ನವದೆಹಲಿ, (ಫೆಬ್ರವರಿ 08): ಲೋಕಸಭಾ ಚುನಾವಣೆ (Loksabha Elections 2024) ಸಮೀಪಿಸುತ್ತಿದ್ದಂತೆಯೇ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಈ ಬಾರಿ ಪ್ರಧಾನಿ ನರೇಂದ್ರ ಮೋದಿ(Narendra Modi) ಮತ್ತೊಮ್ಮೆ ಅಂದರೆ ಮೂರನೇ ಬಾರಿ ಪ್ರಧಾನಿಯಾಗಲು ಕಸರತ್ತು ನಡೆಸಿದ್ದಾರೆ. ಮತ್ತೊಂದೆಡೆ ಈ ಬಾರಿ ಬಿಜೆಪಿಯನ್ನು ಮಣಿಸಲೇಬೇಕೆಂದು ಇಂಡಿಯಾ ಒಕ್ಕೂಟ ಸಜ್ಜಾಗಿವೆ. ಇದರ ಮಧ್ಯೆ ಚುನಾವಣಾ ಪೂರ್ವ ಸಮೀಕ್ಷೆಗಳು ಹೊರಬಿದ್ದಿದ್ದು, ಎನ್‌ಡಿಎ ಮೈತ್ರಿಕೂಟ ಅತಿ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಲಿದೆ. ಇಂಡಿಯಾ ಟುಡೇ ಮೂಡ್ ಆಫ್ ದಿ ನೇಷನ್ ಸಮೀಕ್ಷೆಯ ಪ್ರಕಾರ ಇಂದು ಚುನಾವಣೆ ನಡೆದರೆ ಎನ್‌ಡಿಎ ಬಹುಮತ ಪಡೆಯಲಿದೆ. ಬಿಜೆಪಿ ನೇತೃತ್ವದ ಎನ್‌ಡಿಎ 335 ಸ್ಥಾನಗಳನ್ನು ಪಡೆಯುವ ಮೂಲಕ ಅಧಿಕಾರವನ್ನು ಉಳಿಸಿಕೊಳ್ಳುವ ಸಾಧ್ಯತೆಯಿದೆ. ಆದಾಗ್ಯೂ, ಒಟ್ಟಾರೆಯಾಗಿ ಎನ್‌ಡಿಎ ಮೈತ್ರಿಕೂಟವು ಈ ಬಾರಿ 18 ಸ್ಥಾನಗಳನ್ನು ಕಳೆದುಕೊಳ್ಳಲಿದ್ದು, ಇಂಡಿಯಾ ಒಕ್ಕೂಟಕ್ಕೆ ಲಾಭದಾಯಕವಾಗಿದೆ ಎಂದು ಸಮೀಕ್ಷೆ ತಿಳಿಸಿದೆ.
ನರೇಂದ್ರ ಮೋದಿ – ಶೇ.52
ರಾಹುಲ್ ಗಾಂಧಿ – ಶೇ.16
ಟೈಮ್ಸ್ ನೌ ಮತ್ತು ಇಂಡಿಯಾ ಟುಡೇ ಸಮೀಕ್ಷೆಯ ಪ್ರಕಾರ ಕ್ರಮವಾಗಿ ಬಿಜೆಪಿ 24 ಮತ್ತು 21 ಹಾಗೂ ಕಾಂಗ್ರೆಸ್ 4 ಮತ್ತು ಐದು ಸೀಟುಗಳನ್ನು ಗೆಲ್ಲಲಿದೆ. ಹಾಗೆಯೇ, ಇಂಡಿಯಾ ಟುಡೇ ಸಮೀಕ್ಷೆಯ ಪ್ರಕಾರ ಬಿಜೆಪಿ ಮತ್ತು ಜೆಡಿಎಸ್ ಶೇ.53ರಷ್ಟು ಮತ ಗಳಿಸಲಿದ್ದು, ಕಾಂಗ್ರೆಸ್ ಶೇ.42 ಮತ ಪಡೆಯಲಿದೆ. ಇನ್ನು ಟೈಮ್ಸ್ ನೌ ಸಮೀಕ್ಷೆಯ ಪ್ರಕಾರ ಬಿಜೆಪಿ ಮತ್ತು ಜೆಡಿಎಸ್ ಶೇ.54.6 ಹಾಗೂ ಕಾಂಗ್ರೆಸ್ ಶೇ.42.3ರಷ್ಟು ಮತಗಳನ್ನು ಪಡೆಯಲಿದೆ.
ಇಂಡಿಯಾ ಟುಡೇ ಮತ್ತು ಟೈಮ್ಸ್ ನೌ ಸಮೀಕ್ಷೆಯ ಪ್ರಕಾರ, 2024ರ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ 366 ಹಾಗೂ ಕಾಂಗ್ರೆಸ್ ನೇತೃತ್ವದ ಇಂಡಿಯಾ ಕೂಟವು 104 ಸ್ಥಾನಗಳನ್ನು ಪಡೆಯಲಿದೆ. ಇನ್ನು 76 ಕ್ಷೇತ್ರಗಳು ಇತರರ ಪಾಲಾಗಲಿವೆ ಎಂದು ಸಮೀಕ್ಷೆಯಲ್ಲಿ ತಿಳಿಸಿವೆ. ಇನ್ನು ಶೇಕಡವಾರು ಮತಗಳ ಹಂಚಿಕೆಯನ್ನು ನೋಡುವುದಾದರೆ ಇಂಡಿಯಾ ಟುಡೇ ಮತ್ತು ಟೈಮ್ಸ್ ನೌ ಸಮೀಕ್ಷೆಯ ಪ್ರಕಾರ, ಎನ್‌ಡಿಎ ಶೇ.41.8ರಷ್ಟು ಮತಗಳನ್ನು ಪಡೆಯಲಿದ್ದರೆ, ಕಾಂಗ್ರೆಸ್ ನೇತೃತ್ವದ ಇಂಡಿಯಾ ಕೂಟವು ಶೇ.28.6 ಮತ ಪ್ರಮಾಣ ಗಳಿಸಲಿದೆ. ಇನ್ನು ಇತರ ಪಕ್ಷಗಳು ಶೇ.29.6ರಷ್ಟು ಮತಗಳಿಸಲಿವೆ.
2019ರ ಲೋಕಸಭೆ ಚುನಾವಣೆಯಲ್ಲಿ ಒಟ್ಟು 545 ಸ್ಥಾನಗಳ ಪೈಕಿ ಎನ್‌ಡಿಎ ಮೈತ್ರಿಕೂಟ 353 ಸ್ಥಾನಗಳನ್ನು ಗೆದ್ದಿತ್ತು. ಇನ್ನು ಬಿಜೆಪಿ ಮಾತ್ರ 303 ಸ್ಥಾನಗಳನ್ನು ಜಯಗಳಿಸಿತ್ತು. ಇನ್ನು ದಕ್ಷಿಣ ರಾಜ್ಯಗಳಲ್ಲಿ ಬಿಜೆಪಿ ಕರ್ನಾಟಕದಲ್ಲಿ 25 ಮತ್ತು ತೆಲಂಗಾಣದಲ್ಲಿ 4 ಸ್ಥಾನಗಳನ್ನು ಗೆದ್ದಿತ್ತು. ದಕ್ಷಿಣ ಭಾರತದ ಇತರ ಮೂರು ರಾಜ್ಯಗಳಲ್ಲಿ ಅಂದರೆ ಕೇರಳ, ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿ ಎನ್‌ಡಿಎ ಖಾತೆ ತೆರೆದಿರಲಿಲ್ಲ.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:42 pm, Thu, 8 February 24