೋ ನೋಡಿ
ಮುಜುರಾಯಿ ದೇಗುಲಗಳಲ್ಲಿ ಭಕ್ತರಿಗೆ ಪ್ರಸಾದ ತಯಾರಿಸಲು ಗ್ಯಾಸ್ ಸಮಸ್ಯೆ
ಮುಜುರಾಯಿ ದೇಗುಲಗಳಲ್ಲಿ ಭಕ್ತರಿಗೆ ಪ್ರಸಾದ ತಯಾರಿಸಲು ಗ್ಯಾಸ್ ಸಮಸ್ಯೆ
ಯಾದಗಿರಿ ಭೂಗರ್ಭದಲ್ಲಿ ಅಡಗಿದೆಯಾ ಖನಿಜ ನಿಕ್ಷೇಪ? ಹೆಲಿಕಾಪ್ಟರ್ ಮೂಲಕ ಶೋಧ
ಯಾದಗಿರಿ ಭೂಗರ್ಭದಲ್ಲಿ ಅಡಗಿದೆಯಾ ಖನಿಜ ನಿಕ್ಷೇಪ? ಹೆಲಿಕಾಪ್ಟರ್ ಮೂಲಕ ಶೋಧ
ಯುಗಾದಿ ವರ್ಷ ಭವಿಷ್ಯ; ಮೀನ ರಾಶಿಗೆ ಈ ವರ್ಷ ಹೇಗಿರಲಿದೆ?
ಯುಗಾದಿ ವರ್ಷ ಭವಿಷ್ಯ; ಮೀನ ರಾಶಿಗೆ ಈ ವರ್ಷ ಹೇಗಿರಲಿದೆ?