ಮಹಾರಾಷ್ಟ್ರ ನವನಿರ್ಮಾಣ ಸೇನೆ (MNS) ಮುಖ್ಯಸ್ಥ ರಾಜ್ ಠಾಕ್ರೆ (Raj Thackeray) ಅವರು ಅಯೋಧ್ಯೆ (Ayodhya) ಭೇಟಿಯನ್ನು ಸದ್ಯಕ್ಕೆ ಕೈ ಬಿಟ್ಟಿದ್ದಾರೆ. ಉತ್ತರ ಪ್ರದೇಶದ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ಬೆದರಿಕೆ ಮತ್ತು ಪ್ರತಿಭಟನೆಗಳ ಹಿನ್ನಲೆಯಲ್ಲಿ ರಾಜ್ ಠಾಕ್ರೆ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಅಯೋಧ್ಯೆಗೆ ಭೇಟಿ ಸ್ಥಗಿತಗೊಳಿಸಲಾಗಿದೆ ಎಂದು ರಾಜ್ ಠಾಕ್ರೆ ಟ್ವೀಟ್ ಮಾಡಿದ್ದಾರೆ. ಅದೇ ವೇಳೆ ಮೇ 22 ರಂದು ಪುಣೆಯಲ್ಲಿ ತಮ್ಮ ರ್ಯಾಲಿಯಲ್ಲಿ ಪಾಲ್ಗೊಳ್ಳುವಂತೆ ಅವರು ಮಹಾರಾಷ್ಟ್ರ ಸೈನಿಕರಲ್ಲಿ ಮನವಿ ಮಾಡಿದ್ದಾರೆ. ಏತನ್ಮಧ್ಯೆ, ಶಿವಸೇನಾ ಸಂಸದ ಸಂಜಯ್ ರಾವುತ್ ಅವರು ರಾಜ್ ಠಾಕ್ರೆ ಅವರು ಅಯೋಧ್ಯೆಗೆ ಯೋಜಿತ ಭೇಟಿಯನ್ನು ಏಕೆ ಕೈಬಿಟ್ಟರು ಎಂದು ತಿಳಿದಿಲ್ಲ, ಆದರೆ ಸಚಿವ ಆದಿತ್ಯ ಠಾಕ್ರೆ ಜೂನ್ 15 ರಂದು ನೂರಾರು ಶಿವಸೈನಿಕರೊಂದಿಗೆ ಅಯೋಧ್ಯೆಗೆ ಭೇಟಿ ನೀಡಲಿದ್ದಾರೆ ಎಂದು ಹೇಳಿದ್ದಾರೆ.
ಅಗತ್ಯವಿದ್ದರೆ ಅವರು ಶಿವಸೇನಾದ ಯಾತ್ರಾರ್ಥಿ ಸಹಾಯಕೇಂದ್ರದ ಸಹಾಯವನ್ನು ಪಡೆಯಬಹುದು ಎಂದು ಅವರು ಹೇಳಿದ್ದಾರೆ. ಆದರೆ, ಭವಿಷ್ಯದಲ್ಲಿ ಬಿಜೆಪಿಯ ತಂತ್ರಗಳಿಗೆ ಬಲಿಯಾಗಬೇಡಿ ಎಂದು ರಾವತ್ ರಾಜ್ ಠಾಕ್ರೆಗೆ ಅವರಿಗೆ ಸಲಹೆ ನೀಡಿದರು. ಬಿಜಪಿತಮ್ಮ ರಾಜಕೀಯ ಲಾಭಕ್ಕಾಗಿ ಮಹಾರಾಷ್ಟ್ರದ ನಾಯಕತ್ವವನ್ನು ಮಾತ್ರ ಬಳಸಿಕೊಂಡರು ಎಂದಿದ್ದಾರೆ ರಾವುತ್.
#अयोध्या #Ayodhya pic.twitter.com/rFbkDT9Is1
ಇದನ್ನೂ ಓದಿ— Raj Thackeray (@RajThackeray) May 20, 2022
ಏತನ್ಮಧ್ಯೆ, ಎಂಎನ್ಎಸ್ ನಾಯಕ ಸಂದೀಪ್ ದೇಶಪಾಂಡೆ ಅವರು ನಾನು ಬೆಳಿಗ್ಗೆ ಕಪಿಲ್ ಶರ್ಮಾ ಅವರ ಹಾಸ್ಯ ಕಾರ್ಯಕ್ರಮವನ್ನು ನೋಡಿಲ್ಲ ಎಂದು ರಾವುತ್ ವಿರುದ್ಧ ಕಿಡಿಕಾರಿದರು. ಪುಣೆಯಲ್ಲಿ ಮುಂಬರುವ ರ್ಯಾಲಿಯಲ್ಲಿ ಎಂಎನ್‌ಎಸ್ ಮುಖ್ಯಸ್ಥರು ಸ್ಥಗಿತಗೊಂಡಿರುವ ಅಯೋಧ್ಯೆ ಭೇಟಿಯ ಹಿಂದಿನ ಕಾರಣವನ್ನು ತಿಳಿಸುತ್ತಾರೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಕೆಲವು ಮೂಲಗಳ ಪ್ರಕಾರ ರಾಜ್ ಠಾಕ್ರೆ ಅವರು ಒಂದೂವರೆ ವರ್ಷಗಳ ಹಿಂದೆ ಅನುಭವಿಸಿದ್ದ ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆಯನ್ನು ನಿಗದಿಪಡಿಸಿದ್ದಾರೆ. ಪುಣೆಯಲ್ಲಿದ್ದಾಗ ಅವರು ನೋವು ತಡೆಯಲಾರದೆ ಅವರು ಮುಂಬೈಗೆ ಮರಳಿದ್ದರು. ಈ ವಾರದ ಆರಂಭದಲ್ಲಿ, ಎಂಎನ್‌ಎಸ್ ಕಾರ್ಯಕರ್ತರು “ಯಾರಾದರೂ ನಮ್ಮ ನಾಯಕನಿಗೆ ಹಾನಿ ಮಾಡಲು ಪ್ರಯತ್ನಿಸಿದರೆ ಇಡೀ ಮಹಾರಾಷ್ಟ್ರ ಹೊತ್ತಿ ಉರಿಯುತ್ತದೆ” ಎಂಬ ಪೋಸ್ಟರ್‌ಗಳನ್ನು ಹಾಕಿದ್ದರು. ರಾಜ್ ಠಾಕ್ರೆ ಅವರ ಅಯೋಧ್ಯೆ ಭೇಟಿಗೆ ಮುನ್ನ ಬೆದರಿಕೆಯ ಹಿನ್ನೆಲೆಯಲ್ಲಿ ಮುಂಬೈನ ಲಾಲ್‌ಬಾಗ್‌ನಲ್ಲಿ ಪೋಸ್ಟರ್‌ಗಳನ್ನು ಪ್ರದರ್ಶಿಸಲಾಯಿತು.
ರಾಜ್ ಠಾಕ್ರೆ ಅಯೋಧ್ಯೆ ಭೇಟಿಗೂ ಮುನ್ನ ಉತ್ತರ ಭಾರತೀಯರ ಕ್ಷಮೆ ಕೇಳಬೇಕು: ರಾಮದಾಸ್ ಅಠವಳೆ
ಮಹಾರಾಷ್ಟ್ರ ನವನಿರ್ಮಾಣ ಸೇನೆ (MNS) ಮುಖ್ಯಸ್ಥ ರಾಜ್ ಠಾಕ್ರೆ ಅಯೋಧ್ಯೆಗೆ ಭೇಟಿ ನೀಡುವ ಯೋಜನೆಯನ್ನು ಮುಂದೂಡಿರುವುದನ್ನು ಶುಕ್ರವಾರ ಸ್ವಾಗತಿಸಿರುವ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ರಾಮದಾಸ್ ಅಠವಳೆ, ಉತ್ತರ ಭಾರತೀಯರಿಂದ, ವಿಶೇಷವಾಗಿ ಉತ್ತರದ ಜನರಲ್ಲಿ ಠಾಕ್ರೆ ಕ್ಷಮೆಯಾಚಿಸಬೇಕು ಎಂದು ಹೇಳಿದ್ದಾರೆ. ಎಎನ್‌ಐ ಜೊತೆ ಮಾತನಾಡಿದ ಅಠವಳೆ, “ರಾಜ್ ಠಾಕ್ರೆ ಅಯೋಧ್ಯೆಗೆ ಹೋಗಲು ಬಯಸಿದರೆ, ಅವರು ಮೊದಲು ಉತ್ತರ ಪ್ರದೇಶದ ಮತ್ತು ಉತ್ತರ ಭಾರತೀಯರ ಕ್ಷಮೆಯಾಚಿಸಬೇಕು ನಂತರ ಅಯೋಧ್ಯೆಗೆ ಭೇಟಿ ನೀಡಲಿ” ಎಂದು ಹೇಳಿದರು.
ಮುಂಬೈನಲ್ಲಿ ಉತ್ತರ ಭಾರತೀಯರ ವಿರುದ್ಧ ಆಂದೋಲನ ಆರಂಭಿಸಿದ್ದಕ್ಕಾಗಿ ಮತ್ತು ಉತ್ತರ ಪ್ರದೇಶದವರನ್ನು ಥಳಿಸಿದ್ದಕ್ಕಾಗಿ ಜನರ ಕ್ಷಮೆ ಕೇಳದೆ ರಾಜ್ಯಕ್ಕೆ ಭೇಟಿ ನೀಡುವ ಹಕ್ಕು ಠಾಕ್ರೆಗೆ ಇಲ್ಲ ಎಂದು ಸಚಿವರು ಹೇಳಿದರು.
ರಾಜ್ ಠಾಕ್ರೆ ಅವರು ಈ ಹಿಂದೆ ಉತ್ತರ ಭಾರತದ ರಾಜ್ಯಗಳಿಂದ ವಲಸೆ ಬಂದವರ ವಿರುದ್ಧ ಹಲವಾರು ಕಟು ಹೇಳಿಕೆಗಳನ್ನು ನೀಡಿದ್ದರು.
ಅಂದಹಾಗೆ ಎಂಎನ್‌ಎಸ್ ಮುಖ್ಯಸ್ಥರು “ಇಷ್ಟು ಸುದೀರ್ಘ ಸಮಯದ ನಂತರ” ಭೇಟಿ ನೀಡಲಿರುವ ಕಾರಣವೇನು ಎಂದು ಅಠವಳೆ ಪ್ರಶ್ನಿಸಿದ್ದಾರೆ.
“ರಾಜ್ ಠಾಕ್ರೆ ಅವರಿಗೆ ಅಯೋಧ್ಯೆಗೆ ಹೋಗುವ ಹಕ್ಕಿದೆ, ಆದರೆ ಇಷ್ಟು ದಿನಗಳ ನಂತರ ರಾಮಮಂದಿರಕ್ಕೆ ಭೇಟಿ ನೀಡಲು ಯಾಕೆ ನೆನಪಾಯ್ತು? ಠಾಕ್ರೆ ಮುಂಬೈನಲ್ಲಿ ವಾಸಿಸುತ್ತಿದ್ದಾರೆ, ಅವರ ಪಕ್ಷದ ಕಾರ್ಯಕರ್ತರು ಉತ್ತರ ಭಾರತೀಯರ ವಿರುದ್ಧ ಘೋಷಣೆಗಳನ್ನು ಎತ್ತಿದರು ಮತ್ತು ಅವರನ್ನು ಥಳಿಸಿದರು. ಅದಕ್ಕಾಗಿಯೇ ಅವರು ಅಯೋಧ್ಯೆಗೆ ಬರುವುದನ್ನು ಉತ್ತರ ಪ್ರದೇಶದ ಜನರು ಬಯಸುವುದಿಲ್ಲ ಎಂದು ಅವರು ಹೇಳಿದರು.
ಏತನ್ಮಧ್ಯೆ, ಉತ್ತರ ಪ್ರದೇಶದ ಬಿಜೆಪಿ ಸಂಸದ ಬ್ರಿಜ್‌ಭೂಷಣ್ ಶರಣ್ ಸಿಂಗ್ ಅವರು ಗುರುವಾರ ರಾಜ್ ಠಾಕ್ರೆ ಅವರು ಉತ್ತರ ಭಾರತೀಯರ ಕ್ಷಮೆಯಾಚಿಸುವವರೆಗೆ ಅಯೋಧ್ಯೆಗೆ ಪ್ರವೇಶಿಸಲು ಬಿಡುವುದಿಲ್ಲ ಎಂದು ಹೇಳಿದ್ದಾರೆ. ಠಾಕ್ರೆ ಅವರು ಕ್ಷಮೆಯಾಚಿಸುವವರೆಗೂ ಅವರನ್ನು ಭೇಟಿ ಮಾಡದಂತೆ ಮುಖ್ಯಮಂತ್ರಿ ಆದಿತ್ಯನಾಥ ಅವರಿಗೂ ಮನವಿ ಮಾಡಿರುವುದಾಗಿ ಸಿಂಗ್ ಹೇಳಿದ್ದಾರೆ.
ಅವರು ಉತ್ತರ ಭಾರತೀಯರ ಕ್ಷಮೆ ಕೇಳಬೇಕು ಇಲ್ಲದಿದ್ದರೆ ನಾನು ಅವರನ್ನು ಅಯೋಧ್ಯೆ ಪ್ರವೇಶಿಸಲು ಬಿಡುವುದಿಲ್ಲ. ಸಿಎಂ ಯೋಗಿ ಆದಿತ್ಯನಾಥ ಅವರಲ್ಲಿ ಕ್ಷಮೆಯಾಚಿಸುವವರೆಗೂ ಠಾಕ್ರೆ ಭೇಟಿ ಮಾಡದಂತೆ ನಾನು ಮನವಿ ಮಾಡಿದ್ದೇನೆ ಎಂದು ಬಿಜೆಪಿ ಸಂಸದ ಹೇಳಿದ್ದಾರೆ.
Published On - 7:49 pm, Fri, 20 May 22